ಆರಂಭಿಕ ಜೋಡಿ ಸಚಿನ್-ಗಂಗೂಲಿ ನೆನಪಿಸಿದ ಗಿಲ್-ಜೈಸ್ವಾಲ್; ಯುವ ಓಪನರ್ಸ್ ಆಟಕ್ಕೆ ಕನ್ನಡಿಗ ಬಹುಪರಾಕ್
Aug 01, 2024 03:33 PM IST
ಆರಂಭಿಕ ಜೋಡಿ ಸಚಿನ್-ಗಂಗೂಲಿ ನೆನಪಿಸಿದ ಗಿಲ್-ಜೈಸ್ವಾಲ್; ಯುವ ಓಪನರ್ಸ್ ಆಟಕ್ಕೆ ಕನ್ನಡಿಗ ಬಹುಪರಾಕ್
- Robin Uthappa: ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಅವರು ಭಾರತೀಯ ಕ್ರಿಕೆಟ್ನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಅವರ ಆಟವನ್ನು ನೆನಪಿಸುತ್ತಿದ್ದಾರೆ ಎಂದು ಕನ್ನಡಿಗ ರಾಬಿನ್ ಉತ್ತಪ್ಪ ಹೇಳಿದ್ದಾರೆ.
ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಅವರನ್ನು ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರು ಶ್ಲಾಘಿಸಿದ್ದಾರೆ. ಅಲ್ಲದೆ, ಯುವ ಜೋಡಿಯ ಆಟದ ಶೈಲಿಯನ್ನು ಕ್ರಿಕೆಟ್ ದಿಗ್ಗಜರಾದ ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್ ಅವರಿಗೆ ಹೋಲಿಸಿದ್ದಾರೆ.
ಗಿಲ್ ಮತ್ತು ಜೈಸ್ವಾಲ್ ಅವರ ಆರಂಭಿಕ ಕೆಮಿಸ್ಟ್ರಿ ಮತ್ತು ಆಟದ ಶೈಲಿ ಸಚಿನ್-ಗಂಗೂಲಿ ಅವರನ್ನು ನೆನಪಿಸುತ್ತದೆ. ಈ ಲೆಜೆಂಡ್ಸ್ ಏಕದಿನ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆರಂಭಿಕ ಪಾಲುದಾರರಾಗಿ ಉಳಿದಿದ್ದಾರೆ. ಇದೀಗ ಯುವ ಓಪನರ್ಸ್ಗೆ ಉಜ್ವಲ ಭವಿಷ್ಯವಿದ್ದು, ಅವರು ಸಹ ದಿಗ್ಗಜರಂತೆಯೇ ಬೆಳೆಯಲಿದ್ದಾರೆ ಎಂದಿದ್ದಾರೆ.
ಗಂಗೂಲಿ ಮತ್ತು ಸಚಿನ್ ಆರಂಭಿಕರಾಗಿ 136 ಇನ್ನಿಂಗ್ಸ್ಗಳಲ್ಲಿ 49.32ರ ಬ್ಯಾಟಿಂಗ್ ಸರಾಸರಿಯೊಂದಿಗೆ 6609 ರನ್ ಪಾಲುದಾರಿಕೆ ನೀಡಿದ್ದಾರೆ. ಅವರ 21 ಶತಕಗಳ ಜೊತೆಯಾಟ ಮತ್ತು 23 ಅರ್ಧಶತಕಗಳ ಜೊತೆಯಾಟವನ್ನೂ ಆಡಿದ್ದಾರೆ. ಇವರು ಆರಂಭಿಕರಾಗಿ ಭಾರತೀಯ ಕ್ರಿಕೆಟ್ನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದರು.
ಗಿಲ್-ಜೈಸ್ವಾಲ್ ಕೊಂಡಾಡಿದ ಉತ್ತಪ್ಪ
ಗಿಲ್ ಮತ್ತು ಜೈಸ್ವಾಲ್ ಆರಂಭಿಕರಾಗಿ ಈ ಹಿಂದೆ ಅಬ್ಬರಿಸಿದ್ದ ದಿಗ್ಗಜ ಜೋಡಿಯ ನೆನಪುಗಳನ್ನು ಮರಳಿ ತರುತ್ತಿದ್ದಾರೆ. ಇದು ಯುವ ಆರಂಭಿಕರ ಉಜ್ವಲ ಭವಿಷ್ಯ ಸೂಚಿಸುತ್ತದೆ ಎಂದು ಉತ್ತಪ್ಪ ಹೇಳಿದ್ದಾರೆ. ಅವರಿಬ್ಬರು ಆಡುವಾಗ ಅನುಸರಿಸುವ ಕಾರ್ಯ ತಂತ್ರಗಳನ್ನು ಪ್ರಶಂಸಿಸುತ್ತೇವೆ ಎಂದು ಹೇಳಿದ್ದಾರೆ.
ಗಿಲ್-ಜೈಸ್ವಾಲ್ ಬ್ಯಾಟ್ ಹಿಡಿದು ಹೊರಟಾಗ ನನಗೆ ಸಚಿನ್-ಗಂಗೂಲಿ ನೆನಪಾಗುತ್ತಾರೆ. ಜೈಸ್ವಾಲ್ ಏಕದಿನ ಕ್ರಿಕೆಟ್ನಲ್ಲಿ ಅವಕಾಶ ಪಡೆದರೆ ತಮ್ಮ ಸ್ಥಾನ ಭದ್ರಪಡಿಸುತ್ತಾರೆ ಎಂದು ಪ್ರಾಮಾಣಿಕವಾಗಿ ಭಾವಿಸುತ್ತೇನೆ. ಏಕೆಂದರೆ, ಟೆಸ್ಟ್ ಕ್ರಿಕೆಟ್ ಮತ್ತು ಟಿ20ಐ ಕ್ರಿಕೆಟ್ ನಂತರ ಏಕದಿನ ಕ್ರಿಕೆಟ್ ಅವರಿಗೆ ತುಂಬಾ ಸುಲಭವಾಗಲಿದೆ ಎಂದಿದ್ದಾರೆ.
ರನ್ ಗಳಿಸಲು ನನಗೆ ಜಗತ್ತಿನಲ್ಲಿ ಎಲ್ಲಾ ಸಮಯ ಇದೆ ಎಂಬುದು ಜೈಸ್ವಾಲ್ ನಂಬಿಕೆ ಎಂದು ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ಉತ್ತಪ್ಪ ಹೇಳಿದರು. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಜೈಸ್ವಾಲ್ ಭಾರತದ ತಂಡದ ಭಾಗವಾಗಿಲ್ಲ. ಆದರೆ ಗಿಲ್ ತಮ್ಮ ಸ್ಥಾನ ಉಳಿಸಿಕೊಂಡಿದ್ದು, ಉಪನಾಯಕತ್ವದ ಸ್ಥಾನವನ್ನೂ ಪಡೆದಿದ್ದಾರೆ. ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕ ಪಾತ್ರದಲ್ಲಿ ಮತ್ತೆ ಒಂದಾಗಲು ಸಜ್ಜಾಗಿದ್ದಾರೆ.
ಶ್ರೀಲಂಕಾ ವಿರುದ್ಧ ಭಾರತಕ್ಕೆ ಗೆಲುವು
ಈ ತಿಂಗಳ ಆರಂಭದಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಜೈಸ್ವಾಲ್ ಮತ್ತು ಗಿಲ್ ಜೋಡಿ ಮೊದಲ ಬಾರಿಗೆ ಇನ್ನಿಂಗ್ಸ್ ಆರಂಭಿಸಿತು. ತದನಂತರ ಶ್ರೀಲಂಕಾ ಟಿ20ಐ ಸರಣಿಯಲ್ಲೂ ಅದ್ಭುತ ಪ್ರದರ್ಶನ ನೀಡಿತು. ಈ ಸರಣಿಯಲ್ಲಿ ಭಾರತ 3-0 ಅಂತರದಲ್ಲಿ ಗೆದ್ದು ಬೀಗಿತ್ತು. ಜಿಂಬಾಬ್ವೆ ಎದುರು ಸಹ 4-1ರಲ್ಲಿ ಸರಣಿ ವಶಪಡಿಸಿಕೊಂಡಿತ್ತು.
ಭಾರತ ಮತ್ತು ಶ್ರೀಲಂಕಾ ಏಕದಿನ ಸರಣಿ ವೇಳಾಪಟ್ಟಿ
ಆಗಸ್ಟ್ 2, 1ನೇ ಏಕದಿನ - ಪ್ರೇಮದಾಸ ಕ್ರೀಡಾಂಗಣ
ಆಗಸ್ಟ್ 4, 2ನೇ ಏಕದಿನ - ಪ್ರೇಮದಾಸ ಸ್ಟೇಡಿಯಂ
ಆಗಸ್ಟ್ 7, 3ನೇ ಏಕದಿನ, ಪ್ರೇಮದಾಸ ಸ್ಟೇಡಿಯಂ
ಭಾರತ ಏಕದಿನ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್,