logo
ಕನ್ನಡ ಸುದ್ದಿ  /  ಕ್ರಿಕೆಟ್  /  ಜಿಂಬಾಬ್ವೆ ಸರಣಿಯಿಂದ ಭಾರತಕ್ಕೆ ಆಲ್‌ರೌಂಡ್ ಲಾಭ; ಹಾರ್ದಿಕ್‌ ಪಾಂಡ್ಯ ನಾಯಕತ್ವಕ್ಕೆ ಹೆಚ್ಚಿದ ಬಲ

ಜಿಂಬಾಬ್ವೆ ಸರಣಿಯಿಂದ ಭಾರತಕ್ಕೆ ಆಲ್‌ರೌಂಡ್ ಲಾಭ; ಹಾರ್ದಿಕ್‌ ಪಾಂಡ್ಯ ನಾಯಕತ್ವಕ್ಕೆ ಹೆಚ್ಚಿದ ಬಲ

Jayaraj HT Kannada

Jul 16, 2024 05:58 PM IST

google News

ಜಿಂಬಾಬ್ವೆ ಸರಣಿಯಿಂದ ಭಾರತಕ್ಕೆ ಆಲ್‌ರೌಂಡ್ ಲಾಭ; ಹಾರ್ದಿಕ್‌ ಪಾಂಡ್ಯ ನಾಯಕತ್ವಕ್ಕೆ ಹೆಚ್ಚಿದ ಬಲ

    • ಚುಟುಕು ಸ್ವರೂಪದ ಕ್ರಿಕೆಟ್‌ನಲ್ಲಿ ಭಾರತದಲ್ಲಿ ಹೊಸ ಯುಗ ಆರಂಭವಾಗಿದೆ. ಬ್ಯಾಟಿಂಗ್‌ ಜೊತೆಗೆ ಅಭಿಷೇಕ್ ಶರ್ಮಾ ಅವರ ಬೌಲಿಂಗ್ ಸಾಮರ್ಥ್ಯವು ಅಗ್ರ ಕ್ರಮಾಂಕದಲ್ಲಿ ಅವರ ಸ್ಥಾನವನ್ನು ಗಟ್ಟಿಗೊಳಿಸಿದೆ. ಇದು ಹಾರ್ದಿಕ್‌ ಪಾಂಡ್ಯ ನೇತೃತ್ವದ ತಂಡದ ಬಲ ಹೆಚ್ಚಿಸಲಿದೆ.
ಜಿಂಬಾಬ್ವೆ ಸರಣಿಯಿಂದ ಭಾರತಕ್ಕೆ ಆಲ್‌ರೌಂಡ್ ಲಾಭ; ಹಾರ್ದಿಕ್‌ ಪಾಂಡ್ಯ ನಾಯಕತ್ವಕ್ಕೆ ಹೆಚ್ಚಿದ ಬಲ
ಜಿಂಬಾಬ್ವೆ ಸರಣಿಯಿಂದ ಭಾರತಕ್ಕೆ ಆಲ್‌ರೌಂಡ್ ಲಾಭ; ಹಾರ್ದಿಕ್‌ ಪಾಂಡ್ಯ ನಾಯಕತ್ವಕ್ಕೆ ಹೆಚ್ಚಿದ ಬಲ

ಭಾರತ ಕ್ರಿಕೆಟ್ ತಂಡದ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದೀಗ ಹೊಸ ಹಾಗೂ ಬಲಿಷ್ಠ ತಂಡ ಕಟ್ಟುವುದು ಭಾರತದ ಮುಂದಿರುವ ಸವಾಲು. ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಯುವ ಅಟಗಾರರ ಮುಂದಾಳತ್ವದಲ್ಲಿ ನಡೆದ ಜಿಂಬಾಬ್ವೆ ಸರಣಿಯಲ್ಲಿ ಭಾರತ ಯುವ ತಂಡ ಅಮೋಘ ಪ್ರದರ್ಶನ ನೀಡಿತು. ಮೊದಲ ಪಂದ್ಯದಲ್ಲಿ ಸೋಲು ಕಂಡರೂ, ನಂತರ ಪುಟಿದೆದ್ದ ಶುಭ್ಮನ್‌ ಗಿಲ್‌ ಬಳಗ ಸರಣಿಯನ್ನು 4-1 ಅಂತರದಿಂದ ವಶಪಡಿಸಿಕೊಂಡಿತು. ಈ ಸರಣಿಯಿಂದ ಭಾರತ ಕ್ರಿಕೆಟ್‌ಗೆ ಒಂದಷ್ಟು ಲಾಭಗಳಾಗಿವೆ.

ಭಾರತ ತಂಡದಲ್ಲಿ ಬಲಿಷ್ಠ ಆಲ್‌ರೌಂಡರ್‌ಗಳು ಕೊರತೆ ಇರುವುದು ಸತ್ಯ. ಅದರಲ್ಲೂ ಪ್ರಬಲ ವೇಗದ ಬೌಲಿಂಗ್‌ ಆಲ್‌ರೌಂಡರ್‌ಗಳ ಸಂಖ್ಯೆ ಕಡಿಮೆ. ಬ್ಯಾಟ್ ಮತ್ತು ಬಾಲ್‌ನಲ್ಲಿ ಸಮಗ್ರವಾಗಿ ಕೊಡುಗೆ ನೀಡುವ ಮೂಲಕ ಭಾರತದ ಟಿ20 ವಿಶ್ವಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದವರು ಹಾರ್ದಿಕ್ ಪಾಂಡ್ಯ. ಸದ್ಯ ಪಾಂಡ್ಯಗಿಂತ ಉತ್ತಮವಾಗಿ ಬೌಲಿಂಗ್ ಮಾಡಬಲ್ಲ ಬ್ಯಾಟರ್‌ ಬೇರೆ ಯಾರೂ ಇಲ್ಲ. ಭಾರತದ ನೂತನ ಟಿ20 ನಾಯಕನಾಗಿ ಅಧಿಕಾರ ವಹಿಸಿಕೊಳ್ಳಲಿರುವ ಹಾರ್ದಿಕ್ ಪಾಂಡ್ಯ,‌ ಮುಂದೆ ಬಲಿಷ್ಠ ಟಿ20 ತಂಡವನ್ನು ರಚಿಸಬೇಕಿದೆ. ಅವರು ಕೂಡಾ ಆಲ್‌ರೌಂಡ್‌ ತಂಡ ರಚಿಸಲು ಮುಂದಾಗಲಿದ್ದಾರೆ.

ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಭಾರತ ಗೆದ್ದ ನಂತರ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಿವೃತ್ತಿ ಪಡೆದರು. ಅವರ ಬೆನ್ನಲ್ಲೇ ಭಾರತದ ಬಲಿಷ್ಠ ಸ್ಪಿನ್‌ ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ಚುಟುಕು ಸ್ವರೂಪಕ್ಕೆ ರಾಜೀನಾಮೆ ನೀಡಿದ್ದಾರೆ. ತಂಡವು ಹೊಸ ಯುಗಕ್ಕೆ ಕಾಲಿಡುತ್ತಿದ್ದಂತೆ, ಈ ಪ್ರಮುಖ ಸ್ಥಾನಗಳನ್ನು ತುಂಬಲು ಆಯ್ಕೆದಾರರು ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದು ಸದ್ಯದ ಪ್ರಶ್ನೆ.

ಅಭಿಷೇಕ್ ಶರ್ಮಾ

ಅಗ್ರಕ್ರಮಾಂಕದಲ್ಲಿ ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಬ್ಯಾಟಿಂಗ್ ದಿಗ್ಗಜರ ಸ್ಥಾನವನ್ನು ತುಂಬಲಿದ್ದಾರೆ. ಈ ನಡುವೆ, ಜಿಂಬಾಬ್ವೆಯಲ್ಲಿ ನಡೆದ ಐದು ಪಂದ್ಯಗಳ ಟಿ20 ಸರಣಿ ಗೆಲುವಿನ ನಂತರ, ಆಯ್ಕೆದಾರರಿಗೆ ಮತ್ತೊಂದು ಆಯ್ಕೆ ಪಡೆದಿದ್ದಾರೆ. ಅವರೇ ಅಭಿಷೇಕ್ ಶರ್ಮಾ.

2024ರ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಅಬ್ಬರಿಸಿದ್ದ ಆರಂಭಿಕ ಆಟಗಾರ, ಜಿಂಬಾಬ್ವೆಯಲ್ಲಿ ಆಡಿದ ತಮ್ಮ ಎರಡನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿಯೇ ಶತಕ ಬಾರಿಸಿದರು. ಇದು ಅವರ ಸ್ಪೋಟಕ ಬ್ಯಾಟಿಂಗ್ ಸಾಮರ್ಥ್ಯವನ್ನು ಒತ್ತಿಹೇಳುತ್ತದೆ. ಲೀಲಾಜಾಲವಾಗಿ ಸಿಕ್ಸರ್‌ ಸಿಡಿಸುವ ಈತನ ಸಾಮರ್ಥ್ಯಕ್ಕೆ ದಿಗ್ಗಜರೇ ಬೆರಗಾಗಿದ್ದಾರೆ. ಈ ನಡುವೆ ಅವರ ಬೌಲಿಂಗ್‌ ಸಾಮರ್ಥ್ಯ ಕೂಡಾ ಎಲ್ಲರ ಗಮನ ಸೆಳೆದಿದೆ. ನಾಲ್ಕನೇ ಮತ್ತು ಐದನೇ ಟಿ 20 ಪಂದ್ಯಗಳಲ್ಲಿ ಅಭಿಷೇಕ್ ಅಮೋಘ ಬೌಲಿಂಗ್‌ ಪ್ರದರ್ಶನ ನೀಡಿದ್ದರು.

ವಿರಾಟ್‌-ರೋಹಿತ್‌ಗಿಂತಲೂ ಅಭಿಷೇಕ್‌ ಸಾಮರ್ಥ್ಯ ಹೆಚ್ಚು

ವೈಟ್-ಬಾಲ್ ಕ್ರಿಕೆಟ್‌ನಲ್ಲಿ ವಿರಾಟ್ ಹಾಗೂ ರೋಹಿತ್ ಶರ್ಮಾ ಅತ್ಯಂತ ಯಶಸ್ವಿ ಬ್ಯಾಟರ್‌ಗಳು. ಎಲ್ಲಾ ಯಶಸ್ಸಿನ ಹೊರತಾಗಿಯೂ, ಬೌಲಿಂಗ್ ಸಾಮರ್ಥ್ಯದ ಕೊರತೆ ಇಲ್ಲಿ ಎದ್ದು ಕಾಣುತ್ತದೆ. ಈ ಇಬ್ಬರು ಪ್ರಮುಖ ಬ್ಯಾಟರ್‌ಗಳು ಚೆಂಡಿನೊಂದಿಗೆ ಕೊಡುಗೆ ನೀಡದೆ ತಮ್ಮ ಕ್ರಿಕೆಟ್ ಆಡಿದ್ದಾರೆ. ಆದರೆ ತಂಡಕ್ಕೆ ಬೇಕಾಗಿರುವುದು ಯುವರಾಜ್ ಸಿಂಗ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವೀರೇಂದ್ರ ಸೆಹ್ವಾಗ್ ಅವರಂತೆ ಬೌಲಿಂಗ್‌ ಮಾಡಬಲ್ಲ ಸಾಮರ್ಥ್ಯವಿರುವ ಬ್ಯಾಟರ್‌ಗಳು. ಅಭಿಷೇಕ್‌ ಅವರಲ್ಲಿ ಆ ಸಾಮರ್ಥ್ಯವಿದೆ.

ಶ್ರೀಲಂಕಾ ಸರಣಿಗೆ ಅಭಿಷೇಕ್ ಆಯ್ಕೆಯಾಗುವ ಸಾಧ್ಯತೆ ಕಡಿಮೆ. ಆದರೆ ಆಡುವ ಬಳಗದಲ್ಲಿ ಇವರ ಸೇರ್ಪಡೆಯು ನಾಯಕನನ್ನು ತುಸು ನಿರಾಳವಾಗಿಸುತ್ತದೆ. ಏಕೆಂದರೆ ಅಭಿಷೇಕ್‌ ತಮ್ಮ ಬೌಲಿಂಗ್ ಕೌಶಲ್ಯದೊಂದಿಗೆ ತಂಡಕ್ಕೆ ಸಮತೋಲನವನ್ನು ನೀಡುತ್ತಾರೆ. ಅಭಿಷೇಕ್‌ ಬ್ಯಾಟಿಂಗ್‌ನಷ್ಟೇ ಬೌಲಿಂಗ್‌ಗಾಗಿಯೂ ಶ್ರಮ ವಹಿಸುತ್ತಿದ್ದಾರೆ. ನಿರಂತರ ಅಭ್ಯಾಸ ಮಾಡುತ್ತಿದ್ದಾರೆ. ಈ ಕುರಿತು ಅವರು ಜಿಂಬಾಬ್ವೆ ಸರಣಿ ಬಳಿಕ ತಿಳಿಸಿದ್ದರು.

ವಾಷಿಂಗ್ಟನ್ ಸುಂದರ್‌ ಸರಣಿಶ್ರೇಷ್ಠ

ಜಿಂಬಾಬ್ವೆಯ ಸರಣಿಯಲ್ಲಿ ವಾಷಿಂಗ್ಟನ್ ಸುಂದರ್ ಅಮೋಘ ಬೌಲಿಂಗ್‌ ಪ್ರದರ್ಶನ ನೀಡಿದರು. ತಮಿಳುನಾಡು ಆಲ್‌ರೌಂಡರ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಒಟ್ಟು ಎಂಟು ವಿಕೆಟ್‌ಗಳೊಂದಿಗೆ ಜಂಟಿಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಆಫ್-ಸ್ಪಿನ್ ಆಲ್‌ರೌಂಡರ್ ಭಾರತಕ್ಕೆ ಅಗತ್ಯವಿದೆ. ಏಕೆಂದರೆ ತಂಡವು ಜಡೇಜಾಗೆ ಬದಲಿ ಆಟಗಾರನನ್ನು ಹುಡುಕುತ್ತಿದೆ.

ದುಬೆ ಬೌಲಿಂಗ್

ಜಿಂಬಾಬ್ವೆ ಪ್ರವಾಸದ ಮತ್ತೊಂದು ಆಕರ್ಷಣೆಯೆಂದರೆ ಪವರ್ ಹಿಟ್ಟರ್ ಶಿವಂ ದುಬೆ ಅವರ ಬೌಲಿಂಗ್. ನಿಧಾನಗತಿಯ ಪಿಚ್‌ಗಳಲ್ಲಿ ಪರಿಣಾಮಕಾರಿ ಆಲ್‌ರೌಂಡ್‌ ವೇಗದ ಬೌಲರ್‌ ಕೊರತೆ ಭಾರತಕ್ಕಿದೆ. ಇದನ್ನು ದುಬೆ ಭರ್ತಿ ಮಾಡುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ