logo
ಕನ್ನಡ ಸುದ್ದಿ  /  ಕ್ರಿಕೆಟ್  /  ಕ್ರಿಕೆಟ್‌ಗೂ ಬಂತು ರೆಡ್ ಕಾರ್ಡ್; ಈ ರೂಲ್ಸ್‌ಗೆ ಬಲಿಯಾದ ಮೊದಲ ಕ್ರಿಕೆಟಿಗ ಸುನಿಲ್ ನರೈನ್

ಕ್ರಿಕೆಟ್‌ಗೂ ಬಂತು ರೆಡ್ ಕಾರ್ಡ್; ಈ ರೂಲ್ಸ್‌ಗೆ ಬಲಿಯಾದ ಮೊದಲ ಕ್ರಿಕೆಟಿಗ ಸುನಿಲ್ ನರೈನ್

Raghavendra M Y HT Kannada

Aug 28, 2023 04:24 PM IST

google News

ಕ್ರಿಕೆಟ್‌ನಲ್ಲಿ ರೆಡ್ ಕಾರ್ಡ್‌ಗೆ ನಿಯದಡಿ ಶಿಕ್ಷೆಗೆ ಗುರಿಯಾದ ಮೊದಲ ಕ್ರಿಕೆಟರ್ ವೆಸ್ಟ್ ಇಂಡೀಸ್‌ನ ಸುನಿಲ್ ನರೈನ್

  • ವೆಸ್ಟ್ ಇಂಡೀಸ್ ಆಟಗಾರ ಸಿನ್ನರ್ ಸುನಿಲ್ ನರೈನ್ ರೆಡ್ ಕಾರ್ಡ್ ನಿಯಮದಡಿ ಶಿಕ್ಷೆಗೆ ಗುರಿಯಾಗ ಮೊದಲ ಕ್ರಿಕೆಟರ್ ಎನಿಸಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನರೈನ್ ಅಪರೂಪದ ಅಪಖ್ಯಾತಿಗೆ ಗುರಿಯಾಗಿದ್ದಾರೆ.

ಕ್ರಿಕೆಟ್‌ನಲ್ಲಿ ರೆಡ್ ಕಾರ್ಡ್‌ಗೆ ನಿಯದಡಿ ಶಿಕ್ಷೆಗೆ ಗುರಿಯಾದ ಮೊದಲ ಕ್ರಿಕೆಟರ್ ವೆಸ್ಟ್ ಇಂಡೀಸ್‌ನ ಸುನಿಲ್ ನರೈನ್
ಕ್ರಿಕೆಟ್‌ನಲ್ಲಿ ರೆಡ್ ಕಾರ್ಡ್‌ಗೆ ನಿಯದಡಿ ಶಿಕ್ಷೆಗೆ ಗುರಿಯಾದ ಮೊದಲ ಕ್ರಿಕೆಟರ್ ವೆಸ್ಟ್ ಇಂಡೀಸ್‌ನ ಸುನಿಲ್ ನರೈನ್

Sunil Narine Red Card: ಜಗತ್ತಿನ ಅತ್ಯಂತ ಜನಪ್ರಿಯಾ ಕ್ರೀಡೆಗಳಲ್ಲಿ ಒಂದಾಗಿರುವ ಫುಟ್ಬಾಲ್‌ ಆಟದಲ್ಲಿ ಹೆಚ್ಚಾಗಿ ರೆಡ್ ಕಾರ್ಡ್ ನಿಮಯಗಳನ್ನು (Red Card Rule) ನೋಡಿರುತ್ತೇವೆ. ಆಟದ ವೇಳೆ ಆಟಗಾರರ ನಿಯಮಗಳನ್ನು ಉಲ್ಲಂಘಿಸಿದಾಗ ಫೀಲ್ಡ್ ಅಂಪೈರ್‌ಗಳು ರೆಡ್ ಕಾರ್ಡ್ ತೋರಿಸಿ ಅವರನ್ನು ಮೈದಾನದಿಂದ ಹೊರಗಡೆ ಕಳಿಸುತ್ತಾರೆ.

ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ಈ ರೆಡ್ ಕಾರ್ಡ್ ನಿಯಮವನ್ನು ಪರಿಚಯಿಸಲಾಗಿದೆ. ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹೊಸ ರೂಲ್ಸ್ ಜಾರಿಗೆ ಬಂದಿದ್ದು, ವೆಸ್ಟ್ ಇಂಡೀಸ್ ಆಟಗಾರ ಸುನಿಲ್ ನರೈನ್ (Sunil Narine) ರೆಡಾ ಕಾರ್ಡ್ ನಿಯಮದಡಿ ಶಿಕ್ಷೆಗೆ ಒಳಗಾಗಿದ್ದಾರೆ. ಆ ಮೂಲಕ ಅವರ ಈ ನಿಯಮದಡಿ ಶಿಕ್ಷೆಗೆ ಗುರಿಯಾದ ಮೊದಲ ಕ್ರಿಕೆಟರ್ ಎಂಬ ಅಪಖ್ಯಾತಿಗೆ ಗುರಿಯಾಗಿದ್ದಾರೆ.

ಟ್ರಿಂಬಾಗೊ ನೈಟ್ ರೈಡರ್ಸ್ ಮತ್ತು ಸೇಂಡ್ ಕ್ವಿಟ್ಸ್ ನಡುವಿನ ಪಂದ್ಯದ ವೇಳೆ ಅಂಪೈರ್ ರೆಡ್ ಕಾರ್ಡ್ ನಿಯಮವನ್ನು ಅನ್ವಯಿಸಿದ್ದಾರೆ. ನಿಧಾನಗತಿಯ ಓವರ್ ರೇಟ್ ಹೊಂದಿದ ಪರಿಣಾಮವಾಗಿ ನೈಟ್ ರೈಡರ್ಸ್ ಆಟಗಾರ ಸುನಿಲ್ ನರೈನ್ ಮೈದಾನ ತೊರೆಯಬೇಕಾಯಿತು.

ಸಿಪಿಎಲ್‌ನಲ್ಲಿ ಪ್ರತಿ ಇನ್ನಿಂಗ್ಸ್‌ ಅನ್ನು 85 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಒಂದು ಓವರ್‌ ಅನ್ನು 4 ನಿಮಿಷ 15 ಸೆಕೆಂಡ್‌ಗಳು ಎಂಬ ಲೆಕ್ಕಾಚಾರದಲ್ಲಿ 19 ಓವರ್‌ಗಳನ್ನು 80 ನಿಮಿಷ 45 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಬೇಕು. ಒಂದು ವೇಳೆ ಅಷ್ಟರೊಳಗೆ ಇನ್ನಿಂಗ್ಸ್ ಪೂರ್ಣಗೊಳ್ಳದಿದ್ದರೆ ದಂಡವಾಗಿ ತಂಡಕ್ಕೆ ರೆಡ್ ಕಾರ್ಡ್ ನಿಮಯವನ್ನು ಅನ್ವಿಯಸಲಾಗುತ್ತದೆ. ನಿಧಾನಗತಿಯ ಓವರ್ ರೇಟ್ ನಿಂದಾಗಿ ಅಂಪೈರ್‌ ನೈಟ್ ರೈಡರ್ಸ್‌ಗೆ ರೆಡ್ ಕಾರ್ಡ್ ತೋರಿಸಿದ್ದರು.

ಈ ಪೆನಾಲ್ಟಿಯಿಂದಾಗಿ ನೈಟ್ ರೈಡರ್ಸ್ ನಾಯಕ ಪೊಲಾರ್ಡ್ ಸೂಚನನೆ ಮೇರೆಗೆ ಸುನಿಲ್ ನರೈನ್ ಮೈದಾನ ತೊರೆದರು. 19ನೇ ಓವರ್‌ನಲ್ಲಿ 10 ಆಟಗಾರರೊಂದಿಗೆ ಪೊಲಾರ್ಡ್ ತಂಡ ಫೀಲ್ಡಿಂಗ್ ಮಾಡಿತು. ನೈಟ್ ರೈಡರ್ಸ್‌ಗೆ ಅಂಪೈರ್ ರೆಡ್ ಕಾರ್ನರ್ ಪೆನಾಲ್ಡಿ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೇಂಟ್ ಕಿಟ್ಸ್ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ನೈಟ್ ರೈಡರ್ಸ್ 17 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ರೈಡರ್ಸ್ ಪರ ನಿಕೋಲಸ್ ಪೂರನ್ 61 ರನ್ ಬಾರಿಸಿದರೆ, ನಾಯಕ ಪೊಲಾರ್ಡ್ 37 ರನ್ ಗಳಿಸಿದರು.

ವಿಶೇಷವೆಂದರೆ ಟ್ರಿಂಬಾಗೊ ನೈಟರ್ ರೈಡರ್ಸ್ ತಂಡ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರ ಒಡೆತನದ ತಂಡವಾಗಿದೆ. ಬಾಲಿವುಡ್‌ನ ಬಾದ್ ಷಾ ಶಾರುಕ್ ಖಾನ್ ಐಪಿಎಲ್‌ನಲ್ಲಿ ತಮ್ಮದೇ ಆದ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಹೊಂದಿದ್ದಾರೆ. ಐಪಿಎಲ್ ಆರಂಭವಾದರೆ ಸಾಕು, ಕೆಕೆಆರ್ ಪಂದ್ಯಗಳು ಎಲ್ಲೇ ನಡೆದರೂ ಶಾರುಕ್ ಭಾಗಿಯಾಗಿ ತಮ್ಮ ತಂಡವನ್ನು ಹುರಿದುಂಬಿಸುತ್ತಾರೆ.

ಬಾಲಿವುಡ್‌ ನಟ ಶಾರುಕ್ ಒಟ್ಟು ನಾಲ್ಕು ಕ್ರಿಕೆಟ್ ತಂಡಗಳನ್ನು ಹೊಂದಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್, ಅಬುಧಾನಿ ನೈಟ್ ರೈಡರ್ಸ್, ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಹಾಗೂ ಟ್ರಿಂಬಾಗೊ ನೈಟ್ ರೈಡರ್ಸ್. ಈ ಎಲ್ಲಾ ತಂಡಗಳು ಕೋಲ್ಕತ್ತ ನೈಟ್ ರೈಡರ್ಸ್ ಕ್ರೆಕೆಟ್ ಫ್ರಾಂಚೈಸಿಯ ಭಾಗವಾಗಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ