logo
ಕನ್ನಡ ಸುದ್ದಿ  /  ಕ್ರಿಕೆಟ್  /  ಬುಮ್ರಾ, ಶಮಿ ಮಾತ್ರವಲ್ಲ; ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ‌ ಗೆಲುವಿಗೆ ಈ ಇಬ್ಬರು ನಿರ್ಣಾಯಕ ಎಂದ ಶ್ರೀಶಾಂತ್

ಬುಮ್ರಾ, ಶಮಿ ಮಾತ್ರವಲ್ಲ; ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ‌ ಗೆಲುವಿಗೆ ಈ ಇಬ್ಬರು ನಿರ್ಣಾಯಕ ಎಂದ ಶ್ರೀಶಾಂತ್

Jayaraj HT Kannada

Dec 05, 2023 09:32 PM IST

google News

ಭಾರತ ತಂಡದ ಆಟಗಾರರು

    • ಟೀಮ್‌ ಇಂಡಿಯಾ ಆಟಗಾರರು ಇತ್ತೀಚೆಗೆ ಉತ್ತಮ ಫಾರ್ಮ್‌ನಲ್ಲಿರುವುದರಿಂದ ಈ ಬಾರಿ ಭಾರತವು ಸರಣಿ ಗೆಲ್ಲುವ ಅವಕಾಶ ಹೊಂದಿದೆ ಎಂದು ಎಸ್‌ ಶ್ರೀಶಾಂತ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡದ ಆಟಗಾರರು
ಭಾರತ ತಂಡದ ಆಟಗಾರರು (AP)

ಏಕದಿನ ವಿಶ್ವಕಪ್ ನಂತರ ಭಾರತ ಕ್ರಿಕೆಟ್‌ ತಂಡವು ಮೊದಲ ವಿದೇಶ ಪ್ರವಾಸಕ್ಕೆ ಸಜ್ಜಾಗಿದೆ. ಮೂರು ಪಂದ್ಯಗಳ ಟಿ20 ಸರಣಿಯೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ (India tour of South Africa) ಆರಂಭವಾಗುತ್ತದೆ. ಆ ಬಳಿಕ ಮೂರು ಏಕದಿನ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತದ ಪ್ರಮುಖ ಗುರಿ ಎಂದರೆ, ಅವರದೇ ನೆಲದಲ್ಲಿ ಮೊದಲ ಟೆಸ್ಟ್ ಸರಣಿ ಗೆಲ್ಲುವುದು. ಈ ಕುರಿತು ಮಾತನಾಡಿರುವ ಭಾರತದ ಮಾಜಿ ವೇಗದ ಬೌಲರ್ ಎಸ್ ಶ್ರೀಶಾಂತ್, ಟೀಮ್‌ ಇಂಡಿಯಾದಲ್ಲಿರುವ ಹೆಚ್ಚಿನ ಆಟಗಾರರು ಇತ್ತೀಚೆಗೆ ಉತ್ತಮ ಫಾರ್ಮ್‌ನಲ್ಲಿರುವುದರಿಂದ ಈ ಬಾರಿ ಭಾರತವು ಸರಣಿ ಗೆಲ್ಲುವ ಉತ್ತಮ ಅವಕಾಶ ಹೊಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ | ಇಂಡೋ-ಆಫ್ರಿಕಾ ಸರಣಿಯ ವೇಳಾಪಟ್ಟಿ, ಪಂದ್ಯಗಳ ಸಮಯ, ನೇರಪ್ರಸಾರ, ತಂಡಗಳು; ಸಂಪೂರ್ಣ ಮಾಹಿತಿ ಇಲ್ಲಿದೆ

“ಭಾರತಕ್ಕೆ ಈ ಬಾರಿ ಅತ್ಯುತ್ತಮ ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ. ಭಾರತ ಟೆಸ್ಟ್ ಸರಣಿಯನ್ನು ಗೆಲ್ಲುವುದನ್ನು ನೋಡಲು ನಾನು ಕಾಯುತ್ತಿದ್ದೇನೆ. ಇದು ವಿಶ್ವಕಪ್ ಗೆದ್ದ ಖುಷಿ ಕೊಡುತ್ತದೆ. ಏಕೆಂದರೆ ದಕ್ಷಿಣ ಆಫ್ರಿಕಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಗೆಲ್ಲುವುದು ಅಷ್ಟು ಸುಲಭವಲ್ಲ” ಎಂದು ಶ್ರೀಶಾಂತ್‌ ಹೇಳಿಕೆಯನ್ನು ಫಸ್ಟ್‌ಪೋಸ್ಟ್ ವರದಿ ಮಾಡಿದೆ.

“ದಕ್ಷಿಣ ಆಫ್ರಿಕಾದ ಪಿಚ್ ಪರಿಸ್ಥಿತಿಯಲ್ಲಿ ಮೇಲುಗೈ ಸಾಧಿಸುವುದು ಅಷ್ಟು ಸುಲಭವಲ್ಲ. ಆದರೆ ಭಾರತದ ವೇಗಿಗಳ ಸಾಮರ್ಥ್ಯವನ್ನು ನಾವು ವಿಶ್ವಕಪ್‌ನಲ್ಲಿ ನೋಡಿದ್ದೇವೆ. ಟೀಮ್‌ ಇಂಡಿಯಾವು ಉತ್ತಮ ವೇಗದ ದಾಳಿಯನ್ನು ಹೊಂದಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ | ಇಂಡೋ-ಆಫ್ರಿಕಾ ಟಿ20 ಸರಣಿ: ಮುಖಾಮುಖಿ ದಾಖಲೆ, ಅತ್ಯಧಿಕ ರನ್, ವಿಕೆಟ್, ಗರಿಷ್ಠ ಸ್ಕೋರ್; ಸಂಪೂರ್ಣ ವಿವರ ಇಲ್ಲಿದೆ

“ಭಾರತ ತಂಡದ ವೇಗದ ಬಳಗವೆಂದರೆ ಕೇವಲ ಬುಮ್ರಾ, ಶಮಿ ಅಥವಾ ಕೇವಲ ಸಿರಾಜ್ ಮಾತ್ರವಲ್ಲ. ನಮ್ಮಲ್ಲಿ ಸಾಕಷ್ಟು ಬೌಲರ್‌ಗಳಿದ್ದಾರೆ. ಅವರು ದಾಳಿ ನಡೆಸಲು ರೆಕ್ಕೆ ಕಟ್ಟಿ ಕಾಯುತ್ತಿದ್ದಾರೆ. ನಮ್ಮ ಭಾರತ ಎ ತಂಡ ಕೂಡ ಉತ್ತಮ ಪ್ರದರ್ಶನ ನೀಡುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ಭಾರತ ಗೆಲ್ಲಲಿರುವ ಸರಣಿ ಇದು ಎಂಬ ವಿಶ್ವಾಸ ನನಗಿದೆ,” ಎಂದು ಎರಡು ದಕ್ಷಿಣ ಆಫ್ರಿಕಾ ಪ್ರವಾಸಗಳ ಭಾಗವಾಗಿದ್ದ ಶ್ರೀಶಾಂತ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಆಟ ನಿರ್ಣಾಯಕ

ಭಾರತದ ಗೆಲುವಿನಲ್ಲಿ ಬೌಲರ್‌ಗಳು ಪ್ರಮುಖ ಪಾಲು ಪಡೆದರೂ, ಕೊಹ್ಲಿ ಭಾರತಕ್ಕೆ ನಿರ್ಣಾಯಕ ಆಗಲಿದ್ದಾರೆ ಎಂದು ಶ್ರೀಶಾಂತ್ ಹೇಳಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಕದಿನ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ನಿರ್ಮಿಸಿದ ಭಾರತದ ಮಾಜಿ ನಾಯಕ, ಅಮೋಘ ಫಾರ್ಮ್‌ಗೆ ಮರಳಿದ್ದಾರೆ. ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಭಾರತದ ಕೊನೆಯ ಟೆಸ್ಟ್ ಪಂದ್ಯದಲ್ಲೂ ಅವರು ಶತಕ ಸಿಡಿಸಿದ್ದರು.

ಇದನ್ನೂ ಓದಿ | ತಂಡಕ್ಕೆ ಮರಳಿದ ಪ್ರಮುಖರು, ಯಾರೆಲ್ಲಾ ಇನ್, ಯಾರೆಲ್ಲಾ ಔಟ್; ದ.ಆಫ್ರಿಕಾ ಮೊದಲ ಟಿ20ಗೆ ಭಾರತದ ಪ್ಲೇಯಿಂಗ್ XI

"ವಿರಾಟ್ ಪ್ರತಿಬಾರಿಯೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಇಷ್ಟಪಡುತ್ತಾರೆ. ಅವರು ನಿಜಕ್ಕೂ ಆ ಹೆಮ್ಮೆಯೊಂದಿಗೆ ಆಡುವ ಕ್ರಿಕೆಟಿಗ ಎಂದು ನಾನು ಭಾವಿಸುತ್ತೇನೆ. ಅವರ ಆಟದಲ್ಲಿ ಅಹಂಕಾರ ಇಲ್ಲ. ಹೀಗಾಗಿ ಅವರೆಂದರೆ ನನಗೆ ಹೆಮ್ಮೆ. ಹೀಗಾಗಿ ಹರಿಣಗಳ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ವಿರಾಟ್ ಮತ್ತು ಕೆಎಲ್ ರಾಹುಲ್ ನಿರ್ಣಾಯಕ ಆಟಗಾರರಾಗಲಿದ್ದಾರೆ ಎಂದು ಶ್ರೀಶಾಂತ್‌ ಹೇಳಿಕೊಂಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ