logo
ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್​ಗೆ ಭಾರತ ತಂಡದೊಂದಿಗೆ ಪ್ರಯಾಣಿಸದ ವಿರಾಟ್ ಕೊಹ್ಲಿ; ಆತಂಕಕ್ಕೆ ಒಳಗಾದ ಅಭಿಮಾನಿಗಳು

ಟಿ20 ವಿಶ್ವಕಪ್​ಗೆ ಭಾರತ ತಂಡದೊಂದಿಗೆ ಪ್ರಯಾಣಿಸದ ವಿರಾಟ್ ಕೊಹ್ಲಿ; ಆತಂಕಕ್ಕೆ ಒಳಗಾದ ಅಭಿಮಾನಿಗಳು

Prasanna Kumar P N HT Kannada

May 26, 2024 02:30 PM IST

google News

ಟಿ20 ವಿಶ್ವಕಪ್​ಗೆ ಭಾರತ ತಂಡದೊಂದಿಗೆ ಪ್ರಯಾಣಿಸದ ವಿರಾಟ್ ಕೊಹ್ಲಿ; ಆತಂಕಕ್ಕೆ ಒಳಗಾದ ಅಭಿಮಾನಿಗಳು

    • Virat Kohli : ರೋಹಿತ್​ ಶರ್ಮಾ ನೇತೃತ್ವದ ಟೀಮ್ ಇಂಡಿಯಾದೊಂದಿಗೆ ವಿರಾಟ್ ಕೊಹ್ಲಿ ಅವರು ಯುಎಸ್​ಎಗೆ ಪ್ರಯಾಣ ಬೆಳೆಸಿಲ್ಲ. ಹೀಗಾಗಿ, ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ಟಿ20 ವಿಶ್ವಕಪ್​ಗೆ ಭಾರತ ತಂಡದೊಂದಿಗೆ ಪ್ರಯಾಣಿಸದ ವಿರಾಟ್ ಕೊಹ್ಲಿ; ಆತಂಕಕ್ಕೆ ಒಳಗಾದ ಅಭಿಮಾನಿಗಳು
ಟಿ20 ವಿಶ್ವಕಪ್​ಗೆ ಭಾರತ ತಂಡದೊಂದಿಗೆ ಪ್ರಯಾಣಿಸದ ವಿರಾಟ್ ಕೊಹ್ಲಿ; ಆತಂಕಕ್ಕೆ ಒಳಗಾದ ಅಭಿಮಾನಿಗಳು

Virat Kohli: ರೋಹಿತ್​ ಶರ್ಮಾ (Rohit Sharma) ನೇತೃತ್ವದ ಟೀಮ್ ಇಂಡಿಯಾದ (Team India) ಆಟಗಾರರು ಬಹುನಿರೀಕ್ಷಿತ ಟಿ20 ವಿಶ್ವಕಪ್ ಟೂರ್ನಿಗೆ (T20 World Cup 2024) ಅಮೆರಿಕ ಪ್ರಯಾಣಿಸಿದ್ದಾರೆ. ಆದರೆ ವಿರಾಟ್ ಕೊಹ್ಲಿ ತನ್ನ ತಂಡದೊಂದಿಗೆ ಪ್ರಯಾಣಿಸದೇ ಇರುವುದು ಆತಂಕ ಸೃಷ್ಟಿಸಿದೆ. ಬ್ಯಾಟಿಂಗ್ ಸೂಪರ್ ಸ್ಟಾರ್​ ಏಕೆ ವಿಮಾನ ಹತ್ತಲಿಲ್ಲ? ವಿಶ್ವಕಪ್ ಆಡುವುದಿಲ್ಲವೇ ಎಂದು ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಅಭಿಮಾನಿಗಳು ಯಾವುದೇ ಆತಂಕಪಡುವಂತಿಲ್ಲ.

ಕೋಹ್ಲಿ, ರೋಹಿತ್ ಮತ್ತು ಇತರ ಆಟಗಾರರೊಂದಿಗೆ ಮೇ 25ರ ಶನಿವಾರ ಮುಂಬೈನಿಂದ ಹೊರಡುವ ನಿರೀಕ್ಷೆ ಇತ್ತು. ಮೊದಲು ದುಬೈಗೆ ಹೋಗಿ ನಂತರ ಯುಎಸ್‌ಗೆ ತೆರಳಬೇಕಿತ್ತು. ಆದರೆ ಪ್ರಯಾಣಿಸಲು ಕೆಲವು ದಾಖಲೆಗಳು ಬಾಕಿ ಉಳಿದಿರುವ ಕಾರಣದಿಂದ ಭಾರತ ತಂಡದೊಂದಿಗೆ ಯುಎಸ್‌ಗೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಆಟಗಾರರು ಶನಿವಾರ ಮುಂಬೈಗೆ ಆಗಮಿಸಿ ಕೋಚಿಂಗ್ ಸಿಬ್ಬಂದಿ ಜೊತೆಗೆ ಯುಎಸ್‌ಗೆ ತೆರಳಿದರು.

ದಾಖಲೆಗಳನ್ನು ಪೂರ್ಣಗೊಳಿಸಿದ ನಂತರ ಕೊಹ್ಲಿ ಮುಂದಿನ ನಾಲ್ಕೈದು ದಿನಗಳಲ್ಲಿ ನಿರ್ಗಮಿಸುತ್ತಾರೆ ಎಂದು ಹೇಳಲಾಗುತ್ತಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಸಹಾಯಕ ಸಿಬ್ಬಂದಿಯಲ್ಲದೆ ರೋಹಿತ್, ಬುಮ್ರಾ, ಸೂರ್ಯಕುಮಾರ್ ಯಾದವ್, ಅಕ್ಷರ್ ಪಟೇಲ್, ಶುಭ್ಮನ್ ಗಿಲ್, ರಿಷಭ್, ಪಂತ್, ರವೀಂದ್ರ ಜಡೇಜಾ, ಶಿವಂ ದುಬೆ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆರ್ಷದೀಪ್ ಸೇರಿದಂತೆ ಬಹುತೇಕ ಆಟಗಾರರು ಮಿನಿ ಸಮರಕ್ಕೆ ಪ್ರಯಾಣ ಬೆಳೆಸಿದರು.

ಮೇ 30ರಂದು ಅಮೆರಿಕ ಪ್ರಯಾಣ

ವರದಿಗಳ ಪ್ರಕಾರ, ಕೊಹ್ಲಿ ಮೇ 30 ರಂದು ಯುಎಸ್ಎಗೆ ಹಾರಲಿದ್ದಾರೆ. ಹೀಗಾಗಿ ಜೂನ್ 1ರ ಶನಿವಾರದಂದು ಬಾಂಗ್ಲಾದೇಶ ವಿರುದ್ಧದ ಏಕೈಕ ಅಭ್ಯಾಸ ಪಂದ್ಯದಲ್ಲಿ ತಂಡವು ಕೊಹ್ಲಿ ಸೇವೆ ಕಳೆದುಕೊಳ್ಳುತ್ತದೆ. ಅಚ್ಚರಿ ಎಂದರೆ ಶನಿವಾರ ದುಬೈಗೆ ಹಾರಿದ ಕ್ರಿಕೆಟಿಗರಲ್ಲಿ ಕೊಹ್ಲಿ ಜೊತೆಗೆ ಉಪನಾಯಕ ಹಾರ್ದಿಕ್ ಪಾಂಡ್ಯ ಕೂಡ ಇರಲಿಲ್ಲ. ಪಾಂಡ್ಯ ಅವರ ಐಪಿಎಲ್ ಅಭಿಯಾನವು ಮೇ 17 ರಂದು ಕೊನೆಗೊಂಡಿತು. ಹಾಗಾಗಿ ಪ್ರಯಾಣಿಸಬಹುದೆಂದು ನಿರೀಕ್ಷಿಸಲಾಗಿತ್ತು.

ಲಂಡನ್​ನಲ್ಲಿ ಉಳಿದಿರುವ ಹಾರ್ದಿಕ್ ಪಾಂಡ್ಯ

ಪಾಂಡ್ಯ ಪ್ರಸ್ತುತ ಲಂಡನ್​ನಲ್ಲೇ ಉಳಿದಿದ್ದಾರೆ. ಹಾಗಾಗಿ, ನೇರವಾಗಿ ಯುಎಸ್‌ನಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಗಳು ಹೇಳುತ್ತವೆ. ಭಾರತವು ತನ್ನ T20 ವಿಶ್ವಕಪ್ ಅಭಿಯಾನವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ನಸ್ಸೌ ಕೌಂಟಿಯಲ್ಲಿ ಪ್ರಾರಂಭಿಸಲಿದೆ. ಬುಧವಾರ ನಡೆದ ಎಲಿಮಿನೇಟರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿದರೆ, ಮೇ 24ರ ಶುಕ್ರವಾರ ರಾತ್ರಿ ನಡೆದ ಕ್ವಾಲಿಫೈಯರ್ 2 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಅನುಭವಿಸಿತು.

ಹೈದರಾಬಾದ್ ತಂಡವು ಮೇ 26ರ ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಹೀಗಾಗಿ, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಮತ್ತು ಯುಜ್ವೇಂದ್ರ ಚಹಲ್ ಆಟಗಾರರು ಇನ್ನೂ ತಂಡವನ್ನು ಸೇರಿಕೊಂಡಿಲ್ಲ. ಫೈನಲ್ ಮುಗಿದ ನಂತರ ರಿಂಕು ಸಿಂಗ್​ ವಿಮಾನ ಹತ್ತಲಿದ್ದಾರೆ. ಇವರು ಕೊಹ್ಲಿ ಜೊತೆಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ.

ಭಾರತ ತಂಡದ ವೇಳಾಪಟ್ಟಿ

ಟಿ20 ವಿಶ್ವಕಪ್ ಜೂನ್ 1 ರಿಂದ ಜೂನ್ 29 ರವರೆಗೆ ಯುಎಸ್​ಎ ಮತ್ತು ವೆಸ್ಟ್ ಇಂಡೀಸ್‌ ಜಂಟಿ ಆತಿಥ್ಯ ವಹಿಸಲಿದೆ. ಜೂನ್ 5ರಂದು ಐರ್ಲೆಂಡ್ ವಿರುದ್ಧದ ನಂತರ ಭಾರತ ತಂಡವು ಜೂನ್ 9ರಂದು ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಬಳಿಕ ಸಹ-ಆತಿಥೇಯ ಯುಎಸ್​ಎ (ಜೂನ್ 12), ಕೆನಡಾ (ಜೂನ್ 15) ವಿರುದ್ಧ ಪಂದ್ಯಗಳನ್ನು ಎದುರಿಸಲಿದೆ. ಭಾರತವು 2007 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಉದ್ಘಾಟನಾ ಆವೃತ್ತಿಯನ್ನು ಗೆದ್ದಿತ್ತು ಮತ್ತು 2022 ರಲ್ಲಿ ಕೊನೆಯ ಆವೃತ್ತಿಯಲ್ಲಿ ಸೆಮಿಫೈನಲಿಸ್ಟ್‌ ಆಗಿತ್ತು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ