logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Odi World Cup: 1975 ರಿಂದ 2023ರವರೆಗೆ ವಿಶ್ವಕಪ್ ಟ್ರೋಫಿಗಳು ಹೇಗೆ ಬದಲಾಗಿವೆ ನೋಡಿ!

ODI World Cup: 1975 ರಿಂದ 2023ರವರೆಗೆ ವಿಶ್ವಕಪ್ ಟ್ರೋಫಿಗಳು ಹೇಗೆ ಬದಲಾಗಿವೆ ನೋಡಿ!

Dec 22, 2023 05:33 PM IST

World Cup Trophies: ಏಕದಿನ ವಿಶ್ವಕಪ್ ಟ್ರೋಫಿಗಳು 1975 ರಿಂದ 2023ರವರೆಗೂ ಬದಲಾಗುತ್ತಲೇ ಬಂದಿವೆ. 1975 ರಿಂದ 1983ರವರೆಗೆ ನಡೆದ ವಿಶ್ವಕಪ್​ಗಳಿಗೆ ಒಂದು ಟ್ರೋಫಿ, 1987, 1992, 1996ರಲ್ಲಿ ವಿಭಿನ್ನ ಟ್ರೋಫಿಗಳಿಗೆ ವಿಜೇತ ತಂಡಗಳು ಮುತ್ತಿಕ್ಕಿದ್ದವು. ಆದರೆ, 1999 ರಿಂದ ಈವರೆಗೂ ಒಂದೇ ಟ್ರೋಫಿ. ಕಳೆದ 24 ವರ್ಷಗಳಿಂದ ಟ್ರೋಫಿ ಬದಲಾಗಲೇ ಇಲ್ಲ.

  • World Cup Trophies: ಏಕದಿನ ವಿಶ್ವಕಪ್ ಟ್ರೋಫಿಗಳು 1975 ರಿಂದ 2023ರವರೆಗೂ ಬದಲಾಗುತ್ತಲೇ ಬಂದಿವೆ. 1975 ರಿಂದ 1983ರವರೆಗೆ ನಡೆದ ವಿಶ್ವಕಪ್​ಗಳಿಗೆ ಒಂದು ಟ್ರೋಫಿ, 1987, 1992, 1996ರಲ್ಲಿ ವಿಭಿನ್ನ ಟ್ರೋಫಿಗಳಿಗೆ ವಿಜೇತ ತಂಡಗಳು ಮುತ್ತಿಕ್ಕಿದ್ದವು. ಆದರೆ, 1999 ರಿಂದ ಈವರೆಗೂ ಒಂದೇ ಟ್ರೋಫಿ. ಕಳೆದ 24 ವರ್ಷಗಳಿಂದ ಟ್ರೋಫಿ ಬದಲಾಗಲೇ ಇಲ್ಲ.
ಏಕದಿನ ವಿಶ್ವಕಪ್‌ ಟೂರ್ನಿ ಆರಂಭಕ್ಕೆ ಸಮಯ ಹತ್ತಿರವಾಗಿದೆ. ಅಕ್ಟೋಬರ್ 5ರಿಂದ ಆರಂಭವಾಗಲಿರುವ ಈ ಮೆಗಾ ಟೂರ್ನಿಗೆ ಹತ್ತು ತಂಡಗಳು ಪೈಪೋಟಿ ನಡೆಸುತ್ತಿವೆ. ಆದರೆ, 1975ರಲ್ಲಿ ಆರಂಭವಾದ ವಿಶ್ವಕಪ್‌ನಲ್ಲಿ ನೀಡಿದ ಟ್ರೋಫಿಗಳು ಈ 48 ವರ್ಷಗಳಲ್ಲಿ ಹಲವು ಬಾರಿ ಬದಲಾಗಿವೆ. ಯಾವ ಟ್ರೋಫಿಯನ್ನು ಯಾವಾಗ ನೀಡಲಾಯಿತು ಎಂಬುದನ್ನು ನೋಡೋಣ.
(1 / 7)

World Cup Trophies: 1983ರಲ್ಲಿ ಲಾರ್ಡ್ಸ್​ ಮೈದಾನದ ಬಾಲ್ಕನಿಯಲ್ಲಿ ಭಾರತದ ನಾಯಕ ಕಪಿಲ್ ದೇವ್ ವಿಶ್ವಕಪ್ ಟ್ರೋಫಿ ಸ್ವೀಕರಿಸುತ್ತಿರುವ ಫೋಟೋ ಇದು. 1975 ರಿಂದ 1983 ರವರೆಗೆ ಪ್ರುಡೆನ್ಶಿಯಲ್ ಕಪ್ ಹೆಸರಿನಲ್ಲಿ ನಡೆದ ವಿಶ್ವಕಪ್ ಟ್ರೋಫಿಗಳು ಒಂದೇ ಆಗಿದ್ದವು. 1975 ಮತ್ತು 1979 ರಲ್ಲಿ ವೆಸ್ಟ್ ಇಂಡೀಸ್ ಚಾಂಪಿಯನ್ ಆಗಿತ್ತು. 1983ರಲ್ಲಿ ಭಾರತ ಜಯಿಸುವ ಮೂಲಕ ವೆಸ್ಟ್ ಇಂಡೀಸ್, ಹ್ಯಾಟ್ರಿಕ್ ಚಾಂಪಿಯನ್​ ಕನಸಿಗೆ ಅಡ್ಡಿಯಾಗಿತ್ತು.
(2 / 7)

World Cup Trophies: 1987ರಲ್ಲಿ ಭಾರತ ಮತ್ತು ಪಾಕಿಸ್ತಾನ ಜಂಟಿಯಾಗಿ ನಡೆದ ವಿಶ್ವಕಪ್ ಟ್ರೋಫಿ ಇದಾಗಿದೆ. ಅಂದು ಆಸ್ಟ್ರೇಲಿಯಾ ಮೊದಲ ವಿಶ್ವಕಪ್ ಗೆದ್ದಿತ್ತು. ಅಂದಿನ ನಾಯಕ ಅಲನ್ ಬಾರ್ಡರ್ ಕೈಯಲ್ಲಿದ್ದ ಈ ವಿಶ್ವಕಪ್ ಟ್ರೋಫಿ ಆ ಒಂದು ಬಾರಿಗೆ ಮಾತ್ರ ನೀಡಲಾಗಿತ್ತು. ಇದನ್ನು ರಿಲಯನ್ಸ್ ವಿಶ್ವಕಪ್ ಎಂದು ಕರೆಯಲಾಯಿತು.
(3 / 7)

World Cup Trophies: ಇದು 1992ರಲ್ಲಿ ನೀಡಲಾದ ವಿಶ್ವಕಪ್ ಟ್ರೋಫಿಯಾಗಿದೆ. ಎಲ್ಲಾ ಟ್ರೋಫಿಗಳಲ್ಲಿ ಅತ್ಯಂತ ಸುಂದರವಾದ ಟ್ರೋಫಿ ಎಂದು ಕರೆಯಲ್ಪಡುತ್ತದೆ. ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಗೆದ್ದಿತ್ತು.
(4 / 7)

World Cup Trophies: 1996ರಲ್ಲಿ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಿದ್ದ ವಿಶ್ವಕಪ್ ಟ್ರೋಫಿ ಇದಾಗಿದೆ. ಲಾಹೋರ್‌ನಲ್ಲಿ ಫೈನಲ್ ನಡೆದಾಗ ಆಸ್ಟ್ರೇಲಿಯಾವನ್ನು ಸೋಲಿಸಿದ ಶ್ರೀಲಂಕಾ ಮೊದಲ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡಿತು. ಇದು ವಿಶ್ವಕಪ್ ಟ್ರೋಫಿಗಳಲ್ಲಿ ಸುಂದರವಾಗಿ ಅಲಂಕರಿಸಲ್ಪಟ್ಟ ಟ್ರೋಫಿ ಎಂದು ಕರೆಯಲ್ಪಡುತ್ತದೆ.
(5 / 7)

World Cup Trophies: 1999ರಿಂದ ಈವರೆಗೂ ಒಂದೇ ಟ್ರೋಫಿಯನ್ನು ಪ್ರಸ್ತುತಪಡಿಸಲಾಗಿದೆ. ಈ ಟ್ರೋಫಿಯನ್ನು 1999ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಲಾಯಿತು. ಯಾವ ಕೋನದಿಂದ ನೋಡಿದರೂ ಒಂದೇ ರೀತಿ ಕಾಣುವ ಟ್ರೋಫಿ ಇದಾಗಿದೆ. ಟ್ರೋಫಿಯಲ್ಲಿ ಪ್ರತಿ ಬದಿಯಲ್ಲಿ 3 ಸ್ಟಂಪ್‌ಗಳು ಮತ್ತು ಮೇಲ್ಭಾಗದಲ್ಲಿ ಚಿನ್ನದ ಲೇಪಿತ ಗ್ಲೋಬ್ ಅನ್ನು ಜೋಡಿಸಲಾಗಿದೆ.
(6 / 7)

ಈ ಟ್ರೋಫಿಯಲ್ಲಿ ವಿಜೇತ ತಂಡವನ್ನು ಹೆಸರನ್ನು ಅಂಟಿಸಲಾಗುತ್ತದೆ. 1999 ರಿಂದ 2007ರವರೆಗೆ, ಆಸ್ಟ್ರೇಲಿಯಾ ಸತತ ಮೂರು ಬಾರಿ ಟ್ರೋಫಿ ಗೆದ್ದುಕೊಂಡಿತು. 2011ರಲ್ಲಿ ಭಾರತವು, 2015ರಲ್ಲಿ ಆಸ್ಟ್ರೇಲಿಯಾ, 2019ರಲ್ಲಿ ಇಂಗ್ಲೆಂಡ್ ಟ್ರೋಫಿ ಗೆದ್ದುಕೊಂಡಿವೆ.
(7 / 7)

    ಹಂಚಿಕೊಳ್ಳಲು ಲೇಖನಗಳು