logo
ಕನ್ನಡ ಸುದ್ದಿ  /  ಕ್ರಿಕೆಟ್  /  ಸೋತು-ಗೆದ್ದವರ ನಡುವೆ ಫೈಟ್; ಪಂಜಾಬ್​ ಕಿಂಗ್ಸ್ ವಿರುದ್ಧದ ಹೈವೋಲ್ಟೇಜ್​ ಕದನಕ್ಕೆ ಆರ್​ಸಿಬಿ ಪ್ಲೇಯಿಂಗ್ Xi ಹೀಗಿದೆ ವಿವರ

ಸೋತು-ಗೆದ್ದವರ ನಡುವೆ ಫೈಟ್; ಪಂಜಾಬ್​ ಕಿಂಗ್ಸ್ ವಿರುದ್ಧದ ಹೈವೋಲ್ಟೇಜ್​ ಕದನಕ್ಕೆ ಆರ್​ಸಿಬಿ ಪ್ಲೇಯಿಂಗ್ XI ಹೀಗಿದೆ ವಿವರ

Prasanna Kumar P N HT Kannada

Mar 25, 2024 08:00 AM IST

google News

ಪಂಜಾಬ್​ ಕಿಂಗ್ಸ್ ವಿರುದ್ಧದ ಹೈವೋಲ್ಟೇಜ್​ ಕದನಕ್ಕೆ ಆರ್​ಸಿಬಿ ಪ್ಲೇಯಿಂಗ್ XI ಹೀಗಿದೆ ವಿವರ

    • Royal Challengers Bengaluru Playing XI : ಆರ್​ಸಿಬಿ ಮತ್ತು ಪಂಜಾಬ್ ಕಿಂಗ್ಸ್​ ನಡುವಿನ ಪಂದ್ಯದಲ್ಲಿ ಪಿಚ್, ಪ್ಲೇಯಿಂಗ್ ಇಲೆವೆನ್, ಹವಾಮಾನ ಮುನ್ಸೂಚನೆ ಹೇಗಿರಲಿದೆ ಎಂಬುದನ್ನು ತಿಳಿಯೋಣ.
ಪಂಜಾಬ್​ ಕಿಂಗ್ಸ್ ವಿರುದ್ಧದ ಹೈವೋಲ್ಟೇಜ್​ ಕದನಕ್ಕೆ ಆರ್​ಸಿಬಿ ಪ್ಲೇಯಿಂಗ್ XI ಹೀಗಿದೆ ವಿವರ
ಪಂಜಾಬ್​ ಕಿಂಗ್ಸ್ ವಿರುದ್ಧದ ಹೈವೋಲ್ಟೇಜ್​ ಕದನಕ್ಕೆ ಆರ್​ಸಿಬಿ ಪ್ಲೇಯಿಂಗ್ XI ಹೀಗಿದೆ ವಿವರ

17ನೇ ಆವೃತ್ತಿಯ ಐಪಿಎಲ್ ಟೂರ್ನಿ (IPL 2024) ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಲೀಗ್​​ನ ಮತ್ತೊಂದು ಹೈವೋಲ್ಟೇಜ್​ ಕದನಕ್ಕೆ ವೇದಿಕೆ ಸಜ್ಜಾಗಿದ್ದು, 6ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು (Royal Challengers Bengaluru vs Punjab Kings) ರೋಚಕ ಕಾದಾಟಕ್ಕೆ ಸಜ್ಜಾಗಿವೆ. ಎರಡು ಬಲಿಷ್ಠ ತಂಡಗಳ ಸೆಣಸಾಟಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ಆತಿಥ್ಯ ವಹಿಸಲಿದೆ.

ಈಗಾಗಲೇ ಉದ್ಘಾಟನಾ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಸೋತಿರುವ ಆರ್​ಸಿಬಿ ಜಯದ ಖಾತೆ ತೆರೆಯಲು ಸಜ್ಜಾಗಿದ್ದರೆ, ಮತ್ತೊಂದೆಡೆ ಪಂಜಾಬ್ ಕಿಂಗ್ಸ್​ ಸತತ ಎರಡನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ. ತವರಿನ ಮೈದಾನದ ಲಾಭ ಪಡೆಯಲು ಎದುರು ನೋಡುತ್ತಿರುವ ಆರ್​ಸಿಬಿ, ಗೆಲುವಿನ ಖಾತೆ ತೆರೆಯಲು ಸನ್ನದ್ಧಗೊಂಡಿದೆ. ಉಭಯ ತಂಡಗಳಿಗೂ ಇದು ಎರಡನೇ ಪಂದ್ಯವಾಗಿದ್ದು, ಈ ಪಂದ್ಯದಲ್ಲಿ ಪಿಚ್, ಪ್ಲೇಯಿಂಗ್ ಇಲೆವೆನ್, ಹವಾಮಾನ ಮುನ್ಸೂಚನೆ ಹೇಗಿರಲಿದೆ ಎಂಬುದನ್ನು ತಿಳಿಯೋಣ.

ಚಿನ್ನಸ್ವಾಮಿ ಪಿಚ್​ ರಿಪೋರ್ಟ್

ಎಂ ಚಿನ್ನಸ್ವಾಮಿ ಮೈದಾನವನ್ನು ಬ್ಯಾಟ್ಸ್‌ಮನ್‌ಗಳ ಸ್ವರ್ಗ ಎಂದು ಪರಿಗಣಿಸಲಾಗಿದೆ. ಈ ಮೈದಾನದ ಬೌಂಡರಿ ತುಂಬಾ ಚಿಕ್ಕದಾಗಿದ್ದು, ಬ್ಯಾಟ್ಸ್​​ಮನ್​​​ಗಳು ಫೋರ್-ಸಿಕ್ಸರ್​ಗಳ ಸುರಿಮಳೆಗೈಯಲಿದ್ದಾರೆ. ಹಾಗಾಗಿ ಇಲ್ಲಿ ಹೈ ಸ್ಕೋರಿಂಗ್ ಪಂದ್ಯವನ್ನು ನಿರೀಕ್ಷಿಸಬಹುದಾಗಿದೆ. ಇನ್ನು ಈ ಟ್ರ್ಯಾಕ್​​ನಲ್ಲಿ ವೇಗದ ಬೌಲರ್​ಗಳು ಕೊಂಚ ಮೇಲುಗೈ ಸಾಧಿಸುವ ಕಾರಣ ತಂಡದಲ್ಲಿ ಕೆಲ ಬದಲಾವಣೆ ಕಂಡು ಬಂದರೂ ಅಚ್ಚರಿ ಇಲ್ಲ.

ಬೆಂಗಳೂರು ಹವಾಮಾನ ವರದಿ

ಆರ್​ಸಿಬಿ ಮತ್ತು ಪಂಜಾಬ್ ನಡುವಿನ ಪಂದ್ಯವು ಯಾವುದೇ ಮಳೆಯ ಆತಂಕ ಇಲ್ಲದೆ ಸಂಪೂರ್ಣ ಪಂದ್ಯವನ್ನು ಪ್ರೇಕ್ಷಕರು ವೀಕ್ಷಿಸಬಹುದು. ಏಕೆಂದರೆ ಮಳೆ ಬರುವ ಸಾಧ್ಯತೆ ತೀರಾ ಕಡಿಮೆ. ಯಾವುದೇ ಮೋಡ ಕವಿದ ವಾತಾವರಣ ಕೂಡ ಇರುವುದಿಲ್ಲ.

ಹೆಡ್ ಟು ಹೆಡ್ ರೆಕಾರ್ಡ್ಸ್

ಐಪಿಎಲ್ ಇತಿಹಾಸದಲ್ಲಿ ಈ ಎರಡು ತಂಡಗಳ ನಡುವೆ 31 ಪಂದ್ಯಗಳು ನಡೆದಿವೆ. ಇದರಲ್ಲಿ ಪಂಜಾಬ್ ತಂಡವೇ ಮೇಲುಗೈ ಸಾಧಿಸಿದೆ. ಪಿಬಿಕೆಎಸ್ 17 ಪಂದ್ಯಗಳನ್ನು ಗೆದ್ದಿದೆ. ಆರ್‌ಸಿಬಿ 14 ರಲ್ಲಿ ಜಯಿಸಿದೆ.

ತಂಡದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿದ ತಂಡವನ್ನೇ ಬಹುತೇಕ ಕಣಕ್ಕಿಳಿಯಲು ಟೀಮ್ ಮ್ಯಾನೇಜ್​ಮೆಂಟ್ ಚಿಂತಿಸಿದೆ. ಚಿನ್ನಸ್ವಾಮಿ ಪಿಚ್​ ಸ್ಪಿನ್ನರ್​ಗಳಿಗಿಂತ ವೇಗಿಗಳಿಗೆ ಅನುಕೂಲ ಇರುವ ಕಾರಣ ಮಯಾಂಕ್ ಡಾಗರ್ ಅಥವಾ ಕರಣ್ ಶರ್ಮಾ ಅವರ ಬದಲಿಗೆ ಒಬ್ಬರನ್ನು ಕೈಬಿಟ್ಟು, ಒಬ್ಬ ಫಾಸ್ಟ್​ ಬೌಲರ್​​​ ತಂಡ ಸೇರುವ ಸಾಧ್ಯತೆ ಇದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ತಂಡ

ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್​ವೆಲ್, ಕ್ಯಾಮರೂನ್ ಗ್ರೀನ್, ಅನೂಜ್ ರಾವತ್ (ವಿಕೆಟ್ ಕೀಪರ್​), ದಿನೇಶ್ ಕಾರ್ತಿಕ್, ಅಲ್ಜಾರಿ ಜೋಸೆಫ್, ಮಯಾಂಕ್ ಡಾಗರ್, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್.

ಇಂಪ್ಯಾಕ್ಟ್ ಪ್ಲೇಯರ್​ - ಯಶ್ ದಯಾಳ್ (ದಿನೇಶ್ ಕಾರ್ತಿಕ್​ಗೆ)

ಪಂಜಾಬ್ ಕಿಂಗ್ಸ್ ಸಂಭಾವ್ಯ ತಂಡ

ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋ, ಪ್ರಭುಸಿಮ್ರಾನ್ ಸಿಂಗ್, ಸ್ಯಾಮ್ ಕರನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್​), ಲಿಯಾಮ್ ಲಿವಿಂಗ್‌ಸ್ಟನ್, ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೋ ರಬಾಡ, ರಾಹುಲ್ ಚಹರ್

ಇಂಪ್ಯಾಕ್ಟ್ ಪ್ಲೇಯರ್ - ಪ್ರಭುಸಿಮ್ರನ್ ಸಿಂಗ್ ಬದಲಿಗೆ ಅರ್ಷದೀಪ್ ಸಿಂಗ್

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ