logo
ಕನ್ನಡ ಸುದ್ದಿ  /  ಕ್ರಿಕೆಟ್  /  Sourav Ganguly: ಕೊಹ್ಲಿಗೆ ನಿವೃತ್ತಿ ಸಲಹೆ ಕೊಟ್ಟ ಅಖ್ತರ್​ಗೆ ಮುಟ್ಟಿ ನೋಡಿಕೊಳ್ಳುವಂತ ಉತ್ತರ ನೀಡಿದ ಸೌರವ್ ಗಂಗೂಲಿ

Sourav Ganguly: ಕೊಹ್ಲಿಗೆ ನಿವೃತ್ತಿ ಸಲಹೆ ಕೊಟ್ಟ ಅಖ್ತರ್​ಗೆ ಮುಟ್ಟಿ ನೋಡಿಕೊಳ್ಳುವಂತ ಉತ್ತರ ನೀಡಿದ ಸೌರವ್ ಗಂಗೂಲಿ

Prasanna Kumar P N HT Kannada

Aug 20, 2023 08:00 AM IST

google News

ವಿರಾಟ್ ಕೊಹ್ಲಿಗೆ ನಿವೃತ್ತಿ ಸಲಹೆ ಕೊಟ್ಟ ಶೋಯೆಬ್ ಅಖ್ತರ್ ಬಾಯಿ ಮುಚ್ಚಿಸಿದ ಸೌರವ್ ಗಂಗೂಲಿ.

    • ವಿರಾಟ್​​ ಕೊಹ್ಲಿಗೆ ಪಾಕಿಸ್ತಾನದ ಮಾಜಿ ಬೌಲರ್​ ಅಖ್ತರ್​ ನಿವೃತ್ತಿಯ ಸಲಹೆ ನೀಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಇದರ ನಡುವೆ ಸೌರವ್ ಗಂಗೂಲಿಗೆ ಮುಟ್ಟಿನೋಡಿಕೊಳ್ಳುವ ಉತ್ತರ ಕೊಟ್ಟಿದ್ದಾರೆ.
ವಿರಾಟ್ ಕೊಹ್ಲಿಗೆ ನಿವೃತ್ತಿ ಸಲಹೆ ಕೊಟ್ಟ ಶೋಯೆಬ್ ಅಖ್ತರ್ ಬಾಯಿ ಮುಚ್ಚಿಸಿದ ಸೌರವ್ ಗಂಗೂಲಿ.
ವಿರಾಟ್ ಕೊಹ್ಲಿಗೆ ನಿವೃತ್ತಿ ಸಲಹೆ ಕೊಟ್ಟ ಶೋಯೆಬ್ ಅಖ್ತರ್ ಬಾಯಿ ಮುಚ್ಚಿಸಿದ ಸೌರವ್ ಗಂಗೂಲಿ.

ಪ್ರಸಕ್ತ ಸಾಲಿನ ಏಕದಿನ ವಿಶ್ವಕಪ್ ಟೂರ್ನಿಯ (ODI World Cup 2023) ನಂತರ ವಿರಾಟ್​ ಕೊಹ್ಲಿ (Virat Kohli) ಏಕದಿನ ಮತ್ತು ಟಿ20 ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿದರೆ ಉತ್ತಮ ಎಂದು ಸಲಹೆ ನೀಡಿದ್ದ ಪಾಕಿಸ್ತಾನದ ದಿಗ್ಗಜ ಬೌಲರ್​ ಶೋಯೆಬ್​ ಅಖ್ತರ್​ಗೆ (Shoaib Akhtar) ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್​ ಗಂಗೂಲಿ (Sourav Ganguly), ಖಡಕ್​ ಉತ್ತರ ನೀಡುವ ಮೂಲಕ ಬಾಯಿ ಮುಚ್ಚಿಸಿದ್ದಾರೆ. ಅಲ್ಲದೆ, ಕೊಹ್ಲಿ ಬೆಂಬಲಕ್ಕೆ ನಿಲ್ಲುವ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಅಖ್ತರ್ ಹೇಳಿದ್ದೇನು?

ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿರುವ 100 ಶತಕಗಳ ದಾಖಲೆಗಳ ಮುರಿಬೇಕೆಂದರೆ ಅಥವಾ ಟೆಸ್ಟ್​ ಕ್ರಿಕೆಟ್​​ನಲ್ಲಿ ಇನ್ನಷ್ಟು ದಿನಗಳ ಕಾಲ ಮುರಿಯಬೇಕೆಂದರೆ, ಅಲ್ಲದೆ, ಕೆಲಸದೊತ್ತಡ ಕಡಿಮೆಯಾಗಲು ಏಕದಿನ, ಟಿ20 ಕ್ರಿಕೆಟ್​ನಿಂದ ನಿವೃತ್ತಿಯಾದರೆ ಒಳಿತು. ಆ ಮೂಲಕ ಟೆಸ್ಟ್​ ಕ್ರಿಕೆಟ್​​ ಕಡೆಯೇ ಹೆಚ್ಚು ಗಮನ ಹರಿಸಿ 100 ಶತಕಗಳ ದಾಖಲೆ ಮುರಿಯಬಹುದು ಎಂದು ಹೇಳಿಕೆ ನೀಡಿದ್ದರು.

ಅಖ್ತರ್​ ಹೇಳಿಕೆಗೆ ಅಭಿಮಾನಿಗಳ ಆಕ್ರೋಶ

ಪಾಕಿಸ್ತಾನದ ಮಾಜಿ ಬೌಲರ್​ ಅಖ್ತರ್​ ನಿವೃತ್ತಿಯ ಸಲಹೆ ನೀಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಕೊಹ್ಲಿ ಸಾಮರ್ಥ್ಯ ಏನೆಂದು ತಿಳಿಯದೇ ಬಾಯಿಗೆ ಬಂದಂತೆ ಮಾತನಾಡಬೇಡ ಎಂದು ಎಚ್ಚರಿಸಿದ್ದಾರೆ. ಅಲ್ಲದೆ, ಕೊಹ್ಲಿ ಎಂದೂ ದಾಖಲೆಗಳಿಗಾಗಿ ಆಡಿದವರಲ್ಲ, ತಂಡದ ಹಿತಕ್ಕೆ, ದೇಶಕ್ಕಾಗಿ ಆಡಿದ್ದಾರೆ ಎಂದು ಅಖ್ತರ್​ ವಿರುದ್ಧ ಕೆಂಡ ಕಾರುತ್ತಿದ್ದಾರೆ.

ಪಾಕ್​​ ವೇಗಿಗೆ ಗಂಗೂಲಿ ತಿರುಗೇಟು

ಅಖ್ತರ್​ ಹೇಳಿಕೆಯ ಬೆನ್ನಲ್ಲೇ ಟೀಮ್ ಇಂಡಿಯಾ ಮಾಜಿ ನಾಯಕ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಗಂಗೂಲಿ ಮುಟ್ಟಿನೋಡಿಕೊಳ್ಳುವ ಉತ್ತರ ನೀಡುವ ತಿರುಗೇಟು ಕೊಟ್ಟಿದ್ದಾರೆ. ಈ ಕುರಿತು ಪ್ರಶ್ನೆಗೆ ಉತ್ತರಿಸಿದ ಗಂಗೂಲಿ, ಅಖ್ತರ್​ಗೆ ಯಾಕೆ ಎಂದು ಪ್ರಶ್ನಿಸಿದ್ದಾರೆ. ಕೊಹ್ಲಿ ಎಲ್ಲಾ ಮಾದರಿಯ ಕ್ರಿಕೆಟ್​ ಆಡಲು ಸಮರ್ಥರು. ಯಾಕೆಂದರೆ ಅವರು ಅಷ್ಟು ಅದ್ಭುತ, ಅಮೋಘ ಪ್ರದರ್ಶನ ನೀಡುತ್ತಾರೆ. ಇದರಲ್ಲಿ ನಿಮಗೆ ಏನಾದರೂ ಸಂದೇಹ ಇದೆಯೇ ಎಂದು ನಿವೃತ್ತಿ ಮಾತನ್ನು ತಳ್ಳಿ ಹಾಕಿದ್ದಾರೆ.

‘ಸೂಕ್ತ ತಂಡ ರಚಿಸಿ’

ಇನ್ನು ಇದೇ ವೇಳೆ ತಂಡದ ಸಂಯೋಜನೆ ಕುರಿತು ಮಾತನಾಡಿದ ಗಂಗೂಲಿ, ಏಕದಿನ ವಿಶ್ವಕಪ್ ಮತ್ತು ಏಷ್ಯಾಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸಾಕಷ್ಟು ಆಯ್ಕೆಗಳಿವೆ. ನಾಯಕ ರೋಹಿತ್ ಶರ್ಮಾ ಮತ್ತು ಹೆಡ್​ಕೋಚ್​ ರಾಹುಲ್ ದ್ರಾವಿಡ್ ಅವರು ಸೂಕ್ತ ಕಾಂಬಿನೇಷನ್ ಸೆಟ್​ ಮಾಡಿಯೇ ಕಣಕ್ಕಿಳಿಸಬೇಕು ಎಂದು ಹೇಳಿದ ಗಂಗೂಲಿ, ವಿಶ್ವಕಪ್​ನಲ್ಲಿ ಭಾರತದ ಪರ ರೋಹಿತ್ ಶರ್ಮಾ, ಶುಭ್ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ತೋರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯುವಕರಿಗೆ ಹೆಚ್ಚು ಅವಕಾಶ ನೀಡಿ ಎಂದ ದಾದಾ

ವೆಸ್ಟ್ ಇಂಡೀಸ್ ವಿರುದ್ಧದ ಇತ್ತೀಚಿನ ಟಿ20I ಸರಣಿಯ ಸೋಲಿಗೆ ಭಾರತ ತಂಡವು ಸಾಕಷ್ಟು ಟೀಕೆ ಎದುರಿಸಿದೆ. 17 ವರ್ಷಗಳಲ್ಲಿ ಕೆರಿಬಿಯನ್ ತಂಡದ ವಿರುದ್ಧ ಮೊದಲ ದ್ವಿಪಕ್ಷೀಯ ಸರಣಿ ಸೋಲು ಕಂಡಿದೆ. ಟಿ20I ತಂಡವನ್ನು ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ, ಸರಣಿಯುದ್ದಕ್ಕೂ ಹೆಚ್ಚು ತೀವ್ರತೆ ಎದುರಿಸಿದರು. ಆದರೆ ಅನಿರೀಕ್ಷಿತ ಸರಣಿ ಸೋಲಿನ ಅಡಿಗೆ ಸಿಲುಕಿ ಟೀಕೆಗೆ ಗುರಿಯಾದರು.

ಇದಕ್ಕೆ ಪ್ರಮುಖ ಕಾರಣ ಯುವ ಆಟಗಾರರಿಗೆ ಹೆಚ್ಚು ಅವಕಾಶ ನೀಡಿದ್ದರಿಂದ ಎಂದು ಟೀಕೆ ವ್ಯಕ್ತವಾಯಿತು. ಅನುಭವಿಗಳಿದ್ದರೆ ಸರಣಿ ಸೋಲುತ್ತಿರಲಿಲ್ಲ ಎನ್ನುತ್ತಿದ್ದಾರೆ. ಇದೀಗ ಹಾರ್ದಿಕ್ ರಕ್ಷಣೆಗೆ ಬಂದಿರುವ ಗಂಗೂಲಿ, ಯುವಕರಿಗೆ ಹೆಚ್ಚಿನ ಅವಕಾಶ ನೀಡುವಂತೆ ತಂಡದ ಆಡಳಿತವನ್ನು ಒತ್ತಾಯಿಸಿದ್ದಾರೆ. ವಿಶ್ವಕಪ್ ಟೂರ್ನಿಗೂ ಮುನ್ನ ಅಭಿಮಾನಿಗಳು ಭಾರತ ತಂಡಕ್ಕೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ