ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್; ಫ್ಯಾನ್ಸ್‌ಗೆ ವಿರಾಟ್ ಸರ್‌ಪ್ರೈಸ್ ನಿರೀಕ್ಷೆ, ಟಿಕೆಟ್ ಖರೀದಿಸಲು ಹೀಗೆ ಮಾಡಿ
Mar 11, 2024 03:34 PM IST
ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್; ಫ್ಯಾನ್ಸ್‌ಗೆ ವಿರಾಟ್ ಸರ್‌ಪ್ರೈಸ್ ನಿರೀಕ್ಷೆ
- Royal Challengers Bangalore: ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ನಲ್ಲಿ ಏನೇನು ಕಾರ್ಯಕ್ರಮ ಇರಲಿದೆ ಎಂಬ ವಿವರಗಳನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರ್ಯಾಂಚೈಸ್ ಇನ್ನೂ ಗೌಪ್ಯವಾಗಿಟ್ಟಿದೆ. ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಲು ಫ್ರಾಂಚೈಸ್ ಮುಂದಾಗಿದೆ. ವಿರಾಟ್ ಕೊಹ್ಲಿ ಕಾರ್ಯಕ್ರಮಕ್ಕೆ ಹಾಜರಾಗುವ ಸಾಧ್ಯತೆಯಿದೆ.
ಐಪಿಎಲ್ 2024ರ ಆವೃತ್ತಿಯ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಫ್ರಾಂಚೈಸಿಯು, ‘ಆರ್‌ಸಿಬಿ ಅನ್‌ಬಾಕ್ಸ್’ ಕಾರ್ಯಕ್ರಮ ನಡೆಸುತ್ತಿದೆ. ಕಳೆದ ಬಾರಿ ಕೂಡಾ ಇದೇ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಾಗೂ ಅದ್ಧೂರಿಯಾಗಿ ನಡೆಸಲಾಗಿತ್ತು. ಈ ಬಾರಿಯೂ, ಮಾರ್ಚ್ 19ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ಧೂರಿ ಈವೆಂಟ್ ನಡೆಸಲಾಗುತ್ತಿದೆ. ಅಭಿಮಾನಿಗಳಿಗಾಗಿ ನಡೆಸುತ್ತಿರುವ ಕಾರ್ಯಕ್ರಮದಲ್ಲಿ ಹಲವಾರು ವಿಶೇಷ ಕ್ಷಣಗಳನ್ನು ಆಸ್ವಾದಿಸಲು ಅವಕಾಶ ಸಿಗಲಿದೆ.
2023ರಲ್ಲಿ ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್ ಪರಿಚಯಿಸಿದ ಫ್ರಾಂಚೈಸಿಯು, ಸತತ ಎರಡನೇ ಬಾರಿಗೆ ಅದನ್ನು ಮುಂದುವರೆಸುತ್ತಿದೆ. ಕಳೆದ ವರ್ಷ ಭಾರಿ ಯಶಸ್ಸು ಕಂಡ ಬಳಿಕ, ಈ ಬಾರಿ ಮತ್ತೆ ಅದ್ಧೂರಿಯಾಗಿ ಮುಂದುವರೆಸಲಿದೆ. ಕಳೆದ ವರ್ಷದ ಕಾರ್ಯಕ್ರಮದಲ್ಲಿ ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರಿಗೆ ಆರ್‌ಸಿಬಿ ಹಾಲ್ ಆಫ್ ಫೇಮ್ ಗೌರವ ನೀಡಲಾಗಿತ್ತು.
ಈ ಬಾರಿಯ ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ನಲ್ಲಿ ಏನೇನು ಇರಲಿದೆ ಎಂಬ ವಿವರಗಳನ್ನು ಫ್ರ್ಯಾಂಚೈಸ್ ಇನ್ನೂ ಗೌಪ್ಯವಾಗಿಟ್ಟಿದೆ. ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಲು ಫ್ರಾಂಚೈಸ್ ಮುಂದಾಗಿದೆ. ವರದಿಗಳ ಪ್ರಕಾರ, ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಕಾರ್ಯಕ್ರಮಕ್ಕೆ ಹಾಜರಾಗುವ ಸಾಧ್ಯತೆಯಿದೆ. ಆ ಮೂಲಕ ಸುಮಾರು ಎರಡು ತಿಂಗಳ ನಂತರ ಅವರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ | ಹನಿಸಲೂ ಇಲ್ಲ ನೀರು, ಐಪಿಎಲ್ಗೂ ತಟ್ಟಿದ ಜಲಕಂಟಕ, ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯಗಳು ನಡೆಯೋದೇ ಡೌಟ್
ತಂಡದ ಮೊದಲ ಪಂದ್ಯವು ಮಾರ್ಚ್ 22ರಂದು ನಡೆಯಲಿದ್ದು, ಅದಕ್ಕೂ ಮೂರು ದಿನಗಳ ಮುಂಚಿತವಾಗಿ ಕಾರ್ಯಕ್ರಮ ನಡೆಯುತ್ತಿದೆ. ಹೀಗಾಗಿ ವಿರಾಟ್ ಪಾಲ್ಗೊಳ್ಳುವ ನಿರೀಕ್ಷೆ ಹೆಚ್ಚಿದೆ. ಉಳಿದಂತೆ ತಂಡದೊಂದಿಗೆ ನಿಕಟ ಒಡನಾಟ ಹೊಂದಿರುವ ಎಬಿ ಡಿವಿಲಿಯರ್ಸ್ ಕೂಡಾ ಭಾಗವಹಿಸುವ ನಿರೀಕ್ಷೆ ಇದೆ.
ಟಿಕೆಟ್ ಖರೀದಿಸುವುದು ಹೇಗೆ?
ಮಾರ್ಚ್ 9ರಿಂದ ಕಾರ್ಯಕ್ರಮದ ಟಿಕೆಟ್‌ಗಳನ್ನು ಮಾರಾಟಕ್ಕೆ ಬಿಡಲಾಗಿದೆ. ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕ ಮಾತ್ರ ಖರೀದಿಸಬಹುದು. ಅದರಲ್ಲೂ ಆರ್‌ಸಿಬಿಯ ಅಧಿಕೃತ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಮೂಲಕ ಮಾತ್ರವೇ ಟಿಕೆಟ್ ಖರೀದಿಸಬಹುದಾಗಿದೆ. ಟಿಕೆಟ್‌ನ ಕನಿಷ್ಠ ವೆಚ್ಚ 800 ರೂಪಾಯಿ ಆಗಿದ್ದರೆ, ಗರಿಷ್ಠ ವೆಚ್ಚವು 4000 ರೂಪಾಯಿ ಆಗಿದೆ. ಕಳೆದ ಬಾರಿ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು ಹಾಜರಾಗಿದ್ದರು. ಹೀಗಾಗಿ ಈ ಬಾರಿ ಕೂಡಾ ಭಾರಿ ಸಂಖ್ಯೆಯಲ್ಲಿ ಮೈದಾನಕ್ಕೆ ಫ್ಯಾನ್ಸ್ ಬರುವ ನಿರೀಕ್ಷೆ ಇದೆ.
ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ಮುಖಾಮುಖಿ
ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಾರ್ಚ್ 22ರಂದು ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಉದ್ಘಾಟನಾ ಪಂದ್ಯವನ್ನು ಆಡಲಿದೆ. ಈಗಾಗಲೇ ಆರ್‌ಸಿಬಿ ಆಟಗಾರರು ಶಿಬಿರ ಸೇರಿಕೊಳ್ಳುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿ ಮುಕ್ತಾಯಗೊಂಡಿದ್ದು, ಇನ್ಮುಂದೆ ಎಲ್ಲಾ ಆಟಗಾರರ ಚಿತ್ತ ಐಪಿಎಲ್‌ನತ್ತ ಹರಿಯಲಿದೆ.
ಇದನ್ನೂ ಓದಿ | ಐಪಿಎಲ್ ವಿಶ್ವದ ಎರಡನೇ ಶ್ರೀಮಂತ ಕ್ರೀಡಾ ಲೀಗ್; ಇದು ಕ್ರಿಕೆಟ್‌ನ ಎಲ್ಲಾ ಸ್ವರೂಪಗಳನ್ನು ಸ್ಪರ್ಧಾತ್ಮಕವಾಗಿಸಿದೆ: ಅರುಣ್ ಧುಮಾಲ್
ಕ್ರಿಕೆಟ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
(This copy first appeared in Hindustan Times Kannada website. To read more like this please logon to kannada.hindustantimes.com)