ಬೆಂಗಳೂರಿನಲ್ಲಿ ಭಾರತ ಗೆದ್ದಿದ್ದು 2 ಟಿ20 ಮಾತ್ರ; ಚಿನ್ನಸ್ವಾಮಿಯಲ್ಲಿ ಟೀಮ್ ಇಂಡಿಯಾ ಅಂಕಿ-ಅಂಶ ಹೀಗಿದೆ
Dec 03, 2023 11:23 AM IST
ಎಂ ಚಿನ್ನಸ್ವಾಮಿ ಕ್ರೀಡಾಂಗಣ
- India vs Australia: ಭಾರತ ಕ್ರಿಕೆಟ್ ತಂಡವು ಇದುವರೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಟ್ಟು ಆರು ಟಿ20 ಪಂದ್ಯಗಳಲ್ಲಿ ಆಡಿದೆ. ಆದರೆ ಇಲ್ಲಿ ಗೆದ್ದಿರುವುದು ಎರಡು ಪಂದ್ಯಗಳಲ್ಲಿ ಮಾತ್ರ. ಭಾನುವಾರ ಚಿನ್ನಸ್ವಾಮಿ ಅಂಗಳದಲ್ಲಿ ಏಳನೇ ಟಿ20 ಪಂದ್ಯದಲ್ಲಿ ಆಡುತ್ತಿದ್ದು, ಮೂರನೇ ಗೆಲುವಿನ ನಿರೀಕ್ಷೆಯಲ್ಲಿದೆ.
ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಸರಣಿಯ ಐದನೇ ಮತ್ತು ಅಂತಿಮ ಟಿ20 ಪಂದ್ಯವು (India vs Australia) ಡಿಸೆಂಬರ್ 3ರ ಭಾನುವಾರವಾದ ಇಂದು ನಡೆಯುತ್ತಿದೆ. ಸರಣಿಯ ಅಂತಿಮ ಪಂದ್ಯವು ಉದ್ಯಾನ ನಗರಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಸರಣಿಯಲ್ಲಿ ಮೂರು ಪಂದ್ಯಗಳನ್ನು ಗೆದ್ದು ಸರಣಿ ಜಯ ಸಾಧಿಸಿರುವ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ, ಅಂತಿಮ ಪಂದ್ಯದಲ್ಲಿಯೂ ಗೆದ್ದು ದಾಖಲೆ ಬರೆಯುವ ವಿಶ್ವಾಸದಲ್ಲಿದೆ.
ಟಿ20 ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನದಲ್ಲಿರುವ ಭಾರತವು, ಸರಣಿಯಲ್ಲಿ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ 136 ಟಿ20 ಪಂದ್ಯಗಳನ್ನು ಗೆದ್ದ ದಾಖಲೆ ಹೊಂದಿದೆ. ಬೆಂಗಳೂರಿನಲ್ಲಿ ರನ್ ಮಳೆ ಹರಿಯುವ ಸಾಧ್ಯತೆ ದಟ್ಟವಾಗಿದ್ದು, ಮತ್ತೊಮ್ಮೆ ಭಾರತ ಸ್ಫೋಟಕ ಬ್ಯಾಟಿಂಗ್ ನಡೆಸುವ ವಿಶ್ವಾಸದಲ್ಲಿದೆ.
ಇದನ್ನೂ ಓದಿ | ಅಕ್ಷರ್, ಬಿಷ್ಣೋಯ್ ಔಟ್, ಸುಂದರ್, ದುಬೆ ಇನ್; ಬೆಂಗಳೂರು ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ
ಭಾರತ ತಂಡವು ಇದುವರೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಟ್ಟು ಆರು ಟಿ20 ಪಂದ್ಯಗಳಲ್ಲಿ ಆಡಿದೆ. ಆದರೆ ಇಲ್ಲಿ ಗೆದ್ದಿರುವುದು ಎರಡು ಪಂದ್ಯಗಳಲ್ಲಿ ಮಾತ್ರ. ಭಾನುವಾರ ಚಿನ್ನಸ್ವಾಮಿ ಅಂಗಳದಲ್ಲಿ ಏಳನೇ ಟಿ20 ಪಂದ್ಯದಲ್ಲಿ ಆಡುತ್ತಿದ್ದು, ಮೂರನೇ ಗೆಲುವಿನ ನಿರೀಕ್ಷೆಯಲ್ಲಿದೆ.
ಬೆಂಗಳೂರಿನಲ್ಲಿ ನಡೆದ ಟಿ20 ಪಂದ್ಯಗಳಲ್ಲಿ ಭಾರತದ ಪ್ರದರ್ಶನ ಹೀಗಿದೆ
- 2012ರ ಡಿಸೆಂಬರ್ 25: ಪಾಕಿಸ್ತಾನವು ಭಾರತವನ್ನು 5 ವಿಕೆಟ್‌ಗಳಿಂದ ಸೋಲಿಸಿತು.
- 2016ರ ಮಾರ್ಚ್ 23: ಭಾರತವು ಬಾಂಗ್ಲಾದೇಶವನ್ನು 1 ರನ್‌ನಿಂದ ಸೋಲಿಸಿತು.
- 2017ರ ಫೆಬ್ರವರಿ 1: ಭಾರತವು 75 ರನ್‌ಗಳಿಂದ ಇಂಗ್ಲೆಂಡ್ ಅನ್ನು ಸೋಲಿಸಿತು.
- 2019ರ ಫೆಬ್ರವರಿ 27: ಭಾರತವನ್ನು ಆಸ್ಟ್ರೇಲಿಯಾ 7 ವಿಕೆಟ್‌ಗಳಿಂದ ಸೋಲಿಸಿತು.
- 2019ರ ಸೆಪ್ಟೆಂಬರ್ 22: ದಕ್ಷಿಣ ಆಫ್ರಿಕಾವು ಭಾರತವನ್ನು 9 ವಿಕೆಟ್‌ಗಳಿಂದ ಸೋಲಿಸಿತು.
- 2022ರ ಜೂನ್ 19: ಭಾರತ ಮತ್ತು ದಕ್ಷಿಣ ಆಫ್ರಿಕಾ T20ಯು ಮಳೆಯಿಂದಾಗಿ ರದ್ದಾಗಿತ್ತು .
ಚಿನ್ನಸ್ವಾಮಿ ಮೈದಾನದಲ್ಲಿ ಭಾರತದ ಅಂಕಿ-ಅಂಶಗಳು
- ಆರು ಟಿ20 ಪಂದ್ಯಗಳಲ್ಲಿ 2 ಗೆಲುವು, 3 ಸೋಲು ಮತ್ತು 1 ಡ್ರಾ.
- ಗರಿಷ್ಠ ಮೊತ್ತ: ಇಂಗ್ಲೆಂಡ್ ವಿರುದ್ಧ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 202 ರನ್
- ಕನಿಷ್ಠ ಮೊತ್ತ: 2012ರ ಡಿಸೆಂಬರ್ 25ರಂದು ಪಾಕಿಸ್ತಾನದ ವಿರುದ್ಧ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 133
- ಬೃಹತ್ ಗೆಲುವು: ಇಂಗ್ಲೆಂಡ್ ವಿರುದ್ಧ 75 ರನ್ ಗೆಲುವು.
- ಹೆಚ್ಚು ರನ್: ವಿರಾಟ್ ಕೊಹ್ಲಿ ಐದು ಪಂದ್ಯಗಳಲ್ಲಿ 116 ರನ್
- ಗರಿಷ್ಠ ವೈಯಕ್ತಿಕ ಸ್ಕೋರ್: ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ (38 ಎಸೆತಗಳಲ್ಲಿ ಅಜೇಯ 72 ರನ್)
- ಅರ್ಧಶತಕಗಳು: ಸುರೇಶ್ ರೈನಾ, ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ (ತಲಾ 1)
- ಅತಿ ಹೆಚ್ಚು ಸಿಕ್ಸರ್: ಸುರೇಶ್ ರೈನಾ ಮತ್ತು ವಿರಾಟ್ ಕೊಹ್ಲಿ (ತಲಾ 7)
- ಅತಿ ಹೆಚ್ಚು ವಿಕೆಟ್: ಯುಜ್ವೇಂದ್ರ ಚಹಾಲ್ (ಮೂರು ಪಂದ್ಯಗಳಲ್ಲಿ 6 ವಿಕೆಟ್)
- ಗರಿಷ್ಠ ಜೊತೆಯಾಟ: ಆಸ್ಟ್ರೇಲಿಯಾ ವಿರುದ್ಧ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ (4 ನೇ ವಿಕೆಟ್‌ಗೆ 100 ರನ್)