logo
ಕನ್ನಡ ಸುದ್ದಿ  /  ಕ್ರಿಕೆಟ್  /  ಜೈಸ್ವಾಲ್-ಗಿಲ್ ಜಾಗತಿಕ ಕ್ರಿಕೆಟ್ ಆಳುತ್ತಾರೆ; ತೆಂಡೂಲ್ಕರ್-ಗಂಗೂಲಿ ಜೋಡಿ ನೆನಪಿಸಿದ ಸೆಹ್ವಾಗ್‌ ಹೇಳಿಕೆ

ಜೈಸ್ವಾಲ್-ಗಿಲ್ ಜಾಗತಿಕ ಕ್ರಿಕೆಟ್ ಆಳುತ್ತಾರೆ; ತೆಂಡೂಲ್ಕರ್-ಗಂಗೂಲಿ ಜೋಡಿ ನೆನಪಿಸಿದ ಸೆಹ್ವಾಗ್‌ ಹೇಳಿಕೆ

Jayaraj HT Kannada

Feb 05, 2024 03:17 PM IST

google News

ತೆಂಡೂಲ್ಕರ್-ಗಂಗೂಲಿ ಜೋಡಿ ನೆನಪಿಸಿದ ಸೆಹ್ವಾಗ್‌ ಹೇಳಿಕೆ

    • Virender Sehwag:‌ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಜಾಗತಿಕ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಭವಿಷ್ಯ ನುಡಿದಿದ್ದಾರೆ. ಹಿಂದೆ ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ವಿಶ್ವ ಕ್ರಿಕೆಟ್‌ ಅನ್ನೇ ಆಳಿದ್ದರು.
ತೆಂಡೂಲ್ಕರ್-ಗಂಗೂಲಿ ಜೋಡಿ ನೆನಪಿಸಿದ ಸೆಹ್ವಾಗ್‌ ಹೇಳಿಕೆ
ತೆಂಡೂಲ್ಕರ್-ಗಂಗೂಲಿ ಜೋಡಿ ನೆನಪಿಸಿದ ಸೆಹ್ವಾಗ್‌ ಹೇಳಿಕೆ (PTI-Getty)

ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ (India vs England 2nd Test) ಪಂದ್ಯದಲ್ಲಿ ದ್ವಿಶತಕ ಹಾಗೂ ಶತಕ ಬಾರಿಸಿದ ಯಶಸ್ವಿ ಜೈಸ್ವಾಲ್ (Yashasvi Jaiswal) ಹಾಗೂ ಶುಭ್ಮನ್ ಗಿಲ್ (Shubman Gill), ಭಾರತದ ಮುಂದಿನ ತಲೆಮಾರಿನ ಬ್ಯಾಟರ್‌ಗಳಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ. 22ನೇ ವಯಸ್ಸಿನಲ್ಲಿಯೇ ಜೈಸ್ವಾಲ್ ಚೊಚ್ಚಲ ಟೆಸ್ಟ್ ದ್ವಿಶತಕ ಸಿಡಿಸಿದರೆ, ಗಿಲ್‌ 11 ತಿಂಗಳ ಬಳಿಕ ಮೂರಂಕಿ ಮೊತ್ತ ದಾಖಲಿಸಿ ಟೀಮ್‌ ಇಂಡಿಯಾ ಭರವಸೆ ಹೆಚ್ಚಿಸಿದ್ದಾರೆ. ಇವರಿಬ್ಬರ ಅಮೋಘ ಆಟವು, ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತದ 106 ರನ್‌ಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಜೈಸ್ವಾಲ್ ಮತ್ತು ಗಿಲ್ ಅವರ ಶತಕವು, ಜಾಗತಿಕ ಮಾಜಿ ಕ್ರಿಕೆಟಿಗರ ಗಮನ ಸೆಳೆದಿದೆ. ಇದೇ ವೇಳೆ ಯುವ ಜೋಡಿಯ ಬಗ್ಗೆ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ 10 ವರ್ಷಗಳ ಕಾಲ ಜಾಗತಿಕ ಕ್ರಿಕೆಟ್‌ಬಲ್ಲಿ ಈ ಇಬ್ಬರು 'ಅಂಡರ್ -25' ಯುವಕರು ಪ್ರಾಬಲ್ಯ ಸಾಧಿಸುತ್ತಾರೆ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಭವಿಷ್ಯ ನುಡಿದಿದ್ದಾರೆ.

ವೀರು ಹೊಗಳಿಕೆ ಅತಿಶಯೋಕ್ತಿ ಖಂಡಿತಾ ಅಲ್ಲ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಂತರದ ಕಾಲದಲ್ಲಿ ಗಿಲ್ ಮತ್ತು ಜೈಸ್ವಾಲ್ ಭಾರತದ ಬ್ಯಾಟಿಂಗ್ ಅನ್ನು ಮುನ್ನಡೆಸಲಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಇದನ್ನೂ ಓದಿ | ಬುಮ್ರಾ, ಅಶ್ವಿನ್ ಮಾರಕ ದಾಳಿಗೆ ಮಣಿದ ಇಂಗ್ಲೆಂಡ್; ಎರಡನೇ ಟೆಸ್ಟ್‌ನಲ್ಲಿ ಭಾರತಕ್ಕೆ 106 ರನ್‌ ಗೆಲುವು, ಸರಣಿ ಸಮಬಲ

“25 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಈ ಇಬ್ಬರು ಯುವಕರು ಸಂದರ್ಭಕ್ಕೆ ತಕ್ಕಂತೆ ಆಡುವುದನ್ನು ನೋಡಿ ಸಂತೋಷವಾಗಿದೆ. ಈ ಇಬ್ಬರು ಮುಂದಿನ ದಶಕ ಅಥವಾ ಅದಕ್ಕಿಂತಲೂ ಹೆಚ್ಚು ಕಾಲ ವಿಶ್ವ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸುವ ಸಾಧ್ಯತೆಯಿದೆ,” ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

28 ವರ್ಷಗಳ ಹಿಂದೆ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಆಟ ನೆನಪಿಸಿದ ಗಿಲ್-ಜೈಸ್ವಾಲ್

ಕಾಕತಾಳೀಯವೆಂಬಂತೆ, ವೈಜಾಗ್ ಟೆಸ್ಟ್‌ನಲ್ಲಿ ಜೈಸ್ವಾಲ್ ಮತ್ತು ಗಿಲ್ ಅವರ ಶತಕಕ್ಕೂ, ಸಚಿನ್‌ ಮತ್ತು ಗಂಗೂಲಿ ಆಟಕ್ಕೂ ವಿಶೇಷ ಸಂಬಂಧವಿದೆ. 1996ರಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಒಂದೇ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದರು. ಆಗ ಅವರಿಬ್ಬರ ವಯಸ್ಸು 25 ವರ್ಷಕ್ಕಿಂತ ಕಡಿಮೆ ಇತ್ತು. ನಟ್ಟಿಂಗ್‌ಹ್ಯಾಮ್‌ನಲ್ಲಿ ನಡೆದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಗಂಗೂಲಿ ಕ್ರಮವಾಗಿ 177 ಮತ್ತು 136 ರನ್ ಸಿಡಿಸಿದ್ದರು. ಅದಕ್ಕೂ ಹಿಂದಿನ ಲಾರ್ಡ್ಸ್‌ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿದ್ದ ಗಂಗೂಲಿ, ತಮ್ಮ ಎರಡನೇ ಟೆಸ್ಟ್‌ನಲ್ಲಿ ಶತಕವನ್ನು ಗಳಿಸಿದರು. ಸತತ ಎರಡೂ ಪಂದ್ಯಗಳಲ್ಲಿ ಸೆಂಚುರಿ ಬಾರಿಸಿದರು. ಭಾರತದ ಮಾಜಿ ನಾಯಕನಂತೆ ಜೈಸ್ವಾಲ್ ಕೂಡ ಕಳೆದ ವರ್ಷ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಶತಕ ಬಾರಿಸಿದ್ದರು.

ಇದನ್ನೂ ಓದಿ | ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದರೂ ಶುಭ್ಮನ್ ಗಿಲ್‌ಗೆ ತಂದೆ ಭಯ; ತಪ್ಪಾದ ಹೊಡೆತದಿಂದ ಔಟಾಗಿದ್ದನ್ನು ಒಪ್ಪಿದ ಪ್ರಿನ್ಸ್

ಸಾರ್ವಕಾಲಿಕ ದಾಖಲೆ

ಟೆಸ್ಟ್ ಕ್ರಿಕೆಟ್‌ನಲ್ಲಿ ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್ 71 ಪಂದ್ಯಗಳಲ್ಲಿ 61.36 ಸರಾಸರಿಯಲ್ಲಿ 4173 ರನ್ ಗಳಿಸಿದ್ದಾರೆ.ತೆಂಡೂಲ್ಕರ್ ಮತ್ತು ಗಂಗೂಲಿ ತಮ್ಮ ವೃತ್ತಿಜೀವನದ ಕೊನೆಯವರೆಗೂ ಕ್ರಿಕೆಟ್ ಲೋಕವನ್ನು ಆಳಿದರು. 136 ಇನ್ನಿಂಗ್ಸ್‌ನಲ್ಲಿ 6609 ರನ್ ಗಳಿಸುವ ಮೂಲಕ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆರಂಭಿಕ ಜೋಡಿ ಎಂಬ ದಾಖಲೆಯನ್ನು ಅವರು ಇನ್ನೂ ತಮ್ಮ ಹೆಸರಿನಲ್ಲೇ ಉಳಿಸಿಕೊಂಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ