logo
ಕನ್ನಡ ಸುದ್ದಿ  /  ಕ್ರಿಕೆಟ್  /  Wasim Akram: ಟೀಮ್ ಇಂಡಿಯಾ ಹೆಡ್​ಕೋಚ್ ಹುದ್ದೆಗೆ ಅತ್ಯುತ್ತಮ ಅಭ್ಯರ್ಥಿ ಆಯ್ಕೆ ಮಾಡಿದ ವಾಸೀಂ ಅಕ್ರಮ್

Wasim Akram: ಟೀಮ್ ಇಂಡಿಯಾ ಹೆಡ್​ಕೋಚ್ ಹುದ್ದೆಗೆ ಅತ್ಯುತ್ತಮ ಅಭ್ಯರ್ಥಿ ಆಯ್ಕೆ ಮಾಡಿದ ವಾಸೀಂ ಅಕ್ರಮ್

Prasanna Kumar P N HT Kannada

May 22, 2024 09:06 PM IST

google News

ಟೀಮ್ ಇಂಡಿಯಾ ಹೆಡ್​ಕೋಚ್ ಹುದ್ದೆಗೆ ಅತ್ಯುತ್ತಮ ಅಭ್ಯರ್ಥಿ ಆಯ್ಕೆ ಮಾಡಿದ ವಾಸೀಂ ಅಕ್ರಮ್

    • Wasim Akram on Gautam Gambhir : ಪಾಕಿಸ್ತಾನದ ದಿಗ್ಗಜ ಆಟಗಾರ ವಾಸೀಂ ಅಕ್ರಮ್ ಅವರು ಟೀಮ್ ಇಂಡಿಯಾ ಹೆಡ್​ಕೋಚ್ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಆರಿಸಿದ್ದಾರೆ.
ಟೀಮ್ ಇಂಡಿಯಾ ಹೆಡ್​ಕೋಚ್ ಹುದ್ದೆಗೆ ಅತ್ಯುತ್ತಮ ಅಭ್ಯರ್ಥಿ ಆಯ್ಕೆ ಮಾಡಿದ ವಾಸೀಂ ಅಕ್ರಮ್
ಟೀಮ್ ಇಂಡಿಯಾ ಹೆಡ್​ಕೋಚ್ ಹುದ್ದೆಗೆ ಅತ್ಯುತ್ತಮ ಅಭ್ಯರ್ಥಿ ಆಯ್ಕೆ ಮಾಡಿದ ವಾಸೀಂ ಅಕ್ರಮ್

ಜೂನ್ 1ರಿಂದ ಆರಂಭವಾಗುವ ಟಿ20 ವಿಶ್ವಕಪ್ 2024 ಟೂರ್ನಿಯ (T20 World Cup 2024) ನಂತರ ಟೀಮ್ ಇಂಡಿಯಾ (Team India) ಹೆಡ್​ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಅಧಿಕಾರ ಮುಕ್ತಾಯಗೊಳ್ಳಲಿದೆ. ಪ್ರಸ್ತುತ ಭಾರತೀಯ ಮುಖ್ಯ ಕೋಚ್ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಗಳ ಹುಡುಕಾಟ ನಡೆಸುತ್ತಿರುವ ಬಿಸಿಸಿಐ (BCCI), ನೂತನ ಕೋಚ್​ ಸ್ಥಾನಕ್ಕೆ ಅರ್ಜಿಗಳನ್ನೂ ಆಹ್ವಾನಿಸಿದೆ. ಮೇ 27 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಇದರ ನಡುವೆ ಪಾಕಿಸ್ತಾನದ ದಿಗ್ಗಜ ಆಟಗಾರ ವಾಸೀಂ ಅಕ್ರಮ್ (Wasim Akram) ಅವರು ಸೂಕ್ತ ವ್ಯಕ್ತಿಯನ್ನು ಆರಿಸಿದ್ದಾರೆ.

ಭಾರತ ಕ್ರಿಕೆಟ್ ತಂಡದ (Indian Cricket Team) ಮುಖ್ಯ ಕೋಚ್ ಹುದ್ದೆಗೆ ಬಿಸಿಸಿಐ ಹಲವರನ್ನು ಸಂಪರ್ಕಿಸಿದೆ ಎಂದು ಹೇಳಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಮಾರ್ಗದರ್ಶಕ ಸ್ಟೀಫನ್ ಫ್ಲೆಮಿಂಗ್, ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಮತ್ತು ಕೆಕೆಆರ್ ಮೆಂಟರ್ ಗೌತಮ್ ಗಂಭೀರ್ ಸೇರಿ ಹಲವರನ್ನು ಸಂಪರ್ಕಿಸಿದೆ ಎಂದು ಹೇಳಲಾಗಿದೆ. ಮತ್ತೊಂದೆಡೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ (Harbhajan Singh) ಸಹ ಈ ದ್ರಾವಿಡ್ ಸ್ಥಾನ ತುಂಬಲು ಆಸಕ್ತಿ ಹೊಂದಿದ್ದಾರೆ ಎಂದು ವರದಿಯಾಗಿದೆ.

ಗೌತಮ್ ಗಂಭೀರ್ ಉತ್ತಮ ಆಯ್ಕೆ ಎಂದ ಅಕ್ರಮ್

ಕೋಲ್ಕತ್ತಾ ನೈಟ್ ರೈಡರ್ಸ್ ಮೆಂಟರ್​ ಗೌತಮ್ ಗಂಭೀರ್ ಅವರು ಈ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಎಂದು ಪಾಕಿಸ್ತಾನದ ದಂತಕಥೆ ವಾಸೀಂ ಅಕ್ರಮ್ ಅವರು ಸಲಹೆ ನೀಡಿದ್ದಾರೆ. ಆದರೆ, ಗಂಭೀರ್ ಈ ಪ್ರಸ್ತಾಪ ಸ್ವೀಕರಿಸುತ್ತಾರೆಯೇ ಎಂಬುದು ಖಚಿತವಾಗಿಲ್ಲ. ಗಂಭೀರ್ ನೇರ ನುಡಿಯ ವ್ಯಕ್ತಿ ಎಂದಿರುವ ಅಕ್ರಮ್, ಎರಡು ಬಾರಿ ಐಪಿಎಲ್ ವಿಜೇತ ನಾಯಕನ ಆಕ್ರಮಣಕಾರಿ ಗುಣಲಕ್ಷಣವು ತಂಡಕ್ಕೆ ನೆರವಾಗಲಿದೆ ಎಂದು ಹೇಳಿದ್ದಾರೆ.

ಗೌತಮ್ ಗಂಭೀರ್​ ಅವರು ಉತ್ತಮ ಅಭ್ಯರ್ಥಿ. ಆದರೆ ಒಪ್ಪಿಕೊಳ್ಳುತ್ತಾರೆಯೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಪ್ರಸ್ತುತ ರಾಜಕೀಯ ತೊರೆದಿರುವ 42 ವರ್ಷದ ಮಾಜಿ ಆಟಗಾರ, ತುಂಬಾ ಬುದ್ಧಿವಂತ ವ್ಯಕ್ತಿ. ಅಲ್ಲದೆ, ಅವರಿಗೂ ಮುದ್ದಾದ ಇಬ್ಬರು ಹೆಣ್ಣು ಮಕ್ಕಳಿರುವ ಕಾರಣ ಯೋಚಿಸುವ ಸಾಧ್ಯತೆ ಇದೆ. ಗೌತಮ್ ಗಂಭೀರ್ ತುಂಬಾ ಸರಳ ವ್ಯಕ್ತಿ ಎಂದು ಅಕ್ರಂ ಸ್ಫೋರ್ಟ್ಸ್​ ಕ್ರೀಡಾಗೆ ತಿಳಿಸಿದ್ದಾರೆ.

ಮುಖಕ್ಕೆ ಹೊಡೆದಂತೆ ಹೇಳುತ್ತಾರೆ ಗಂಭೀರ್​

ಜಿಜಿ (ಗೌತಮ್ ಗಂಭೀರ್) ತುಂಬಾ ಸರಳ ವ್ಯಕ್ತಿ. ಹಾಗೆಯೇ ನೇರ ನುಡಿ ವ್ಯಕ್ತಿ. ಅವರು ಡಿಫಿಕಲ್ಟ್ ವ್ಯಕ್ತಿಯಲ್ಲ. ಆದರೆ, ಸ್ಪಷ್ಟವಾಗಿ, ನೇರವಾಗಿ ಮಾತನಾಡುತ್ತಾರೆ. 2 ಬಾರಿ ಯೋಚಿಸುವುದಿಲ್ಲ. ಆದರೆ, ಇದು ಭಾರತೀಯ ಕ್ರಿಕೆಟ್ ಸಂಸ್ಕೃತಿಯ ಭಾಗವಲ್ಲ. ಯಾರೂ ಸಹ ಮುಖಕ್ಕೆ ಹೊಡೆದಂತೆ ಹೇಳುವುದಿಲ್ಲ. ಆದರೆ ಗಂಭೀರ್ ತನಗೆ​ ಏನಾದರೂ ಇಷ್ಟವಾಗದಿದ್ದರೆ, ಅದನ್ನು ನಿಮ್ಮ ಮುಖಕ್ಕೆ ಹೊಡೆದಂತೆ ಹೇಳುತ್ತಾರೆ. ಇಷ್ಟು ಆಕ್ರಮಣಕಾರಿಯಾಗಿರುವ ವ್ಯಕ್ತಿ ಹೆಡ್ ಕೋಚ್ ಸ್ಥಾನಕ್ಕೆ ಒಪ್ಪಿಗೆ ನೀಡುತ್ತಾರೆಯೇ ಇಲ್ಲವೆ ಎಂಬುದು ಕುತೂಹಲ ಮೂಡಿಸಿದೆ ಎಂದಿದ್ದಾರೆ.

ವಿವಿಎಸ್ ಲಕ್ಷ್ಮಣ್ ಮತ್ತು ಆಶಿಶ್ ನೆಹ್ರಾ ಸೇರಿದಂತೆ ಇತರ ಮಾಜಿ ಭಾರತೀಯ ಕ್ರಿಕೆಟಿಗರನ್ನು ಮುಖ್ಯ ಕೋಚ್ ಸ್ಥಾನಕ್ಕೆ ಬಿಸಿಸಿಐ ಪರಿಗಣಿಸುತ್ತಿದೆ. ಲಕ್ಷ್ಮಣ್ ಈ ಪ್ರಸ್ತಾಪ ನಿರಾಕರಿಸಿದರೂ, ರಾಹುಲ್ ದ್ರಾವಿಡ್ ಉತ್ತರಾಧಿಕಾರಿಯಾಗಲು ವಾಸಿಂ ಅಕ್ರಮ್ ಅವರು ಗಂಭೀರ್ ಜೊತೆಗೆ ನೆಹ್ರಾ ಅವರನ್ನೂ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಿದ್ದಾರೆ. ಆದಾಗ್ಯೂ, ಕೆಲವು ವರದಿಗಳ ಪ್ರಕಾರ, ನೆಹ್ರಾ ಹೆಡ್ ಕೋಚ್ ಆಗಲು ಆಸಕ್ತಿ ಹೊಂದಿಲ್ಲ.

ಇನ್ನೂ ಕೆಲವು ಹೆಸರುಗಳನ್ನು ಕೇಳಿದ್ದೇನೆ. ಅವರಿಗೆ ಸಾಕಷ್ಟು ಅನುಭವವಿದೆ. ಆಶಿಶ್ ನೆಹ್ರಾ ಸಹ ಉತ್ತಮ ಅನುಭವ ಹೊಂದಿದ್ದಾರೆ. ಎಲ್ಲರೂ ಅವರನ್ನು ಪ್ರೀತಿಸುತ್ತಾರೆ. ಆಟಗಾರರ ಬೆನ್ನೆಲುಬಾಗಿರುವ ವ್ಯಕ್ತಿಯಾಗಿದ್ದಾರೆ. ಲಕ್ಷ್ಮಣ್ ಮತ್ತೊಂದು ಉತ್ತಮ ಆಯ್ಕೆಯಾಗಿದೆ. ಪ್ರಸ್ತುತ ಎನ್‌ಸಿಎ ಮುಖ್ಯಸ್ಥರಾಗಿದ್ದು, ಆಗಾಗ್ಗೆ ಭಾರತ ತಂಡಕ್ಕೂ ಕೋಚ್​ ಆಗಿ ಸೇವೆ ಸಲ್ಲಿಸಿದ್ದು. ಅವರಿಗೂ ಅವಕಾಶ ನೀಡಿದರೆ ಉತ್ತಮ ಎಂದಿದ್ದಾರೆ.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ