NZ vs UAE: ಟೆಸ್ಟ್ಗೆ ಮಾನ್ಯತೆ ಪಡೆಯದ ಯುಎಇ ವಿರುದ್ಧ ಸೋತ ನ್ಯೂಜಿಲೆಂಡ್; ಕಿವೀಸ್ ಕಿವಿ ಹಿಂಡಿ ದಾಖಲೆ ಬರೆದ ಯುನೈಟೆಡ್ ಅರಬ್ ಎಮಿರೇಟ್ಸ್
Aug 20, 2023 09:51 AM IST
ಟೆಸ್ಟ್ಗೆ ಮಾನ್ಯತೆ ಪಡೆಯದ ಯುಎಇ ವಿರುದ್ಧ ಸೋತ ನ್ಯೂಜಿಲೆಂಡ್ ತಂಡ.
- NZ vs UAE: ನ್ಯೂಜಿಲೆಂಡ್ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡವು ಐತಿಹಾಸಿಕ ಜಯ ಸಾಧಿಸಿದೆ. 8 ವಿಕೆಟ್ಗಳ ಗೆಲುವು ದಾಖಲಿಸಿ ಸರಣಿ ಸಲಬಲಗೊಳಿಸಿದೆ.
ಕ್ರಿಕೆಟ್ನಲ್ಲಿ ಮತ್ತೊಂದು ಅಚ್ಚರಿ ಫಲಿತಾಂಶ ಹೊರಬಿದ್ದಿದೆ. ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಟೆಸ್ಟ್ ಕ್ರಿಕೆಟ್ಗೆ ಅರ್ಹತೆ ಪಡೆಯದ ಯುಎಇ (United Arab Emirates) ತಂಡವು ಸೋಲಿಸಿ ಐತಿಹಾಸಿಕ ಜಯ ಸಾಧಿಸಿದೆ. ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ಹೀನಾಯ ಸೋಲು ಕಂಡು ಕಳಪೆ ದಾಖಲೆಗೆ ಪಾತ್ರವಾಗಿದೆ. ಮತ್ತೊಂದೆಡೆ ಅಮೋಘ ಗೆಲುವು ದಾಖಲಿಸಿದ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡವು (United Arab Emirates) ಸಂಭ್ರಮದ ಅಲೆಯಲ್ಲಿ ತೇಲುತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಯುಎಇ ತಂಡವು ಹೊಸ ಅಧ್ಯಾಯ ಪುಟವನ್ನು ತೆರೆದಿದೆ.
2ನೇ ಚುಟುಕು ಪಂದ್ಯದಲ್ಲಿ ಟೆಸ್ಟ್ ಗೆದ್ದ ಯುಎಇ ತಂಡವು ಚೇಸಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ನಡೆಸಿತು. ಆದರೆ, ನಿರೀಕ್ಷಿತ ಆರಂಭ ಪಡೆಯಲಿಲ್ಲ. ನಿಧಾನಗತಿಯ ಓಪನಿಂಗ್ ಪಡೆದುಕೊಂಡ ಕಿವೀಸ್, ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿತು. ಆರಂಭಿಕರಾದ ಚಾಡ್ ಬೋವ್ಸ್ 21 ರನ್ ಗಳಿಸಿದರೆ, ಟಿಮ್ ಸೀಫರ್ಟ್ 7 ರನ್ ಗಳಿಸಿ ಔಟಾದರು. ಇವರ ನಂತರ ಕಣಕ್ಕಿಳಿದ ಮಿಚೆಲ್ ಸ್ಯಾಂಟ್ನರ್ (1), ಡೇನ್ ಕ್ಲೀವರ್ (0) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು.
ಒಂದೆಡೆ ವಿಕೆಟ್ ಪತನ, ಮತ್ತೊಂದೆಡೆ ಚಾಪ್ಮನ್ ಹೋರಾಟ
ಮೆಕಾಂಚಿಯ ಕೇವಲ 9 ರನ್, ಜೇಮ್ಸ್ ನಿಶಾಮ್ 21 ರನ್, ರಾಚಿನ್ ರವೀಂದ್ರ 2 ಹೀಗೆ ಬಂದವರೆಲ್ಲಾ ವಿಕೆಟ್ ಒಪ್ಪಿಸಿದರು. ಆದರೆ ಮಾರ್ಕ್ ಚಾಪ್ಮನ್ ಹೋರಾಟ ನಡೆಸಿದರು. ಯುಎಇ ಮಾರಕ ಬೌಲಿಂಗ್ ದಾಳಿಯ ನಡುವೆ ಅಬ್ಬರದ ಅರ್ಧಶತಕ ಸಿಡಿಸಿದರು. ಅಲ್ಲದೆ, ಅಲ್ಪ ಮೊತ್ತಕ್ಕೆ ಕುಸಿಯಬೇಕಿದ್ದ ತಂಡವನ್ನು ರಕ್ಷಿಸಿದರು. 46 ಎಸೆತಗಳಲ್ಲಿ ತಲಾ 3 ಬೌಂಡರಿ, ಸಿಕ್ಸರ್ ನೆರವಿನಿಂದ 63 ರನ್ ಗಳಿಸಿದರು. ಇದರೊಂದಿಗೆ ಕಿವೀಸ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 142 ರನ್ ಗಳಿಸಲಷ್ಟೇ ಶಕ್ತವಾಯಿತು.
ಐತಿಹಾಸಿಕ ದಾಖಲೆ ಬರೆದ ಯುಎಇ
143 ರನ್ಗಳ ಸುಲಭ ಗುರಿ ಹಿಂಬಾಲಿಸಿದ ಯುಎಇ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಓಪನರ್ ಆರ್ಯನ್ಶ್ ಶರ್ಮಾ (0) ಮೊದಲ ಓವರ್ನಲ್ಲೇ ಟಿಮ್ ಸೌಥಿ ಬೌಲಿಂಗ್ನಲ್ಲಿ ಔಟಾಗಿ ನಿರಾಸೆ ಮೂಡಿಸಿದರು. ಆದರೆ ನಾಯಕ ಮುಹಮ್ಮದ್ ವಾಸೀಂ ಅಬ್ಬರದ ಬ್ಯಾಟಿಂಗ್ ನಡೆಸಿದರು. ಅವರಿಗೆ ವೃತ್ಯ ಅರವಿಂದ್ (25 ರನ್) ಸಖತ್ ಸಾಥ್ ನೀಡಿದರು. ಕಿವೀಸ್ ಬೌಲರ್ಗಳಿಗೆ ಬೆಂಡೆತ್ತಿದ ವಾಸೀಂ 29 ಎಸೆತಗಳಲ್ಲಿ 4 ಬೌಂಡರಿ, 3 ಭರ್ಜರಿ ಸಿಕ್ಸ್ಗಳ ಸಹಿತ 55 ರನ್ ಸಿಡಿಸಿದರು.
ವಾಸೀಂ ಔಟಾಗುವಾಗ ಪಂದ್ಯದ ಸಂಪೂರ್ಣ ಹಿಡಿತ ಸಾಧಿಸುವಂತೆ ಮಾಡಿದರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಸಿಫ್ ಖಾನ್ ಕೂಡ ಆರ್ಭಟಿಸಿದರು. 29 ಎಸೆತಗಳಲ್ಲಿ ಅಜೇಯ 48 ರನ್ ಚಚ್ಚಿದರೆ, ಬಾಸಿಲ್ ಹಮೀದ್ ಅಜೇಯ 12 ರನ್ ಕಲೆ ಹಾಕುವ ಮೂಲಕ ತಂಡಕ್ಕೆ 15.4 ಓವರ್ಗಳಲ್ಲಿ ಗೆಲುವು ತಂದುಕೊಟ್ಟರು. ಕಿವೀಸ್ ಬೌಲರ್ಗಳ ಕಿವಿ ಹಿಂಡಿದ ಯುಎಇ 8 ವಿಕೆಟ್ಗಳ ಅದ್ಭುತ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ನ್ಯೂಜಿಲೆಂಡ್ ಇದೇ ಮೊದಲ ಬಾರಿಗೆ ಯುಎಇ ಜಯ ಸಾಧಿಸಿ ಚರಿತ್ರೆ ಬರೆದಿದೆ. ಸೋತ ಕಿವೀಸ್ ಭಾರಿ ಮುಖಭಂಗಕ್ಕೆ ಒಳಗಾಗಿದೆ. ಸದ್ಯ 3 ಪಂದ್ಯಗಳ ಟಿ20 ಸರಣಿ 1-1 ಸಮಬಲಗೊಂಡಿದೆ. 3ನೇ ಪಂದ್ಯವು ಇಂದು ನಡೆಯಲಿದೆ.