ಕ್ರಿಕೆಟ್ ಪಿಚ್‌ನಲ್ಲಿ ಎಷ್ಟು ವಿಧಗಳಿವೆ? ಬ್ಯಾಟಿಂಗ್-ಬೌಲಿಂಗ್‌ಗೆ ನೆರವಾಗುವ ಟ್ರ್ಯಾಕ್ಗಳು ಯಾವುವು?
Feb 07, 2024 07:15 AM IST
ಬ್ಯಾಟಿಂಗ್-ಬೌಲಿಂಗ್‌ಗೆ ನೆರವಾಗುವ ಟ್ರ್ಯಾಕ್ಗಳು ಯಾವುವು
- Types of Pitches in Cricket : ಕ್ರಿಕೆಟ್‌ನಲ್ಲಿ ಪಿಚ್ಗಳೇ ಫಲಿತಾಂಶ ನಿರ್ಧರಿಸಲಿದ್ದು, ಅವುಗಳು ವಿಧಗಳಿವೆ? ಬ್ಯಾಟಿಂಗ್-ಬೌಲಿಂಗ್‌ಗೆ ನೆರವಾಗುವ ಟ್ರ್ಯಾಕ್ಗಳು ಯಾವುವು? ಎಂಬುದರ ವಿವರ ಇಲ್ಲಿದೆ.
ಕ್ರಿಕೆಟ್‌ನಲ್ಲಿ ಪಿಚ್ಗಳೇ ನಿರ್ಣಾಯಕ. ಟಾಸ್ ಗೆದ್ದ ಬಳಿಕ ಬೌಲಿಂಗ್ ಅಥವಾ ಬ್ಯಾಟಿಂಗ್ ಆಯ್ಕೆಗೂ ಪಿಚ್ ಯಾವುದೆನ್ನುದರ ಮೇಲೆ ನಿರ್ಧಾರವಾಗುತ್ತದೆ. ಪಂದ್ಯದ ಆರಂಭಕ್ಕೂ ಮುನ್ನ ಯಾರು ಮೊದಲು ಬ್ಯಾಟಿಂಗ್/ಬೌಲಿಂಗ್ ನಡೆಸಬೇಕು ಎನ್ನುವುದರ ಬಗ್ಗೆಯೂ ಚರ್ಚೆ ನಡೆಯುತ್ತದೆ. ಅಲ್ಲದೆ ಬ್ಯಾಟಿಂಗ್/ಬೌಲಿಂಗ್ ಪಿಚ್ ಎಂಬುದನ್ನು ನೋಡಿಕೊಂಡೇ ಆಟಗಾರರನ್ನು ಆಡಿಸಲು ಆಯಾ ತಂಡಗಳು ನಿರ್ಧರಿಸುತ್ತವೆ.
ಪಂದ್ಯದ ಫಲಿತಾಂಶದಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ಸದ್ಯ ಭಾರತದಲ್ಲಿ ನಡೆಯುತ್ತಿರುವ ಇಂಡೋ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲೂ ಪಿಚ್ಗಳ ಕುರಿತಂತೆ ಡಿಬೆಟ್ಗಳು ನಡೆಯುತ್ತಿವೆ. ಹಾಗಾದರೆ, ಕ್ರಿಕೆಟ್‌ನಲ್ಲಿ ಎಷ್ಟು ಪಿಚ್ಗಳಿವೆ. ಬ್ಯಾಟಿಂಗ್-ಬೌಲಿಂಗ್‌ಗೆ ನೆರವಾಗುವ ಟ್ರ್ಯಾಕ್ಗಳು ಯಾವುವು? ಇಲ್ಲಿದೆ ವಿವರ.
ಹಸಿರು ಪಿಚ್ (ಗ್ರೀನ್ ಟ್ರ್ಯಾಕ್)
ಕ್ರಿಕೆಟ್‌ನಲ್ಲಿರುವ ಹಸಿರು ಪಿಚ್ ಇತರ ಕ್ರಿಕೆಟ್ ಟ್ರ್ಯಾಕ್‌ಗಳಿಗಿಂತ ಹೆಚ್ಚು ಹುಲ್ಲು ಹೊಂದಿರುತ್ತದೆ. ತೇವಾಂಶವುಳ್ಳ ಪಿಚ್ ಹೆಚ್ಚಿನ ಹುಲ್ಲಿನ ಹೊದಿಕೆ ಇರುತ್ತದೆ. ಅಂದರೆ ಬ್ಯಾಟ್ಸ್‌ಮನ್‌ಗಳಿಗಿಂತ ಬೌಲರ್‌ಗಳಿಗೆ ಹಸಿರು ಪಿಚ್ ಹೆಚ್ಚು ನೆರವು ನೀಡುತ್ತದೆ. ಬೌಲರ್ ಒದ್ದೆ ಹುಲ್ಲಿನ ಮೇಲೆ ಅನಿರೀಕ್ಷಿತ ಎಸೆತಗಳನ್ನೂ ಎಸೆಯಬಹುದು. ಗ್ರೀನ್ ಟ್ರ್ಯಾಕ್ ಟೆಸ್ಟ್ ಕ್ರಿಕೆಟ್‌ಗೆ ಹೆಚ್ಚಿನ ಆದ್ಯತೆಯ ಆಯ್ಕೆಯಾಗಿದೆ. ಏಕೆಂದರೆ ಪಿಚ್ ನಿಧಾನವಾಗಿ ಸವೆಯುವ ಕಾರಣ ಮೊದಲ ಆಯ್ಕೆಯಾಗಿ ಪರಿಗಣಿಸುತ್ತಾರೆ.
ಫ್ಲಾಟ್ ಟ್ರ್ಯಾಕ್
ಫ್ಲಾಟ್ ಕ್ರಿಕೆಟ್ ಪಿಚ್ ಲಘುವಾಗಿ ರೋಲ್ ಮಾಡಿರುವ ಪಿಚ್ ಆಗಿದೆ. ಟ್ರ್ಯಾಕ್‌ನಲ್ಲಿ ಹುಲ್ಲು, ಒರಟುತನ ಮತ್ತು ಬಿರುಕುಗಳು ಇರುವುದಿಲ್ಲ. ಬ್ಯಾಟರ್ಸ್ಗೆ ಹೆಚ್ಚು ನೆರವಾಗುತ್ತದೆ. ಎಂತಹದ್ದೇ ಎಸೆತಗಳನ್ನು ಬೇಕಾದರೂ ಈ ಟ್ರ್ಯಾಕ್‌ನಲ್ಲಿ ಹಿಟ್ ಮಾಡಬಹುದು. ಬ್ಯಾಟರ್‌ಗಳಿಗೆ ಸೂಕ್ತವಾದ ಫ್ಲಾಟ್ ಪಿಚ್‌ನಲ್ಲಿ ಸ್ಪಿನ್ನರ್‌ಗಳು ಮತ್ತು ವೇಗದ ಬೌಲರ್‌ಗಳು ವಿಕೆಟ್ ಪಡೆಯಲು ಹೆಣಗಾಡ ನಡೆಸುತ್ತಾರೆ.
ಡ್ರೈ ಪಿಚ್ (ಒಣ ಪಿಚ್)
ಒಣ ಕ್ರಿಕೆಟ್ ಪಿಚ್‌ಗಳು ಅಥವಾ ಹಾರ್ಡ್ ಪಿಚ್‌ಗಳು ತೇವಾಂಶ ಹೊಂದಿರುವುದಿಲ್ಲ. ಈ ಪಿಚ್‌ಗಳು ಸುಲಭವಾಗಿ ಬಿರುಕು ಬಿಡುವುದರಿಂದ ವೇಗದ ಬೌಲರ್‌ಗಳಿಗೆ ಸಹಾಯ ಮಾಡಲಿದೆ. ಒಣ ಪಿಚ್ ಬೌಲರ್‌ಗಳಿಗೆ ಉತ್ತಮವಾಗಿದ್ದರೂ ಸಹ, ಅನುಭವಿ ಬ್ಯಾಟರ್ಸ್ ತಮ್ಮ ಪ್ರದರ್ಶನ ತೋರುವಲ್ಲಿ ಯಶಸ್ವಿ ಆಗುತ್ತಾರೆ. ಚೆಂಡು ನೇರವಾಗಿ ಬ್ಯಾಟ್‌ನ ಮೇಲೆ ಬೀಳುತ್ತದೆ. ಒಣ ಪಿಚ್‌ನಲ್ಲಿ ಬಿರುಕುಗಳಿಂದ ಕೂಡಿರುವ ಕಾರಣ ಹೆಚ್ಚು ಪುಟಿಯಲ್ಲ. ಹಾಗಾಗಿ ಚೆಂಡು ಹೆಚ್ಚು ತಿರುಗುವುದಿಲ್ಲ. ಆದ್ದರಿಂದ ಗಟ್ಟಿಯಾದ ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್‌ಗೆ ಉತ್ತಮವಾಗಿದೆ.
ತೇವದ ಪಿಚ್ (ವೆಟ್ ಪಿಚ್)
ಕ್ರಿಕೆಟ್ ಪಿಚ್ ತೇವವಾಗಿರುತ್ತದೆ. ಹೆಚ್ಚಿನ ತೇವಾಂಶದ ಕಾರಣದಿಂದಾಗಿ ಪಿಚ್ ಹೆಚ್ಚು ಒಗ್ಗೂಡಿಸುತ್ತದೆ. ಈ ಪಿಚ್‌ನಲ್ಲಿ ಹೆಚ್ಚು ಬೌನ್ಸ್ ಆಗುವುದಿಲ್ಲ. ಸ್ಲೋ ಪಿಚ್ ಎಂದು ಸಹ ಕರೆಯುತ್ತಾರೆ. ಬ್ಯಾಟರ್ಸ್ ಗಿಂತ ಬೌಲರ್‌ಗಳಿಗೆ ಹೆಚ್ಚು ನೆರವಾಗುತ್ತದೆ. ಆದರೆ ಹೆಚ್ಚು ಸ್ವಿಂಗ್ ಆಗುವುದಿಲ್ಲ.
ಧೂಳಿನ ಪಿಚ್ (ಡಸ್ಟಿ ಪಿಚ್)
ಧೂಳಿನಿಂದ ಕೂಡಿರುವ ಈ ಪಿಚ್, ಮತ್ತೊಂದು ಉತ್ತಮ ಬೌಲಿಂಗ್ ಪಿಚ್ ಆಗಿದೆ. ಪಿಚ್ ಸ್ವಭಾವದಲ್ಲಿ ಹೆಚ್ಚು ಮೃದುವಾಗಿರುತ್ತವೆ. ಈ ಬಿಚ್ಚಿದ ಪಿಚ್‌ಗಳು ಬೌಲರ್‌ಗಳಿಗೆ ಚೆಂಡನ್ನು ಉತ್ತಮವಾಗಿ ಸ್ಪಿನ್ ಮಾಡಲು ಅವಕಾಶ ಮಾಡಿಕೊಡುತ್ತದೆ.
ಡೆಡ್ ಪಿಚ್
ಡೆಡ್ ಪಿಚ್ ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯಗಳಿಗೆ ಸೂಕ್ತವಾಗಿರಲಿದೆ. ಟೆಸ್ಟ್ ಕ್ರಿಕೆಟ್‌ಗೆ ಇದು ಸೂಕ್ತವಲ್ಲ. ಡೆಡ್ ಪಿಚ್ ಹುಲ್ಲು ಮತ್ತು ತೇವಾಂಶವಿಲ್ಲದೆ ಇರುತ್ತದೆ. ಈ ಟ್ರ್ಯಾಕ್ ಬ್ಯಾಟರ್‌ಗಳು ಹೆಚ್ಚು ರನ್ ಗಳಿಸಲು ನೆರವಾಗುತ್ತದೆ. ಆದರೆ ಬೌಲರ್‌ಗಳು ವಿಕೆಟ್ ಪಡೆಯಲು ಬೌಲರ್ಸ್ ಪರದಾಡುತ್ತಾರೆ.What are the Types of Cricket Pitches