logo
ಕನ್ನಡ ಸುದ್ದಿ  /  ಕ್ರಿಕೆಟ್  /  Wpl 2024: ಯುಪಿ ವಾರಿಯರ್ಸ್‌ ವಿರುದ್ಧ ಟಾಸ್‌ ಗೆದ್ದ ಡೆಲ್ಲಿ ಬೌಲಿಂಗ್‌ ಆಯ್ಕೆ; ಅಲಿಸ್ಸಾ ಹೀಲಿ ಬಳಗದಲ್ಲಿ ಒಂದು ಬದಲಾವಣೆ

WPL 2024: ಯುಪಿ ವಾರಿಯರ್ಸ್‌ ವಿರುದ್ಧ ಟಾಸ್‌ ಗೆದ್ದ ಡೆಲ್ಲಿ ಬೌಲಿಂಗ್‌ ಆಯ್ಕೆ; ಅಲಿಸ್ಸಾ ಹೀಲಿ ಬಳಗದಲ್ಲಿ ಒಂದು ಬದಲಾವಣೆ

Jayaraj HT Kannada

Feb 26, 2024 07:15 PM IST

google News

ಯುಪಿ ವಾರಿಯರ್ಸ್‌ ವಿರುದ್ಧ ಟಾಸ್‌ ಗೆದ್ದ ಡೆಲ್ಲಿ ಬೌಲಿಂಗ್‌ ಆಯ್ಕೆ

    • UP Warriorz vs Delhi Capitals: ಡಬ್ಲ್ಯೂಪಿಎಲ್‌ ಪಂದ್ಯಾವಳಿಯಲ್ಲಿ ಯುಪಿ ವಾರಿಯರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್  ತಂಡಗಳು ಸೋಮವಾರ ಮುಖಾಮುಖಿಯಾಗುತ್ತಿವೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಡೆಲ್ಲಿ ತಂಡ ಚೇಸಿಂಗ್‌ ಆಯ್ಕೆ ಮಾಡಿಕೊಂಡಿದೆ.
ಯುಪಿ ವಾರಿಯರ್ಸ್‌ ವಿರುದ್ಧ ಟಾಸ್‌ ಗೆದ್ದ ಡೆಲ್ಲಿ ಬೌಲಿಂಗ್‌ ಆಯ್ಕೆ
ಯುಪಿ ವಾರಿಯರ್ಸ್‌ ವಿರುದ್ಧ ಟಾಸ್‌ ಗೆದ್ದ ಡೆಲ್ಲಿ ಬೌಲಿಂಗ್‌ ಆಯ್ಕೆ

ವಿಮೆನ್ಸ್ ಪ್ರೀಮಿಯರ್ ಲೀಗ್‌ (Womens Premier League 2024) ಎರಡನೇ ಆವೃತ್ತಿಯ ನಾಲ್ಕನೇ ಪಂದ್ಯದಲ್ಲಿ ಇಂದು (ಫೆಬ್ರುವರಿ 26) ಯುಪಿ ವಾರಿಯರ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (UP Warriorz vs Delhi Capitals Women) ತಂಡಗಳು ಮುಖಾಮುಖಿಯಾಗುತ್ತಿವೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಡೆಲ್ಲಿ ತಂಡವು ಚೇಸಿಂಗ್‌ ಆಯ್ಕೆ ಮಾಡಿಕೊಂಡಿದೆ.

ಡಬ್ಲ್ಯೂಪಿಎಲ್‌ ಎರಡನೇ ಆವೃತ್ತಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಈ ಎರಡೂ ತಂಡಗಳು ಸೋಲು ಕಂಡಿವೆ. ಹೀಗಾಗಿ ಮೊದಲ ಗೆಲುವಿಗೆ ತಂಡಗಳು ಹವಣಿಸುತ್ತಿವೆ. ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಮೆಗ್‌ ಲ್ಯಾನಿಂಗ್‌ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋತಿತ್ತು. ಅತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಅಲಿಸ್ಸಾ ಹೀಲಿ ನೇತೃತ್ವದ ಯುಪಿ ವಾರಿಯರ್ಸ್‌ ಕೂಡಾ ಕೊನೆಯ ಎಸೆತದಲ್ಲಿ ಸೋಲು ಕಂಡಿತ್ತು. ಇದೀಗ ಇಬ್ಬರು ಆಸೀಸ್‌ ನಾಯಕಿಯರು ಜಿದ್ದಿನ ಕದನಕ್ಕೆ ಇಳಿದಿದ್ದಾರೆ.

ಇದನ್ನೂ ಓದಿ | ಧ್ರುವ್ ಜುರೆಲ್ ವೀರೋಚಿತ‌ ಆಟಕ್ಕೆ ದಿಗ್ಗಜ ಕ್ರಿಕೆಟಿಗರ ಮೆಚ್ಚುಗೆ; ಸಚಿನ್, ಸೆಹ್ವಾಗ್‌, ವಾನ್ ವ್ಯಾಪಕ ಪ್ರಶಂಸೆ

ಮಹತ್ವದ ಪಂದ್ಯಕ್ಕೆ ಡೆಲ್ಲಿ ತಂಡವು ಯಾವುದೇ ಬದಲಾವಣೆಗಳಿಲ್ಲದೆ ಕಣಕ್ಕಿಳಿಯುತ್ತಿದೆ. ಮುಂಬೈ ವಿರುದ್ಧ ಆಡಿದ ತಂಡವೇ ಯುಪಿ ವಿರುದ್ಧವೂ ಆಡಲಿದೆ. ಅತ್ತ ಹೀಲಿ ಬಳಗದಲ್ಲಿ ಒಂದು ಬದಲಾವಣೆ ಮಾಡಲಾಗಿದೆ.

ಮುಖಾಮುಖಿ ದಾಖಲೆ

ಯುಪಿ ವಾರಿಯರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡಗಳು ಡಬ್ಲ್ಯೂಪಿಎಲ್ 2023ರ ಗುಂಪು ಹಂತಗಳಲ್ಲಿ 2 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಈ ಎರಡೂ ಪಂದ್ಯಗಳಲ್ಲಿ ಮೆಗ್‌ ಲ್ಯಾನಿಂಗ್‌ ಪಡೆ ಗೆದ್ದು ಬೀಗಿದೆ.‌ ಹೀಗಾಗಿ ಡೆಲ್ಲಿ ವಿರುದ್ಧ ಮೊದಲ ಗೆಲುವು ಕಾಣಲು ಹೀಲಿ ಬಳಗ ಎದುರು ನೋಡುತ್ತಿದೆ.

ಚಿನ್ನಸ್ವಾಮಿ ಸ್ಟೇಡಿಯಂ ಪಿಚ್​ ವರದಿ

ಚಿನ್ನಸ್ವಾಮಿ ಕ್ರೀಡಾಂಗಣವು ಚಿಕ್ಕ ಬೌಂಡರಿಗಳನ್ನು ಹೊಂದಿದ್ದು, ಸೀಮಿತ-ಓವರ್‌ಗಳ ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳ ಸ್ವರ್ಗವಾಗಿದೆ. ಮೈದಾನದಲ್ಲಿ ಬೃಹತ್‌ ಮೊತ್ತ ನಿರೀಕ್ಷಿಸಬಹುದು. ಅಲ್ಲದೆ ಉಭಯ ತಂಡಗಳಲ್ಲಿ ಸ್ಫೋಟಕ ಆಟಗಾರರು ಹಾಗೂ ಆಲ್‌ರೌಂಡರ್‌ಗಳಿದ್ದಾರೆ.

ಇದನ್ನೂ ಓದಿ | ಇಂಗ್ಲೆಂಡ್​ ವಿರುದ್ಧ ಸರಣಿ ಗೆದ್ದು ಐತಿಹಾಸಿಕ ದಾಖಲೆ ಬರೆದ ರೋಹಿತ್​ ಶರ್ಮಾ; ಬಜ್​ಬಾಲ್ ಯುಗದಲ್ಲಿ ಈ ಸಾಧನೆಗೈದ ಏಕೈಕ ನಾಯಕ

ಯುಪಿ ವಾರಿಯರ್ಸ್‌ ಆಡುವ ಬಳಗ

ಅಲಿಸ್ಸಾ ಹೀಲಿ‌ (ನಾಯಕಿ ಮತ್ತು ವಿಕೆಟ್‌ ಕೀಪರ್), ವೃಂದಾ ದಿನೇಶ್, ತಹ್ಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್, ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ಪೂನಮ್ ಖೇಮ್ನಾರ್, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟನ್, ರಾಜೇಶ್ವರಿ ಗಾಯಕ್ವಾಡ್, ಗೌಹರ್ ಸುಲ್ತಾನಾ.

ಡೆಲ್ಲಿ ಕ್ಯಾಪಿಟಲ್ಸ್‌ ಆಡುವ ಬಳಗ

ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸೆ, ಜೆಮಿಮಾ ರೋಡ್ರಿಗಸ್, ಮರಿಝನ್ನೆ ಕಪ್, ಅನ್ನಾಬೆಲ್ ಸದರ್ಲ್ಯಾಂಡ್, ಅರುಂಧತಿ ರೆಡ್ಡಿ, ಮಿನ್ನು ಮಣಿ, ತಾನಿಯಾ ಭಾಟಿಯಾ (ವಿಕೆಟ್‌ ಕೀಪರ್), ರಾಧಾ ಯಾದವ್, ಶಿಖಾ ಪಾಂಡೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ