logo
ಕನ್ನಡ ಸುದ್ದಿ  /  ಕ್ರಿಕೆಟ್  /  Rohit Sharma: ಐದನೇ ಟೆಸ್ಟ್​ನಲ್ಲಿ ರೋಹಿತ್​​ ಶರ್ಮಾ ಮುರಿಯಲಿರುವ ಐದು ದಾಖಲೆಗಳ ಪಟ್ಟಿ ಇಲ್ಲಿದೆ

Rohit Sharma: ಐದನೇ ಟೆಸ್ಟ್​ನಲ್ಲಿ ರೋಹಿತ್​​ ಶರ್ಮಾ ಮುರಿಯಲಿರುವ ಐದು ದಾಖಲೆಗಳ ಪಟ್ಟಿ ಇಲ್ಲಿದೆ

Prasanna Kumar P N HT Kannada

Mar 06, 2024 09:00 AM IST

google News

ಐದನೇ ಟೆಸ್ಟ್​ನಲ್ಲಿ ರೋಹಿತ್​​ ಶರ್ಮಾ ಮುರಿಯಲಿರುವ ಐದು ದಾಖಲೆಗಳ ಪಟ್ಟಿ ಇಲ್ಲಿದೆ

    • Rohit Sharma records: ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ ಬರೆಯಲಿರುವ ಐದು ದಾಖಲೆಗಳ ಪಟ್ಟಿ ಈ ಮುಂದಿನಂತಿದೆ.
ಐದನೇ ಟೆಸ್ಟ್​ನಲ್ಲಿ ರೋಹಿತ್​​ ಶರ್ಮಾ ಮುರಿಯಲಿರುವ ಐದು ದಾಖಲೆಗಳ ಪಟ್ಟಿ ಇಲ್ಲಿದೆ
ಐದನೇ ಟೆಸ್ಟ್​ನಲ್ಲಿ ರೋಹಿತ್​​ ಶರ್ಮಾ ಮುರಿಯಲಿರುವ ಐದು ದಾಖಲೆಗಳ ಪಟ್ಟಿ ಇಲ್ಲಿದೆ (AFP)

ಇಂಡೋ-ಇಂಗ್ಲೆಂಡ್ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಮಾರ್ಚ್ 7ರಿಂದ ಧರ್ಮಶಾಲಾದಲ್ಲಿ ಆರಂಭಗೊಳ್ಳಲಿದೆ. ಇಂಗ್ಲೆಂಡ್ ವಿರುದ್ಧ 3-1ರಲ್ಲಿ ಸರಣಿ ಗೆದ್ದಿರುವ ಭಾರತ, ಅಂತಿಮ ಪಂದ್ಯದಲ್ಲೂ ದಿಗ್ವಿಜಯ ಸಾಧಿಸಲು ರೆಡಿಯಾಗಿದೆ. ಮತ್ತೊಂದೆಡೆ ಇಂಗ್ಲೆಂಡ್ ಗೆಲುವಿನೊಂದಿಗೆ ಸರಣಿ ಮುಗಿಸಲು ಯೋಜನೆ ರೂಪಿಸುತ್ತಿದೆ. ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ 4 ದಾಖಲೆಗಳನ್ನು ಬರೆಯಲು ಸಜ್ಜಾಗಿದ್ದಾರೆ.

ಡಬ್ಲ್ಯುಟಿಸಿಯಲ್ಲಿ ಸಿಕ್ಸರ್​​ಗಳ ದಾಖಲೆ

ಸಿಕ್ಸರ್​ ಕಿಂಗ್ ಎಂದೇ ಕರೆಸಿಕೊಳ್ಳುವ 36 ವರ್ಷದ ರೋಹಿತ್​ ಶರ್ಮಾ ಅವರು ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​​ ಟೂರ್ನಿಯಲ್ಲಿ 31 ಟೆಸ್ಟ್​​ ಪಂದ್ಯಗಳಿಂದ 49 ಸಿಕ್ಸರ್​ ಬಾರಿಸಿದ್ದಾರೆ. ಅಂತಿಮ ಟೆಸ್ಟ್​ನಲ್ಲಿ ಇನ್ನೊಂದು ಸಿಕ್ಸರ್​ ಸಿಡಿಸಿದರೆ 50ನೇ ಸಿಕ್ಸರ್​​ ಬಾರಿಸಿದಂತಾಗುತ್ತದೆ. ಇದರೊಂದಿಗೆ ಈ ದಾಖಲೆ ನಿರ್ಮಿಸಿದ ಭಾರತದ ಮೊದಲ ಹಾಗೂ ವಿಶ್ವದ ಎರಡನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ. ಇಂಗ್ಲೆಂಡ್​​ನ ಬೆನ್​ ಸ್ಟೋಕ್ಸ್ ಅಗ್ರಸ್ಥಾನದಲ್ಲಿದ್ದು, ಡಬ್ಲ್ಯುಟಿಸಿಯಲ್ಲಿ ಅವರು 44 ಪಂದ್ಯಗಳಿಂದ 78 ಸಿಕ್ಸ್ ಸಿಡಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 600 ಸಿಕ್ಸರ್​

ಆಕ್ರಮಣಕಾರಿ ಬ್ಯಾಟಿಂಗ್​ಗೆ ಹೆಸರಾದ ರೋಹಿತ್ ಶರ್ಮಾ, ಮೂರು ಫಾರ್ಮೆಟ್​​ನಲ್ಲೂ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಮೂರು ಫಾರ್ಮೆಟ್​ನಲ್ಲೂ ಈಗಾಗಲೇ 594 ಸಿಕ್ಸರ್ ಚಚ್ಚಿರುವ ಹಿಟ್​ಮ್ಯಾನ್ ಈ ಟೆಸ್ಟ್​​ನಲ್ಲಿ ಇನ್ನು 6 ಸಿಕ್ಸರ್​​ ಬಾರಿಸಲು ಸಾಧ್ಯವಾಗಿದ್ದೇ ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ 600 ಸಿಕ್ಸರ್​ ಕ್ಲಬ್ ಸೇರಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಲಿದ್ದಾರೆ.

ಅಂ. ಕ್ರಿಕೆಟ್‌ನಲ್ಲಿ ಹೆಚ್ಚು ಸಿಕ್ಸ್ ಸಿಡಿಸಿದ ಟಾಪ್-5 ಬ್ಯಾಟರ್ಸ್

594- ರೋಹಿತ್ ಶರ್ಮಾ (ಭಾರತ) - 471 ಪಂದ್ಯ

553- ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) -483 ಪಂದ್ಯ

476- ಶಾಹೀದ್ ಅಫ್ರಿದಿ (ಪಾಕಿಸ್ತಾನ) - 524 ಪಂದ್ಯ

398 - ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್) - 432 ಪಂದ್ಯ

383- ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್) - 367 ಪಂದ್ಯ

ನಾಯಕನಾಗಿ ಗೆಲುವಿನ ದಾಖಲೆ

ಸಿಕ್ಸರ್​​ಗಳ ಜೊತೆಗೆ ನಾಯಕನಾಗಿಯೂ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ. ಆಂಗ್ಲರ ಎದುರಿನ 5 ಟೆಸ್ಟ್​​​ ಪಂದ್ಯವನ್ನು ಗೆದ್ದಿದ್ದೇ ಆದರೆ ಭಾರತದ ಪರ ಟೆಸ್ಟ್ ಕ್ರಿಕೆಟ್​​ನಲ್ಲಿ ಹೆಚ್ಚು ಜಯ ಸಾಧಿಸಿದ ಟೀಮ್ ಇಂಡಿಯಾದ ಐದನೇ ನಾಯಕ ಎಂಬ ದಾಖಲೆ ಬರೆಯಲಿದ್ದಾರೆ. ಈಗಾಗಲೇ 9 ಪಂದ್ಯಗಳಲ್ಲಿ ಜಯದ ನಗೆ ಬೀರಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಜಯ ಸಾಧಿಸಿದರೆ ರೋಹಿತ್​, 9 ಟೆಸ್ಟ್​ಗಳನ್ನು ಜಯಿಸಿದ ಮನ್ಸೂರ್ ಅಲಿ ಖಾನ್ ಪಟೌಡಿ, ಸುನಿಲ್ ಗವಾಸ್ಕರ್ ದಾಖಲೆ ಮುರಿಯಲಿದ್ದಾರೆ.

ಭಾರತದ ಪರ ಅಧಿಕ ಟೆಸ್ಟ್ ಗೆದ್ದ ನಾಯಕರು

40 ಜಯ - ವಿರಾಟ್ ಕೊಹ್ಲಿ - 68 ಪಂದ್ಯ

27 ಜಯ - ಎಂಎಸ್ ಧೋನಿ - 60 ಪಂದ್ಯ

21 ಜಯ - ಸೌರವ್ ಗಂಗೂಲಿ - 49 ಪಂದ್ಯ

14 ಜಯ - ಮೊಹಮ್ಮದ್ ಅಜರುದ್ದೀನ್ - 47 ಪಂದ್ಯ

9 ಜಯ - ರೋಹಿತ್ ಶರ್ಮಾ -15 ಪಂದ್ಯ

9 ಜಯ - ಮನ್ಸೂರ್ ಅಲಿ ಖಾನ್ ಪಟೌಡಿ - 40 ಪಂದ್ಯ

9 ಜಯ - ಸುನೀಲ್ ಗವಾಸ್ಕರ್ - 47 ಪಂದ್ಯ

ಧೋನಿ ದಾಖಲೆ ಮೇಲೂ ಕಣ್ಣು

ಬೆನ್​ ಸ್ಟೋಕ್ಸ್​ ಪಡೆಯ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈವರೆಗೂ ನಡೆದ 4 ಟೆಸ್ಟ್​​ಗಳ ಪೈಕಿ ಭಾರತ 3 ಮೂರು ಗೆದ್ದಿದೆ. ಧರ್ಮಶಾಲಾ ಟೆಸ್ಟ್​ ಪಂದ್ಯವನ್ನೂ ಜಯಿಸಿದರೆ ನಾಯಕ ರೋಹಿತ್​ ಶರ್ಮಾ ಅವರು ಮಾಜಿ ನಾಯಕ ಎಂಎಸ್ ಧೋನಿ ದಾಖಲೆಯನ್ನು ಮುರಿಯಲಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಸರಣಿಯೊಂದರಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯ ಗೆದ್ದ 2ನೇ ಭಾರತದ ನಾಯಕ ಎಂಬ ದಾಖಲೆ ಬರೆಯಲಿದ್ದಾರೆ. ಹಾಗೆಯೇ ಧೋನಿ, ಮೊಹಮ್ಮದ್ ಅಜರುದ್ದೀನ್, ಅಜಿತ್ ವಾಡೇಕರ್ ಅವರು 3 ಗೆಲುವು ಗಳಿಸಿ ನಿರ್ಮಿಸಿದ್ದ ದಾಖಲೆ ಮುರಿದು ರೋಹಿತ್ ಹೊಸ ಮೈಲುಗಲ್ಲು ನಿರ್ಮಿಸಲಿದ್ದಾರೆ.

ಟೆಸ್ಟ್​​ನಲ್ಲಿ ಅತಿ ಹೆಚ್ಚು ರನ್

ರೋಹಿತ್ ಶರ್ಮಾ ಅವರು ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರ ಪೈಕಿ ಗೌತಮ್ ಗಂಭೀರ್ ಅವರನ್ನು ಮೀರಿಸುವ ಗುರಿಯನ್ನು ಹೊಂದಿದ್ದಾರೆ. ಹಿಟ್​ಮ್ಯಾನ್ 58 ಟೆಸ್ಟ್ ಪಂದ್ಯಗಳಿಂದ 4034 ರನ್ ಗಳಿಸಿದ್ದು, ಗಂಭೀರ್ ಅವರನ್ನು ಮೀರಿಸಲು ಕೇವಲ 121 ರನ್‌ಗಳ ಕೊರತೆಯಿದೆ. ಐದನೇ ಟೆಸ್ಟ್​ನ ಎರಡೂ ಇನ್ನಿಂಗ್ಸ್​​ಗಳಲ್ಲಿ ಇದು ಸಾಧ್ಯವಾದರೆ ಅತಿ ಹೆಚ್ಚು ಟೆಸ್ಟ್ ಗಳಿಸಿದ ಭಾರತದ 16ನೇ ಆಟಗಾರ ಎಂಬ ಸಾಧನೆಗೆ ಒಳಗಾಗಲಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ