logo
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತದಲ್ಲಿ ಟರ್ನಿಂಗ್ ಪಿಚ್ ಏಕೆ ಬೇಕು, ಬ್ಯಾಟಿಂಗ್ ಗುಣಮಟ್ಟ ಕುಸೀತಿದೆ; ಬಿಸಿಸಿಐ ವಿರುದ್ಧ ಗುಡುಗಿದ ಸೌರವ್ ಗಂಗೂಲಿ

ಭಾರತದಲ್ಲಿ ಟರ್ನಿಂಗ್ ಪಿಚ್ ಏಕೆ ಬೇಕು, ಬ್ಯಾಟಿಂಗ್ ಗುಣಮಟ್ಟ ಕುಸೀತಿದೆ; ಬಿಸಿಸಿಐ ವಿರುದ್ಧ ಗುಡುಗಿದ ಸೌರವ್ ಗಂಗೂಲಿ

Prasanna Kumar P N HT Kannada

Feb 04, 2024 10:05 AM IST

google News

ಬಿಸಿಸಿಐ ವಿರುದ್ಧ ಗುಡುಗಿದ ಸೌರವ್ ಗಂಗೂಲಿ

    • Sourav Ganguly on turning tracks : ತವರಿನ ಪರಿಸ್ಥಿತಿಗಳಲ್ಲಿ ಭಾರತ ಹೆಚ್ಚಾಗಿ ಸ್ಪಿನ್ನರ್​​ಗಳಾದ ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಮೇಲೆ ಅವಲಂಬಿತವಾಗಿದೆ. ಎಲ್ಲರಿಗೂ ನೆರವಾಗುವ ಪಿಚ್​​ಗಳನ್ನು ಸಿದ್ಧಪಡಿಸಬೇಕು ಎಂದು ಸೌರವ್ ಗಂಗೂಲಿ ಸಲಹೆ ನೀಡಿದ್ದಾರೆ.
ಬಿಸಿಸಿಐ ವಿರುದ್ಧ ಗುಡುಗಿದ ಸೌರವ್ ಗಂಗೂಲಿ
ಬಿಸಿಸಿಐ ವಿರುದ್ಧ ಗುಡುಗಿದ ಸೌರವ್ ಗಂಗೂಲಿ

ಭಾರತದ ವೇಗಿಗಳು ಉತ್ತಮ ಪಿಚ್‌ಗಳಲ್ಲಿ 20 ವಿಕೆಟ್‌ ಪಡೆಯವಷ್ಟು ಸಾಕಷ್ಟು ಉತ್ತಮವಾಗಿರುವುದರಿಂದ ಬಿಸಿಸಿಐ ತವರಿನ ಸರಣಿಯಲ್ಲಿ ರ್ಯಾಂಕ್ ಟರ್ನರ್​ (ಸ್ಪಿನ್ನರ್​ಗೆ ನೆರವಾಗುವ ಪಿಚ್​ಗಳನ್ನು) ಸಿದ್ಧಪಡಿಸಬಾರದು ಎಂದು ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಅಭಿಪ್ರಾಯಪಟ್ಟಿದ್ದಾರೆ. ಮಾರಕ ಬೌಲಿಂಗ್ ದಾಳಿಯ ಮೂಲಕ ಇಂಗ್ಲೆಂಡ್ ಬ್ಯಾಟಿಂಗ್‌​ ಬೆನ್ನು ಮೂಳೆ ಮುರಿದ ಜಸ್ಪೀರ್ತ್ ಬುಮ್ರಾ, ಸ್ಪಿನ್​ ಟ್ರ್ಯಾಕ್​ನಲ್ಲೂ ಕೇವಲ 45 ರನ್ ನೀಡಿ 6 ವಿಕೆಟ್​ ಪಡೆದು ಮಿಂಚಿದ್ದು ಎಲ್ಲರ ಗಮನ ಸೆಳೆದಿದೆ.

ವಿಶಾಖಪಟ್ಟಣಂನ ಫ್ಲಾಟ್ ಟ್ರ್ಯಾಕ್‌ನಲ್ಲಿ ಬೆಂಕಿ ಬಿರುಗಾಳಿ ಬೌಲಿಂಗ್ ನಡೆಸಿದ ಬುಮ್ರಾ, ಆಟವನ್ನು ಬದಲಾಯಿಸುವ ಕಾಗುಣಿತದಲ್ಲಿ ಹಲವು ದಾಖಲೆ ಬರೆದರು. ಜೋ ರೂಟ್, ಒಲಿ ಪೋಪ್, ಜಾನಿ ಬೈರ್‌ಸ್ಟೋ, ಬೆನ್ ಸ್ಟೋಕ್ಸ್, ಟಾಮ್ ಹಾರ್ಟ್ಲಿ ಮತ್ತು ಜೇಮ್ಸ್ ಆಂಡರ್ಸನ್ ಅವರ ವಿಕೆಟ್ ಪಡೆದ ಬುಮ್ರಾ, ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದ 150ನೇ ವಿಕೆಟ್ ಉರುಳಿಸಿದರು. ಅತ್ಯಂತ ವೇಗವಾಗಿ 150 ಟೆಸ್ಟ್‌ ವಿಕೆಟ್‌ ಕಬಳಿಸಿದ ಭಾರತದ ಮೊದಲ ವೇಗಿ ಎಂಬ ದಾಖಲೆಗೆ ಪಾತ್ರರಾದರು. ಮೊದಲ ಇನ್ನಿಂಗ್ಸ್​​ನಲ್ಲೂ ಗಮನಾರ್ಹ ಸಾಧನೆ ಮಾಡಿದ್ದರು.

ಅಚ್ಚರಿ ಸಂಗತಿ ಏನೆಂದರೆ ಭಾರತೀಯ ಪಿಚ್​ಗಳು ಸ್ಪಿನ್ನರ್​ಗಳಿಗೆ ಹೆಚ್ಚು ನೆರವು ನೀಡುತ್ತವೆ. ವೇಗದ ಬೌಲರ್ಸ್ ವಿಕೆಟ್ ಪಡೆಯುವುದು ಅಷ್ಟು ಸುಲಭವಲ್ಲ. ಅದರ ನಡುವೆಯೂ ಬುಮ್ರಾ ವಿಧ್ವಂಸ ಸೃಷ್ಟಿಸಿರುವುದು ಗಮನಾರ್ಹ ಸಂಗತಿ. ಆದರೆ ವಿದೇಶಿ ಪಿಚ್​ಗಳು ವೇಗದ ಬೌಲರ್​​ಗಳಿಗೆ ನೆರವು ನೀಡಿದರೆ, ಸ್ಪಿನ್ನರ್​ಗಳಿಗೆ ಅಷ್ಟಕಷ್ಟೆ. ಹಾಗಾಗಿ ತವರಿನ ಪರಿಸ್ಥಿತಿಗಳಲ್ಲಿ ಭಾರತ ಹೆಚ್ಚಾಗಿ ಸ್ಪಿನ್ನರ್​​ಗಳಾದ ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಮೇಲೆ ಅವಲಂಬಿತವಾಗಿದೆ. ಎಲ್ಲರಿಗೂ ನೆರವಾಗುವ ಪಿಚ್​​ಗಳನ್ನು ಸಿದ್ಧಪಡಿಸಬೇಕು ಎಂದು ಸೌರವ್ ಗಂಗೂಲಿ ಸಲಹೆ ನೀಡಿದ್ದಾರೆ.

ಸೌರವ್ ಗಂಗೂಲಿ ಹೇಳಿದ್ದೇನು?

ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಮೂವರ ಮಾರಕ ಬೌಲಿಂಗ್ ವಿದೇಶದಲ್ಲಿ ಧನಾತ್ಮಕ ಫಲಿತಾಂಶ ನೀಡಿದೆ. ಟೆಸ್ಟ್​​​ನಲ್ಲಿ ಭಾರತೀಯ ಬೌಲರ್‌ಗಳು ಅದ್ಭುತವಾಗಿದ್ದರೂ ಬ್ಯಾಟರ್‌ಗಳು ಹೆಣಗಾಡುತ್ತಿದ್ದಾರೆ. ಭಾರತದಲ್ಲಿನ ಕಳಪೆ ಪಿಚ್‌ನಿಂದಾಗಿ ಬ್ಯಾಟಿಂಗ್ ಗುಣಮಟ್ಟ ಕುಸಿದಿದೆ ಎಂದು ಗಂಗೂಲಿ ಭಾವಿಸಿದ್ದಾರೆ. ನಾನು ಬುಮ್ರಾ, ಶಮಿ, ಸಿರಾಜ್, ಮುಖೇಶ್ ಅವರಂತಹ ಬೌಲಿಂಗ್​ ನೋಡಿದರೆ ಭಾರತದಲ್ಲಿ ಟರ್ನಿಂಗ್ ಟ್ರ್ಯಾಕ್‌ಗಳನ್ನು ಏಕೆ ಸಿದ್ಧಪಡಿಸುತ್ತಿದ್ದಾರೆ ಎಂಬುದೇ ಆಶ್ಚರ್ಯವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವೇಗಿಗಳು ಉತ್ತಮ ಪಿಚ್​​ನಲ್ಲಿ 20 ವಿಕೆಟ್​ಗಳನ್ನೂ ಪಡೆಯುತ್ತಾರೆ. ಉತ್ತಮ ವಿಕೆಟ್‌ಗಳಲ್ಲಿ ಆಡುವ ನನ್ನ ಕನ್ವಿಕ್ಷನ್ ಪ್ರತಿ ಪಂದ್ಯದಲ್ಲೂ ಬಲಗೊಳ್ಳುತ್ತಲೇ ಇದೆ. ಯಾವುದೇ ಪಿಚ್​​​ನಲ್ಲಿ ಬೇಕಾದರೂ ಅಶ್ವಿನ್, ಜಡೇಜಾ, ಕುಲ್ದೀಪ್, ಅಕ್ಷರ್​ ಅವರೊಂದಿಗೆ 20 ವಿಕೆಟ್‌ ಪಡೆಯುತ್ತಾರೆ. ತವರಿನಲ್ಲಿ ಕಳೆದ 6 ರಿಂದ 7 ವರ್ಷಗಳಲ್ಲಿ ಕಳಪೆ ಪಿಚ್‌ಗಳಿಂದ ಬ್ಯಾಟಿಂಗ್ ಗುಣಮಟ್ಟ ಕುಸಿಯುತ್ತಿದೆ. ಉತ್ತಮ ವಿಕೆಟ್‌ಗಳು ಅತ್ಯಗತ್ಯ. ಇದರೊಂದಿಗೆ ಐದು ದಿನಗಳ ಪಂದ್ಯವೂ ನಡೆಯುತ್ತದೆ. ಭಾರತವೂ ಗೆಲ್ಲುತ್ತದೆ ಎಂದು ಬಿಸಿಸಿಐಗೆ ಟ್ಯಾಗ್​ ಮಾಡಿ ಎಕ್ಸ್​ನಲ್ಲಿ ಬರೆದಿದ್ದಾರೆ.

ಕಳೆದ ವರ್ಷವೂ ಗಂಗೂಲಿ ಇದನ್ನೇ ಹೇಳಿದ್ದರು

ಕಳೆದ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಭಾರತದ ತವರು ಸರಣಿಯ ಸಂದರ್ಭದಲ್ಲಿ ಮಾಜಿ ಬಿಸಿಸಿಐ ಮುಖ್ಯಸ್ಥ ಗಂಗೂಲಿ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಅದರಲ್ಲೂ ವಿಶೇಷವಾಗಿ ಇಂದೋರ್ ಪಿಚ್ ಐಸಿಸಿಯಿಂದ ’ಕಳಪೆ‘ ರೇಟಿಂಗ್ ಗಳಿಸಿದ ನಂತರ ಈ ಹೇಳಿಕೆ ಕೊಟ್ಟಿದ್ದರು. ಯಾವಾಗಲೂ ವೇಗದ ಬೌಲಿಂಗ್‌ಗೆ ಸಲಹೆಗಾರರಾಗಿರುವ ಸೌರವ್ ಗಂಗೂಲಿ, ಭಾರತವು ಕ್ರೀಡಾ ಪಿಚ್‌ಗಳನ್ನು ಸಿದ್ಧಪಡಿಸಬೇಕು ಎಂದು ಹೇಳಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ