ಕ್ರಿಕೆಟ್‌ನಲ್ಲಿ ಆಟಗಾರರು ಧರಿಸುವ ನೆಕ್ ಡಿವೈಸ್ ಅಥವಾ ಕ್ಯೂ-ಕಾಲರ್ ಎಂದರೇನು; ಪ್ರಯೋಜನ ಮತ್ತು ಬೆಲೆ ಎಷ್ಟು?
May 16, 2024 10:25 AM IST
ಕ್ರಿಕೆಟ್‌ನಲ್ಲಿ ಆಟಗಾರರು ಧರಿಸುವ ನೆಕ್ ಡಿವೈಸ್ ಅಥವಾ ಕ್ಯೂ-ಕಾಲರ್ ಎಂದರೇನು; ಪ್ರಯೋಜನ ಮತ್ತು ಬೆಲೆ ಎಷ್ಟು?
- What Is The Q-Collar : ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಆರಂಭಿಕ ಆಟಗಾರ ಧರಿಸಿದ್ದ ಕ್ಯೂ-ಕಾಲರ್ ಅಥವಾ ನೆಕ್ ಡಿವೈಸ್ ಎಂದರೇನು? ಈ ಪರಿಕರ ಪ್ರಯೋಜನ ಮತ್ತು ಬೆಲೆ ಎಷ್ಟು? ಇಲ್ಲಿದೆ ವಿವರ.
ಐಪಿಎಲ್-2024 ಮುಕ್ತಾಯದ ಹಂತ ತಲುಪಿದ್ದು, ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಎರಡು ತಂಡಗಳು ಪ್ಲೇಆಫ್ ಟಿಕೆಟ್ ಅನ್ನು ಅಧಿಕೃತಗೊಳಿಸಿದ್ದರೆ, ಉಳಿದ ಎರಡು ಸ್ಥಾನಗಳಿಗಾಗಿ ಸಿಎಸ್ಕೆ, ಆರ್ಸಿಬಿ ಮತ್ತು ಎಸ್ಆರ್ಹೆಚ್ ತಂಡಗಳ ನಡುವೆ ಸಿಕ್ಕಾಪಟ್ಟೆ ಪೈಪೋಟಿ ನಡೆಯುತ್ತಿದೆ. ಇದರ ನಡುವೆ ಟೂರ್ನಿಯ ಆರಂಭದಲ್ಲಿ ಸತತ ಗೆಲುವು ಕಂಡ ರಾಜಸ್ಥಾನ್ ರಾಯಲ್ಸ್, ಕೊನೆಯಲ್ಲಿ ಸತತ ಸೋಲುಗಳನ್ನು ಕಾಣುತ್ತಿದೆ. ಮೇ 15ರಂದೂ ಮತ್ತೊಂದು ಪಂದ್ಯದಲ್ಲಿ ಶರಣಾಯಿತು.
ಟೂರ್ನಿಯಿಂದಲೇ ಎಲಿಮಿನೇಟ್ ಆಗಿರುವ ಪಂಜಾಬ್ ಕಿಂಗ್ಸ್, ಕೇವಲ ಔಪಚಾರಿಕ ಪಂದ್ಯಗಳಷ್ಟೇ ಆಡುತ್ತಿದೆ. ತನ್ನ ಕೊನೆಯ ಪಂದ್ಯಗಳಲ್ಲಿ ಗೆದ್ದು ಟೂರ್ನಿ ಮುಗಿಸುವ ಲೆಕ್ಕಾಚಾರ ಹಾಕಿಕೊಂಡಿದೆ. ಅದರಂತೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 5 ವಿಕೆಟ್ಗಳ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಆದರೆ ಸಂಜು ಸ್ಯಾಮ್ಸನ್ ಪಡೆ ತೀವ್ರ ಮುಖಭಂಗಕ್ಕೆ ಒಳಗಾಯಿತು. ಆದರೆ ಈ ಪಂದ್ಯಕ್ಕಿಂತ ಹೆಚ್ಚು ಗಮನ ಸೆಳೆದಿದ್ದು ಟಾಮ್ ಕೊಹ್ಲರ್ ಕಾಡ್ಮೋರ್ (Tom Kohler-Cadmore) ಧರಿಸಿದ್ದ ನೆಕ್ ಡಿವೈಸ್ (Q-Collar or Neck Device).
ಹೌದು, ಪಿಬಿಕೆಎಸ್ ವಿರುದ್ಧ ಜೋಸ್ ಬಟ್ಲರ್ ಅವರ ಅಲಭ್ಯತೆಯಲ್ಲಿ ಆರ್ಆರ್ ಆರಂಭಿಕ ಬ್ಯಾಟರ್ ಟಾಮ್ ಕೊಹ್ಲರ್ ಕಾಡ್ಮೋರ್ ಧರಿಸಿದ್ದ ನೆಕ್ ಡಿವೈಸ್ ಎಲ್ಲರ ಕಣ್ಮನ ಸೆಳೆಯಿತು. ಟೂರ್ನಿಯುದ್ದಕ್ಕೂ ಬೆಂಚ್ ಕಾದಿದ್ದ ಕಾಡ್ಮೋರ್ ಕೊನೆಗೂ ಪ್ಲೇಯಿಂಗ್ನಲ್ಲಿ ಅವಕಾಶ ಪಡೆದು 23 ಎಸೆತಗಳಲ್ಲಿ 18 ರನ್ ಗಳಿಸಿ ನಿರಾಸೆ ಮೂಡಿಸಿದರೂ ವಿಶೇಷ ಸಾಧನ ಧರಿಸಿ ಕ್ರಿಕೆಟ್ ಪ್ರಿಯರ ಮೆಚ್ಚುಗೆಗೆ ಕಾರಣವಾಗಿದ್ದಾರೆ. ಎಲ್ಲರಿಗೂ ಈ ಸಲಕರಣೆ ಲಾಭ, ಬೆಲೆ ಕುರಿತು ತಿಳಿಯಲು ಕುತೂಹಲ ಮೂಡಿಸಿದೆ.
ಪಿಬಿಕೆಸ್ ವಿರುದ್ಧ ಟಾಮ್ ಕೊಹ್ಲರ್ ಧರಿಸಿದ್ದ ಕ್ಯೂ-ಕಾಲರ್ ಸಾಧನ ಯಾವುದು?
ಕ್ಯೂ-ಕಾಲರ್ ಸಾಧನವು (ನೆಕ್ ಡಿವೈಸ್) ಮೆದುಳಿಗೆ ಗಾಯ ಆಗುವುದನ್ನು ತಡೆಗಟ್ಟಲು ಕ್ರೀಡಾಪಟುಗಳು ಬಳಸುವ ಸುರಕ್ಷತಾ ಸಾಧನವಾಗಿದೆ. ಪ್ರಮಾಣಿತ ನೆಕ್‌ಬ್ಯಾಂಡ್ ಅನ್ನು ಕ್ಯೂ-ಕಾಲರ್ ಎಂದೂ ಕರೆಯಲಾಗುತ್ತದೆ. ಮೆದುಳಿನಿಂದ ಹೃದಯಕ್ಕೆ ರಕ್ತವನ್ನು ಹಿಂದಿರುಗಿಸುವ ಕಂಠನಾಳಗಳು ಸಾಧನದಿಂದ ಸ್ವಲ್ಪಮಟ್ಟಿಗೆ ಸಂಕುಚಿತಗೊಳ್ಳುತ್ತವೆ. ಈ ಕಾಲರ್ ಬ್ಯಾಂಡ್ ನಮ್ಮ ತಲೆಯ ರಕ್ತದ ಪರಿಮಾಣವನ್ನು ಹೆಚ್ಚಿಸುತ್ತದೆ. ಇದು ಕಡಿಮೆ ಚಲಿಸುವ ಕ್ರೀಡಾಪಟುಗಳು ಯಾವುದೇ ತಲೆ ಆಘಾತದಿಂದ ಮಿದುಳಿನ ಹಾನಿ ತಡೆಯಲು ಉತ್ತಮವಾಗಿ ಸಾಧ್ಯವಾಗುತ್ತದೆ.
ಕ್ಯೂ-ಕಾಲರ್ ಬೆಲೆಯೆಷ್ಟು?
ಕ್ಯೂ30 (ಮಿದುಳು ಸುರಕ್ಷತೆಗೆ ಸಂಬಂಧಿಸಿದ್ದು) ಇನ್ನೋವೇಶನ್ಸ್‌ನಿಂದ ಅಭಿವೃದ್ಧಿಪಡಿಸಿರುವ ಕ್ಯೂ-ಕಾಲರ್ ಪ್ರಮುಖ ಕನ್ಕ್ಯುಶನ್‌ಗಳನ್ನು ತಡೆಗಟ್ಟಲು ಇದು ಕ್ರಿಕೆಟ್ ಆಟಗಾರರಿಗೆ ಸಹಾಯಕ ಸಾಧನವಾಗಿದೆ. ಪ್ರಸ್ತುತ ಆಧುನಿಕ ಕ್ರಿಕೆಟ್ ಹೆಲ್ಮೆಟ್‌ಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಏಕೆಂದರೆ ತಲೆಗೆ ಬಡಿದ ಚೆಂಡುಗಳಿಂದ ಮೆದುಳಿಗೆ ಹಾನಿಯಾಗುವ ಪ್ರಕರಣಗಳು ಕಡಿಮೆಯಾಗಿವೆ. ಇದರ ಬೆಲೆ 199 ಡಾಲರ್. ಅಂದರೆ ಭಾರತೀಯ ಕರೆನ್ಸಿಯಲ್ಲಿ 16 ಸಾವಿರಕ್ಕೂ ಹೆಚ್ಚು.
ಆದಾಗ್ಯೂ, ಫೀಲ್ಡಿಂಗ್ ಅವಧಿಯಲ್ಲಿ ಚೆಂಡು ತಗುಲಿ, ಚೆಂಡು ತಡೆಯುವ ಸಂದರ್ಭದಲ್ಲಿ ಅಥ್ಲೀಟ್‌ಗಳು ಗಾಯಗೊಂಡ ಉದಾಹರಣೆಗಳಿವೆ. ಆದರೆ, ಈ ಸಾಧನದ ಪರಿಣಾಮಕಾರಿತ್ವ ಬೆಂಬಲಿಸಲು ಹೆಚ್ಚಿನ ಪ್ರಾಯೋಗಿಕ ಡೇಟಾ ಇಲ್ಲ. ಕ್ರಿಕೆಟ್ ಆಟಗಾರರಿಗೆ ಅಗತ್ಯವಿರುವ ಹೆಲ್ಮೆಟ್ ಬಳಕೆಗೆ ಐಸಿಸಿ ನಿರ್ಮಿಸಿದೆ. ಆದಾಗ್ಯೂ, ಅಂತಾರಾಷ್ಟ್ರೀಯ ಪಂದ್ಯಗಳ ಸಂದರ್ಭದಲ್ಲಿ ಕ್ಯೂ-ಕಾಲರ್‌ಗಳಂತಹ ಸಾಧನ ಬಳಕೆಗೆ ನಿಯಂತ್ರಣ ಹೇರುವಂತಿಲ್ಲ. 2014 ರಲ್ಲಿ ಫಿಲ್ ಹ್ಯೂಸ್ ಅವರ ದುರಂತ ಸಾವು ಕ್ರಿಕೆಟ್‌ನಲ್ಲಿ ಭಾರಿ ಕ್ರಾಂತಿಯನ್ನು ತಂದಿತು.