logo
ಕನ್ನಡ ಸುದ್ದಿ  /  ಕ್ರಿಕೆಟ್  /  ಸಾನಿಯಾ ಮಿರ್ಜಾ ಜೊತೆ ಸಂಬಂಧ ಕಡಿತಗೊಳಿಸಿ ಶೋಯೆಬ್ ಮಲಿಕ್ ವಿವಾಹವಾದ ಸನಾ ಜಾವೇದ್ ಯಾರು?

ಸಾನಿಯಾ ಮಿರ್ಜಾ ಜೊತೆ ಸಂಬಂಧ ಕಡಿತಗೊಳಿಸಿ ಶೋಯೆಬ್ ಮಲಿಕ್ ವಿವಾಹವಾದ ಸನಾ ಜಾವೇದ್ ಯಾರು?

Prasanna Kumar P N HT Kannada

Jan 20, 2024 04:03 PM IST

google News

ಶೋಯೆಬ್ ಮಲಿಕ್ ಮತ್ತು ಸನಾ ಜಾವೆದ್.

    • ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಜೊತೆಗಿನ ವಿಚ್ಛೇದನ ಸುದ್ದಿಯ ನಡುವೆಯೇ ಪಾಕಿಸ್ತಾನ ಕ್ರಿಕೆಟ್ ತಂಡದ ಆಲ್​ರೌಂಡರ್ ಶೋಯೆಬ್ ಮಲಿಕ್ ವಿವಾಹವಾದ ಸನಾ ಜಾವೆದ್ ಯಾರು? ಇಲ್ಲಿದೆ ವಿವರ.
ಶೋಯೆಬ್ ಮಲಿಕ್ ಮತ್ತು ಸನಾ ಜಾವೆದ್.
ಶೋಯೆಬ್ ಮಲಿಕ್ ಮತ್ತು ಸನಾ ಜಾವೆದ್.

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ಅವರೊಂದಿಗೆ ವಿಚ್ಛೇದನದ ವದಂತಿಗಳ ನಡುವೆ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ (Shoaib Malik) ಅವರು ನಟಿ ಸನಾ ಜಾವೇದ್ (Sana Javed) ಅವರನ್ನು ವಿವಾಹವಾಗಿದ್ದಾರೆ. ಮಲಿಕ್ ಸಾಮಾಜಿಕ ಮಾಧ್ಯಮದಲ್ಲಿ ಸಮಾರಂಭದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ಸಾನಿಯಾ ಅವರೊಂದಿಗೆ ಸಂಬಂಧ ಕಡಿತಗೊಳಿಸಿದ್ದಾರೆ.

ಭಾರತದ ಟೆನಿಸ್ ತಾರೆಗೆ ವಿಚ್ಛೇದನ ನೀಡಿದ್ದಾರೆಯೇ ಇಲ್ಲವೇ ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ 2021ರಿಂದಲೂ ಈವರೆಗೆ ವಿಚ್ಛೇದನ ಆಗಿದೆ. ಇಬ್ಬರೂ ಬೇರ್ಪಟ್ಟಿದ್ದಾರೆ ಎಂದು ವರದಿಯಾಗಿದೆ. ಕಳೆದ ವರ್ಷ ನಟಿಯ ಹುಟ್ಟುಹಬ್ಬದಂದು ಶುಭ ಹಾರೈಸಿದ ಬೆನ್ನಲ್ಲೇ ಪಾಕ್​ ಆಲ್‌ರೌಂಡರ್ ಶೋಯೆಬ್ ಮತ್ತು ಸನಾ ನಡುವೆ ಡೇಟಿಂಗ್ ವದಂತಿಗಳು ಹುಟ್ಟಿಕೊಂಡಿದ್ದವು. ಇದೀಗ ಅದು ಅಧಿಕೃತವಾಗಿದೆ.

2010ರಲ್ಲಿ ಮದುವೆ, 2018ರಲ್ಲಿ ಮಗ ಜನನ

ಹ್ಯಾಪಿ ಬರ್ತ್​​ಡೇ ಬುಡ್ಡಿ ಎಂದು ಪೋಸ್ಟ್​ ಮಾಡಿದ್ದ ಮಲಿಕ್, ಇಬ್ಬರು ಒಟ್ಟಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದರು. ಮಲಿಕ್ 2010ರ ಏಪ್ರಿಲ್ 12ರಂದು ಹೈದರಾಬಾದ್‌ನಲ್ಲಿ ಮುಸ್ಲಿಂ ಪದ್ಧತಿಯಲ್ಲಿ ಸಾಂಪ್ರದಾಯಿಕವಾಗಿ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಮಲಿಕ್ ವಿವಾಹವಾಗಿದ್ದರು. ಈ ದಂಪತಿ 2018ರಲ್ಲಿ ಇಜಾನ್ ಎಂಬ ಮಗನಿಗೆ ಜನ್ಮ ನೀಡಿದರು.

ಇನ್​ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುವ ಈ ಜೋಡಿ ಆಗಾಗ್ಗೆ ಮಗನ ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದಾಗ್ಯೂ, ಬೇರ್ಪಟ್ಟ ಕುರಿತು ಸುದ್ದಿಗಳು ನಿರಂತರವಾಗಿ ಹಬ್ಬುತ್ತಲೇ ಇದ್ದವು. ಮತ್ತೊಂದು ಸಂಗತಿ ಏನೆಂದರೆ ಇಬ್ಬರು ಸಹ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದೇವೆ, ಇಲ್ಲವೇ ಎನ್ನುವುದರ ಬಗ್ಗೆ ಸಾರ್ವಜನಿಕವಾಗಿ ಎಲ್ಲಿಯೂ ಮಾತನಾಡಿರಲಿಲ್ಲ.

ಸಾನಿಯಾಗೆ ಗೊತ್ತಿಲ್ಲದೆ ಡೇಟಿಂಗ್

ಕಳೆದ ವರ್ಷ ಶೋಯೆಬ್ ಮತ್ತು ಸಾನಿಯಾ ತಮ್ಮ ಮಗನ ಹುಟ್ಟುಹಬ್ಬವನ್ನು ದುಬೈನಲ್ಲಿ ಆಚರಿಸಿದರು. ಇಬ್ಬರು ಒಟ್ಟಿಗೆ ಕಾಣಿಸಿಕೊಂಡ ಕಾರಣ ಭಿನ್ನಾಭಿಪ್ರಾಯಗಳು ಬಗೆಹರಿದಿವೆ ಎಂದು ಎಲ್ಲರೂ ಊಹಿಸಿದ್ದರು. ತದನಂತರ ಇಬ್ಬರು ಸಹ ರಹಸ್ಯ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಿದ್ದ ಕಾರಣ ಮತ್ತೆ ವದಂತಿಗಳು ಹುಟ್ಟಿಕೊಂಡವು. ಇದೀಗ ಎಲ್ಲವೂ ಬಹಿರಂಗಗೊಂಡಿವೆ.

ಸನಾ ಜಾವೆದ್ ಅವರೊಂದಿಗೆ ಡೇಟಿಂಗ್ ನಡೆಸುತ್ತಿರುವ ಗೊತ್ತಾದ ಬಳಿಕ ಸಾನಿಯಾ ಈ ಬಗ್ಗೆ ಪ್ರಶ್ನಿಸಿದ್ದರು. ಸಾನಿಯಾಗೂ ಗೊತ್ತಿಲ್ಲದೆ ಸಂಬಂಧ ಬೆಳೆಸಿದ್ದರು ಮಲಿಕ್-ಸನಾ. ಇಬ್ಬರು ಒಟ್ಟಿಗೆ ಜಾಹೀರಾತು ಶೂಟಿಂಗ್ ಕೂಡ ನಡೆಸಿದ್ದರು. ಅಲ್ಲಿಂದ ಪರಿಚಯವಾಗಿ ಸ್ನೇಹ, ಪ್ರೀತಿಗೆ ತಿರುಗಿತ್ತು. ಹಾಗಾದರೆ, ವಿಚ್ಛೇದನ ಸುದ್ದಿಯ ನಡುವೆಯೇ ಮಲಿಕ್ ಮದುವೆಯಾದ ಸನಾ ಜಾವೆದ್ ಯಾರು?

ಸನಾ ಜಾವೇದ್ ಯಾರು?

ಸನಾ ಜಾವೇದ್ ಪ್ರಸಿದ್ಧ ಪಾಕಿಸ್ತಾನಿ ನಟಿಯಾಗಿದ್ದು, ಅವರು ಮಾರ್ಚ್ 25, 1993ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಜನಿಸಿದರು. ಸನಾ ಜಾವೇದ್ 2020ರಲ್ಲಿ ಕರಾಚಿಯಲ್ಲಿ ನಡೆದ ಖಾಸಗಿ ನಿಕಾಹ್ ಸಮಾರಂಭದಲ್ಲಿ ಗಾಯಕ ಉಮರ್ ಜಸ್ವಾಲ್ ಅವರನ್ನು ವಿವಾಹವಾದರು. ಆದರೀಗ ಈ ಜೋಡಿ ಬೇರ್ಪಟ್ಟಿದೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ಮಲಿಕ್ ಜೊತೆ ಪರಿಚಯವಾಗಿ ಅವರ ಪ್ರೀತಿಯ ಬಲೆಗೆ ಬಿದ್ದಿದ್ದರು ಎಂದು ಸುದ್ದಿಗಳಿವೆ.

2012ರಲ್ಲಿ ಶೆಹರ್-ಎ-ಝಾತ್‌ ಚಿತ್ರದೊಂದಿಗೆ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ್ದ ಸನಾ, ಹಲವಾರು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರೋಮ್ಯಾಂಟಿಕ್ ನಾಟಕ ಖಾನಿಯಲ್ಲಿ 'ಖಾನಿ' ಪಾತ್ರ ನಿರ್ವಹಿಸಿದ ನಂತರ ಸನಾ ಅವರು ಹೆಚ್ಚು ಪ್ರಸಿದ್ಧಿಯಾದರು. ಅದಕ್ಕಾಗಿ ಲಕ್ಸ್ ಸ್ಟೈಲ್ ಪ್ರಶಸ್ತಿಗೂ ಅವರ ಹೆಸರು ನಾಮನಿರ್ದೇಶನಗೊಂಡಿತ್ತು. ಸಾಮಾಜಿಕ-ಆಧಾರಿತ ನಾಟಕಗಳಾದ ರುಸ್ವಾಯ್ ಮತ್ತು ಡಂಕ್​​ಗಳಿಂದ ಹೆಚ್ಚಿನ ಪ್ರಶಂಸೆ ಗಳಿಸಿದರು.

ಅತ್ತುತ್ತಮ ನಟಿ ಕ್ರಿಟಿಕ್ಸ್​​ನಲ್ಲಿ ಪಾಕಿಸ್ತಾನದ ಪ್ರತಿಷ್ಠಿತ ಪಿಸಾ ಪ್ರಶಸ್ತಿ ಗೆದ್ದುಕೊಂಡಿದ್ದರು. ಅವರು ಬೇಹದ್ದ್, ಶರೀಕ್-ಎ-ಹಯಾತ್, ದಿನೋ ಕಿ ದುಲ್ಹನಿಯಾ ಮತ್ತು ಐ ಲವ್ ಯೂ ಝಾದ ಸೇರಿ ಹಲವು ಜನಪ್ರಿಯ ಟೆಲಿ ಫಿಲ್ಮ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಅಲ್ಲದೆ, ಅನೇಕ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ಪಾಕಿಸ್ತಾನದ ಅತ್ಯುತ್ತಮ ಮತ್ತು ಬೋಲ್ಡ್​ ನಟಿಗಳಲ್ಲಿ ಒಬ್ಬರಾಗಿದ್ದ ಸನಾ ಜಾವೆದ್ ಈಗ ಮಲಿಕ್​ ಅವರನ್ನು ವರಿಸಿದ್ದಾರೆ. ಸನಾಗೆ ಇದು ಎರಡನೇ ಮದುವೆ. ಮಲಿಕ್​ಗೆ ಮೂರನೇ ಮದುವೆ.

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ