ಟಿ20 ವಿಶ್ವಕಪ್ ಉದ್ಘಾಟನಾ ಪಂದ್ಯ; ಕೆನಡಾ ವಿರುದ್ಧ ಟಾಸ್ ಗೆದ್ದ ಆತಿಥೇಯ ಯುಎಸ್‌ಎ ಬ್ಯಾಟಿಂಗ್
Jun 02, 2024 06:02 AM IST
ಕೆನಡಾ ವಿರುದ್ಧ ಟಾಸ್ ಗೆದ್ದ ಆತಿಥೇಯ ಯುಎಸ್‌ಎ ಬ್ಯಾಟಿಂಗ್
- ಯುಎಸ್‌ಎ ಹಾಗೂ ಕೆನಡಾ ತಂಡಗಳು ಟಿ20 ವಿಶ್ವಕಪ್ 2024ರ ಉದ್ಘಾಟನಾ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿವೆ. ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ವಿಶ್ವಕಪ್ ಪಂದ್ಯಗಳು ನಡೆಯುತ್ತಿದ್ದು, ಕುತೂಹಲ ಮೂಡಿಸಿದೆ.
ಐಸಿಸಿ ಟಿ20 ವಿಶ್ವಕಪ್ 2024ರ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಯುಎಸ್‌ಎ ಹಾಗೂ ಕೆನಡಾ (United States vs Canada) ತಂಡಗಳು ಮುಖಾಮುಖಿಯಾಗುತ್ತಿವೆ. ಭಾರತೀಯ ಕಾಲಮಾನದ ಪ್ರಕಾರ ಜೂನ್ 2ರ ಶನಿವಾರ ಟಿ20 ವಿಶ್ವಕಪ್‌ಗೆ ಚಾಲನೆ ಸಿಕ್ಕಿದೆ. ಅಮೆರಿಕದ ಡಲ್ಲಾಸ್‌ನಲ್ಲಿರುವ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ಯುಎಸ್‌ಎ ತಂಡದ ನಾಯಕ ಮೊನಾಂಕ್ ಪಟೇಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಬಾಂಗ್ಲಾದೇಶ ವಿರುದ್ಧ ಇತ್ತೀಚೆಗೆ ನಡೆದ ಸರಣಿಯನ್ನು ರೋಚಕವಾಗಿ ವಶಪಡಿಸಿಕೊಂಡಿದ್ದ ಯುಎಸ್‌ಎ, ಸಹ-ಆತಿಥೇಯ ದೇಶವಾಗಿ ಜಾಗತಿಕ ಟೂರ್ನಿಗೆ ಅರ್ಹತೆ ಪಡೆಯಿತು. ಅತ್ತ ಕೆನಡಾ ತಂಡವು ಅಮೆರಿಕ ಸುತ್ತಿನ ಅರ್ಹತಾ ಪಂದ್ಯಾವಳಿ ಗೆದ್ದು ವಿಶ್ವಸಮರದಲ್ಲಿ ಕಣಕ್ಕಿಳಿಯುತ್ತಿದೆ.
ಇಂದು ಪಂದ್ಯ ನಡೆಯುತ್ತಿರುವ ಡಲ್ಲಾಸ್ ಪಿಚ್ ಬ್ಯಾಟರ್‌ಗಳಿಗೆ ನೆರವಾಗಲಿದೆ. ಹೊನಲು ಬೆಳಕಿನಲ್ಲಿ ಚೆಂಡು ಸ್ವಲ್ಪ ಮಟ್ಟಿಗೆ ತಿರುಗುತ್ತದೆ. ಇದೇ ಮೈದಾನದಲ್ಲಿ ನಡೆದ ಒಂದು ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕೆನಡಾ 7 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ನೇಪಾಳ 120ಕ್ಕೆ ಆಲೌಟ್ ಆಗಿತ್ತು. ತವರು ಮೈದಾನದಲ್ಲಿ ಯುಎಸ್‌ಯ ಹಲವು ಪಂದ್ಯಗಳನ್ನಾಡಿದ ಅನುಭವ ಹೊಂದಿದೆ.
ಕೆನಡಾ ಪ್ಲೇಯಿಂಗ್ ಇಲೆವೆನ್
ಆರನ್ ಜಾನ್ಸನ್, ನವನೀತ್ ಧಲಿವಾಲ್, ಪರ್ಗತ್ ಸಿಂಗ್, ನಿಕೋಲಸ್ ಕಿರ್ಟನ್, ಶ್ರೇಯಸ್ ಮೊವ್ವಾ (ವಿಕೆಟ್ ಕೀಪರ್), ದಿಲ್‌ಪ್ರೀತ್ ಸಿಂಗ್, ಸಾದ್ ಬಿನ್ ಜಾಫರ್ (ನಾಯಕ), ನಿಖಿಲ್ ದತ್ತಾ, ದಿಲ್ಲನ್ ಹೇಲಿಗರ್, ಕಲೀಂ ಸನಾ, ಜೆರೆಮಿ ಗಾರ್ಡನ್.
ಯುನೈಟೆಡ್ ಸ್ಟೇಟ್ಸ್ ಪ್ಲೇಯಿಂಗ್ ಇಲೆವೆನ್
ಸ್ಟೀವನ್ ಟೇಲರ್, ಮೊನಾಂಕ್ ಪಟೇಲ್ (ನಾಯಕ ಮತ್ತು ವಿಕೆಟ್ ಕೀಪರ್), ಆಂಡ್ರೀಸ್ ಗೌಸ್, ಆರನ್ ಜೋನ್ಸ್, ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್, ಜಸ್ದೀಪ್ ಸಿಂಗ್, ಅಲಿ ಖಾನ್, ಸೌರಭ್ ನೇತ್ರವಲ್ಕರ್.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಸಪ್ತಸಾಗರದಾಚೆ ಚುಟುಕು ವಿಶ್ವಸಮರಕ್ಕೆ ಚಾಲನೆ; ಟಿ20 ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಯುಎಸ್‌ಎ vs ಕೆನಡಾ ಹಣಾಹಣಿ