logo
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಡೋ-ಪಾಕ್ ತಂಡಗಳು ಏಷ್ಯಾಕಪ್ ಇತಿಹಾಸದಲ್ಲಿ ಒಂದು ಸಲವೂ ಫೈನಲ್​ನಲ್ಲಿ ಒಟ್ಟಿಗೆ ಆಡಿಲ್ಲ!

ಇಂಡೋ-ಪಾಕ್ ತಂಡಗಳು ಏಷ್ಯಾಕಪ್ ಇತಿಹಾಸದಲ್ಲಿ ಒಂದು ಸಲವೂ ಫೈನಲ್​ನಲ್ಲಿ ಒಟ್ಟಿಗೆ ಆಡಿಲ್ಲ!

Prasanna Kumar P N HT Kannada

Sep 14, 2023 04:55 PM IST

google News

ರೋಹಿತ್ ಶರ್ಮಾ ಮತ್ತು ಬಾಬರ್ ಅಜಮ್.

    • Asia Cup 2023 final history: ಈವರೆಗೂ ಏಷ್ಯಾಕಪ್​ನಲ್ಲಿ 16 ಆವೃತ್ತಿಗಳು ನಡೆದಿವೆ. ಆದರೆ ಭಾರತ-ಪಾಕಿಸ್ತಾನ ತಂಡಗಳು ಒಂದು ಬಾರಿಯೂ ಏಷ್ಯಾಕಪ್ ಫೈನಲ್​ನಲ್ಲಿ ಮುಖಾಮುಖಿಯಾಗಿಲ್ಲ ಎಂಬುದು ಅಚ್ಚರಿಯ ಸಂಗತಿ.
ರೋಹಿತ್ ಶರ್ಮಾ ಮತ್ತು ಬಾಬರ್ ಅಜಮ್.
ರೋಹಿತ್ ಶರ್ಮಾ ಮತ್ತು ಬಾಬರ್ ಅಜಮ್.

ನಿಮಗಿದು ಗೊತ್ತಾ? ಏಷ್ಯಾಕಪ್ ಫೈನಲ್​​ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು (India vs Pakistan) ಒಂದು ಬಾರಿಯೂ ಮುಖಾಮುಖಿಯಾಗಿಲ್ಲ. ಅಚ್ಚರಿ ಎನಿಸಿದರೂ ಇದೇ ಸತ್ಯ. ಈವರೆಗೂ ಟಿ20, ಏಕದಿನ ಮಾದರಿ ಸೇರಿ ಒಟ್ಟು ಏಷ್ಯಾಕಪ್ ಟೂರ್ನಿಯಲ್ಲಿ 16 ಆವೃತ್ತಿಗಳು ನಡೆದಿವೆ. ಆದರೆ ಬದ್ಧವೈರಿ ತಂಡಗಳು ಒಂದು ಬಾರಿಯೂ ಏಷ್ಯಾಕಪ್ ಫೈನಲ್​ನಲ್ಲಿ (Asia Cup 2023) ಮುಖಾಮುಖಿಯಾಗಿಲ್ಲ ಎಂಬುದು ಅಚ್ಚರಿಯ ಸಂಗತಿ.

ಭಾರತ 11ನೇ ಬಾರಿಗೆ ಫೈನಲ್​ ಪ್ರವೇಶ

ಪ್ರಸಕ್ತ ಸಾಲಿನ ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ (Team India) ಫೈನಲ್​ಗೆ ಅರ್ಹತೆ ಪಡೆದಿದೆ. ಸೂಪರ್​-4 ಹಂತದಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದ ನಂತರ ಮೊದಲ ತಂಡವಾಗಿ ಫೈನಲ್​ಗೆ ಎಂಟ್ರಿ ಕೊಟ್ಟಿತು. ಇದು ಭಾರತಕ್ಕೆ ದಾಖಲೆಯ 11 ಫೈನಲ್​ ಆಗಿದ್ದು, 8ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಈಗಾಗಲೇ 7 ಪ್ರಶಸ್ತಿಗಳನ್ನು ಭಾರತ ಗೆದ್ದುಕೊಂಡಿದೆ.

ಫೈನಲ್ ಕನಸಿನಲ್ಲಿ ಪಾಕಿಸ್ತಾನ?

ಈ ಬಾರಿಯ ಏಷ್ಯಾಕಪ್​ನಲ್ಲಿ ಪಾಕಿಸ್ತಾನ ಫೈನಲ್ ಕನಸಿನಲ್ಲಿದೆ. ಇಂದು ನಡೆಯುವ ಏಷ್ಯಾಕಪ್​ ಸೂಪರ್​-4 ಹಂತದ ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾ-ಪಾಕಿಸ್ತಾನ ತಂಡಗಳು ಸೆಣಸಾಟ ನಡೆಸಲಿದ್ದು, ಗೆದ್ದ ತಂಡವು ಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಹಾಗೊಂದು ವೇಳೆ ಪಾಕಿಸ್ತಾನ ಗೆದ್ದರೆ ಏಷ್ಯಾಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಏಷ್ಯಾಕಪ್ ಫೈನಲ್​​ನಲ್ಲಿ ಮುಖಾಮುಖಿಯಾಗಲಿವೆ. ಲಂಕಾ ವಿರುದ್ಧ ಪಾಕ್ ಸೋತರೆ, ಭಾರತ-ಶ್ರೀಲಂಕಾ ಫೈನಲ್​ನಲ್ಲಿ ಪ್ರಶಸ್ತಿಗೆ ಕಾದಾಟ ನಡೆಸಲಿವೆ.

ಫೈನಲ್​ನಲ್ಲಿ ಯಾವ ತಂಡ ಎಷ್ಟು ಬಾರಿ ಮುಖಾಮುಖಿ?

ಇನ್ನು ಏಷ್ಯಾಕಪ್​ ಫೈನಲ್​ನಲ್ಲಿ ಭಾರತ-ಶ್ರೀಲಂಕಾ ತಂಡಗಳೇ (India vs Sri Lanka) ಹೆಚ್ಚು ಬಾರಿ ಮುಖಾಮುಖಿಯಾಗಿವೆ. ಒಟ್ಟು 8 ಬಾರಿ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಎದುರಾಳಿಯಾಗಿವೆ. ಪಾಕಿಸ್ತಾನ-ಶ್ರೀಲಂಕಾ ತಂಡಗಳು (Pakistan vs Sri Lanka) 4 ಬಾರಿ ಫೈನಲ್​ನಲ್ಲಿ ಸೆಣಸಾಟ ನಡೆಸಿವೆ. ಬಾಂಗ್ಲಾದೇಶ-ಭಾರತ (Bangladesh vs India) 2 ಬಾರಿ, ಪಾಕಿಸ್ತಾನ-ಬಾಂಗ್ಲಾದೇಶ (Bangladesh vs Pakistan) 1 ಬಾರಿ ಫೈನಲ್​​ನಲ್ಲಿ ಆಡಿವೆ. ಆದರೆ ಭಾರತ ಒಟ್ಟು 10 ಬಾರಿ ಫೈನಲ್ ಆಡಿದ್ದು 7 ಪ್ರಶಸ್ತಿ ಗೆದ್ದಿದೆ. ಶ್ರೀಲಂಕಾ 6 ಸಲ, ಪಾಕಿಸ್ತಾನ 2 ಸಲ ಟ್ರೋಫಿಗೆ ಮುತ್ತಿಕ್ಕಿದೆ.

1984 ರಿಂದ 2023 ರವರೆಗಿನ ಏಷ್ಯಾಕಪ್ ವಿಜೇತರ ಪಟ್ಟಿ

ವರ್ಷಮಾದರಿ (ಟಿ20, ಏಕದಿನ)ಚಾಂಪಿಯನ್ ತಂಡರನ್ನರ್​ಅಪ್ ತಂಡಆತಿಥ್ಯ ವಹಿಸಿದ ಸ್ಥಳ
1984ಏಕದಿನಭಾರತಶ್ರೀಲಂಕಾಶಾರ್ಜಾ ಮೈದಾನ, ಯುಎಇ
1986ಏಕದಿನಶ್ರೀಲಂಕಾಪಾಕಿಸ್ತಾನಕೊಲೊಂಬೊ, ಶ್ರೀಲಂಕಾ
1988ಏಕದಿನಭಾರತಶ್ರೀಲಂಕಾಬಂಗಬಂಧು ರಾಷ್ಟ್ರೀಯ ಮೈದಾನ, ಬಾಂಗ್ಲಾದೇಶ
1990/91ಏಕದಿನಭಾರತಶ್ರೀಲಂಕಾಈಡನ್ ಗಾರ್ಡನ್, ಕೋಲ್ಕತ್ತಾ, ಭಾರತ
1995ಏಕದಿನಭಾರತಶ್ರೀಲಂಕಾಶಾರ್ಜಾ ಮೈದಾನ, ಯುಎಇ
1997ಏಕದಿನಶ್ರೀಲಂಕಾಭಾರತಪ್ರೇಮದಾಸ ಮೈದಾನ, ಕೊಲೊಂಬೊ, ಶ್ರೀಲಂಕಾ
2000ಏಕದಿನಪಾಕಿಸ್ತಾನಶ್ರೀಲಂಕಾಬಂಗಬಂಧು ರಾಷ್ಟ್ರೀಯ ಮೈದಾನ, ಬಾಂಗ್ಲಾದೇಶ
2004ಏಕದಿನಶ್ರೀಲಂಕಾಭಾರತಪ್ರೇಮದಾಸ ಸ್ಟೇಡಿಯಂ, ಕೊಲೊಂಬೊ, ಶ್ರೀಲಂಕಾ
2008ಏಕದಿನಶ್ರೀಲಂಕಾಭಾರತಕರಾಚಿ, ಪಾಕಿಸ್ತಾನ
2010ಏಕದಿನಭಾರತಶ್ರೀಲಂಕಾಡಂಬುಲ್ಲಾ ಮೈದಾನ, ಶ್ರೀಲಂಕಾ
2012ಏಕದಿನಪಾಕಿಸ್ತಾನಬಾಂಗ್ಲಾದೇಶಶೇರ್​-ಇ-ಬಾಂಗ್ಲಾ ಮೈದಾನ, ಬಾಂಗ್ಲಾದೇಶ
2014ಏಕದಿನಶ್ರೀಲಂಕಾಪಾಕಿಸ್ತಾನಶೇರ್​-ಇ-ಬಾಂಗ್ಲಾದ ಮೈದಾನ, ಬಾಂಗ್ಲಾದೇಶ
2016ಟಿ20ಭಾರತಬಾಂಗ್ಲಾದೇಶಶೇರ್-ಇ-ಬಾಂಗ್ಲಾ ಮೈದಾನ, ಬಾಂಗ್ಲಾದೇಶ
2018ಏಕದಿನಭಾರತಬಾಂಗ್ಲಾದೇಶದುಬೈ ಕ್ರಿಕೆಟ್ ಸ್ಟೇಡಿಯಂ, ದುಬೈ
2022ಟಿ20ಶ್ರೀಲಂಕಾಪಾಕಿಸ್ತಾನದುಬೈ ಕ್ರಿಕೆಟ್ ಸ್ಟೇಡಿಯಂ, ದುಬೈ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ