logo
ಕನ್ನಡ ಸುದ್ದಿ  /  ಕ್ರಿಕೆಟ್  /  ಪದಾರ್ಪಣೆ ಬಳಿಕ ಸತತ 2 ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದ ಸಾಯಿ ಸುದರ್ಶನ್; ಈ ಸಾಧನೆ ಮಾಡಿದ ಎರಡನೇ ಭಾರತೀಯ

ಪದಾರ್ಪಣೆ ಬಳಿಕ ಸತತ 2 ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದ ಸಾಯಿ ಸುದರ್ಶನ್; ಈ ಸಾಧನೆ ಮಾಡಿದ ಎರಡನೇ ಭಾರತೀಯ

Jayaraj HT Kannada

Dec 19, 2023 09:08 PM IST

google News

ಸಾಯಿ ಸುದರ್ಶನ್ ಮತ್ತು ಕೆಎಲ್‌ ರಾಹುಲ್

    • Sai Sudharsan: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆರಂಭಿಕ ಆಟಗಾರ ಸಾಯಿ ಸುದರ್ಶನ್ 62 ರನ್‌ ಗಳಿಸಿದರು. ವೃತ್ತಿಜೀವನದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿಯೂ ಅರ್ಧಶತಕದ ಸಾಧನೆ ಮಾಡಿದರು.
ಸಾಯಿ ಸುದರ್ಶನ್ ಮತ್ತು ಕೆಎಲ್‌ ರಾಹುಲ್
ಸಾಯಿ ಸುದರ್ಶನ್ ಮತ್ತು ಕೆಎಲ್‌ ರಾಹುಲ್ (BCCI-X)

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ (South Africa vs India) ಸಾಯಿ ಸುದರ್ಶನ್ (Sai Sudharsan) ಸ್ಥಿರ ಪ್ರದರ್ಶನ ಮುಂದುವರೆಸಿದ್ದಾರೆ. ಸರಣಿಯ ಮೊದಲ ಪಂದ್ಯದ ಮೂಲಕ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸುದರ್ಶನ್‌, ಸತತ ಎರಡು ಪಂದ್ಯಗಳಲ್ಲಿಯೂ ಅರ್ಧಶತಕ ಸಿಡಿಸಿದ್ದಾರೆ. ಆ ಮೂಲಕ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಸತತ ಅರ್ಧಶತಕಗಳನ್ನು ಸಿಡಿಸಿದ ಎರಡನೇ ಭಾರತೀಯ ಬ್ಯಾಟರ್‌ ಎಂಬ ದಾಖಲೆ ನಿರ್ಮಿಸಿದ್ದಾರೆ.

ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ಡಿಸೆಂಬರ್‌ 19ರ ಮಂಗಳವಾರ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಎರಡನೇ ಏಕದಿನ ಪಂದ್ಯ ನಡೆಯಿತು. ಪಂದ್ಯದಲ್ಲಿ ಭಾರತದ ಪರ 62 ರನ್‌ ಗಳಿಸಿದ ಆರಂಭಿಕ ಆಟಗಾರ ಸಾಯಿ ಸುದರ್ಶನ್, ವೃತ್ತಿಜೀವನದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿಯೂ ಅರ್ಧಶತಕ ಪೂರೈಸಿದರು.‌

ಇದನ್ನೂ ಓದಿ | ಚೊಚ್ಚಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದ ಸಾಯಿ ಸುದರ್ಶನ್ ಯಾರು? ನಿಮಗೆ ಗೊತ್ತಿರದ ಹಲವು ಮಾಹಿತಿ ಇಲ್ಲಿದೆ!

ಈ ಹಿಂದೆ ಭಾರತದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಮಾತ್ರ ಈ ಸಾಧನೆ ಮಾಡಿದ್ದರು. 1987ರಲ್ಲಿ ತಮ್ಮ ಮೊದಲ ನಾಲ್ಕು ಏಕದಿನ ಪಂದ್ಯಗಳಲ್ಲಿ ಸತತ ನಾಲ್ಕು ಅರ್ಧಶತಕಗಳನ್ನು ಸಿಡಿಸುವ ಮೂಲಕ ಸಿಧು ದಾಖಲೆ ಮಾಡಿದ್ದರು.

ಏಕದಿನ ಪದಾರ್ಪಣೆಯ ಸತತ ಎರಡು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದ ಭಾರತೀಯರು

  • 1. ನವಜೋತ್ ಸಿಂಗ್ ಸಿಧು (ಸತತ ನಾಲ್ಕು ಅರ್ಧಶತಕ)

ಆಸ್ಟ್ರೇಲಿಯಾ ವಿರುದ್ಧ 73, ನ್ಯೂಜಿಲೆಂಡ್ ವಿರುದ್ಧ 75, ಆಸ್ಟ್ರೇಲಿಯಾ ವಿರುದ್ಧ 51, ಜಿಂಬಾಬ್ವೆ ವಿರುದ್ಧ 5

  • 2. ಸಾಯಿ ಸುದರ್ಶನ್ - ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 55, ದಕ್ಷಿಣ ಆಫ್ರಿಕಾ ವಿರುದ್ಧ 63

22 ವರ್ಷ ವಯಸ್ಸಿನ‌ ಸಾಯಿ ಸುದರ್ಶನ್‌, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದ ಮೂಲಕ ಪದಾರ್ಪಣೆ ಮಾಡಿದ್ದರು. ಚೊಚ್ಚಲ ಪಂದ್ಯದಲ್ಲಿ ಅಜೇಯ 55 ರನ್ ಗಳಿಸಿ ಆಕರ್ಷಿಸಿದ್ದರು. ಅವರ ಅಜೇಯ ಪ್ರದರರ್ಶನವು ಭಾರತ ತಂಡಸ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಇದೀಗ ಎರಡನೇ ಏಕದಿನ ಪಂದ್ಯದಲ್ಲಿ ಅವರು 83 ಎಸೆತಗಳನ್ನು ಎದುರಿಸಿದ 63 ರನ್ ಗಳಿಸಿದ್ದಾರೆ. ಇದರಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್‌ ಸೇರಿದೆ.

ಇದನ್ನೂ ಓದಿ | ಸೌತ್ ಆಫ್ರಿಕಾ ವಿರುದ್ಧ ಮೊದಲ ಏಕದಿನದಲ್ಲಿ ಭಾರತಕ್ಕೆ 8 ವಿಕೆಟ್ ಗೆಲುವು; ನಾಯಕ ರಾಹುಲ್, ಸುದರ್ಶನ್ ದಾಖಲೆ

ಹರಿಣಗಳ ವಿರುದ್ಧ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಮೊದಲನೇ ಪಂದ್ಯದಲ್ಲಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌​ಗೆ ಪದಾರ್ಪಣೆಗೈದ​ ತಮಿಳುನಾಡಿನ ಯುವ ಆಟಗಾರ ಸಾಯಿ ಸುದರ್ಶನ್, ಹಲವು ದಾಖಲೆ ನಿರ್ಮಿಸಿದ್ದರು. ಐಪಿಎಲ್‌​ನಲ್ಲಿ ಗುಜರಾತ್ ಟೈಟಾನ್ಸ್ ಪರ ಅಬ್ಬರಿಸಿದ್ದ ಅವರು ತಮ್ಮ ಚೊಚ್ಚಲ ಪಂದ್ಯದಲ್ಲೇ ಫಿಫ್ಟಿ ಸಿಡಿಸಿದ್ದರು. 43 ಎಸೆತಗಳಲ್ಲಿ 9 ಬೌಂಡರಿ ಸಹಿತ ಅಜೇಯ 55 ರನ್ ಗಳಿಸಿದ್ದರು.

ಎರಡನೇ ಏಕದಿನ ಪಂದ್ಯಕ್ಕೆ ಭಾರತ ಆಡುವ ಬಳಗ

ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್), ಕೆಎಲ್ ರಾಹುಲ್‌ (ನಾಯಕ), ರಿಂಕು ಸಿಂಗ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಕುಲ್ದೀಪ್ ಯಾದವ್, ಮುಖೇಶ್ ಕುಮಾರ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ