logo
ಕನ್ನಡ ಸುದ್ದಿ  /  ಕ್ರಿಕೆಟ್  /  ಮುಂಬೈ ನಾಯಕತ್ವದಿಂದ ರೋಹಿತ್ ಕೆಳಗಿಳಿಸಲು ಬೌಚರ್ ಸಮರ್ಥನೆ ತಳ್ಳಿ ಹಾಕಿದ ರಿತಿಕಾ; ರೋಹಿತ್ ಪತ್ನಿ ಹೊಸ ಬಾಂಬ್

ಮುಂಬೈ ನಾಯಕತ್ವದಿಂದ ರೋಹಿತ್ ಕೆಳಗಿಳಿಸಲು ಬೌಚರ್ ಸಮರ್ಥನೆ ತಳ್ಳಿ ಹಾಕಿದ ರಿತಿಕಾ; ರೋಹಿತ್ ಪತ್ನಿ ಹೊಸ ಬಾಂಬ್

Jayaraj HT Kannada

Feb 06, 2024 06:36 PM IST

google News

ಮುಂಬೈ ನಾಯಕತ್ವದಿಂದ ರೋಹಿತ್ ಕೆಳಗಿಳಿಸಲು ಬೌಚರ್ ಸಮರ್ಥನೆ ತಳ್ಳಿ ಹಾಕಿದ ರಿತಿಕಾ

    • Ritika Sajdeh: ರೋಹಿತ್ ಶರ್ಮಾ ಅವರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿದ ಮುಂಬೈ ಇಂಡಿಯನ್ಸ್ ನಿರ್ಧಾರದ ಬಗ್ಗೆ ಮಾರ್ಕ್ ಬೌಚರ್ ಸಮರ್ಥನೆ ನೀಡಿದರು. ಆದರೆ, ಆ ಸಮರ್ಥನೆಯನ್ನು ರೋಹಿತ್‌ ಪತ್ನಿ ರಿತಿಕಾ ಒಪ್ಪಲು ಸಿದ್ಧರಿಲ್ಲ. ಹೀಗಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ಕುರಿತು ಅಸಮಾಧಾನದ ಕಾಮೆಂಟ್‌ ಮಾಡಿದ್ದಾರೆ.
ಮುಂಬೈ ನಾಯಕತ್ವದಿಂದ ರೋಹಿತ್ ಕೆಳಗಿಳಿಸಲು ಬೌಚರ್ ಸಮರ್ಥನೆ ತಳ್ಳಿ ಹಾಕಿದ ರಿತಿಕಾ
ಮುಂಬೈ ನಾಯಕತ್ವದಿಂದ ರೋಹಿತ್ ಕೆಳಗಿಳಿಸಲು ಬೌಚರ್ ಸಮರ್ಥನೆ ತಳ್ಳಿ ಹಾಕಿದ ರಿತಿಕಾ (Getty Images)

ಐಪಿಎಲ್ 2024ರ ಆವೃತ್ತಿಗೂ ಮುಂಚಿತವಾಗಿ ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ರೋಹಿತ್ ಶರ್ಮಾ (Rohit Sharma) ಅವರನ್ನು ಕೆಳಗಿಳಿಸಿದ್ದಕ್ಕೆ ಮಾರ್ಕ್ ಬೌಚರ್ ನೀಡಿದ ಸಮರ್ಥನೆಯನ್ನು ರಿತಿಕಾ ಸಜ್ದೇಹ್ (Ritika Sajdeh) ತಳ್ಳಿಹಾಕಿದ್ದಾರೆ.

2023ರ ಡಿಸೆಂಬರ್ 15ರಂದು, ರೋಹಿತ್ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್‌ ತಂಡದ ನೂತನ ನಾಯಕನನ್ನಾಗಿ ನೇಮಿಸಲಾಯಿತು. ಇದಕ್ಕೆ ಫ್ರಾಂಚೈಸಿ ಕಡೆಯಿಂದ ಸೂಕ್ತ ಕಾರಣ ಅಥವಾ ಸಮರ್ಥನೆ ದೊರಕಿರಲಿಲ್ಲ. ಜನವರಿ 05ರ ಸೋಮವಾರ, ಈ ನಿರ್ಧಾರದ ಹಿಂದಿನ ಕಾರಣವನ್ನು ಮಾರ್ಕ್‌ ಬೌಚರ್‌ ವಿವರಿಸಿದರು. ಆದರೆ, ರೋಹಿತ್ ಅವರ ಪತ್ನಿ ರಿತಿಕಾಗೆ ಈ ಸಮರ್ಥನೆ ಇಷ್ಟವಾಗಿಲ್ಲ. ಈ ವಿಷಯದ ಬಗ್ಗೆ ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್ ಕೀಪರ್ ಹೇಳಿದ್ದನ್ನು ಒಪ್ಪುವುದಿಲ್ಲ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬಹಿರಂಗವಾಗಿ ಹೇಳಿದ್ದಾರೆ.

ಇದನ್ನೂ ಓದಿ | ಜೈಸ್ವಾಲ್-ಗಿಲ್ ಜಾಗತಿಕ ಕ್ರಿಕೆಟ್ ಆಳುತ್ತಾರೆ; ತೆಂಡೂಲ್ಕರ್-ಗಂಗೂಲಿ ಜೋಡಿ ನೆನಪಿಸಿದ ಸೆಹ್ವಾಗ್‌ ಹೇಳಿಕೆ

ಇನ್‌ಸ್ಟಾಗ್ರಾಮ್‌ನಲ್ಲಿ ಸ್ಮಾಶ್ ಸ್ಪೋರ್ಟ್ಸ್ ಪೋಡ್‌ಕಾಸ್ಟ್‌ ಪೋಸ್ಟ್‌ ಮಾಡಿದ ವಿಡಿಯೋಗೆ ರಿತಿಕಾ ಪ್ರತಿಕ್ರಿಯೆ ನೀಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಬರೆದಿರುವ ರೋಹಿತ್‌ ಪತ್ನಿ, “ಇದರಲ್ಲಿ ಅನೇಕ ವಿಷಯಗಳು ತಪ್ಪಾಗಿವೆ” (So many things wrong with this) ಎಂದು ಕಾಮೆಂಟ್‌ ಮಾಡಿದ್ದಾರೆ. ಆ ಮೂಲಕ ರೋಹಿತ್‌ ಅವರನ್ನು ನಾಯಕತ್ವದಿಂದ ಕೆಳಗಿಳಿಸುವಲ್ಲಿ ಅಸಲಿ ಕಾರಣ ಬೇರೆಯೇ ಇದೆ ಎಂಬ ಅಸಮಾಧಾನ ಹೊರಹಾಕಿದ್ದಾರೆ.

ರಿತಿಕಾ ಕಾಮೆಂಟ್

ಎಂಐ ಕೋಚ್ ಮಾರ್ಕ್ ಬೌಚರ್ ನೀಡಿದ ಸಮರ್ಥನೆ ಏನು?

ನಾಯಕತ್ವ ಬದಲಾವಣೆಯ ಕುರಿತು ಮುಂಬೈ ಫ್ರಾಂಚೈಸಿಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ, ಮುಂಬೈ ಇಂಡಿಯನ್ಸ್ ಕೋಚ್ ಮಾರ್ಕ್ ಬೌಚರ್ ಈ ನಿರ್ಧಾರದ ಹಿಂದಿನ ಅಸಲಿ ಕಾರಣ ವಿವರಿಸಿದ್ದರು. ರೋಹಿತ್ ಶರ್ಮಾ ಕೆಲಸದ ಹೊರೆಯನ್ನು ತಗ್ಗಿಸುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ | ರೋಹಿತ್ ಶರ್ಮಾ ಕೆಳಗಿಳಿಸಿದ್ದೇಕೆ; ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ನಾಯಕನಾಗುವುದರ ಹಿಂದಿನ ಅಸಲಿ ಕಾರಣ ಬಹಿರಂಗ

ಕಳೆದ ಎರಡು ಐಪಿಎಲ್‌ ಆವೃತ್ತಿಗಳಲ್ಲಿ ರೋಹಿತ್ ತಮ್ಮ ಆಟವನ್ನು ಆನಂದಿಸಿಲ್ಲ. ಈ ಕಾರಣಕ್ಕೆ ಹಾರ್ದಿಕ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಈಗಾಗಲೇ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್, ಹೆಚ್ಚು ಹೊರೆ ಅನುಭವಿಸುತ್ತಿದ್ದಾರೆ. ಎಂದು ಬೌಚರ್ ಅಭಿಪ್ರಾಯಪಟ್ಟಿದ್ದಾರೆ.

“ಇದು ಸಂಪೂರ್ಣವಾಗಿ ಕ್ರಿಕೆಟ್‌ಗೆ ಸಂಬಂಧಿಸಿದ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಕಾರ ಇದು ಪರಿವರ್ತನೆಯ ಹಂತ. ಭಾರತದಲ್ಲಿ ಬಹಳಷ್ಟು ಜನರಿಗೆ ಇದು ಅರ್ಥವಾಗುವುದಿಲ್ಲ. ಇಲ್ಲಿನ ಜನರು ಸಾಕಷ್ಟು ಭಾವುಕರಾಗುತ್ತಾರೆ. ಆದರೆ ಕ್ರಿಕೆಟ್‌ನಲ್ಲಿ ಭಾವನೆಗಳ ಹೊರತಾಗಿ ಯೋಚಿಸಬೇಕು. ಇದು ಕೇವಲ ಕ್ರಿಕೆಟ್‌ಗೆ ಸಂಬಂಧಿಸಿದ ನಿರ್ಧಾರ. ಈ ನಿರ್ಧಾರವು ಒಬ್ಬ ಆಟಗಾರನಾಗಿ, ಒಬ್ಬ ವ್ಯಕ್ತಿಯಾಗಿ ರೋಹಿತ್ ಅವರಿಂದ ಅತ್ಯುತ್ತಮ ಆಟವನ್ನು ಹೊರತರಲಿದೆ ಎಂದು ನಾನು ಭಾವಿಸುತ್ತೇನೆ. ಅವರು ಮೈದಾನಕ್ಕಿಳಿದು ಆಟವನ್ನು ಆನಂದಿಸಲು ಮತ್ತು ಉತ್ತಮ ರನ್‌ ಗಳಿಸಲು ಬಿಡಿ,” ಎಂದು ಮಾರ್ಕ್ ಬೌಚರ್ ಸ್ಮಾಶ್ ಸ್ಪೋರ್ಟ್ಸ್ ಪೋಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ | IND vs ENG: ಯಶಸ್ವಿ ಜೈಸ್ವಾಲ್ ಪ್ರಸ್ತುತ ಭಾರತದ ಅತ್ಯಂತ ಅಪಾಯಕಾರಿ ಬ್ಯಾಟರ್; ಇಂಗ್ಲೆಂಡ್ ಮಾಜಿ ಕ್ರಿಕೆಟಿಗ

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ