logo
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ ಇತಿಹಾಸದಲ್ಲಿ ಟಾಪ್-10 ಅತ್ಯಂತ ದುಬಾರಿ ಆಟಗಾರರು; ಅಧಿಕ ಮೊತ್ತಕ್ಕೆ ಸೇಲಾದ ಭಾರತದವರು ಯಾರು?

ಐಪಿಎಲ್ ಇತಿಹಾಸದಲ್ಲಿ ಟಾಪ್-10 ಅತ್ಯಂತ ದುಬಾರಿ ಆಟಗಾರರು; ಅಧಿಕ ಮೊತ್ತಕ್ಕೆ ಸೇಲಾದ ಭಾರತದವರು ಯಾರು?

Prasanna Kumar P N HT Kannada

Dec 05, 2023 11:01 AM IST

google News

ಐಪಿಎಲ್ ಇತಿಹಾಸದಲ್ಲಿ ಟಾಪ್-10 ಅತ್ಯಂತ ದುಬಾರಿ ಆಟಗಾರರು.

    • Who is the Most Expensive Player in IPL History: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲಾದ ಆಟಗಾರರು ಯಾರು? ಭಾರತದ ಪರ ದುಬಾರಿ ಕ್ರಿಕೆಟಿಗ ಯಾರು? 2008-2023ರವರೆಗೂ ಪ್ರತಿ ಆವೃತ್ತಿಯಲ್ಲೂ ದುಬಾರಿ ಆಟಗಾರ ಯಾರು? ಇಲ್ಲಿದೆ ಎಲ್ಲದರ ವಿವರ.
ಐಪಿಎಲ್ ಇತಿಹಾಸದಲ್ಲಿ ಟಾಪ್-10 ಅತ್ಯಂತ ದುಬಾರಿ ಆಟಗಾರರು.
ಐಪಿಎಲ್ ಇತಿಹಾಸದಲ್ಲಿ ಟಾಪ್-10 ಅತ್ಯಂತ ದುಬಾರಿ ಆಟಗಾರರು.

2024ರ ಇಂಡಿಯನ್ ಪ್ರೀಮಿಯರ್ ಲೀಗ್​ ಮಿನಿ ಹರಾಜಿಗೆ (IPL Mini Aucton 2024) ದಿನಗಣನೆ ಆರಂಭವಾಗಿದೆ. ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ವಿದೇಶದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಡಿಸೆಂಬರ್ 19ರಂದು ದುಬೈನಲ್ಲಿ ಜರುಗಲಿದೆ. ದೇಶ-ವಿದೇಶ ಸೇರಿದಂತೆ ಪ್ರಮುಖ ಮತ್ತು ಯುವ ಆಟಗಾರರು ಭರ್ಜರಿ ಮೊತ್ತವನ್ನು ಜೇಬಿಗಿಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ.

ಏಕದಿನ ವಿಶ್ವಕಪ್​ನಲ್ಲಿ ಅಬ್ಬರಿಸಿದ ಆಟಗಾರರು ಮತ್ತು ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಿಂಚಿದ ಯುವ ಆಟಗಾರರ ಮೇಲೆ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ತಮ್ಮ ತಮ್ಮ ತಂಡಗಳಲ್ಲಿ ಬೇಕಾಗಿರುವ ಸ್ಲಾಟ್​​ಗಳನ್ನು ಭರ್ತಿ ಮಾಡಿಕೊಳ್ಳಲು ಅದಕ್ಕೆ ಸಂಬಂಧಿಸಿದ ಆಟಗಾರರನ್ನೇ ಹುಡುಕಾಟ ನಡೆಸುತ್ತಿವೆ. ಹಾಗಾಗಿ ಹಲವು ಆಟಗಾರರು ದುಬಾರಿ ಮೊತ್ತಕ್ಕೆ ಸೇಲಾಗುವ ಸಾಧ್ಯತೆ ಹೆಚ್ಚಿದೆ.

ಹಾಗಾದರೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲಾದ ಆಟಗಾರರು ಯಾರು? ಭಾರತದ ಪರ ದುಬಾರಿ ಕ್ರಿಕೆಟಿಗ ಎನಿಸಿದರು ಯಾರು? 2008 ರಿಂದ 2023ರವರೆಗೂ ಪ್ರತಿ ಆವೃತ್ತಿಯಲ್ಲೂ ದುಬಾರಿ ಆಟಗಾರ ಎನಿಸಿಕೊಂಡವರು ಯಾರು? ಇಲ್ಲಿದೆ ಎಲ್ಲದರ ವಿವರ.

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ

ಶ್ರೇಣಿಆಟಗಾರತಂಡಬೆಲೆ (ರೂಗಳಲ್ಲಿ)ವರ್ಷ
1ಸ್ಯಾಮ್ ಕರನ್ಪಂಜಾಬ್18.50 ಕೋಟಿ2023
2ಕ್ಯಾಮರೂನ್ ಗ್ರೀನ್ಮುಂಬೈ17.50 ಕೋಟಿ2023
3ಬೆನ್ ಸ್ಟೋಕ್ಸ್ಸಿಎಸ್​ಕೆ16.25 ಕೋಟಿ2023
4ಕ್ರಿಸ್ ಮೋರಿಸ್ರಾಜಸ್ಥಾನ್16.25 ಕೋಟಿ2022
5ನಿಕೋಲಸ್ ಪೂರನ್ಎಲ್​ಎಸ್​ಜಿ16 ಕೋಟಿ2021
6ಯುವರಾಜ್ ಸಿಂಗ್ಡೆಲ್ಲಿ 16 ಕೋಟಿ2015
7ರೋಹಿತ್ ಶರ್ಮಾಮುಂಬೈ16 ಕೋಟಿ2023
8ರವೀಂದ್ರ ಜಡೇಜಾಸಿಎಸ್​ಕೆ16 ಕೋಟಿ2023
9ರಿಷಬ್ ಪಂತ್ಡೆಲ್ಲಿ16 ಕೋಟಿ2023
10ಇಶಾನ್ ಕಿಶನ್ಮುಂಬೈ15.25 ಕೋಟಿ2022

ಐಪಿಎಲ್‌ನಲ್ಲಿ ವರ್ಷವಾರು ಅತ್ಯಂತ ದುಬಾರಿ ಆಟಗಾರರು

ವರ್ಷಆಟಗಾರ ಮತ್ತು ತಂಡಬೆಲೆ (ರೂ.ಗಳಲ್ಲಿ)
2023ಸ್ಯಾಮ್ ಕರನ್ (PBKS)18.50 ಕೋಟಿ
2022ಇಶಾನ್ ಕಿಶನ್ (MI)15.25 ಕೋಟಿ
2021ಕ್ರಿಸ್ ಮೋರಿಸ್ (RR)16.25 ಕೋಟಿ
2020ಪ್ಯಾಟ್ ಕಮ್ಮಿನ್ಸ್ (KKR)15.5 ಕೋಟಿ
2019ಉನದ್ಕತ್ (RR​)8.4 ಕೋಟಿ
2018ಬೆನ್ ಸ್ಟೋಕ್ಸ್ (RR)12.5 ಕೋಟಿ
2017ಬೆನ್ ಸ್ಟೋಕ್ಸ್ (RPS)14.5 ಕೋಟಿ
2016ಶೇನ್ ವ್ಯಾಟ್ಸನ್ (RCB)9.5 ಕೋಟಿ
2015ಯುವರಾಜ್ ಸಿಂಗ್ (DD)16 ಕೋಟಿ
2014ಯುವರಾಜ್ ಸಿಂಗ್ (RCB)14 ಕೋಟಿ
2013ಗ್ಲೆನ್ ಮ್ಯಾಕ್ಸ್‌ವೆಲ್ (MI)6.3 ಕೋಟಿ
2012ರವೀಂದ್ರ ಜಡೇಜಾ (CSK)12.8 ಕೋಟಿ
2011ಗೌತಮ್ ಗಂಭೀರ್ (KKR)14.9 ಕೋಟಿ
2010ಶೇನ್ ಬಾಂಡ್ (KKR)4.8 ಕೋಟಿ
2009ಕೆವಿನ್ ಪೀಟರ್ಸನ್ (RCB)9.8 ಕೋಟಿ
2008ಎಂಎಸ್ ಧೋನಿ (CSK)9.5 ಕೋಟಿ

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಭಾರತೀಯ ಆಟಗಾರರು

ವರ್ಷಆಟಗಾರ ಮತ್ತು ತಂಡಬೆಲೆ (ರೂ.ಗಳಲ್ಲಿ)
2015ಯುವರಾಜ್ ಸಿಂಗ್ (DD)16 ಕೋಟಿ
2023ರೋಹಿತ್ ಶರ್ಮಾ (MI)16 ಕೋಟಿ
2023ರವೀಂದ್ರ ಜಡೇಜಾ (CSK)16 ಕೋಟಿ
2023ರಿಷಭ್ ಪಂತ್ (DC)16 ಕೋಟಿ
2022ಇಶಾನ್ ಕಿಶನ್ (MI)15.25 ಕೋಟಿ
2020ದೀಪಕ್ ಚಹರ್ (CSK)14 ಕೋಟಿ
2014ಯುವರಾಜ್ ಸಿಂಗ್ (RCB)14 ಕೋಟಿ
2014ದಿನೇಶ್ ಕಾರ್ತಿಕ್ (DD)12.50 ಕೋಟಿ
2022ಶ್ರೇಯಸ್ ಅಯ್ಯರ್ (KKR)12.25 ಕೋಟಿ

ಐಪಿಎಲ್-2023ರ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರರು

ಆಟಗಾರಬೆಲೆ (ರೂ.ಗಳಲ್ಲಿ)ತಂಡ
ಸ್ಯಾಮ್ ಕರನ್18.50 ಕೋಟಿPBKS
ಕ್ಯಾಮರೂನ್ ಗ್ರೀನ್17.50 ಕೋಟಿMI
ಬೆನ್ ಸ್ಟೋಕ್ಸ್16.25 ಕೋಟಿCSK
ನಿಕೋಲಸ್ ಪೂರನ್16 ಕೋಟಿLSG
ಹ್ಯಾರಿ ಬ್ರೂಕ್13.25 ಕೋಟಿSRH
ಮಯಾಂಕ್ ಅಗರ್ವಾಲ್8.25 ಕೋಟಿSRH
ಶಿವಂ ಮಾವಿ6 ಕೋಟಿGT
ಜೇಸನ್ ಹೋಲ್ಡರ್5.75 ಕೋಟಿRR
ಮುಕೇಶ್ ಕುಮಾರ್5.5 ಕೋಟಿDC
ಹೆನ್ರಿಚ್ ಕ್ಲಾಸೆನ್5.25 ಕೋಟಿSRH

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ