logo
ಕನ್ನಡ ಸುದ್ದಿ  /  ಕ್ರಿಕೆಟ್  /  30 ವರ್ಷಗಳ ನಂತರ ಪಾಕಿಸ್ತಾನ ಸುದೀರ್ಘ ದಾಖಲೆ ಮುರಿದ ಭಾರತ; ವೆಸ್ಟ್ ಇಂಡೀಸ್​​ ರೆಕಾರ್ಡ್ ಕೂಡ ಧೂಳೀಪಟ

30 ವರ್ಷಗಳ ನಂತರ ಪಾಕಿಸ್ತಾನ ಸುದೀರ್ಘ ದಾಖಲೆ ಮುರಿದ ಭಾರತ; ವೆಸ್ಟ್ ಇಂಡೀಸ್​​ ರೆಕಾರ್ಡ್ ಕೂಡ ಧೂಳೀಪಟ

Prasanna Kumar P N HT Kannada

Feb 26, 2024 09:25 PM IST

google News

30 ವರ್ಷಗಳ ನಂತರ ಪಾಕಿಸ್ತಾನ ಸುದೀರ್ಘ ದಾಖಲೆ ಮುರಿದ ಭಾರತ

    • India break Pakistan Record : ಇಂಗ್ಲೆಂಡ್​​ನ ಮೊದಲ ಟೆಸ್ಟ್​​ನಲ್ಲಿ ಸೋತರೂ ಆತ್ಮವಿಶ್ವಾಸ ಕಳೆದುಕೊಳ್ಳದ ಭಾರತ, ಮುಂದಿನ 3 ಪಂದ್ಯಗಳನ್ನೂ ಗೆದ್ದು ಐತಿಹಾಸಿಕ ದಾಖಲೆ ಬರೆದಿದೆ.
30 ವರ್ಷಗಳ ನಂತರ ಪಾಕಿಸ್ತಾನ ಸುದೀರ್ಘ ದಾಖಲೆ ಮುರಿದ ಭಾರತ
30 ವರ್ಷಗಳ ನಂತರ ಪಾಕಿಸ್ತಾನ ಸುದೀರ್ಘ ದಾಖಲೆ ಮುರಿದ ಭಾರತ (AP)

ತವರಿನಲ್ಲಿ ಭಾರತ ತಂಡದ ಅಜೇಯ ಓಟಕ್ಕೆ ಇಂಗ್ಲೆಂಡ್ ಬ್ರೇಕ್ ಹಾಕುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಈ ಹಿಂದಿನ ಎಲ್ಲಾ ಸವಾಲು ಮೆಟ್ಟಿ ನಿಲ್ಲುತ್ತದೆ ಎಂದು ಹೇಳಲಾಗಿತ್ತು. ಅದರಲ್ಲೂ ಹೈದರಾಬಾದ್​​ನಲ್ಲಿ ನಡೆದ ಮೊದಲ ಟೆಸ್ಟ್​​ನಲ್ಲಿ ಇಂಗ್ಲೆಂಡ್, ರೋಹಿತ್ ಪಡೆಯನ್ನು ಸೋಲಿಸುತ್ತಿದ್ದಂತೆ ಈ ಹಿಂದೆ ನುಡಿದಿದ್ದ ಭವಿಷ್ಯಗಳು ನಿಜವಾಗುವ ಮುನ್ಸೂಚನೆ ನೀಡಿದ್ದವು. ಆದರೆ, ಎಲ್ಲವೂ ತಲೆಕೆಳಗಾದವು.

ಮೊದಲ ಟೆಸ್ಟ್​​ನಲ್ಲಿ ಸೋತರೂ ಆತ್ಮವಿಶ್ವಾಸ ಕಳೆದುಕೊಳ್ಳದ ಭಾರತ, ಮುಂದಿನ 3 ಪಂದ್ಯಗಳನ್ನೂ ಗೆದ್ದು ಐತಿಹಾಸಿಕ ದಾಖಲೆ ಬರೆದಿದೆ. ಇಂಗ್ಲೆಂಡ್​​ನ ಬಜ್​ಬಾಲ್​ಗೆ ಕೌಂಟರ್​ ಕೊಟ್ಟ ಭಾರತದ ಯುವ ಆಟಗಾರರು, ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು 3-1ರಲ್ಲಿ ಸರಣಿಯನ್ನು ವಶಪಡಿಸಿಕೊಂಡಿತು. ಆ ಮೂಲಕ ತವರಿನಲ್ಲಿ ಸತತ 17ನೇ ಸರಣಿ ಗೆದ್ದ ದಾಖಲೆ ಬರೆದಿದೆ.

ಪಾಕಿಸ್ತಾನ ದಾಖಲೆ ಮುರಿದ ಭಾರತ

ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್‌ ಪಂದ್ಯದ ಗೆಲುವು ಇನ್ನಷ್ಟು ವಿಶೇಷವಾಗಿದೆ. ಭಾರತ 2013ರ ನಂತರ ಮೊದಲ ಬಾರಿಗೆ ತವರಿನಲ್ಲಿ 150+ ಸ್ಕೋರ್ ಅನ್ನು ಬೆನ್ನಟ್ಟಿದೆ. ರಾಂಚಿಯಲ್ಲಿನ ಐದು ವಿಕೆಟ್‌ಗಳ ಗೆಲುವು ತವರಿನಲ್ಲಿ ಭಾರತದ ಅಜೇಯ ಸರಣಿ ಗೆಲುವಿನ ಸರಣಿಯನ್ನು 17ಕ್ಕೆ ವಿಸ್ತರಿಸಿತು. ಅಲ್ಲದೆ, ವಿಶ್ವಮಟ್ಟದಲ್ಲಿ ಪಾಕಿಸ್ತಾನ ತಂಡದ ದಾಖಲೆಯನ್ನು ಮುರಿದಿದೆ.

ತವರಿನಲ್ಲಿ ಸತತ ಅತ್ಯಧಿಕ ಸರಣಿಗಳನ್ನು ಗೆದ್ದಿರುವ ದಾಖಲೆಯಲ್ಲಿ ಪಾಕ್ ತಂಡವನ್ನು ಹಿಂದಿಕ್ಕಿದೆ. ಮಾರ್ಚ್ 1982 ರಿಂದ ನವೆಂಬರ್ 1994 ರವರೆಗೆ ತವರಿನಲ್ಲಿ ಸತತ 16 ಟೆಸ್ಟ್ ಸರಣಿಗಳಲ್ಲಿ ಪಾಕಿಸ್ತಾನ ಜಯ ಸಾಧಿಸಿತ್ತು. ಇದೀಗ ಭಾರತ ತವರಿನಲ್ಲಿ 2013ರಿಂದ ಈವರೆಗೂ ಸತತ 17ನೇ ಸರಣಿ ಗೆಲ್ಲುವ ಮೂಲಕ ಬದ್ಧವೈರಿ ಪಾಕ್ ತಂಡವನ್ನು ಹಿಂದಿಕ್ಕಿದೆ. ಆ ಮೂಲಕ 30 ವರ್ಷಗಳ ದಾಖಲೆಯನ್ನು ಅಳಿಸಿ ಹಾಕಿದೆ. ಅಲ್ಲದೆ, ವೆಸ್ಟ್​​ ಇಂಡೀಸ್​ ದಾಖಲೆಗೂ ಬ್ರೇಕ್ ಬಿದ್ದಿದೆ.

ತವರಿನಲ್ಲಿ ಸತತ 28 ಟೆಸ್ಟ್ ಸರಣಿಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ದಾಖಲೆಯನ್ನು ಸಮೀಪಿಸಲು ಭಾರತಕ್ಕೆ ಸ್ವಲ್ಪ ಪ್ರಯತ್ನಬೇಕಾಗುತ್ತದೆ. ಆಸೀಸ್ ನವೆಂಬರ್ 1993 ರಿಂದ ನವೆಂಬರ್ 2008 ರವರೆಗೆ ಟೆಸ್ಟ್​ ಸರಣಿಗಳನ್ನು ಗೆದ್ದಿತ್ತು. ಇನ್ನು ಈ ಪಟ್ಟಿಯಲ್ಲಿ ಭಾರತ 1987 ರಿಂದ 1999 ರವರೆಗೆ 14 ಸರಣಿ ಗೆದ್ದಿತ್ತು. 2004 ರಿಂದ 2012 ರವರೆಗೆ ತವರಿನಲ್ಲಿ ಸತತ 14 ಟೆಸ್ಟ್ ಸರಣಿಗಳನ್ನು ಗೆದ್ದಿದೆ. ಭಾರತವು ಈ ಪಟ್ಟಿಯಲ್ಲಿ 3 ಬಾರಿ ಕಾಣಿಸಿಕೊಂಡಿದೆ.

ತವರಿನಲ್ಲಿ ಸತತವಾಗಿ ಹೆಚ್ಚು ಸರಣಿ ಗೆದ್ದ ತಂಡಗಳು

ಆಸ್ಟ್ರೇಲಿಯಾ - 28 ಸರಣಿ, ನವೆಂಬರ್ 1993 ರಿಂದ ನ.2008 ರವರೆಗೆ

ಭಾರತ - 17 ಸರಣಿ, ಫೆಬ್ರವರಿ 2013ರಿಂದ (ಮುಂದುವರೆಯುತ್ತಿದೆ)

ಪಾಕಿಸ್ತಾನ - 16 ಸರಣಿ, ಮಾರ್ಚ್ 1982 ರಿಂದ ನವೆಂಬರ್ 1994

ವೆಸ್ಟ್ ಇಂಡೀಸ್ - 16 ಸರಣಿ, ಫೆಬ್ರವರಿ 1974 ರಿಂದ ಏಪ್ರಿಲ್ 1994

ಭಾರತ - 14 ಸರಣಿ, ನವೆಂಬರ್ 1987 ರಿಂದ ಅಕ್ಟೋಬರ್ 1999

ಭಾರತ - 14 ಸರಣಿ, ನವೆಂಬರ್ 2004 ರಿಂದ ಆಗಸ್ಟ್ 2012 ರವರೆಗೆ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ