logo
ಕನ್ನಡ ಸುದ್ದಿ  /  ಕ್ರಿಕೆಟ್  /  ಗುಜರಾತ್‌ ವಿರುದ್ಧ ಬಲಿಷ್ಠ ತಂಡ ಕಣಕ್ಕಿಳಿಸಿದ ಆರ್‌ಸಿಬಿ; ಸ್ಮೃತಿ ಟಾಸ್‌ ಗೆಲ್ಲುತ್ತಿದ್ದಂತೆ ಬೆಂಗಳೂರು ಅಭಿಮಾನಿಗಳ ಹರ್ಷೋದ್ಘಾರ

ಗುಜರಾತ್‌ ವಿರುದ್ಧ ಬಲಿಷ್ಠ ತಂಡ ಕಣಕ್ಕಿಳಿಸಿದ ಆರ್‌ಸಿಬಿ; ಸ್ಮೃತಿ ಟಾಸ್‌ ಗೆಲ್ಲುತ್ತಿದ್ದಂತೆ ಬೆಂಗಳೂರು ಅಭಿಮಾನಿಗಳ ಹರ್ಷೋದ್ಘಾರ

Jayaraj HT Kannada

Feb 27, 2024 07:17 PM IST

google News

ಸ್ಮೃತಿ ಟಾಸ್‌ ಗೆಲ್ಲುತ್ತಿದ್ದಂತೆ ಬೆಂಗಳೂರು ಅಭಿಮಾನಿಗಳ ಹರ್ಷೋದ್ಘಾರ

    • WPL 2024: ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ ಎರಡನೇ ಆವೃತ್ತಿಯಲ್ಲಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿರುವ ಆರ್‌ಸಿಬಿ ತಂಡವು, ಸತತ ಎರಡನೇ ಗೆಲುವಿನ ನಿರೀಕ್ಷೆಯಲ್ಲಿದೆ. ಗುಜರಾತ್‌ ಜೈಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಟಾಸ್‌ ಗೆದ್ದ ಸ್ಮೃತಿ ಮಂಧಾನ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.
ಸ್ಮೃತಿ ಟಾಸ್‌ ಗೆಲ್ಲುತ್ತಿದ್ದಂತೆ ಬೆಂಗಳೂರು ಅಭಿಮಾನಿಗಳ ಹರ್ಷೋದ್ಘಾರ
ಸ್ಮೃತಿ ಟಾಸ್‌ ಗೆಲ್ಲುತ್ತಿದ್ದಂತೆ ಬೆಂಗಳೂರು ಅಭಿಮಾನಿಗಳ ಹರ್ಷೋದ್ಘಾರ

ಮಹಿಳಾ ಪ್ರೀಮಿಯರ್‌ ಲೀಗ್‌ನ (Womens Premier League 2024) 5ನೇ ಪಂದ್ಯದಲ್ಲಿ ಫೆಬ್ರುವರಿ 27ರ ಮಂಗಳವಾರ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಗುಜರಾತ್‌ ಜೈಂಟ್ಸ್‌ (Royal Challengers Bangalore Women vs Gujarat Giants) ತಂಡಗಳು ಮುಖಾಮುಖಿಯಾಗುತ್ತಿವೆ. ಆರ್‌ಸಿಬಿ ತವರು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ ತಂಡವು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಮೊದಲ ಪಂದ್ಯದಂತೆಯೇ, ಈ ಬಾರಿಯು ಟಾಸ್‌ ಪ್ರಕ್ರಿಯೆ ವೇಳೆ ಸ್ಮೃತಿ ಮಂಧಾನ ಮಾತನಾಡುವಾಗ ಬೆಂಗಳೂರು ಅಭಿಮಾನಿಗಳು ಹರ್ಷೋದ್ಘಾರ ಮಾಡಿದ್ದಾರೆ. ಟಾಸ್‌ ಗೆಲ್ಲುತ್ತಿದ್ದಂತೆಯೇ ಮೈದಾನದ ತುಂಬೆಲ್ಲಾ ಆರ್‌ಸಿಬಿ ಆರ್‌ಸಿಬಿ ಎಂಬ ಘೋಷಣೆ ಕೇಳಿಬಂದಿದೆ.

ಇದನ್ನೂ ಓದಿ | Ranji Trophy: 10, 11ನೇ ಕ್ರಮಾಂಕದ ಬ್ಯಾಟರ್‌ಗಳ ಶತಕ ವೈಭವ; ಕೊನೆಯ ವಿಕೆಟ್‌ಗೆ ತುಷಾರ್-ತನುಷ್ ದಾಖಲೆಯ 232 ರನ್ ಜೊತೆಯಾಟ

ಟೂರ್ನಿಯಲ್ಲಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿರುವ ಸ್ಮೃತಿ ಮಂಧಾನ ಪಡೆಯು, ಸತತ ಎರಡನೇ ಗೆಲುವಿನ ನಿರೀಕ್ಷೆಯಲ್ಲಿದೆ. ಇದೇ ವೇಳೆ ಮೊದಲ ಪಂದ್ಯ ಸೋತಿರುವ ಬೆತ್‌ ಮೂನಿ ಪಡೆಯು, ಸ್ಮೃತಿ ಮಂಧಾನ ಪಡೆಯನ್ನು ಅವರದೇ ತವರಿನಲ್ಲಿ ಮಣಿಸುವ ಗುರಿ ಇಟ್ಟುಕೊಂಡಿದೆ.

ಇಂದಿನ ಪಂದ್ಯಕ್ಕೆ ಉಭಯ ತಂಡಗಳು ಕೂಡಾ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕೊನೆಯ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ಇಂದು ಕೂಡಾ ಆಡಲಿದೆ.

ಆರ್‌ಸಿಬಿ vs ಗುಜರಾತ್ ಜೈಂಟ್ಸ್ ಮುಖಾಮುಖಿ ದಾಖಲೆ

ಡಬ್ಲ್ಯೂಪಿಎಲ್‌ನ ಪ್ರಸಕ್ತ ಆವೃತ್ತಿಯು ಎರಡನೇ ಆವೃತ್ತಿಯಾಗಿದ್ದು, ಕಳೆದ ಬಾರಿ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ ಮೊದಲ ಆವೃತ್ತಿ ನಡೆದಿತ್ತು. ಕಳೆದ ವರ್ಷ ಡಬ್ಲ್ಯೂಪಿಎಲ್‌ನಲ್ಲಿ ಸ್ಮೃತಿ ಮಂಧಾನ ಹಾಗೂ ಬೆತ್‌ ಮೂನಿ ಪಡೆ ಎರಡು ಬಾರಿ ಮುಖಾಮುಖಿಯಾಗಿವೆ. ಈ ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯವನ್ನು ಗೆದ್ದಿವೆ. ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಮೊದಲ ಹಣಾಹಣಿಯಲ್ಲಿ ಗುಜರಾತ್ ತಂಡ 11 ರನ್‌ಗಳಿಂದ ಗೆದ್ದಿತ್ತು. ಎರಡನೇ ಬಾರಿಗೆ ಇದೇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ ಎಂಟು ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿತು.

ಮೊದಲ ಪಂದ್ಯದಲ್ಲಿ, ಗುಜರಾತ್ ಜೈಂಟ್ಸ್ ಮೊದಲು ಬ್ಯಾಟ್ ಮಾಡಿ 201/7 ರನ್‌ ಕಲೆ ಹಾಕಿತು. ಇದಕ್ಕೆ ಪ್ರತಿಯಾಗಿ ಆರ್‌ಸಿಬಿ ತಂಡವು 190/6 ರನ್‌ ಗಳಿಸಲಷ್ಟೇ ಶಕ್ತವಾಯ್ತು. ಎರಡನೇ ಬಾರಿಗೆ, ಗುಜರಾತ್‌ 188/4 ರನ್‌ ಗಳಿಸಿತು. ಇದಕ್ಕೆ ಪ್ರತಿಯಾಗಿ ಸೋಫಿ ಡಿವೈನ್ ಸ್ಫೋಟಕ ಆಟದ ನೆರವಿಂದ (36 ಎಸೆತಗಳಲ್ಲಿ 99 ರನ್) ಆರ್‌ಸಿಬಿಯು ಸುಲಭವಾಗಿ 189 ರನ್ ಚೇಸ್‌ ಮಾಡಿ ಭರ್ಜರಿಯಾಗಿ 8 ವಿಕೆಟ್‌ಗಳಿಂದ ಗೆದ್ದು ಬೀಗಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ತಂಡಗಳ ನಡುವಿನ ಡಬ್ಲ್ಯೂಪಿಎಲ್‌ ಪಂದ್ಯವನ್ನು ಟಿವಿ ಮೂಲಕ ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುತ್ತದೆ. ಇಲ್ಲಿ ಸಂಪೂರ್ಣ ಉಚಿತವಾಗಿ ಪಂದ್ಯವನ್ನು ವೀಕ್ಷಿಸಬಹುದು. ಅಲ್ಲದೆ ನಮ್ಮ ಇಂಟರ್ನೆಟ್‌ ವೇಗಕ್ಕೆ ಅನುಗುಣವಾಗಿ ಗುಣಮಟ್ಟದ ವಿಡಿಯೋ ವೀಕ್ಷಿಸಬಹುದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗ

ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಸಬ್ಬಿನೇನಿ ಮೇಘನಾ, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್ ಕೀಪರ್​), ಸೋಫಿ ಮೊಲಿನೆಕ್ಸ್, ಜಾರ್ಜಿಯಾ ವೇರ್ಹ್ಯಾಮ್, ಶ್ರೇಯಾಂಕಾ ಪಾಟೀಲ್, ಸಿಮ್ರಾನ್ ಬಹದ್ದೂರ್, ಆಶಾ ಶೋಭನಾ, ರೇಣುಕಾ ಠಾಕೂರ್ ಸಿಂಗ್.

ಗುಜರಾಜ್ ಜೈಂಟ್ಸ್‌ ಆಡುವ ಬಳಗ

ಬೆತ್ ಮೂನಿ (ನಾಯಕ ಮತ್ತು ವಿಕೆಟ್‌ಕೀಪರ್), ವೇದಾ ಕೃಷ್ಣಮೂರ್ತಿ, ಫೋಬೆ ಲಿಚ್‌ಫೀಲ್ಡ್, ಹರ್ಲೀನ್ ಡಿಯೋಲ್, ಆಶ್ಲೇ ಗಾರ್ಡ್ನರ್, ದಯಾಲನ್ ಹೇಮಲತಾ, ಸ್ನೇಹ ರಾಣಾ, ತನುಜಾ ಕನ್ವರ್, ಕ್ಯಾಥರೀನ್ ಬ್ರೈಸ್, ಲೀ ತಹುಹು, ಮೇಘನಾ ಸಿಂಗ್.

ಇದನ್ನೂ ಓದಿ | T20 Record: ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ; ರೋಹಿತ್ ಶರ್ಮಾ ದಾಖಲೆ ಮುರಿದ ನಮೀಬಿಯಾ ಆಟಗಾರ

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ