logo
ಕನ್ನಡ ಸುದ್ದಿ  /  ಕ್ರಿಕೆಟ್  /  14 ವರ್ಷಗಳ ದಾಂಪತ್ಯ ಅಂತ್ಯ; ಸಾನಿಯಾ ಜೊತೆ ವಿಚ್ಛೇದನ ಸುದ್ದಿ ನಡುವೆ 3ನೇ ಮದುವೆಯಾದ ಶೋಯೆಬ್ ಮಲಿಕ್

14 ವರ್ಷಗಳ ದಾಂಪತ್ಯ ಅಂತ್ಯ; ಸಾನಿಯಾ ಜೊತೆ ವಿಚ್ಛೇದನ ಸುದ್ದಿ ನಡುವೆ 3ನೇ ಮದುವೆಯಾದ ಶೋಯೆಬ್ ಮಲಿಕ್

Prasanna Kumar P N HT Kannada

Jan 20, 2024 02:59 PM IST

google News

ಸಾನಿಯಾ ಮಿರ್ಜಾ ಜೊತೆ ವಿಚ್ಛೇದನ ಸುದ್ದಿಯ ನಡುವೆ ಪಾಕ್ ನಟಿ ಸನಾ ಜಾವೆದ್​ರನ್ನು ಮದುವೆಯಾದ ಶೋಯೆಬ್ ಮಲಿಕ್.

    • Shoaib Malik married Sana Javed: ಸಾನಿಯಾ ಮಿರ್ಜಾ ಅವರೊಂದಿಗೆ ವಿಚ್ಛೇದನ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿಗಳ ನಡುವೆಯೇ ಪಾಕಿಸ್ತಾನದ ಹಿರಿಯ ಆಟಗಾರ ಶೋಯೆಬ್ ಅಲಿಕ್, ನಟಿ ಸನಾ ಜಾವೆದ್ ಅವರನ್ನು ವರಿಸಿದ್ದಾರೆ. ಇದರೊಂದಿಗೆ 14 ವರ್ಷಗಳ ದಾಂಪತ್ಯ ಅಂತ್ಯ ಕಂಡಿದೆ.
ಸಾನಿಯಾ ಮಿರ್ಜಾ ಜೊತೆ ವಿಚ್ಛೇದನ ಸುದ್ದಿಯ ನಡುವೆ ಪಾಕ್ ನಟಿ ಸನಾ ಜಾವೆದ್​ರನ್ನು ಮದುವೆಯಾದ ಶೋಯೆಬ್ ಮಲಿಕ್.
ಸಾನಿಯಾ ಮಿರ್ಜಾ ಜೊತೆ ವಿಚ್ಛೇದನ ಸುದ್ದಿಯ ನಡುವೆ ಪಾಕ್ ನಟಿ ಸನಾ ಜಾವೆದ್​ರನ್ನು ಮದುವೆಯಾದ ಶೋಯೆಬ್ ಮಲಿಕ್.

ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ಅವರಿಂದ ವಿಚ್ಛೇದನ ಪಡೆದಿದ್ದಾರೆ ಎಂಬ ವದಂತಿಗಳ ನಡುವೆಯೇ ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರು ನಟಿ ಸನಾ ಜಾವೇದ್ ಅವರನ್ನು (Shoaib Malik married Sana Javed) ವಿವಾಹವಾಗಿದ್ದಾರೆ. ಮದುವೆಯಾದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಲಿಕ್ ಹಂಚಿಕೊಂಡಿದ್ದಾರೆ. ಇದು ಅವರಿಗೆ ಮೂರನೇ ಮದುವೆಯಾಗಿದೆ.

ಮಲಿಕ್ ಜಾವೇದ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕೆಲವು ವರ್ಷಗಳಿಂದ ಹರಿದಾಡುತ್ತಿದ್ದವು. ಇದರ ನಡುವೆಯೇ 2010ರ ಏಪ್ರಿಲ್ 12ರಂದು ಭಾರತದ ಟೆನಿಸ್ ಸೆನ್​ಸೇಷನ್ ಸಾನಿಯಾರನ್ನು ವರಿಸಿದ್ದ ಮಲಿಕ್, ಕೆಲವು ತಿಂಗಳಿಂದ ಇಬ್ಬರ ನಡುವೆ ಎಲ್ಲವೂ ಸರಿ ಇಲ್ಲ ಎಂದು ವದಂತಿಗಳು ಹಬ್ಬಿದ್ದವು. ಈ ಹಿಂದೆಯೇ ಅವರು ವಿಚ್ಛೇದನ ಪಡೆದಿದ್ದಾರೆ ಎಂಬ ಮಾಹಿತಿ ಇದೆ.

ಕೆಲವರು ಸುಖಾಸುಮ್ಮನೆ ಸುಳ್ಳು ಸುದ್ದಿಗಳನ್ನು ಹರಿಸಬೇಡಿ ಎಂದು ಪ್ರತಿಕ್ರಿಯಿಸಿದ್ದರು. ಇಬ್ಬರು ಬೇರ್ಪಟ್ಟಿಲ್ಲ ಎಂಬ ಸುದ್ದಿ ಹರಿದಾಡಿತ್ತು. ಈ ಎಲ್ಲದರ ನಡುವೆ ಶೋಯಬ್ ಮಲಿಕ್ ಅವರ ಮದುವೆಯ ಸುದ್ದಿ ಬೆಳಕಿಗೆ ಬಂದಿದೆ. ಪಾಕ್ ಮಾಜಿ ನಾಯಕ ಕಳೆದ ವರ್ಷ ನಟಿಗೆ ಶುಭಕೋರಿದಾಗ ಊಹಾಪೋಹಗಳಿಗೆ ಮತ್ತಷ್ಟು ತುಪ್ಪ ಸುರಿದಂತಾಗಿತ್ತು.

2010ರಲ್ಲಿ ಸಾನಿಯಾ ಜೊತೆ ಮದುವೆ

ಮಿರ್ಜಾ ಅವರೊಂದಿಗಿನ ವಿಚ್ಛೇದನದ ವದಂತಿಗಳ ನಡುವೆ ಮಲಿಕ್ ವಿವಾಹದ ಪೋಸ್ಟ್, ಗಡಿಯ ಎರಡೂ ಬದಿಗಳಲ್ಲಿ ದೊಡ್ಡ ಆಶ್ಚರ್ಯವನ್ನುಂಟು ಮಾಡಿತು. 2010ರಲ್ಲಿ ಹೈದರಾಬಾದ್​​​ನಲ್ಲಿ ಸಾಂಪ್ರದಾಯಿಕ ಮುಸ್ಲಿಂ ಪದ್ದತಿಯಲ್ಲಿ ಮದುವೆಯಾಗಿದ್ದರು. ಈ ಜೋಡಿಗೆ 2018ರಲ್ಲಿ ಜನಿಸಿದ ಇಜಾನ್ ಎಂಬ ಮಗನಿದ್ದಾನೆ.

2021ರಿಂದಲೇ ಸಂಬಂಧದಲ್ಲಿ ಬಿರುಕು

ಸಾನಿಯಾ ಮತ್ತು ಮಲಿಕ್ ನಡುವೆ ಯಾವ ಕಾರಣದಿಂದ ಬಿರುಕು ಉಂಟಾಯಿತು ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲವಾದರೂ 2021ರ ಮೊದಲಾರ್ಧದಿಂದ ಇಬ್ಬರು ಬೇರ್ಪಟ್ಟಿದ್ದಾರೆ ಎಂದು ಹೇಳಲಾಗಿದೆ. ಸಾನಿಯಾ-ಮಲಿಕ್ ಇನ್​ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದು, ಮಗನೊಂದಿಗಿರುವ ಪೋಸ್ಟ್​​ಗಳನ್ನು ಹಾಕುತ್ತಿದ್ದರು.

ಈ ಪೋಸ್ಟ್​​ಗಳನ್ನು ನೋಡಿದ ಯಾರಿಗೂ ಇವರು ಬೇರ್ಪಟ್ಟಿದ್ದಾರೆ ಎಂಬ ಅನುಮಾನ ಬರುವುದಿಲ್ಲ. ಆದರೆ ದಿನಗಳು ಕಳೆದಂತೆ ಬೇರೆ ಬೇರೆಯಾಗಿದ್ದಾರೆ ಎನ್ನುವ ಸುದ್ದಿಗೆ ಪುಷ್ಠಿ ನೀಡುವಂತಹ ಕೆಲ ಘಟನೆಗಳು ಜರುಗಿದವು. ಕಳೆದ ವರ್ಷ ಟಿವಿ ಶೋವೊಂದಕ್ಕೆ ಒಟ್ಟಿಗೆ ಬರುತ್ತಾರೆ ಎನ್ನುವ ಸುದ್ದಿ ಇತ್ತು. ಆದರೆ, ಬಂದಿರಲಿಲ್ಲ ಎನ್ನಲಾಗಿತ್ತು.

ಮಲಿಕ್​ಗೆ ಮೂರನೇ ಮದುವೆ

ದಾಖಲೆಗಳ ಪ್ರಕಾರ, ಇದು ಮಲಿಕ್ ಅವರ ಎರಡನೇ ಮದುವೆ. ಆದರೆ ಸಾನಿಯಾ ಅವರನ್ನು ವರಿಸುವುದಕ್ಕೂ ಮೊದಲು ಆಯೆಷಾ ಸಿದ್ದಿಕಿ ಅವರನ್ನು ವಿವಾಹವಾಗಿದ್ದರು ಎಂದು ವರದಿಯಾಗಿದೆ. ಆಯೇಷಾ ಅವರ ಕುಟುಂಬ ಮತ್ತು ಅವರ ಸಹೋದರಿ ರಾಷ್ಟ್ರೀಯ ದೂರದರ್ಶನದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದರು. ಇನ್ನು ಸನಾ ಜಾವೆದ್ ಅವರಿಗೆ ಇದು ಎರಡನೇ ಮದುವೆ.

ಸಾನಿಯಾ ಮಿರ್ಜಾ ರಹಸ್ಯ ಪೋಸ್ಟ್​

ಇದಕ್ಕೂ ಮುನ್ನ ಬುಧವಾರ, ಸಾನಿಯಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರಹಸ್ಯ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಇದು ವಿಚ್ಛೇದನ ಊಹಾಪೋಹಗಳಿಗೆ ಮತ್ತಷ್ಟು ಜೀವ ಕೊಟ್ಟಿತು. ಮದುವೆಯೂ ತುಂಬಾ ಕಷ್ಟ. ವಿಚ್ಛೇದನವೂ ತುಂಬಾ ಕಷ್ಟ. ಬೊಜ್ಜು ಕಷ್ಟ. ಫಿಟ್ ಆಗಿರುವುದು ಕಷ್ಟ. ಸಾಲದಲ್ಲಿ ಸಿಲುಕುವುದು ಕಷ್ಟ.

ಆರ್ಥಿಕವಾಗಿ ಶಿಸ್ತುಬದ್ಧರಾಗಿರುವುದು ಕಷ್ಟ. ಸಂವಹನ ಕಷ್ಟ. ಸಂವಹನ ಮಾಡದಿರುವುದು ಕಷ್ಟ. ನಿಮ್ಮ ಕಷ್ಟವನ್ನು ಆಯ್ಕೆ ಮಾಡಿ. ಜೀವನ ಎಂದೂ ಸುಲಭವಲ್ಲ. ಇದು ಯಾವಾಗಲೂ ಕಷ್ಟಕರವಾಗಿರುತ್ತದೆ. ನಾವು ನಮ್ಮ ಕಠಿಣತೆಯನ್ನು ಆಯ್ಕೆ ಮಾಡಬಹುದು. ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿ ಎಂದು ಹೇಳಿದ್ದಾರೆ.

ಸನಾ ಕುರಿತು ಟ್ವೀಟ್ ಮಾಡಿದ್ದ ಮಲಿಕ್

ಸನಾ ಜಾವೆದ್ ಕುರಿತು ಮಲಿಕ್ 2022ರಲ್ಲಿ ಟ್ವೀಟ್ ಮಾಡಿದ್ದರು. ಆ ಮೂಲಕ ವಿಚ್ಛೇದನದ ವದಂತಿಗಳಿಗೆ ಪುಷ್ಠಿ ಸಿಕ್ಕಿತ್ತು. ನಾನು ಸನಾ ಜಾವೇದ್ ಅವರನ್ನು ಸ್ವಲ್ಪ ಸಮಯದಿಂದ ಬಲ್ಲೆ. ಅವರೊಂದಿಗೆ ಕೆಲಸ ಮಾಡುವ (ಜಾಹೀರಾತು ಶೂಟ್) ಅವಕಾಶ ಅನೇಕ ಬಾರಿ ಪಡೆದಿದ್ದೇನೆ. ಅವರು ಯಾವಾಗಲೂ ನನ್ನ ಬಗ್ಗೆ ಮತ್ತು ನಮ್ಮ ಸುತ್ತಲಿನ ಜನರ ಬಗ್ಗೆ ದಯೆ ಮತ್ತು ಸೌಜನ್ಯದಿಂದ ವರ್ತಿಸಿದ್ದಾರೆ ಎಂದು ಮಾತ್ರ ನಾನು ಹೇಳಬಲ್ಲೆ ಎಂದು ಪೋಸ್ಟ್​ ಮಾಡಿದ್ದರು.

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ