logo
ಕನ್ನಡ ಸುದ್ದಿ  /  ಕ್ರಿಕೆಟ್  /  ಪಾಕಿಸ್ತಾನ ಕ್ರಿಕೆಟ್ ತಂಡದ ಹೆಡ್​ಕೋಚ್ ಸ್ಥಾನಕ್ಕೆ ಸಿಎಸ್​ಕೆ ಮಾಜಿ ಆಟಗಾರ; ಪಿಸಿಬಿ ಜತೆ ಚರ್ಚೆ ನಡೆಸಿದ ವಿಶ್ವಕಪ್ ಹೀರೋ

ಪಾಕಿಸ್ತಾನ ಕ್ರಿಕೆಟ್ ತಂಡದ ಹೆಡ್​ಕೋಚ್ ಸ್ಥಾನಕ್ಕೆ ಸಿಎಸ್​ಕೆ ಮಾಜಿ ಆಟಗಾರ; ಪಿಸಿಬಿ ಜತೆ ಚರ್ಚೆ ನಡೆಸಿದ ವಿಶ್ವಕಪ್ ಹೀರೋ

Prasanna Kumar P N HT Kannada

Mar 11, 2024 07:00 AM IST

google News

ಪಾಕಿಸ್ತಾನ ಕ್ರಿಕೆಟ್ ತಂಡದ ಹೆಡ್​ಕೋಚ್ ಸ್ಥಾನಕ್ಕೆ ಸಿಎಸ್​ಕೆ ಮಾಜಿ ಆಟಗಾರ

    • Shane Watson: ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಅವರು ಪುರುಷರ ರಾಷ್ಟ್ರೀಯ ತಂಡಕ್ಕೆ ಮುಖ್ಯ ಕೋಚ್ ಸ್ಥಾನಕ್ಕೆ ಸಂಬಂಧಿಸಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಹೆಡ್​ಕೋಚ್ ಸ್ಥಾನಕ್ಕೆ ಸಿಎಸ್​ಕೆ ಮಾಜಿ ಆಟಗಾರ
ಪಾಕಿಸ್ತಾನ ಕ್ರಿಕೆಟ್ ತಂಡದ ಹೆಡ್​ಕೋಚ್ ಸ್ಥಾನಕ್ಕೆ ಸಿಎಸ್​ಕೆ ಮಾಜಿ ಆಟಗಾರ

ಪಾಕಿಸ್ತಾನ ಕ್ರಿಕೆಟ್ ತಂಡ (Pakistan Cricket Team) ನೂತನ ಕೋಚ್​​ ಆಯ್ಕೆಯಲ್ಲಿ ನಿರತವಾಗಿದೆ. ಮೊಹಮ್ಮದ್ ಹಫೀಜ್ ಅವರನ್ನು ತಂಡದ ತಾತ್ಕಾಲಿಕ ಕೋಚ್​​ ಮತ್ತು ನಿರ್ದೇಶಕ ಹುದ್ದೆಯಿಂದ ಕಿತ್ತಾಕಿದ ನಂತರ ಪಾಕಿಸ್ತಾನಕ್ಕೆ ಹೆಡ್​ಕೋಚ್ ನೇಮಿಸಿಲ್ಲ. ಇದೀಗ ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಶೇನ್ ವ್ಯಾಟ್ಸನ್ (Shane Watson) ಅವರು ಪುರುಷರ ರಾಷ್ಟ್ರೀಯ ತಂಡಕ್ಕೆ ಮುಖ್ಯ ಕೋಚ್ ಸ್ಥಾನಕ್ಕೆ ಸಂಬಂಧಿಸಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket Board) ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಭಾರತದಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ನಂತರ ಪಿಸಿಬಿ, ವಿದೇಶಿ ಕೋಚ್​ಗಳಿಂದ ಸಂಪೂರ್ಣ ಬೇರ್ಪಟ್ಟಿತು. ಹಾಗಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸಗಳಿಗೆ ಮೊಹಮ್ಮದ್ ಹಫೀಜ್ ಅವರನ್ನು ತಾತ್ಕಾಲಿಕವಾಗಿ ಕೋಚ್​ ಮತ್ತು ನಿರ್ದೇಶಕ ಹುದ್ದೆಗೆ ನೇಮಿಸಲಾಗಿತ್ತು. ಬಳಿಕ ಅವರನ್ನೂ ಆ ಸ್ಥಾನದಿಂದ ತೆಗೆದು ಹಾಕಿತು. ಇದರಿಂದ ಪಿಸಿಬಿ ಜೂನ್ 1ರಿಂದ ಆರಂಭಗೊಳ್ಳುವ ಟಿ20 ವಿಶ್ವಕಪ್​​ಗೂ ಮುನ್ನ ಕೋಚ್​​ ನೇಮಕಕ್ಕೆ ಸಿದ್ಧತೆ ನಡೆಸಿದೆ.

ಅದರಂತೆ ಪ್ರಸ್ತುತ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್‌ ತಂಡಕ್ಕೆ ಮಾರ್ಗದರ್ಶನ ನೀಡುತ್ತಿರುವ ಶೇನ್ ವ್ಯಾಟ್ಸನ್ ಅವರು ಪಾಕ್​ಗೆ ಕೋಚ್​​ ಆಗಲು ಬಯಸಿದ್ದು, ಪಿಸಿಬಿ ನಡುವಿನ ಚರ್ಚೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಇದು ಅವರ ನೇಮಕಾತಿಯ ಬಲವಾದ ಸಾಧ್ಯತೆಯನ್ನು ಸೂಚಿಸುತ್ತಿದೆ. 2015ರ ವಿಶ್ವಕಪ್ ಹೀರೋ ವ್ಯಾಟ್ಸನ್ ಶೀಘ್ರದಲ್ಲೇ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರನ್ನು ಭೇಟಿಯಾಗಿ ಅವರ ಸಂಭಾವ್ಯ ಪಾತ್ರದ ನಿಯಮಗಳನ್ನು ಅಂತಿಮಗೊಳಿಸುತ್ತಾರೆ ಎಂದು ಕೆಲವು ವರದಿಗಳು ಹೇಳುತ್ತಿವೆ.

ರೇಸ್​​ನಲ್ಲಿ ಡ್ಯಾರೆನ್ ಸ್ಯಾಮಿ

ವೆಸ್ಟ್ ಇಂಡೀಸ್‌ ತಂಡದ ಮಾಜಿ ನಾಯಕ ಡ್ಯಾರೆನ್ ಸ್ಯಾಮಿ ಕೂಡ ಮುಖ್ಯ ಕೋಚ್ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಆದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಸ್ಯಾಮಿ ಅವರನ್ನು ಸಂಪರ್ಕಿಸಿಲ್ಲ ಎಂದು ವರದಿಯಾಗಿದೆ. ಸ್ಯಾಮಿ ಪ್ರಸ್ತುತ ವೆಸ್ಟ್ ಇಂಡೀಸ್‌ನ ವೈಟ್-ಬಾಲ್ ತಂಡಗಳಿಗೆ ತರಬೇತಿ ನೀಡುತ್ತಿದ್ದಾರೆ. ಅಲ್ಲದೆ, ಪಾಕಿಸ್ತಾನ್ ಸೂಪರ್​ ಲೀಗ್​​ನಲ್ಲಿ ಪೇಶಾವರ್ ಝಲ್ಮಿ ತಂಡದ ನಾಯಕತ್ವದಿಂದ ಗಮನಾರ್ಹ ಜನಪ್ರಿಯತೆಯನ್ನೂ ಪಡೆದಿದ್ದಾರೆ. ಸದ್ಯ ಪಿಎಸ್​ಎಲ್​ ಮುಕ್ತಾಯದ ಹಂತಕ್ಕೆ ಬಂದಿದ್ದು, ಟಿ20 ವಿಶ್ವಕಪ್​​ಗೆ ಪಾಕ್​ ತಂಡವನ್ನು ಸಜ್ಜುಗೊಳಿಸಲು ಶೀಘ್ರ ಕೋಚ್​​ ನೇಮಿಸಲು ಪಿಸಿಬಿ ನಿರ್ಧರಿಸಿದೆ.

ಪಿಸಿಬಿಯ ಆಡಳಿತಾತ್ಮಕ ಭಾಗದಲ್ಲಿನ ಅಸ್ಥಿರತೆಯಿಂದ ಕೋಚ್​​​ಗಳನ್ನು ನೇಮಿಸುವ ಪಾಕಿಸ್ತಾನದ ಪ್ರಕ್ರಿಯೆಯು ಜಟಿಲವಾಗಿದೆ. ಕಳಪೆ ವಿಶ್ವಕಪ್ ನಂತರ ಮಿಕ್ಕಿ ಆರ್ಥರ್ ಮತ್ತು ಬ್ರಾಡ್‌ಬರ್ನ್ ಅವರನ್ನು ತೆಗೆದು ಹಾಕಿದ್ದು ಸೇರಿದಂತೆ ಮಾಜಿ ಪಿಸಿಬಿ ಅಧ್ಯಕ್ಷ ಝಾಕಾ ಅಶ್ರಫ್ ಅವರು ತಂದಿದ್ದ ನಿರ್ಧಾರಗಳು ಈ ಸಂಕೀರ್ಣತೆಗೆ ಕಾರಣವಾಗಿವೆ. ಆರ್ಥರ್ ಮತ್ತು ಬ್ರಾಡ್‌ಬರ್ನ್, ಅಶ್ರಫ್‌ರ ಪೂರ್ವವರ್ತಿ ನಜಮ್ ಸೇಥಿ ಅವರು ಪಿಸಿಬಿ ಅಧ್ಯಕ್ಷರಾಗಿ ಅಲ್ಪಾವಧಿಯ ಅವಧಿಯಲ್ಲಿ ನೇಮಕಗೊಂಡಿದ್ದರು. ಆದರೆ ಕಳೆದೊಂದು ವರ್ಷದಲ್ಲಿ ಪಿಸಿಬಿ ಆಡಳಿತ ಮಂಡಳಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ