logo
ಕನ್ನಡ ಸುದ್ದಿ  /  ಕ್ರಿಕೆಟ್  /  ದಕ್ಷಿಣ ಆಫ್ರಿಕಾಗೆ ಗಾಯದ ಮೇಲೆ ಬರೆ; ಭಾರತ ವಿರುದ್ಧದ ಎರಡನೇ ಟೆಸ್ಟ್‌ನಿಂದ ಸ್ಟಾರ್ ವೇಗಿ ಹೊರಕ್ಕೆ

ದಕ್ಷಿಣ ಆಫ್ರಿಕಾಗೆ ಗಾಯದ ಮೇಲೆ ಬರೆ; ಭಾರತ ವಿರುದ್ಧದ ಎರಡನೇ ಟೆಸ್ಟ್‌ನಿಂದ ಸ್ಟಾರ್ ವೇಗಿ ಹೊರಕ್ಕೆ

Jayaraj HT Kannada

Dec 30, 2023 02:29 PM IST

google News

ಗೆರಾಲ್ಡ್ ಕೊಯೆಟ್ಜಿ

    • India vs South Africa: ಭಾರತ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಗೆರಾಲ್ಡ್ ಕೊಯೆಟ್ಜಿ ಆಡುತ್ತಿಲ್ಲ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ತಿಳಿಸಿದೆ.
ಗೆರಾಲ್ಡ್ ಕೊಯೆಟ್ಜಿ
ಗೆರಾಲ್ಡ್ ಕೊಯೆಟ್ಜಿ (AFP)

ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ ಗಾಯಾಳುಗಳ ಸಮಸ್ಯೆ ಕಾಡುತ್ತಿದೆ. ಮೊದಲ ಟೆಸ್ಟ್‌ ಪಂದ್ಯದಲ್ಲಿ ಗಾಯಗೊಂಡಿರುವ ನಾಯಕ ಟೆಂಬಾ ಬವುಮಾ ತಂಡದಿಂದ ಹೊರಬಿದ್ದ ಬೆನ್ನಲ್ಲೇ, ಸ್ಟಾರ್‌ ವೇಗಿ ಗೆರಾಲ್ಡ್ ಕೊಯೆಟ್ಜಿ ಕೂಡಾ ಮುಂದಿನ ಪಂದ್ಯದಿಂದ ಹೊರಬಿದ್ದಿದ್ದಾರೆ.

ತಂಡದ ಸ್ಟಾರ್ ವೇಗಿ ಕೊಯೆಟ್ಜಿ ಭಾರತ ವಿರುದ್ಧದ ಸರಣಿಯ ಎರಡನೇ ಮತ್ತು ಅಂತಿಮ ಪಂದ್ಯ ಆಡುತ್ತಿಲ್ಲ. ಈ ಕುರಿತು ಕ್ರಿಕೆಟ್ ದಕ್ಷಿಣ ಆಫ್ರಿಕಾ ಶನಿವಾರ ಖಚಿತಪಡಿಸಿದೆ.

ಭಾರತ ವಿರುದ್ಧದ ಆರಂಭಿಕ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ, ಕೊಯೆಟ್ಜಿ ಕೇವಲ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ ಐದು ಓವರ್‌ ಮಾತ್ರ ಬೌಲಿಂಗ್‌ ಮಾಡಿದ್ದರು. ಇದೀಗ ಜನವರಿ 3ರಿಂದ ಕೇಪ್ ಟೌನ್‌ನಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ, ಕೊಯೆಟ್ಜಿ ಬದಲಿಗೆ ಬೇರೆ ಆಟಗಾರನನ್ನು ಆಯ್ಕೆ ಮಾಡದಿರಲು ಕ್ರಿಕೆಟ್ ದಕ್ಷಿಣ ಆಫ್ರಿಕಾ ನಿರ್ಧರಿಸಿದೆ.

ಇದನ್ನೂ ಓದಿ | ಅಶ್ವಿನ್, ಪ್ರಸಿದ್ಧ್ ಹೊರಕ್ಕೆ, ಜಡೇಜಾ ಕಂಬ್ಯಾಕ್; ಇಂತಿದೆ 2ನೇ ಟೆಸ್ಟ್​ಗೆ ಭಾರತ ಆಡುವ 11ರ ಬಳಗ

ತಂಡದ ಬೌಲಿಂಗ್‌ ಲೈನಪ್‌ ಬಲಿಷ್ಠವಾಗಿದ್ದು, ಲುಂಗಿ ಎನ್‌ಗಿಡಿ ಮತ್ತು ವಿಯಾನ್ ಮುಲ್ಡರ್ ಪರ್ಯಾಯ ಬೌಲಿಂಗ್ ಆಯ್ಕೆಗಳಾಗಿದ್ದಾರೆ. ಹೀಗಾಗಿ ಹೆಚ್ಚುವರಿ ಬಲ ಬೇಕಿಲ್ಲ.

ಮಂಡಿರಜ್ಜು ಗಾಯದಿಂದಾಗಿ ಈಗಾಗಲೇ ನಾಯಕ ಟೆಂಬಾ ಬವುಮಾ ಹೊರಬಿದ್ದಿದ್ದಾರೆ. ಇದೀಗ ದಕ್ಷಿಣ ಆಫ್ರಿಕಾ ತಂಡದ ಎರಡನೇ ಆಟಗಾರ ಗಾಯಗೊಂಡಿದ್ದಾರೆ. ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಕೊಯೆಟ್ಜಿ ಗಮನಾರ್ಹ ಪ್ರದರ್ಶನ ನೀಡಿದ್ದರು. ತಂಡವು ಸೆಮಿಫೈನಲ್‌ಗೆ ಮುನ್ನಡೆಯುವಲ್ಲಿ ಅವರ ಬೌಲಿಂಗ್‌ ಪ್ರದರ್ಶನ ನಿರ್ಣಾಯಕ ಪಾತ್ರ ವಹಿಸಿತ್ತು. ಕೇವಲ ಎಂಟು ಪಂದ್ಯಗಳನ್ನಾಡಿ 20 ವಿಕೆಟ್ ಕಬಳಿಸಿದ್ದರು.

ಡೀನ್​ ಎಲ್ಗರ್‌​ ನಾಯಕತ್ವ

ಬವುಮಾ ಅನುಪಸ್ಥಿತಿಯಲ್ಲಿ, ಎರಡನೇ ಟೆಸ್ಟ್‌ ದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕರಾಗಿ ಡೀನ್ ಎಲ್ಗರ್ (Dean Elgar) ತಂಡವನ್ನು ಮುನ್ನಡೆಸಲಿದ್ದಾರೆ. ಇದು ಅವರ ಪಾಲಿನ ಕೊನೆಯ ಟೆಸ್ಟ್‌ ಪಂದ್ಯ. ವಿದಾಯದ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುವ ಅವಕಾಶ ಎಲ್ಗರ್‌ಗೆ ಸಿಕ್ಕಿದೆ. ಮೊದಲ ಪಂದ್ಯದ ಮುಕ್ತಾಯದ ನಂತರ ಕ್ರಿಕೆಟ್ ದಕ್ಷಿಣ ಆಫ್ರಿಕಾ ಇದನ್ನು ಖಚಿತಪಡಿಸಿದೆ.ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಎಲ್ಗರ್‌ ಭಾರತ ತಂಡವನ್ನು ಕಾಡಿದ್ದರು.

ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಂದು ಫೀಲ್ಡಿಂಗ್ ಮಾಡುವಾಗ ಬವುಮಾ ಮಂಡಿರಜ್ಜು ಗಾಯದ ಸಮಸ್ಯೆಗೆ ಸಿಲುಕಿದರು. ಸ್ಕ್ಯಾನಿಂಗ್​ನಲ್ಲಿ ಮಂಡಿರಜ್ಜು ಗಾಯದ ಸಮಸ್ಯೆಗೆ ಒಳಗಾಗಿರುವುದು ದೃಢಪಟ್ಟ ನಂತರ ಮತ್ತೆ ಬವುಮಾ ಮೈದಾನಕ್ಕೆ ಮರಳಲಿಲ್ಲ. ಬ್ಯಾಟಿಂಗ್​ ಕೂಡ ನಡೆಸಲಿಲ್ಲ.

ಇದನ್ನೂ ಓದಿ | ಮೊದಲ ಟೆಸ್ಟ್​ನಲ್ಲಿ ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ ಇಬ್ಬರು ಬೌಲರ್​ಗಳಿಗೆ ಬೆಂಡೆತ್ತಿದ ಆರ್​ಸಿಬಿ ಸ್ಟಾರ್​

ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಕೆಎಲ್ ರಾಹುಲ್ ಶತಕದ ನೆರವಿನಿಂದ 245 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟ್ ಬೀಸಿದ ದಕ್ಷಿಣ ಆಫ್ರಿಕಾ 408 ರನ್ ಕಲೆ ಹಾಕಿತು. ಅನುಭವಿ ಆಟಗಾರ ಡೀನ್ ಎಲ್ಗರ್ 185 ರನ್ ಸಿಡಿಸಿದರು. ಇದರೊಂದಿಗೆ ದಕ್ಷಿಣ ಆಫ್ರಿಕಾ 163 ರನ್​ಗಳ ಮುನ್ನಡೆ ಸಾಧಿಸಿತು. ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿದ ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾದ ವೇಗಿಗಳು ಕಾಡಿದರು. ಪರಿಣಾಮ ಕೇವಲ 131 ರನ್​ಗಳಿಗೆ ಭಾರತ ಗಂಟುಮೂಟೆ ಕಟ್ಟಿತು. ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಮತ್ತು 32 ರನ್​ಗಳ ಗೆಲುವು ಸಾಧಿಸಿತು. ಡೀನ್ ಎಲ್ಗರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ವಿಡಿಯೋ ನೋಡಿ | ಕಾಟೇರದ ದರ್ಶನ್ ಅಭಿನಯಕ್ಕೆ ಫ್ಯಾನ್ಸ್ ಖುಶ್

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ