logo
ಕನ್ನಡ ಸುದ್ದಿ  /  ಕ್ರಿಕೆಟ್  /  Watch: ಏನ್ ಮಾರಾಯ ಹಿಂಗ್ ಹೊಡ್ದೆ; ಶುಭ್ಮನ್ ಗಿಲ್ ಸ್ಟನ್ನಿಂಗ್ ಶಾಟ್ ನೋಡಿ ವಿರಾಟ್ ಕೊಹ್ಲಿ ದಿಗ್ಭ್ರಮೆ

Watch: ಏನ್ ಮಾರಾಯ ಹಿಂಗ್ ಹೊಡ್ದೆ; ಶುಭ್ಮನ್ ಗಿಲ್ ಸ್ಟನ್ನಿಂಗ್ ಶಾಟ್ ನೋಡಿ ವಿರಾಟ್ ಕೊಹ್ಲಿ ದಿಗ್ಭ್ರಮೆ

Prasanna Kumar P N HT Kannada

Nov 03, 2023 10:47 AM IST

google News

ಶುಭ್ಮನ್ ಗಿಲ್ ಸ್ಟನ್ನಿಂಗ್ ಶಾಟ್​ಗೆ ದಿಗ್ಭ್ರಮೆಗೊಂಡ ವಿರಾಟ್ ಕೊಹ್ಲಿ.

    • Virat Kohli-Shubman Gill: ಶ್ರೀಲಂಕಾ ವಿರುದ್ದ ಭರ್ಜರಿ ಬ್ಯಾಟಿಂಗ್​ ನಡೆಸುತ್ತಿದ್ದ ಶುಭ್ಮನ್ ಗಿಲ್, ಅದ್ಭುತ ಶಾಟ್​ ಕಂಡು ವಿರಾಟ್​ ಕೊಹ್ಲಿ ದಂಗಾಗಿ ಹೋಗಿದ್ದಾರೆ. ಗಿಲ್​​ರ ಪವರ್​​​ ಪ್ಯಾಕ್​ ಹಿಟ್ಟಿಂಗ್ ಕಂಡು ಕೊಹ್ಲಿ, ಒಂದು ಕ್ಷಣ ದಿಗ್ಭ್ರಮೆಗೊಂಡರು.
ಶುಭ್ಮನ್ ಗಿಲ್ ಸ್ಟನ್ನಿಂಗ್ ಶಾಟ್​ಗೆ ದಿಗ್ಭ್ರಮೆಗೊಂಡ ವಿರಾಟ್ ಕೊಹ್ಲಿ.
ಶುಭ್ಮನ್ ಗಿಲ್ ಸ್ಟನ್ನಿಂಗ್ ಶಾಟ್​ಗೆ ದಿಗ್ಭ್ರಮೆಗೊಂಡ ವಿರಾಟ್ ಕೊಹ್ಲಿ.

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ (ICC ODI World Cup 2023) 33ನೇ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಗೆಲುವಿನ ನಾಗಾಲೋಟ ಮುಂದುವರೆಸಿದೆ. ಸತತ 7ನೇ ಗೆಲುವಿನೊಂದಿಗೆ ಸೆಮಿಫೈನಲ್​ಗೆ ಪ್ರವೇಶಿಸಿದೆ. ಶ್ರೀಲಂಕಾವನ್ನು 55 ರನ್​ಗಳಿಗೆ ದಹನಗೊಳಿಸಿ 302 ರನ್​ಗಳ ದೊಡ್ಡ ಅಂತರದ ಗೆಲುವು ಸಾಧಿಸಿದ ಭಾರತ (India vs Sri Lanka), ಅಂಕಪಟ್ಟಿಯಲ್ಲೂ ಅಗ್ರಸ್ಥಾನಕ್ಕೆ ಏರಿದೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಯುವ ಆರಂಭಿಕ ಆಟಗಾರ ಶುಭ್ಮನ್ ಗಿಲ್ (Shubman Gill) ಅಬ್ಬರಿಸಿದರು. ಗಿಲ್​ ಜೊತೆಗೆ ವಿರಾಟ್ ಕೊಹ್ಲಿ (Virat Kohli) ಕೂಡ ಉತ್ತಮ ಇನ್ನಿಂಗ್ಸ್​ ಕಟ್ಟಿದರು. ಈ ಜೋಡಿ 2ನೇ ವಿಕೆಟ್​ಗೆ 189 ರನ್​ಗಳ ಜೊತೆಯಾಟವಾಡಿತು. ಅಲ್ಲದೆ, ತಲಾ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಸ್ಟನ್ನಿಂಗ್​ ಶಾಟ್​ಗೆ ಕೊಹ್ಲಿ ದಿಗ್ಭ್ರಮೆ

ಭರ್ಜರಿ ಬ್ಯಾಟಿಂಗ್​ ನಡೆಸುತ್ತಿದ್ದ ಗಿಲ್, ಅದ್ಭುತ ಶಾಟ್​ ಮೇಕಿಂಗ್​ನಿಂದ ವಿರಾಟ್​ ಕೊಹ್ಲಿಯನ್ನು ಬೆರಗುಗೊಳಿಸಿದ್ದಾರೆ. ಗಿಲ್​​ರ ಪವರ್​​​ ಪ್ಯಾಕ್​ ಹಿಟ್ಟಿಂಗ್ ಕಂಡು ಕೊಹ್ಲಿ ಒಂದು ಕ್ಷಣ ದಂಗಾಗಿ ಹೋದರು. ಸತತ ಬೌಂಡರಿಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಗಿಲ್, ಅತ್ಯುತ್ತಮ ಹೊಡೆತಗಳನ್ನು ಹೊಡೆದರು.

ಆದರೆ, ಆರ್ಭಟಿಸುತ್ತಿದ್ದ ಗಿಲ್​, 16ನೇ ಓವರ್​​​​ನಲ್ಲಿ ವಿಸ್ಮಯಕಾರಿ ಶಾಟ್​ ಹೊಡೆದರು. ಈ ಓವರ್​​​ನ ಮೊದಲ ಎಸೆತದಲ್ಲಿ ಅದಾಗಲೇ ಕೊಹ್ಲಿ ಬೌಂಡರಿ ಸಿಡಿಸಿದ್ದರು. ಆ ಬಳಿಕ ಸಿಂಗಲ್ ಪಡೆದ ವಿರಾಟ್, ಗಿಲ್​​ಗೆ ಸ್ಟ್ರೈಕ್​​ ಅನ್ನು ಹಸ್ತಾಂತರಿಸಿದರು. ಆ ವೇಳೆ ಗಿಲ್​ ಹೊಡೆದ ಶಾಟ್​​ ಕೊಹ್ಲಿಯನ್ನು ವಿಸ್ಮಯಗೊಳಿಸಿತು. ಶಾಟ್ ನೋಡಿ ಅಚ್ಚರಿಯಾದರು.

ಕೊಹ್ಲಿ ಪ್ರತಿಕ್ರಿಯೆ ಹೇಗಿತ್ತು?

ಗಿಲ್​ ಸಿಡಿಸಿದ ಸ್ಟ್ರೋಕ್‌ಪ್ಲೇಗೆ ಕೊಹ್ಲಿ ಜೊತೆಗೆ ಪ್ರೇಕ್ಷಕರು ಸಹ ಮಂತ್ರಮುಗ್ಧರಾದರು. ದಿಲ್ಶನ್ ಮಧುಶಂಕ ಅವರನ್ನು ಕವರ್‌ ಮೂಲಕ ಬೌಂಡರಿ ಬಾರಿಸಿದ್ದು ನೋಡಿದ ಕೊಹ್ಲಿ ದಿಗ್ಭ್ರಮೆಗೊಂಡರು. ನಾವು ನೀವು ಮಾತನಾಡಿಕೊಳ್ಳುವ ಭಾಷೆಯಲ್ಲಿ ಹೇಳುವುದಾದರೆ, ಯಪ್ಪಾ, ಇದೇನ್ ಮಾರಾಯ ಹಿಂಗ್ ಹೊಡೆದೆ ಎನ್ನುವಂತೆ ಇತ್ತು.

ಕೊಹ್ಲಿ ಅಚ್ಚರಿ ವ್ಯಕ್ತಪಡಿಸಿ ಚೆಂಡನ್ನೇ ದಿಟ್ಟಿಸಿ ನೋಡಿದರು. 2019ರಲ್ಲಿ ಕೊಹ್ಲಿ ಇದೇ ರೀತಿಯ ಪ್ರತಿಕ್ರಿಯೆ ನೀಡಿದ್ದರು. ಧೋನಿ ನಂಬಲು ಅಸಾಧ್ಯವಾದ ಸಿಕ್ಸರ್​​ ಬಾರಿಸಿದ್ದರು. ಇದನ್ನು ನೋಡಿದ ವಿರಾಟ್, ಎಂಥಾ ಶಾಟ್​ ಎಂದು ಒಂದು ಕ್ಷಣ ದಿಗ್ಭ್ರಮೆಗೊಂಡಿದ್ದರು. ಇದೀಗ ಗಿಲ್​​ಗೂ ಇದೇ ರೀತಿ ನೋಟ ಬೀರಿದ್ದಾರೆ.

92 ರನ್ ಸಿಡಿಸಿ ಗಿಲ್ ಔಟ್​

ಆರಂಭದಲ್ಲೇ ರೋಹಿತ್​ ಶರ್ಮಾ 4 ರನ್ ಗಳಿಸಿ ಔಟಾದರೂ ಗಿಲ್​ ಕ್ರೀಸ್​​​ನಲ್ಲಿ ದರ್ಬಾರ್ ನಡೆಸಿದರು. ಸತತ ಬೌಂಡರಿಗಳ ಮೂಲಕ ಬೌಲರ್​​ಗಳ ಬೆಂಡೆತ್ತಿದರು. ಆ ಮೂಲಕ ಏಕದಿನ ವಿಶ್ವಕಪ್​​ನಲ್ಲಿ ಚೊಚ್ಚಲ ಸಿಡಿಸುವ ವಿಶ್ವಾಸದಲ್ಲಿದ್ದರು. ಆದರೆ 92 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್​ ಬಾರಿಸಿ 92 ರನ್ ಗಳಿಸಿ ಔಟಾದರು.

ಕೊಹ್ಲಿಗೂ ಶತಕ ಮಿಸ್

ಗಿಲ್​ ಜೊತೆಗೂಡಿ ಅದ್ಭುತ ಇನ್ನಿಂಗ್ಸ್​ ಕಟ್ಟಿದ ವಿರಾಟ್, ತಮ್ಮ ವಿಶ್ವದಾಖಲೆಯ 49ನೇ ಶತಕದ ಸನಿಹದಲ್ಲಿ ವಿಕೆಟ್ ಒಪ್ಪಿಸಿದರು. 94 ಎಸೆತಗಳಲ್ಲಿ 11 ಬೌಂಡರಿ ಸಿಡಿಸಿ 88 ರನ್​ ಗಳಿಸಿ ಔಟಾದರು. ಇದರೊಂದಿಗೆ ಕೇವಲ 12 ರನ್​ಗಳ ಅಂತರದಲ್ಲಿ ಸಚಿನ್​ರ 49 ಶತಕಗಳ ವಿಶ್ವದಾಖಲೆ ಸರಿಗಟ್ಟಲು ವಿಫಲರಾದರು.

ಭಾರತಕ್ಕೆ ಭರ್ಜರಿ ಗೆಲುವು

ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, ಭರ್ಜರಿ ಬ್ಯಾಟಿಂಗ್ ನಡೆಸಿತು. ನಿಗದಿತ 50 ಓವರ್​​​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 357 ರನ್ ಗಳಿಸಿತು. ಗಿಲ್ 92, ಕೊಹ್ಲಿ 88, ಅಯ್ಯರ್ 82 ರನ್ ಸಿಡಿಸಿದರು. ಈ ಗುರಿ ಬೆನ್ನತ್ತಿದ ಶ್ರೀಲಂಕಾ, ಭಾರತೀಯ ಬೌಲರ್​​ಗಳ ದಾಳಿಗೆ ತತ್ತರಿಸಿ ಹೋಯಿತು. 19.4 ಓವರ್​​​ಗಳಲ್ಲಿ 55 ರನ್​ಗಳಿಗೆ ಆಲೌಟ್​ ಆಯಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ