logo
ಕನ್ನಡ ಸುದ್ದಿ  /  ಕ್ರಿಕೆಟ್  /  ಶುಭ್ಮನ್ ಗಿಲ್ ತುಂಬಾ ಮುದ್ದಾಗಿದ್ದಾರೆ, ಆದರೆ..; ಯುವ ಆಟಗಾರನ ಹೃದಯ ಕದ್ದರೇ ಮತ್ತೊಬ್ಬ ಬಾಲಿವುಡ್ ಸ್ಟಾರ್ ನಟಿ?

ಶುಭ್ಮನ್ ಗಿಲ್ ತುಂಬಾ ಮುದ್ದಾಗಿದ್ದಾರೆ, ಆದರೆ..; ಯುವ ಆಟಗಾರನ ಹೃದಯ ಕದ್ದರೇ ಮತ್ತೊಬ್ಬ ಬಾಲಿವುಡ್ ಸ್ಟಾರ್ ನಟಿ?

Prasanna Kumar P N HT Kannada

Jul 18, 2024 06:33 PM IST

google News

ಶುಭ್ಮನ್ ಗಿಲ್ ತುಂಬಾ ಮುದ್ದಾಗಿದ್ದಾರೆ, ಆದರೆ..; ಯುವ ಆಟಗಾರನ ಹೃದಯ ಕದ್ದರೇ ಮತ್ತೊಬ್ಬ ಬಾಲಿವುಡ್ ಸ್ಟಾರ್ ನಟಿ

    • Ridhima Pandit on Shubman Gill: ಶುಭ್ಮನ್ ಗಿಲ್ ತುಂಬಾ ಕ್ಯೂಟ್ ಇದ್ದಾರೆ. ಆದರೆ ಇಬ್ಬರ ನಡುವೆ ಯಾವುದೇ ಸಂಬಂಧ ಇಲ್ಲ. ಎಂದು ಬಾಲಿವುಡ್ ಸ್ಟಾರ್ ನಟಿ ರಿದ್ದಿಮಾ ಪಂಡಿತ್ ಅವರು ತಮ್ಮ ಮೇಲೆ ಎದ್ದಿರುವ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಶುಭ್ಮನ್ ಗಿಲ್ ತುಂಬಾ ಮುದ್ದಾಗಿದ್ದಾರೆ, ಆದರೆ..; ಯುವ ಆಟಗಾರನ ಹೃದಯ ಕದ್ದರೇ ಮತ್ತೊಬ್ಬ ಬಾಲಿವುಡ್ ಸ್ಟಾರ್ ನಟಿ
ಶುಭ್ಮನ್ ಗಿಲ್ ತುಂಬಾ ಮುದ್ದಾಗಿದ್ದಾರೆ, ಆದರೆ..; ಯುವ ಆಟಗಾರನ ಹೃದಯ ಕದ್ದರೇ ಮತ್ತೊಬ್ಬ ಬಾಲಿವುಡ್ ಸ್ಟಾರ್ ನಟಿ

ಎದುರಾಳಿ ತಂಡಗಳ ವಿರುದ್ಧ ರನ್ ಮಳೆ ಸುರಿಯುವ ಭಾರತ ತಂಡದ ಯುವ ಕ್ರಿಕೆಟಿಗ ಶುಭ್ಮನ್ ಗಿಲ್ (Shubman Gill), ಆಟಕ್ಕಷ್ಟೇ ಅಲ್ಲ ಪ್ರೀತಿ ಪ್ರೇಮದ ವಿಷಯದಿಂದಲೂ ಸದಾ ಸುದ್ದಿಯಲ್ಲಿದ್ದಾರೆ. ಗಿಲ್ ಈ ಹಿಂದೆ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ (Sara TendulkarShubman Gill

) ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಅದಕ್ಕೆ ತಕ್ಕಂತೆ ಸೋಷಿಯಲ್ ಮೀಡಿಯಾ ಚಾಟಿಂಗ್, ಒಬ್ಬರಿಗೊಬ್ಬರು ಪೋಸ್ಟ್​​​ಗಳಿಗೆ ಲೈಕ್ ಕೊಡುವ ಕಾರಣ ನಿಜವಾಗಿಯೂ ಡೇಟಿಂಗ್ ನಡೆಸುತ್ತಿರುವುದು ನಿಜವೆಂದು ಎಲ್ಲರೂ ನಂಬಿದ್ದರು.

ಈ ನಡುವೆ ಸಚಿನ್ ಪುತ್ರಿಯಲ್ಲ, ಬಾಲಿವುಡ್​​ ಸ್ಟಾರ್ ನಟಿ ಸಾರಾ ಅಲಿ ಖಾನ್ ಜೊತೆಗೆ ಲವ್ ಅಫೇರ್ ಹೊಂದಿದ್ದಾರೆ ಎಂಬ ಮಾತುಗಳು ಕೇಳಿ ಬಂದವು. ಇದೀಗ ಇಬ್ಬರ ನಡುವೆ ಮತ್ತೊಬ್ಬ ನಟಿ ರೇಸ್​ಗೆ ಬಂದಿದ್ದಾರೆ. ಅಲ್ಲದೆ, ಈ ನಟಿಯೊಂದಿಗೆ ಶುಭ್ಮನ್​ ಮದುವೆ ಕೂಡ ನಿಶ್ಚಯವಾಗಿದೆ ಎಂದು ವರದಿಯಾಗಿದೆ. ಆಕೆ ಬೇರಾರೂ ಅಲ್ಲ ಬಾಲಿವುಡ್ ಬ್ಯೂಟಿ ಸ್ಟಾರ್ ರಿದ್ಧಿಮಾ ಪಂಡಿತ್ (Ridhima Pandit). ಗಿಲ್ ಮತ್ತು ರಿದ್ಧಿಮಾ ಪ್ರೀತಿಸುತ್ತಿದ್ದು, ಈ ಜೋಡಿ ಮದುವೆ ಡಿಸೆಂಬರ್‌ನಲ್ಲಿ ನಡೆಯಲಿದೆ ಎಂಬ ವದಂತಿಗಳಿವೆ.

ಶುಭ್ಮನ್ ಗಿಲ್ ತುಂಬಾ ಮುದ್ದಾಗಿದ್ದಾರೆ ಎಂದ ರಿದ್ದಿಮಾ

ಇದಕ್ಕೆ ಸಂಬಂಧಿಸಿ ಗಿಲ್ ಪ್ರತಿಕ್ರಿಯಿಸಿಲ್ಲವಾದರೂ ರಿದ್ಧಿಮಾ ಪಂಡಿತ್ ಇತ್ತೀಚೆಗೆ ಪ್ರತಿಕ್ರಿಯಿಸಿದ್ದು, ವದಂತಿಗಳನ್ನು ತಳ್ಳಿಹಾಕಿದ್ದಾರೆ. ಶುಭ್ಮನ್ ಜತೆಗೆ ವಿವಾಹದ ಸುದ್ದಿ ತಳ್ಳಿಹಾಕಿದರೂ ಆತ ತುಂಬಾ ಮುದ್ದಾಗಿದ್ದಾರೆ ಎಂದು ರಿದ್ದಿಮಾ ಪಂಡಿತ್​ ಹಾಡಿ ಹೊಗಳಿದ್ದಾರೆ. ಅದು ಬಿಟ್ಟರೆ ಆತ ಯಾರೆಂದು ನನಗೆ ಗೊತ್ತಿಲ್ಲ ಎಂದು ರಿದ್ದಿಮಾ ಹೇಳಿದ್ದಾರೆ. ಆಕೆಯ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 'ಶುಭ್ಮನ್ ಗಿಲ್ ಒಬ್ಬ ಅದ್ಭುತ ಕ್ರೀಡಾ ವ್ಯಕ್ತಿ ಎಂದು ಮಾತ್ರ ತಿಳಿದಿದ್ದಾರೆ.

ನನ್ನ ಮತ್ತು ಶುಭ್ಮನ್ ಗಿಲ್ ಅವರ ನಡುವೆ ಯಾವುದೇ ಸಂಬಂಧ ಇಲ್ಲ. ಒಂದು ವೇಳೆ ನಾನು ಆತನನ್ನು ಭೇಟಿಯಾದರೆ, ಈ ರೂಮರ್ಸ್​ ಕುರಿತು ಮಾತನಾಡಿ ನಗುತ್ತೇವೆ ಎಂದಿರುವ ಪಂಡಿತ್, ಶುಭ್ಮನ್ ಗಿಲ್ ತುಂಬಾ ಮುದ್ದಾಗಿದ್ದಾರೆ. ಆದರೆ ಪ್ರೀತಿ, ಮದುವೆ ಎಂಬುದೇನು ಇಲ್ಲ ಎಂದು ಹೇಳಿದ್ದಾರೆ ರಿದ್ಧಿಮಾ. ಮತ್ತೊಂದೆಡೆ ಈ ಮದುವೆಯ ಸುದ್ದಿಗೆ ಶುಭ್ಮನ್​ ಇನ್ನೂ ಪ್ರತಿಕ್ರಿಯಿಸಿಲ್ಲ. ವಾಸ್ತವವಾಗಿ ಈ ಹಿಂದೆ ಸಾರಾ ತೆಂಡೂಲ್ಕರ್ ಅವರೊಂದಿಗೆ ಡೇಟಿಂಗ್ ಮಾಡುವ ಸುದ್ದಿಯ ಬಗ್ಗೆಯೂ ಗಿಲ್ ಎಲ್ಲೂ ತುಟಿ ಬಿಚ್ಚಿಲ್ಲ.

ಮೈದಾನದಲ್ಲೆಲ್ಲಾ ಸಾರಾ.. ಸಾರಾ ಕೂಗು

ಆದರೆ, ಶುಭ್ಮನ್ ಎಲ್ಲೇ ಕಂಡರೂ ಅಭಿಮಾನಿಗಳು ಅವರನ್ನು ಸಾರಾ ಎಂದೇ ಕರೆಯುತ್ತಿದ್ದಾರೆ. ಮೈದಾನದಲ್ಲಂತೂ ತಾನು ಎಲ್ಲೇ ಫೀಲ್ಡಿಂಗ್ ಮಾಡಲು ಹೋದರೂ ಸಾರಾ ಸಾರಾ ಎಂದೇ ಕರೆಯುತ್ತಾರೆ. 2023ರ ಏಕದಿನ ವಿಶ್ವಕಪ್​ ಪಂದ್ಯದಲ್ಲೂ ಅಭಿಮಾನಿಗಳು ಹೀಗೆ ಕರೆದಿದ್ದರು. ಆಗ ಕೊಹ್ಲಿ, ಅಭಿಮಾನಿಗಳಿಗೆ ಮೈದಾನದಲ್ಲೇ ವಾರ್ನ್ ಮಾಡಿದ್ದರು. ಈ ಡೇಟಿಂಗ್ ವದಂತಿಗಳಿರುವಾಗಲೇ ಇದೀಗ ಮತ್ತೊಬ್ಬ ಪ್ರೇಮ ನಟಿಯ ಜೊತೆ ಲವ್, ಮ್ಯಾರೇಜ್ ಎಂಬ ಸುದ್ದಿ ಹರಿದಾಡುತ್ತಿರುವುದು ಗಮನಾರ್ಹ.

ಇತ್ತೀಚೆಗೆ ಮುಕ್ತಾಯಗೊಂಡ ಸರಣಿಯಲ್ಲಿ ಭಾರತ ತಂಡದ ನಾಯಕನಾಗಿದ್ದ ಶುಭ್ಮನ್ ಗಿಲ್ ಅವರು ಉತ್ತಮ ಪ್ರದರ್ಶನ ನೀಡಿದ್ದರು. ಆಡಿದ 5 ಪಂದ್ಯಗಳಲ್ಲಿ 170 ರನ್ ಸಿಡಿಸಿದರು. ಎರಡು ಅರ್ಧಶತಕಗಳನ್ನೂ ಸಿಡಿಸಿದ್ದರು. ತಾನು ನಾಯಕನಾದ ಮೊದಲ ಸರಣಿಯಲ್ಲೇ 4-1ರಲ್ಲಿ ಗೆದ್ದು ಬೀಗಿದರು. ಮೊದಲ ಪಂದ್ಯದಲ್ಲಿ ಸೋತರೂ ನಂತರ ಸತತ 4 ಪಂದ್ಯಗಳಲ್ಲಿ ಭಾರತ ಗೆದ್ದು ಸರಣಿಯನ್ನು ತನ್ನಲ್ಲೇ ವಶಪಡಿಸಿಕೊಂಡಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ