logo
ಕನ್ನಡ ಸುದ್ದಿ  /  ಕ್ರಿಕೆಟ್  /  ನೋವು ಅರಗಿಸಿಕೊಳ್ಳೋಕೆ ಕಷ್ಟವಾಗ್ತಿದೆ; ವಿಶ್ವಕಪ್​ನಿಂದ ಹೊರಬಿದ್ದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಭಾವುಕ

ನೋವು ಅರಗಿಸಿಕೊಳ್ಳೋಕೆ ಕಷ್ಟವಾಗ್ತಿದೆ; ವಿಶ್ವಕಪ್​ನಿಂದ ಹೊರಬಿದ್ದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಭಾವುಕ

Prasanna Kumar P N HT Kannada

Nov 04, 2023 02:49 PM IST

google News

ವಿಶ್ವಕಪ್​ನಿಂದ ಹೊರಬಿದ್ದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಭಾವುಕ.

    • all rounder Hardik Pandya: ಏಕದಿನ ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದ ಬೆನ್ನಲ್ಲೇ ಭಾವುಕರಾಗಿರುವ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ, ಮತ್ತೆ ತಂಡದ ಭಾಗವಾಗುತ್ತಿಲ್ಲ ಎಂಬ ನೋವು ನನ್ನ ಕೈಯಲ್ಲಿ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.
ವಿಶ್ವಕಪ್​ನಿಂದ ಹೊರಬಿದ್ದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಭಾವುಕ.
ವಿಶ್ವಕಪ್​ನಿಂದ ಹೊರಬಿದ್ದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಭಾವುಕ.

ಕಾಲಿನ ಗಾಯದ ಕಾರಣ ಹಾಲಿ ಐಸಿಸಿ ಏಕದಿನ ಕ್ರಿಕೆಟ್​​ ವಿಶ್ವಕಪ್ ಟೂರ್ನಿಯಿಂದ (ICC ODI World Cup 2023) ಹೊರಬಿದ್ದ ಬೆನ್ನಲ್ಲೇ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya), ಭಾವುಕರಾಗಿದ್ದಾರೆ. ಇಂಜುರಿ ಬಳಿಕ ತಂಡಕ್ಕೆ ಮರಳಿ ಮೈದಾನದಲ್ಲಿ ಅಬ್ಬರಿಸಬೇಕು, 140 ಕೋಟಿ ಜನರ ಕನಸನ್ನು ನನಸು ಮಾಡಬೇಕೆಂದುಕೊಂಡಿದ್ದ ಪಾಂಡ್ಯ ಆಸೆ ಅರ್ಧಕ್ಕೆ ಕಮರಿದೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಮಾಡಿರುವ ಆಲ್​ರೌಂಡರ್​, ಮತ್ತೆ ತಂಡದ ಭಾಗವಾಗುತ್ತಿಲ್ಲ ಎಂಬ ನೋವು ನನ್ನ ಕೈಯಲ್ಲಿ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಬರೆದಿದ್ದಾರೆ. ಹಾರ್ದಿಕ್ ಅವರಿಗೆ ಬದಲಿ ಆಟಗಾರನಾಗಿ ವೇಗಿ ಹಾಗೂ ಕನ್ನಡಿಗ ಪ್ರಸಿದ್ದ್ ಕೃಷ್ಣ ಅವರಿಗೆ ಮಣೆ ಹಾಕಿ ಅಚ್ಚರಿ ಮೂಡಿಸಲಾಗಿದೆ.

ಹಾರ್ದಿಕ್ ಪಾಂಡ್ಯ ಪೋಸ್ಟ್​

ತಂಡದಿಂದ ಹೊರ ಬಿದ್ದ ಬೆನ್ನಲ್ಲೇ ಹಾರ್ದಿಕ್ ಸೋಷಿಯಲ್ ಮೀಡಿಯಾದಲ್ಲಿ ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ. ಏಕದಿನ ವಿಶ್ವಕಪ್‌ ಟೂರ್ನಿಯ ಉಳಿದ ಭಾಗವನ್ನು ಕಳೆದುಕೊಳ್ಳುತ್ತಿದ್ದೇನೆ ಎಂಬ ವಿಚಾರವನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟವಾಗುತ್ತಿದೆ. ಹೊರಬಿದ್ದರೂ ತಂಡದ ಜೊತೆ ಇರುತ್ತೇನೆ ಎಂದು ಬೆಂಬಲಿಸಿದ್ದಾರೆ.

ಭಾರತ ಆಡುವ ಪ್ರತಿ ಪಂದ್ಯದ ಪ್ರತಿ ಎಸೆತವನ್ನೂ ಆನಂದಿಸುತ್ತೇನೆ. ಅವರನ್ನು ಹುರಿದುಂಬಿಸುತ್ತೇನೆ. ನಿಮ್ಮ ಅಪಾರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳ. ನಮ್ಮ ತಂಡವು ವಿಶೇಷವಾಗಿದೆ. ಎಲ್ಲರೂ ಹೆಮ್ಮೆ ಪಡುವಂತೆ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ. ಪೀತಿಯಿಂದ ಹಾರ್ದಿಕ್ ಪಾಂಡ್ಯ ಎಂದು ಲವ್ ಎಮೋಜಿ ಹಾಕಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯ

ಅಕ್ಟೋಬರ್​ 19ರಂದು ಗುರುವಾರ ಪುಣೆಯ ಎಂಸಿಎ ಮೈದಾನದಲ್ಲಿ ನಡೆದ ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಹಾರ್ದಿಕ್ ಗಾಯಗೊಂಡಿದ್ದರು. ಲಿಟ್ಟನ್ ದಾಸ್ ಅವರ ಸ್ಟ್ರೈಟ್​ ಡ್ರೈವ್​ ಚೆಂಡನ್ನು ಕಾಲಿನಿಂದ ತಡೆಯಲು ಯತ್ನಿಸಿದ ಸಂದರ್ಭದಲ್ಲಿ ಜಾರಿ ಬಿದ್ದರು. ಕಾಲಿನ ಉಳುಕಿದ ಕಾರಣ ಆಡಲು ಸಾಧ್ಯವಾಗಿರಲಿಲ್ಲ.

ತಕ್ಷಣವೇ ಹಾರ್ದಿಕ್ ಅವರನ್ನು ಸ್ಕ್ಯಾನಿಂಗ್​ಗೆ ಕರೆದುಕೊಂಡು ಹೋಗಲಾಗಿತ್ತು. ವೈದ್ಯರು ಚಿಕಿತ್ಸೆ ನೀಡಿದ ನಂತರ ಕೆಲವು ದಿನಗಳ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು. ಹಾಗಾಗಿ ನ್ಯೂಜಿಲೆಂಡ್, ಇಂಗ್ಲೆಂಡ್, ಶ್ರೀಲಂಕಾ ಎದುರಿನ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಆದರೆ ಸೌತ್ ಆಫ್ರಿಕಾ ಪಂದ್ಯಕ್ಕೆ ಮರಳುವ ನಿರೀಕ್ಷೆ ಇದೆ ಎಂದು ವರದಿಯಾಗಿತ್ತು. ಆದರೀಗ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಟೂರ್ನಿಯಲ್ಲಿ ಹಾರ್ದಿಕ್ ಪ್ರದರ್ಶನ

ಏಕದಿನ ವಿಶ್ವಕಪ್​ ಟೂರ್ನಿಯ ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಹಾರ್ದಿಕ್, ಅದ್ಭುತ ಪ್ರದರ್ಶನ ನೀಡಿದ್ದರು. ಆರಂಭಿಕ ಪಂದ್ಯದಲ್ಲಿ ಅಜೇಯ 11 ರನ್ ಸಿಡಿಸಿದ್ದ ಪಾಂಡ್ಯಗೆ, ಉಳಿದ ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಬೌಲಿಂಗ್​ನಲ್ಲಿ 5 ವಿಕೆಟ್ ಪಡೆದಿದ್ದರು. ಬಾಂಗ್ಲಾ ವಿರುದ್ಧ ಕೇವಲ 3 ಎಸೆತಗಳನ್ನಷ್ಟೇ ಎಸೆದಿದ್ದರು.

ಪಾಂಡ್ಯ ಅನುಪಸ್ಥಿತಿಯಲ್ಲಿ ಆಯ್ಕೆಯಾದ ಪ್ರಸಿದ್ಧ್ ಕೃಷ್ಣ ಏಕದಿನ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ವೇಗದ ಬೌಲರ್ ಭಾರತದ ಪರ 17 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಮತ್ತು ಎರಡು ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 33 ವಿಕೆಟ್ ಪಡೆದಿದ್ದಾರೆ. ಇದೀಗ ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಬಳಿಕ ಈಗ 4ನೇ ವೇಗಿಯಾಗಿ ತಂಡದಲ್ಲಿದ್ದಾರೆ.

ಅಕ್ಷರ್ ಪಟೇಲ್ ಹೆಸರು ಮುಂಚೂಣಿಯಲ್ಲಿತ್ತು

ಒಂದು ವೇಳೆ ಹಾರ್ದಿಕ್ ಪಾಂಡ್ಯ ಟೂರ್ನಿಯಿಂದ ಹೊರಬಿದ್ದರೆ ಸ್ಪಿನ್ ಆಲ್​ರೌಂಡರ್​ ಅಕ್ಷರ್​ ಪಟೇಲ್​ಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ವೇಗದ ಬೌಲರ್​​ಗೆ ಮಣೆ ಹಾಕಲಾಗಿದೆ. ಟೂರ್ನಿ ಆರಂಭಕ್ಕೂ ಮುನ್ನ ಅಕ್ಷರ್​ ಪಟೇಲ್ ತಂಡದ ಭಾಗವಾಗಿದ್ದರು. ಅವರು ಏಷ್ಯಾಕಪ್​ನಲ್ಲಿ ಗಾಯಗೊಂಡಿದ್ದ ಕಾರಣ ಹೊರಬಿದ್ದರು. ಬದಲಿಗೆ ಆರ್​ ಅಶ್ವಿನ್​ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ