ಒಂದೇ ಪಂದ್ಯದಲ್ಲಿ ಎರಡು ವೇಗದ ಅರ್ಧಶತಕ; ಕೆಲವೇ ಓವರ್ಗಳ ಅಂತರದಲ್ಲಿ ಟ್ರಾವಿಡ್ ಹೆಡ್ ದಾಖಲೆ ಮುರಿದ ಅಭಿಷೇಕ್ ಶರ್ಮಾ
Mar 27, 2024 09:17 PM IST
ಕೆಲವೇ ಓವರ್ಗಳ ಅಂತರದಲ್ಲಿ ಟ್ರಾವಿಡ್ ಹೆಡ್ ದಾಖಲೆ ಮುರಿದ ಅಭಿಷೇಕ್ ಶರ್ಮಾ
- Abhishek Sharma: ಒಂದೇ ಪಂದ್ಯದಲ್ಲಿ ಎರಡು ವೇಗದ ಅರ್ಧಶತಕ ದಾಖಲಾಗಿದೆ. ಅದು ಕೂಡ ಕೆಲವೇ ಓವರ್ಗಳ ಅಂತರದಲ್ಲಿ ಟ್ರಾವಿಡ್ ಹೆಡ್ ದಾಖಲೆಯನ್ನು ಅಭಿಷೇಕ್ ಶರ್ಮಾ ಅವರು ಮುರಿದಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ತಂಡವು ಅಕ್ಷರಶಃ ರೌದ್ರಾವತಾರ ಬ್ಯಾಟಿಂಗ್ ನಡೆಸಿದೆ. ಆರಂಭಿಕ ಆಟಗಾರ ಟ್ರಾವಿಸ್ ಹೆಟ್ 18 ಎಸೆತಗಳಲ್ಲಿ ದಾಖಲೆಯ ಅರ್ಧಶತಕ ಸಿಡಿಸಿದ ನಾಲ್ಕೇ ಓವರ್ಗಳ ಅಂತರದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಎಡಗೈ ಆಟಗಾರ ಅಭಿಷೇಕ್ ಶರ್ಮಾ ಆ ದಾಖಲೆಯನ್ನು ಧೂಳೀಪಟಗೊಳಿಸಿದ್ದಾರೆ. ಕೇವಲ 16 ಎಸೆತಗಳಲ್ಲಿ ಅರ್ಧಶತಕ ಶತಕ ಪೂರೈಸಿ ಸನ್ರೈಸರ್ಸ್ ಹೈದರಾಬಾದ್ ಪರ ವಿಶೇಷ ದಾಖಲೆ ಬರೆದಿದ್ದಾರೆ.
16 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದ ಅಭಿಷೇಕ್ ಶರ್ಮಾ, ಎಸ್ಆರ್ಹೆಚ್ ಪರ ವೇಗದ ಅರ್ಧಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಇದೇ ಪಂದ್ಯದಲ್ಲಿ ಟ್ರಾವಿಸ್ ಹೆಡ್ 18 ಎಸೆತಗಳಲ್ಲಿ 50ರ ಗಡಿ ದಾಟಿ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದರು. ಟ್ರಾವಿಸ್ 5.4ನೇ ಓವರ್ನಲ್ಲಿ ಈ ರೆಕಾರ್ಡ್ ಸೃಷ್ಟಿಸಿದರೆ, ಅಭಿಷೇಕ್ 9.3ನೇ ಓವರ್ನಲ್ಲಿ ಈ ದಾಖಲೆ ಮುರಿದರು. ಅಲ್ಲದೆ, ಐಪಿಎಲ್ನಲ್ಲಿ ವೇಗದ ಹಾಫ್ ಸೆಂಚುರಿ ಸಿಡಿಸಿದ 8ನೇ ಆಟಗಾರ ಎನಿಸಿದ್ದಾರೆ.
ಹೈದರಾಬಾದ್ ಪರ ವೇಗದ ಐಪಿಎಲ್ ಅರ್ಧಶತಕ ಸಿಡಿಸಿದವರು (ಎಸೆತಗಳಲ್ಲಿ)
16 - ಅಭಿಷೇಕ್ ಶರ್ಮಾ vs ಮುಂಬೈ ಇಂಡಿಯನ್ಸ್, ಹೈದರಾಬಾದ್, 2024 (ಹೊಸ ಸೇರ್ಪಡೆ)
18 - ಟ್ರಾವಿಸ್ ಹೆಡ್ vs ಮುಂಬೈ ಇಂಡಿಯನ್ಸ್, ಹೈದರಾಬಾದ್, 2024 (ಹೊಸ ಸೇರ್ಪಡೆ)
20 - ಡೇವಿಡ್ ವಾರ್ನರ್ vs ಚೆನ್ನೈ ಸೂಪರ್ ಕಿಂಗ್ಸ್, ಹೈದರಾಬಾದ್, 2015
20 - ಡೇವಿಡ್ ವಾರ್ನರ್ vs ಕೋಲ್ಕತ್ತಾ ನೈಟ್ ರೈಡರ್ಸ್, ಹೈದರಾಬಾದ್, 2017
20 - ಮೋಸೆಸ್ ಹೆನ್ರಿಕ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಹೈದರಾಬಾದ್, 2015
21 - ಡೇವಿಡ್ ವಾರ್ನರ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಬೆಂಗಳೂರು, 2016
ಮುಂಬೈ ವಿರುದ್ಧ ವೇಗದ ಅರ್ಧಶತಕ ಸಿಡಿಸಿದವರು (ಎಸೆತಗಳು)
14 - ಪ್ಯಾಟ್ ಕಮಿನ್ಸ್ (ಕೆಕೆಆರ್) - ಪುಣೆ, 2022
16 - ಅಭಿಷೇಕ್ ಶರ್ಮಾ (ಎಸ್ಆರ್ಹೆಚ್) - ಹೈದರಾಬಾದ್, 2024 (ಹೊಸ ಸೇರ್ಪಡೆ)
18 - ರಿಷಭ್ ಪಂತ್ (ಡೆಲ್ಲಿ) - ಮುಂಬೈ WS, 2018
18 - ಟ್ರಾವಿಸ್ ಹೆಡ್ (ಎಸ್ಆರ್ಹೆಚ್) - ಹೈದರಾಬಾದ್, 2024 (ಹೊಸ ಸೇರ್ಪಡೆ)
19 - ಅಜಿಂಕ್ಯ ರಹಾನೆ (ಸಿಎಸ್ಕೆ) - ಮುಂಬೈ WS, 2023
ಅತಿ ವೇಗದ ಶತಕ (ತಂಡದ ಪರ)
ಐಪಿಎಲ್ ಇತಿಹಾಸದಲ್ಲಿ ತಂಡವೊಂದು ಕಡಿಮೆ ಓವರ್‌ಗಳಲ್ಲಿ ಶತಕ ಪೂರೈಸಿದ ನಾಲ್ಕನೇ ತಂಡ ಎಂಬ ದಾಖಲೆಗೂ ಸನ್ರೈಸರ್ಸ್ ಹೈದರಾಬಾದ್ ಪಾತ್ರವಾಗಿದೆ. ಕೇವಲ 7 ಓವರ್‌ಗಳಲ್ಲಿ ಎಸ್ಆರ್ಹೆಚ್ ತಂಡವು 100ರ ಗಡಿ ಗಡಿ ದಾಟಿದೆ. ಸಿಎಸ್ಕೆ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
6 ಓವರ್‌ಗಳಲ್ಲಿ 100+ ರನ್ : ಸಿಎಸ್ಕೆ vs ಪಿಬಿಕೆಎಸ್, ವಾಂಖಡೆ, 2014
6 ಓವರ್‌ಗಳು 100+ ರನ್ : ಕೆಕೆಆರ್ vs ಆರ್ಸಿಬಿ, ಬೆಂಗಳೂರು, 2017
6.5 ಓವರ್‌ಗಳು 100+ ರನ್ - ಸಿಎಸ್ಕೆ vs ಮುಂಬೈ, ವಾಂಖೆಡೆ, 2015
7 ಓವರ್‌ಗಳು 100+ ರನ್ - ಎಸ್ಆರ್ಹೆಚ್ vs ಮುಂಬೈ, ಹೈದರಾಬಾದ್, 2024 (ಹೊಸ ಸೇರ್ಪಡೆ)
(ಹಿಂದಿನ ಮೂರು ನಿದರ್ಶನಗಳು ರನ್-ಚೇಸ್‌ನಲ್ಲಿ ಬಂದಿದ್ದವು)
ಪವರ್ಪ್ಲೇನಲ್ಲಿ ಅತ್ಯಧಿಕ ಸ್ಕೋರ್ (ಸನ್ರೈಸರ್ಸ್ ಹೈದರಾಬಾದ್ ತಂಡ)
81/1 vs ಮುಂಬೈ, ಹೈದರಾಬಾದ್ (2024) (ಹೊಸ ಸೇರ್ಪಡೆ)
79/0 vs ಕೋಲ್ಕತ್ತಾ ನೈಟ್ ರೈಡರ್ಸ್, ಹೈದರಾಬಾದ್ (2017)
77/0 vs ಪಂಜಾಬ್ ಕಿಂಗ್ಸ್, ಹೈದರಾಬಾದ್ (2019)
77/0 vs ಡೆಲ್ಲಿ ಕ್ಯಾಪಿಟಲ್ಸ್, ದುಬೈ (2020)