logo
ಕನ್ನಡ ಸುದ್ದಿ  /  ಕ್ರಿಕೆಟ್  /  ಈ ಹಂತದಲ್ಲಿ ವಿರಾಟ್‌ಗೆ ಹೆಚ್ಚು ಅಭ್ಯಾಸದ ಅಗತ್ಯವಿಲ್ಲ; ಕೊಹ್ಲಿ ನಿಲುವು ಸಮರ್ಥಿಸಿದ ಕೋಚ್

ಈ ಹಂತದಲ್ಲಿ ವಿರಾಟ್‌ಗೆ ಹೆಚ್ಚು ಅಭ್ಯಾಸದ ಅಗತ್ಯವಿಲ್ಲ; ಕೊಹ್ಲಿ ನಿಲುವು ಸಮರ್ಥಿಸಿದ ಕೋಚ್

Jayaraj HT Kannada

Dec 27, 2023 03:57 PM IST

google News

ವಿರಾಟ್‌ ಕೊಹ್ಲಿ

    • "ಅವರ ವೃತ್ತಿಜೀವನದ ಹಂತವನ್ನು ಗಮನಿಸಿದರ, ವಿರಾಟ್ ಕೊಹ್ಲಿ ಅವರಿಗೆ ಹೆಚ್ಚಿನ ಅಭ್ಯಾಸದ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಮಂಗಳವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ಮೊದಲ ದಿನದಾಟದ ಅಂತ್ಯವಾದ ಬಳಿಕ ರಾಥೋಡ್‌ ಹೇಳಿದ್ದಾರೆ.
ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ (PTI)

ಕಳೆದ ತಿಂಗಳು ಅಂತ್ಯಗೊಂಡ 2023ರ ಏಕದಿನ ವಿಶ್ವಕಪ್ ಫೈನಲ್‌ ಬಳಿಕ, ಭಾರತದ ಇಬ್ಬರು ಅನುಭವಿ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೈದಾನಕ್ಕಿಳಿದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ್‌ ಓವರ್‌ಗಳ ಸರಣಿ ವೇಳೆ ವಿಶ್ರಾಂತಿ ಪಡೆದಿದ್ದ ಅವರು, ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಕಾಣಿಸಿಕೊಂಡಿದ್ದಾರೆ.

ಮೊದಲ ಟೆಸ್ಟ್‌ನ ಮೊದಲ ಆರಂಭಿಕ ದಿನದಂದು ಭಾರತ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಕೆಎಲ್‌ ರಾಹುಲ್‌ ಹೊರತುಪಡಿಸಿದರೆ, ಬೇರೆ ಯಾರಿಂದಲೂ ಉತ್ತಮ ಪ್ರದರ್ಶನ ಹೊರಬರಲಿಲ್ಲ. ಭಾರತ ತಂಡದ ನಾಯಕ 5 ರನ್‌ ಗಳಿಸಿ ಔಟಾದರೆ, ಜವಾಬ್ದಾರಿಯುತವಾಗಿ ಬ್ಯಾಟ್‌ ಬೀಸಿದ ವಿರಾಟ್‌ ಕೊಹ್ಲಿ ಅಂತಿಮವಾಗಿ ಕಗಿಸೊ ರಬಾಡ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. 38 ರನ್‌ ಗಳಿಸಿ ಔಟಾಗಿ ನಿರಾಶೆ ಮೂಡಿಸಿದರು.

ಭಾರತದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರು, ಭಾರತ ತಂಡದ ಮಾಜಿ ನಾಯಕನಿಗೆ ಹೆಚ್ಚಿನ ತರಬೇತಿಯ ಅಗತ್ಯವಿಲ್ಲ ಎಂದು ಒತ್ತಿ ಹೇಳಿದರು. ವಿರಾಟ್‌ ಅವರ ವೃತ್ತಿಜೀವನದ ಹಂತವನ್ನು ಗಮನಿಸಿದರೆ, ಹೆಚ್ಚುವರಿ ಕೋಚಿಂಗ್‌ ಬೇಕಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ | ಕೆಣಕಿದ ಜಾನ್ಸೆನ್​ಗೆ ನಗುತ್ತಾ ತಿರುಗೇಟು ಕೊಟ್ಟ ರಾಹುಲ್; ಕೊಹ್ಲಿ ಇದ್ದಿದ್ರೆ ಕಥೆಯೇ ಬೇರೆ ಆಗ್ತಿತ್ತು ಎಂದ ಫ್ಯಾನ್ಸ್

ಮೊದಲ ಟೆಸ್ಟ್‌ ಪಂದ್ಯಕ್ಕೂ ಮುನ್ನ ಪ್ರಿಟೋರಿಯಾದ ಟಕ್ಸ್ ಓವಲ್‌ನಲ್ಲಿ ನಡೆದ ಮೂರು ದಿನಗಳ (ತಂಡದೊಳಗಿನ ಆಟಗಾರರ) ಅಭ್ಯಾಸ ಪಂದ್ಯದಿಂದ ಕೊಹ್ಲಿ ಹೊರಗುಳಿದಿದ್ದರು. ಯುಕೆಯಲ್ಲಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುವ ಸಲುವಾಗಿ ಅವರು ನಾಲ್ಕು ದಿನಗಳ ವಿರಾಮ ಪಡೆದಿದ್ದರು.

"ಅವರ ವೃತ್ತಿಜೀವನದ ಹಂತವನ್ನು ಗಮನಿಸಿದರ, ವಿರಾಟ್ ಕೊಹ್ಲಿ ಅವರಿಗೆ ಹೆಚ್ಚಿನ ಅಭ್ಯಾಸದ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಮಂಗಳವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ಮೊದಲ ದಿನದಾಟದ ಅಂತ್ಯವಾದ ಬಳಿಕ ರಾಥೋಡ್ ಹೇಳಿದ್ದಾರೆ.

"ಅವರು ಹೆಚ್ಚು ಬ್ಯಾಟಿಂಗ್ ಮಾಡುತ್ತಾರೆ ಮತ್ತು ಸಾಕಷ್ಟು ತರಬೇತಿ ಪಡೆಯುತ್ತಾರೆ. ಹೀಗಾಗಿ ಅವರು ಸ್ವಲ್ಪ ದಿನ ಕಡಿಮೆ ಪ್ರಮಾಣದ ಅಭ್ಯಾಸ ಮಾಡಿದರೆ ಪರವಾಗಿಲ್ಲ. ಅವರು ಎಷ್ಟು ಚೆನ್ನಾಗಿ ಆಡುತ್ತಿದ್ದರು ಎಂಬುದನ್ನು ನಾವು ನೋಡಿದ್ದೇವೆ. ಅವರು ಆರು ತಿಂಗಳ ಕಾಲ ಕೆಂಪು ಬಾಲ್ ಕ್ರಿಕೆಟ್‌ನಿಂದ ದೂರವಿದ್ದಂತೆ ತೋರುತ್ತಿಲ್ಲ. ಇದು ನಿಜಕ್ಕೂ ಉತ್ತಮ ಸಂಕೇತ," ಎಂದು ಭಾರತದ ಮಾಜಿ ಓಪನರ್ ಹೇಳಿದ್ದಾರೆ.

ಇದನ್ನೂ ಓದಿ | ಸೆಂಚುರಿಯನ್‌ನಲ್ಲಿ ಸೆಂಚುರಿ ಸಾಧನೆ; ದಕ್ಷಿಣ ಆಫ್ರಿಕಾ ವಿರುದ್ಧ ಕೆಎಲ್ ರಾಹುಲ್ ಮತ್ತೊಂದು ಶತಕ ದಾಖಲೆ

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಪ್ರವಾಸಿ ಭಾರತ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 67.4 ಓವರ್‌ಗಳಲ್ಲಿ 245 ರನ್‌ ಗಳಿಸಿ ಆಲೌಟ್‌ ಆಗಿದೆ. ಭಾರತದ ಪರ ಕೆಎಲ್‌ ರಾಹುಲ್ 137 ಎಸೆತಗಳಲ್ಲಿ 101 ರನ್‌ ಗಳಿಸಿ ತಂಡದ ಪರ ಅಧಿಕ ರನ್‌ ಗಳಿಸಿದ ಆಟಗಾರನಾದರು. ಈ ಶತಕದೊಂದಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 8ನೇ ಸೆಂಚುರಿ ಗಳಿಸಿದರು.

ಮೊದಲ ದಿನದಾಟದಲ್ಲಿ ಆರಂಭಿಕ‌ ವೈಫಲ್ಯದಿಂದ ತತ್ತರಿಸಿದ್ದ ಟೀಮ್ ಇಂಡಿಯಾಗೆ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಕೆಲಕಾಲ ಆಸರೆಯಾದರು. ನಾಲ್ಕನೇ ವಿಕೆಟ್‌ಗೆ 68 ರನ್ ಕಲೆ ಹಾಕಿದರು. ಆದರೆ, ಊಟದ ವಿರಾಮದ ನಂತರ‌ ಕ್ರೀಸ್​​​ಗೆ ಇವರು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಕೊಹ್ಲಿ 38 ರನ್ ಗಳಿಸಿದರೆ, ಅಯ್ಯರ್ 31 ರನ್ ಗಳಿಸಿ ಔಟಾದರು.

ವಿಡಿಯೋ ನೋಡಿ | ರಕ್ಷಿತಾರಣ್ಯದಿಂದ ತಪ್ಪಿಸಿಕೊಂಡು ಗ್ರಾಮಕ್ಕೆ ಬಂದು ಗೋಡೆಯ ಮೇಲೆ ಬಿಸಿಲು ಕಾಯಿಸಿದ ಹುಲಿರಾಯ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ