logo
ಕನ್ನಡ ಸುದ್ದಿ  /  ಕ್ರಿಕೆಟ್  /  ಸೂರ್ಯ, ಗಿಲ್, ಜೈಸ್ವಾಲ್ ಔಟ್, ಸ್ಯಾಮ್ಸನ್ ಇನ್: ದ.ಆಫ್ರಿಕಾ ಒಡಿಐ ಸರಣಿಗೆ ಭಾರತದ ತಂಡದಲ್ಲಿ ಬದಲಾವಣೆ

ಸೂರ್ಯ, ಗಿಲ್, ಜೈಸ್ವಾಲ್ ಔಟ್, ಸ್ಯಾಮ್ಸನ್ ಇನ್: ದ.ಆಫ್ರಿಕಾ ಒಡಿಐ ಸರಣಿಗೆ ಭಾರತದ ತಂಡದಲ್ಲಿ ಬದಲಾವಣೆ

Prasanna Kumar P N HT Kannada

Dec 15, 2023 10:00 AM IST

google News

ಸೂರ್ಯಕುಮಾರ್, ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್.

    • India vs South Africa ODI Series: ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಸರಣಿಗೆ ಪ್ರಕಟಿಸಲಾಗಿದ್ದ ಭಾರತ ಟಿ20 ಮತ್ತು ಏಕದಿನ ತಂಡಗಳಲ್ಲಿನ ಬದಲಾವಣೆಗಳ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೋಡೋಣ.
ಸೂರ್ಯಕುಮಾರ್, ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್.
ಸೂರ್ಯಕುಮಾರ್, ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್.

ಗುರುವಾರ (ಡಿಸೆಂಬರ್ 14) ಜೋಹಾನ್ಸ್‌ಬರ್ಗ್‌ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ 3 ಪಂದ್ಯಗಳ ಸರಣಿಯ ಮೂರನೇ ಮತ್ತು ಅಂತಿಮ ಟಿ20ಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 106 ರನ್‌ಗಳಿಂದ ಭಾರತ (IND vs SA 3rd T20I) ಸೋಲಿಸಿತು. ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ದಾಖಲೆಯ 4ನೇ ಟಿ20 ಶತಕ ಗಳಿಸಿ ಟೀಮ್ ಇಂಡಿಯಾ 7 ವಿಕೆಟ್‌ಗಳ ನಷ್ಟಕ್ಕೆ 201 ರನ್ ಗಳಿಸಲು ನೆರವಾದರು. ನಂತರ ಬರ್ತ್​ಡೇ ಬಾಯ್​ ಹುಡುಗ ಕುಲ್ದೀಪ್​ ಯಾದವ್ 2.5 ಓವರ್‌ಗಳಲ್ಲಿ 17 ರನ್‌ಗಳಿಗೆ 5 ವಿಕೆಟ್‌ ಕಬಳಿಸುವ ಮೂಲಕ ಅತಿದೊಡ್ಡ ಗೆಲುವಿಗೆ ಕಾರಣರಾದರು.

ಮೂರನೇ ಟಿ20ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನೊಂದಿಗೆ ಭಾರತ ಟಿ20 ಸರಣಿಯಲ್ಲಿ 1-1ರಲ್ಲಿ ಸಮಬಲ ಸಾಧಿಸಿದೆ. ಡಿಸೆಂಬರ್ 10ರಂದು ಡರ್ಬನ್‌ನಲ್ಲಿ ಎರಡೂ ತಂಡಗಳ ನಡುವಿನ ಮೊದಲ ಟಿ20 ಮಳೆಯಿಂದಾಗಿ ರದ್ದಾಯಿತು. ಡಿಸೆಂಬರ್ 12 ರಂದು ಗೆಬೆರ್ಹಾದಲ್ಲಿ ನಡೆದ 2ನೇ ಪಂದ್ಯದಲ್ಲಿ ಆತಿಥೇಯರು ಗೆದ್ದರು. ಇದೀಗ ಟಿ20 ಸರಣಿ ಮುಕ್ತಾಯದ ನಂತರ, ಎರಡೂ ತಂಡಗಳು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿವೆ. ಅದರ ಮೊದಲ ಪಂದ್ಯವು ಜೋಹಾನ್ಸ್‌ಬರ್ಗ್‌ನಲ್ಲಿ ಭಾನುವಾರ (ಡಿಸೆಂಬರ್ 17) ನಡೆಯಲಿದೆ.

ಏಕದಿನ ತಂಡಕ್ಕೆ ಬದಲಾವಣೆ

ಏಕದಿನ ತಂಡವನ್ನು ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ. ಟಿ20 ತಂಡದ ಭಾಗವಾಗಿದ್ದ ನಾಯಕ ಸೂರ್ಯ, ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಸೇರಿದಂತೆ ಅನೇಕ ಆಟಗಾರರು ಏಕದಿನ ಸರಣಿ ಆಡುವುದಿಲ್ಲ. ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಸರಣಿಗೆ ಪ್ರಕಟಿಸಲಾಗಿದ್ದ ಭಾರತ ಟಿ20 ಮತ್ತು ಏಕದಿನ ತಂಡಗಳಲ್ಲಿನ ಬದಲಾವಣೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ. ಆದರೆ ಈ ಹಿಂದೆ ಪ್ರಕಟಿಸಲಾದ ತಂಡಗಳಲ್ಲಿ ಬದಲಾವಣೆ ಇಲ್ಲ.

ಯಾರೆಲ್ಲಾ ಔಟ್?

ಟಿ20 ನಾಯಕ ಸೂರ್ಯಕುಮಾರ್ ಯಾದವ್, ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಜಿತೇಶ್ ಶರ್ಮಾ ಮತ್ತು ಇಶಾನ್ ಕಿಶನ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್ ಮತ್ತು ವಿಶ್ವದ ನಂ. 1 ಟಿ20 ಬೌಲರ್ ರವಿ ಬಿಷ್ಣೋಯ್ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಗಿಲ್, ಜೈಸ್ವಾಲ್, ಕಿಶನ್, ಜಡೇಜಾ, ಸಿರಾಜ್ ಟೆಸ್ಟ್ ತಂಡದ ಭಾಗವಾಗಿದ್ದು, ದಕ್ಷಿಣ ಆಫ್ರಿಕಾದಲ್ಲೇ ಉಳಿಯುತ್ತಾರೆ. ಆದರೆ, ಸೂರ್ಯ, ಜಿತೇಶ್ ಮತ್ತು ಬಿಷ್ಣೋಯ್ ಅವರು ಭಾರತಕ್ಕೆ ಮರಳುತ್ತಾರೆ. ಮತ್ತು ಮುಂಬರುವ ರಣಜಿ ಟ್ರೋಫಿ ಆವೃತ್ತಿಗೆ ತಯಾರಿ ನಡೆಸಲಿದ್ದಾರೆ. ಜೊತೆಗೆ 2024ರ ಜನವರಿಯಲ್ಲಿ ಅಫ್ಘನ್ ವಿರುದ್ಧ 3 ಪಂದ್ಯಗಳ ಟಿ20 ಸರಣಿಗೂ ಸಿದ್ಧತೆ ನಡೆಸಲಿದ್ದಾರೆ. ಶ್ರೇಯಸ್ ಅಯ್ಯರ್, ಋತುರಾಜ್ ಗಾಯಕ್ವಾಡ್, ಮುಕೇಶ್ ಕುಮಾರ್ ಮೂರು ಸರಣಿಗಳಿಗೂ ಆಯ್ಕೆಯಾಗಿದ್ದಾರೆ.

ಯಾರೆಲ್ಲಾ ಇನ್?

ಟಿ20 ಸರಣಿ ಕಳೆದುಕೊಂಡ ನಂತರ ಕೆಎಲ್ ರಾಹುಲ್, ಏಕದಿನ ತಂಡಕ್ಕೆ ಮರಳಿದ್ದಾರೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತಕ್ಕೆ ಇನ್ನೂ ಪದಾರ್ಪಣೆ ಮಾಡದಿರುವ ಆರ್‌ಸಿಬಿ ಸ್ಟಾರ್ ರಜತ್ ಪಾಟಿದಾರ್, ಈ ಸರಣಿಯಲ್ಲಿ ಚೊಚ್ಚಲ ಕರೆಯ ನಿರೀಕ್ಷೆಯಲ್ಲಿದ್ದಾರೆ. ತಮಿಳುನಾಡಿನ ಯುವ ಬ್ಯಾಟರ್ ಸಾಯಿ ಸುದರ್ಶನ್ ಜೊತೆಗೆ ಏಕದಿನ ತಂಡದಲ್ಲಿ ಸೇರಿಸಿಕೊಂಡಿದ್ದಾರೆ. ಆಲ್​ರೌಂಡರ್ ಅಕ್ಷರ್ ಪಟೇಲ್, ವೇಗಿ ಅವೇಶ್ ಖಾನ್ ಸಹ ತಂಡದಲ್ಲಿದ್ದಾರೆ. ಇಬ್ಬರು ಅನುಭವಿಗಳಾದ ಯುಜ್ವೇಂದ್ರ ಚಹಲ್, ಸಂಜು ಸ್ಯಾಮ್ಸನ್ ಸಹ 50-ಓವರ್​​ಗಳ ಸರಣಿಗೆ ಮರಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ

ಕೆಎಲ್ ರಾಹುಲ್ (ನಾಯಕ, ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಋತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಿಂಕು ಸಿಂಗ್, ರಜತ್ ಪಾಟಿದಾರ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಮುಕೇಶ್ ಕುಮಾರ್, ಅವೇಶ್ ಖಾನ್, ಅರ್ಷ್​ದೀಪ್ ಸಿಂಗ್, ದೀಪಕ್ ಚಹರ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ