logo
ಕನ್ನಡ ಸುದ್ದಿ  /  ಕ್ರಿಕೆಟ್  /  ಕೊಹ್ಲಿ ಅಲ್ಲವೇ ಅಲ್ಲ, ವಿಶ್ವಕಪ್​ನಲ್ಲಿ ಈತನೇ ಗರಿಷ್ಠ ಸ್ಕೋರರ್​; ವೀರೇಂದ್ರ ಸೆಹ್ವಾಗ್ ಭವಿಷ್ಯ

ಕೊಹ್ಲಿ ಅಲ್ಲವೇ ಅಲ್ಲ, ವಿಶ್ವಕಪ್​ನಲ್ಲಿ ಈತನೇ ಗರಿಷ್ಠ ಸ್ಕೋರರ್​; ವೀರೇಂದ್ರ ಸೆಹ್ವಾಗ್ ಭವಿಷ್ಯ

Prasanna Kumar P N HT Kannada

Aug 27, 2023 11:22 AM IST

google News

ವಿಶ್ವಕಪ್​​ನಲ್ಲಿ ಅತಿ ಹೆಚ್ಚು ರನ್ ಗಳಿಸಲಿರುವ ಆಟಗಾರರನ್ನು ಬಹಿರಂಗಪಡಿಸಿದ ಸೆಹ್ವಾಗ್.

    • ODI World Cup 2023: ಈ ಬಾರಿಯ ಏಕದಿನ ವಿಶ್ವಕಪ್​​ನಲ್ಲಿ ಯಾರು ಗರಿಷ್ಠ ಸ್ಕೋರರ್​ ಆಗಿ ಹೊರಹೊಮ್ಮಲಿದ್ದಾರೆ ಎಂಬುದನ್ನು ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ (Virender Sehwag)​ ಬಹಿರಂಗಪಡಿಸಿದ್ದಾರೆ.
ವಿಶ್ವಕಪ್​​ನಲ್ಲಿ ಅತಿ ಹೆಚ್ಚು ರನ್ ಗಳಿಸಲಿರುವ ಆಟಗಾರರನ್ನು ಬಹಿರಂಗಪಡಿಸಿದ ಸೆಹ್ವಾಗ್.
ವಿಶ್ವಕಪ್​​ನಲ್ಲಿ ಅತಿ ಹೆಚ್ಚು ರನ್ ಗಳಿಸಲಿರುವ ಆಟಗಾರರನ್ನು ಬಹಿರಂಗಪಡಿಸಿದ ಸೆಹ್ವಾಗ್.

ಐಸಿಸಿ ಏಕದಿನ ವಿಶ್ವಕಪ್ (ODI ) ಆರಂಭಕ್ಕೆ ಕೆಲವು ತಿಂಗಳಷ್ಟೇ ಬಾಕಿ ಇದೆ. ದಿನದಿಂದ ದಿನಕ್ಕೆ ರೋಚಕತೆ ಹೆಚ್ಚಾಗುತ್ತಿದೆ. ಆಟಗಾರರು ಕೂಡ ಈ ಮೆಗಾ ಟೂರ್ನಿಯಲ್ಲಿ ರನ್​ ಮಳೆ ಸುರಿಸಲು ಸಿದ್ಧರಾಗುತ್ತಿದ್ದಾರೆ. ಇದೀಗ ಕ್ರಿಕೆಟ್​ ಹಬ್ಬವೆಂದೇ ಕರೆಸಿಕೊಂಡಿರುವ ವಿಶ್ವಕಪ್​​ನಲ್ಲಿ ಯಾರು ಗರಿಷ್ಠ ಸ್ಕೋರರ್​ ಆಗಿ ಹೊರಹೊಮ್ಮಲಿದ್ದಾರೆ ಎಂಬುದನ್ನು ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ (Virender Sehwag)​ ಬಹಿರಂಗಪಡಿಸಿದ್ದಾರೆ.

ರೋಹಿತ್ ಮತ್ತೆ ದರ್ಬಾರ್​

ಅಕ್ಟೋಬರ್​ 5ರಿಂದ ಶುರುವಾಗುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ (Rohit Sharma) ಅವರೇ ಗರಿಷ್ಠ ರನ್ ಗಳಿಸಲಿದ್ದಾರೆ ಎಂದು ಸೆಹ್ವಾಗ್ ಭವಿಷ್ಯ ನುಡಿದಿದ್ದಾರೆ. 2019ರ ವರ್ಲ್ಡ್​​​ಕಪ್​​ನಲ್ಲಿ ರನ್ ಸುನಾಮಿ ಸೃಷ್ಟಿಸಿದ್ದ ಹಿಟ್​ಮ್ಯಾನ್,​ ಈ ಬಾರಿಯೂ ಟೂರ್ನಿಯಲ್ಲಿ ಅಧಿಕ ರನ್​ ಗಳಿಸುವ ಆಟಗಾರನಾಗಿ ಹೊರ ಹೊಮ್ಮಲಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ.

2019ರ ಮೆಗಾ ಟೂರ್ನಿಯಲ್ಲ ರೋಹಿತ್​, ಆಡಿದ 9 ಪಂದ್ಯಗಳಲ್ಲಿ ಬರೋಬ್ಬರಿ 81ರ ಸರಾಸರಿಯಲ್ಲಿ 648 ರನ್​ ಸಿಡಿಸಿದ್ದರು. ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಭಾರತ ತಂಡವು ಸೆಮೀಸ್​ ತಲುಪಿತ್ತು. ಈ ಟೂರ್ನಿಯಲ್ಲಿ ಭರ್ಜರಿ 5 ಶತಕಗಳನ್ನು ಸಿಡಿಸಿ ವಿಶ್ವ ದಾಖಲೆ ಸೃಷ್ಟಿಸಿದ್ದರು. ಸದ್ಯ ಹಿಟ್​ಮ್ಯಾನ್​ ಈ ವರ್ಷದ ಆರಂಭದಿಂದ ಉತ್ತಮ ಲಯದಲ್ಲಿದ್ದು, ಬ್ಯಾಟ್ ಬೀಸಿದ 16 ಪಂದ್ಯಗಳಿಂದ 48.57ರ ಸರಾಸರಿಯಲ್ಲಿ 923 ರನ್ ಕಲೆ ಹಾಕಿದ್ದಾರೆ.

ರೋಹಿತ್​ ಅಧಿಕ ರನ್ ಗಳಿಸಲಿದ್ದಾರೆ!

ಇನ್ನು ರೋಹಿತ್​ ಶರ್ಮಾ ಕುರಿತು ಮಾತನಾಡಿದ ಸೆಹ್ವಾಗ್, ಭಾರತದ ಪಿಚ್​​ಗಳಲ್ಲಿ ರನ್ ಹೊಳೆ ಹರಿಯುವ ಸಾಧ್ಯತೆ ಇದೆ. ಅದರಲ್ಲೂ ಆರಂಭಿಕರೇ ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚಿದ್ದು, ಅವರೇ ಟೂರ್ನಿಯಲ್ಲಿ ಟಾಪ್​ ಸ್ಕೋರರ್​ ಆಗುತ್ತಾರೆ ಎಂಬುದು ನನ್ನ ಅಭಿಪ್ರಾಯ. ಹೀಗೆ ಅಧಿಕ ರನ್​ ಗಳಿಸುವ ಆಟಗಾರರಲ್ಲಿ ನಾನು ರೋಹಿತ್​ ಶರ್ಮಾ ಅವರನ್ನು ಆಯ್ಕೆ ಮಾಡುತ್ತೇನೆ. ಈ ವಿಶ್ವಕಪ್​ನಲ್ಲಿ ರೋಹಿತ್ ಅವರೇ ಅಧಿಕ ರನ್ ಗಳಿಸಲಿದ್ದಾರೆ ಎಂದು ಹೇಳಿದ್ದಾರೆ.

ನಾಯಕತ್ವದ ಜೊತೆಗೆ ಅಬ್ಬರದ ಬ್ಯಾಟಿಂಗ್

ನಾನು ಭಾರತೀಯ ಆಟಗಾರನಾದ ಕಾರಣ ನಮ್ಮ ಆಟಗಾರರನ್ನೇ ಆಯ್ಕೆ ಮಾಡಲು ಬಯಸುತ್ತೇನೆ. ಹಾಗಾಗಿ ನಾನು ರೋಹಿತ್​ ಹೆಸರನ್ನೇ ತೆಗೆದುಕೊಳ್ಳುತ್ತೇನೆ. ಏಕೆಂದರೆ ಐಸಿಸಿ ಟೂರ್ನಿಗಳಲ್ಲಿ ರೋಹಿತ್​ ಬ್ಯಾಟಿಂಗ್​ ಶಕ್ತಿ ಅದ್ಭುತವಾಗಿದೆ. ಅಲ್ಲದೆ, ತಂಡಕ್ಕೆ ನಾಯಕತ್ವ ವಹಿಸಿರುವ ಕಾರಣ, ಸ್ಫೋಟಕ ಬ್ಯಾಟಿಂಗ್ ನಡೆಸಿ ಪಂದ್ಯದ ಫಲಿತಾಂಶದಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತಾರೆ. ಅದರಂತೆ ಹೆಚ್ಚು ರನ್​ ಬಾರಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ತವರಿನಲ್ಲಿ ಹಿಟ್​ಮ್ಯಾನ್ ಸಾಧನೆ

ರೋಹಿತ್​ ಭಾರತದ ನೆಲದಲ್ಲಿ ಅದ್ಬುತ ಸಾಧನೆ ಮಾಡಿದ್ದಾರೆ. ಭಾರತದಲ್ಲಿ 78 ಏಕದಿನ ಪಂದ್ಯಗಳಲ್ಲಿ 58.10ರ ಬ್ಯಾಟಿಂಗ್ ಸರಾಸರಿಯಲ್ಲಿ 100ಕ್ಕೂ ಅಧಿಕ ಸ್ಟ್ರೈಕ್​ರೇಟ್​ನಲ್ಲಿ 4067 ರನ್ ಕಲೆ ಹಾಕಿದ್ದಾರೆ. 3 ದ್ವಿಶತಕ ಬಂದಿರುವುದು ಸಹ ತವರು ನೆಲದಲ್ಲೇ ಎಂಬುದು ವಿಶೇಷ. 12 ಶತಕ, 14 ಅರ್ಧಶತಕ ಬಾರಿಸಿದ್ದಾರೆ. ಈ ಅಂಕಿ-ಅಂಶ ನೋಡುತ್ತಿದ್ದರೆ, ಭಾರತದ ಪಿಚ್​​ಗಳಲ್ಲಿ ಎದುರಾಳಿ ಬೌಲರ್​​ಗಳಿಗೆ ಕಾಟ ಕೊಡಲು ಸಜ್ಜಾಗುತ್ತಿದ್ದಾರೆ.

ಅವರ ಒಟ್ಟಾರೆ 244 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. 48.69ರ ಬ್ಯಾಟಿಂಗ್ ಸರಾಸರಿಯಲ್ಲಿ 9,837 ರನ್ ಗಳಿಸಿದ್ದಾರೆ. 30 ಶತಕ ಹಾಗೂ 48 ಅರ್ಧಶತಕಗಳನ್ನೂ ಚಚ್ಚಿದ್ದಾರೆ. ಅಕ್ಟೋಬರ್‌ 5ರಂದು ವಿಶ್ವಕಪ್ ಟೂರ್ನಿಗೆ ಚಾಲನೆ ಸಿಗಲಿದೆ. ಅಕ್ಟೋಬರ್ 8ರಂದು ಭಾರತ-ಆಸ್ಟ್ರೇಲಿಯಾ ತಂಡಗಳು ಸೆಣಸಾಟ ನಡೆಸುವ ಮೂಲಕ ಅಭಿಯಾನ ಆರಂಭಿಸಲಿವೆ. ಈ ಪಂದ್ಯವು ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ