logo
ಕನ್ನಡ ಸುದ್ದಿ  /  ಕ್ರಿಕೆಟ್  /  ಭೀಕರ ಅಪಘಾತದ ನಂತರ ರಿಷಭ್ ಪಂತ್ ಚೇತರಿಸಿಕೊಂಡಿದ್ದು ಈ ಒಂದು ಡಯಟ್​ನಿಂದ; ಬಹಿರಂಗಪಡಿಸಿದ ಪೌಷ್ಟಿಕಾಂಶ ತಜ್ಞೆ

ಭೀಕರ ಅಪಘಾತದ ನಂತರ ರಿಷಭ್ ಪಂತ್ ಚೇತರಿಸಿಕೊಂಡಿದ್ದು ಈ ಒಂದು ಡಯಟ್​ನಿಂದ; ಬಹಿರಂಗಪಡಿಸಿದ ಪೌಷ್ಟಿಕಾಂಶ ತಜ್ಞೆ

Prasanna Kumar P N HT Kannada

Aug 01, 2024 03:51 PM IST

google News

ಭೀಕರ ಅಪಘಾತದ ನಂತರ ರಿಷಭ್ ಪಂತ್ ಚೇತರಿಸಿಕೊಂಡಿದ್ದು ಈ ಒಂದು ಡಯಟ್​ನಿಂದ; ಬಹಿರಂಗಪಡಿಸಿದ ಪೌಷ್ಟಿಕಾಂಶ ತಜ್ಞೆ

    • Rishabh Pant: ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಭೀಕರ ಅಪಘಾತದ ನಂತರ ಚೇತರಿಸಿಕೊಳ್ಳಲು ನೆರವಾಗಿದ್ದು ಖಿಚಡಿ ಡಯಟ್​ನಿಂದ. ಹೀಗಂತ ಪೌಷ್ಟಿಕಾಂಶ ತಜ್ಞೆ ಶ್ವೇತಾ ಶಾ ಅವರು ಹೇಳಿದ್ದಾರೆ.
ಭೀಕರ ಅಪಘಾತದ ನಂತರ ರಿಷಭ್ ಪಂತ್ ಚೇತರಿಸಿಕೊಂಡಿದ್ದು ಈ ಒಂದು ಡಯಟ್​ನಿಂದ; ಬಹಿರಂಗಪಡಿಸಿದ ಪೌಷ್ಟಿಕಾಂಶ ತಜ್ಞೆ
ಭೀಕರ ಅಪಘಾತದ ನಂತರ ರಿಷಭ್ ಪಂತ್ ಚೇತರಿಸಿಕೊಂಡಿದ್ದು ಈ ಒಂದು ಡಯಟ್​ನಿಂದ; ಬಹಿರಂಗಪಡಿಸಿದ ಪೌಷ್ಟಿಕಾಂಶ ತಜ್ಞೆ

2022ರ ಡಿಸೆಂಬರ್​ 30.. ರಿಷಭ್ ಪಂತ್ ಪಾಲಿಗೆ ಪುನರ್ಜನ್ಮ ಪಡೆದ ದಿನ ಮತ್ತು ಕಪ್ಪು ದಿನ. ಅಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್​ ಪವಾಡ ಸದೃಶವಾಗಿ ಬದುಕಿ ಬಂದರು. ಮತ್ತೆ ಕ್ರಿಕೆಟ್ ಆಡುವುದೇ ಕಷ್ಟ, ಚೇತರಿಸಿಕೊಳ್ಳಲು ಇನ್ನೂ ನಾಲ್ಕೈದು ವರ್ಷ ಬೇಕು, ಚೇತರಿಸಿಕೊಂಡರೂ ನಾಲ್ಕೈದು ವರ್ಷಗಳ ಕಾಲ ಕ್ರಿಕೆಟ್ ಮೈದಾನಕ್ಕೆ ಬರುವುದು ಕಷ್ಟ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಈ ಮಾತುಗಳೆಲ್ಲವನ್ನೂ ಪಂತ್ ಸುಳ್ಳಾಗಿಸಿದರು.

ಭಯಾನಕ ಅಪಘಾತದ ನಂತರ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಗಾಯಗೊಂಡ ಒಂದೂವರೆ ವರ್ಷದ ನಂತರ ಮೈದಾನಕ್ಕೆ ಮರಳಿದ ಪಂತ್, ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡುವ ಗಮನ ಸೆಳೆದರು. ಈಗ ಟೀಮ್ ಇಂಡಿಯಾ ಪರವೂ ಮ್ಯಾಚ್​ ವಿನ್ನಿಂಗ್ ಪರ್ಫಾಮೆನ್ಸ್ ನೀಡುತ್ತಿರುವ ವಿಕೆಟ್ ಕೀಪರ್ ಹೇಗೆ ಚೇತರಿಸಿಕೊಂಡರು? ಅವರು ಪಾಲಿಸಿದ ಡಯಟ್ ಪ್ಲಾನ್ ಏನು ಎಂಬುದರ ಕುರಿತು ಪೌಷ್ಟಿಕಾಂಶ ತಜ್ಞೆ ಶ್ವೇತಾ ಶಾ ಅವರು ಬಹಿರಂಗಪಡಿಸಿದ್ದಾರೆ.

ರಿಷಭ್ ಪಂತ್ ಡಯಟ್ ಪ್ಲಾನ್ ಬಹಿರಂಗಪಡಿಸಿದ ಶ್ವೇತಾ

ಶ್ಲೋಕಾ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಶ್ವೇತಾ ಶಾ, ಖಿಚಡಿ ಆಹಾರದೊಂದಿಗೆ ರಿಷಭ್​ರನ್ನು ಹೇಗೆ ಗುಣಪಡಿಸಲಾಯಿತು ಎಂದು ಹೇಳಿದ್ದಾರೆ. ಅಪಘಾತಕ್ಕೂ ಮುನ್ನ 2 ವರ್ಷಗಳಿಂದ ರಿಷಭ್ ನನಗೆ ಪರಿಚಯವಿದ್ದರು. ಪಂತ್ ಜೀವನಶೈಲಿ ಹೇಗಿರುತ್ತದೆ? ಏನು ತಿನ್ನುತ್ತಾರೆ ಎಂದು ನನಗೆ ತಿಳಿದಿತ್ತು. ಅಪಘಾತದ 5-6 ತಿಂಗಳ ನಂತರ ಜೂಮ್​ಕಾಲ್​ನಲ್ಲಿ ಅವರೊಂದಿಗೆ ಮಾತನಾಡಿದ್ದೆ. ಆಗ ಕೆಲವೊಂದು ಸಮಸ್ಯೆಗಳನ್ನು ಹೇಳಿದ್ದರು ಎಂದು ಹೇಳಿದ್ದಾರೆ.

ನನಗೆ ಸ್ವಲ್ಪವೂ ತಿನ್ನಲು ಸಾಧ್ಯವಾಗುತ್ತಿಲ್ಲ. ನನಗೆ 1 ನಿಮಿಷವೂ ನಡೆಯಲು ಸಾಧ್ಯವಾಗುತ್ತಿಲ್ಲ ಎಂದು ಪಂತ್ ಹೇಳಿದ್ದರು. ನನ್ನನ್ನು ಕುರುಡಾಗಿ ನಂಬುತ್ತಾರೆ. ಆಗ ಎಲ್ಲಾ ಔಷಧಿಗಳನ್ನು ನಿಲ್ಲಿಸುವಂತೆ ಸೂಚಿಸಿದ್ದೆವು. ಅದರಂತೆ ಪಂತ್ ಔಷಧಿಗಳನ್ನು ನಿಲ್ಲಿಸಿದರು. ಇದಾದ ನಂತರ ನಾವು ಖಿಚಡಿ ಡಯಟ್ ಆರಂಭಿಸಿದೆವು. ದೇಹ ಗುಣಪಡಿಸಲು ಖಿಚಡಿ ಉತ್ತಮ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಅದನ್ನು ನಾವು ಪಾಲಿಸಿದೆವು ಎಂದು ಶ್ವೇತಾ ಶಾ ಅವರು ಹೇಳಿದ್ದಾರೆ.

ಅನಾರೋಗ್ಯ ಪೀಡಿತರು ಖಿಚಡಿ ಸೇವಿಸಿದರೆ ಬೇಗ ಗುಣಮುಖ ಆಗುತ್ತಾರೆ. ಆರೋಗ್ಯವಂತರು ತಿಂದರೂ ಮತ್ತಷ್ಟು ಪ್ರಯೋಜನಕಾರಿ ಎಂದು ಶ್ವೇತಾ ಹೇಳಿದ್ದಾರೆ. ಇದು ಸಸ್ಯಾಹಾರಿಗಳಿಗೆ ಉತ್ತಮ ಗುಣಮಟ್ಟದ ಪ್ರೋಟೀನ್ ಆಗಿದೆ. ಬೇಳೆಕಾಳುಗಳು ಮತ್ತು ಅಕ್ಕಿ ಒಟ್ಟಾಗಿ ಅಮೈನೋ ಆಮ್ಲಗಳನ್ನು ತಯಾರಿಸುತ್ತವೆ. ಕೋಲಮ್ ಅಥವಾ ಸೋನಾ ಮಸೂರಿಯಂತಹ ಸುಲಭವಾಗಿ ಜೀರ್ಣವಾಗುವ ಅನ್ನವನ್ನು ಆರಿಸಿಕೊಳ್ಳಬೇಕು. ಭಾರವಾದ ಮತ್ತು ಸಂಸ್ಕರಿಸಿದ ಕಂದು ಅಥವಾ ಬಾಸ್ಮತಿ ಅಕ್ಕಿ ತಿನ್ನಬಾರದು ಎಂದು ತಿಳಿಸಿರುವುದಾಗಿ ಹೇಳಿದ್ದಾರೆ.

ಶಸ್ತ್ರಚಿಕಿತ್ಸೆಯ ನಂತರ, ದೇಹಕ್ಕೆ ಮೃದುವಾದ, ಸುಲಭವಾಗಿ ಜೀರ್ಣವಾಗುವ ಆಹಾರಗಳು ಬೇಕಾಗುತ್ತವೆ. ಖಿಚಡಿ ಈ ಅವಶ್ಯಕತೆಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡ ಉಂಟುಮಾಡದೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಖಿಚಡಿಯಲ್ಲಿ ನಾರಿನಂಶ ಹೆಚ್ಚಿರುವ ಕಾರಣ ಪ್ರೋಟೀನ್ ಅಂಶ ಹೆಚ್ಚಿರುತ್ತದೆ. ಇದು ಹಸಿವನ್ನು ನಿಯಂತ್ರಿಸಲು ಮತ್ತು ಅತಿಯಾಗಿ ತಿನ್ನುವುದನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಶ್ವೇತಾ ಹೇಳಿದ್ದಾರೆ.

20 ದಿನಗಳಲ್ಲಿ ಉರಿಯೂತ ಕಡಿಮೆಯಾಗುತ್ತದೆ

ಈ ಡಯಟ್ ಫಾಲೋ ಮಾಡಿದ ಕಾರಣ ರಿಷಭ್ ಅವರ ಶೇಕಡಾ 50 ರಷ್ಟು ಸಮಸ್ಯೆಗಳನ್ನು ಖಿಚಡಿ ಆಹಾರದಿಂದ ಪರಿಹರಿಸಲಾಯಿತು ಎಂದು ಶ್ವೇತಾ ಹೇಳಿದ್ದಾರೆ. ಈ ಡಯಟ್​ ಫಾಲೋ ಮಾಡಿದರೆ 20 ದಿನಗಳಲ್ಲಿ ಉರಿಯೂತ ಕಡಿಮೆಯಾಗುತ್ತದೆ. ಕೈಯಲ್ಲಿ ಮತ್ತೊಂದು ಉರಿಯೂತ ಆಗಿದ್ದ ಕಾರಣ ನಿಂಬೆ, ಕಪ್ಪು ಒಣದ್ರಾಕ್ಷಿ, ಕರಿಮೆಣಸು ಮತ್ತು ಗೊಂಡ ಕಟೀರ ವಿವಿಧ ರೀತಿಯ ಕಷಾಯಗಳೊಂದಿಗೆ ಪ್ರಾರಂಭಿಸಿದೆವು. ಇದು ಮೂಳೆಗಳ ಚೇತರಿಕೆಗೆ ನೆರವಾಗುತ್ತದೆ ಎಂದು ಶಾ ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ