logo
ಕನ್ನಡ ಸುದ್ದಿ  /  ಕ್ರಿಕೆಟ್  /  ಅತಿ ಹೆಚ್ಚು ರನ್, ಗರಿಷ್ಠ ವಿಕೆಟ್, ವೇಗದ ಅರ್ಧಶತಕ; ಮಹಿಳಾ ಪ್ರೀಮಿಯರ್ ಲೀಗ್ ದಾಖಲೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ

ಅತಿ ಹೆಚ್ಚು ರನ್, ಗರಿಷ್ಠ ವಿಕೆಟ್, ವೇಗದ ಅರ್ಧಶತಕ; ಮಹಿಳಾ ಪ್ರೀಮಿಯರ್ ಲೀಗ್ ದಾಖಲೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ

Prasanna Kumar P N HT Kannada

Feb 17, 2024 12:13 PM IST

google News

ಮಹಿಳಾ ಪ್ರೀಮಿಯರ್ ಲೀಗ್ ದಾಖಲೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ

    • WPL 2024 Stats : ಫೆಬ್ರವರಿ 23ರಿಂದ ಮಹಿಳಾ ಪ್ರೀಮಿಯರ್ ಲೀಗ್​ ಆರಂಭವಾಗಲಿದ್ದು, 2023ರ ಡಬ್ಲ್ಯುಪಿಎಲ್​ನಲ್ಲಿ ಅತಿ ಹೆಚ್ಚು ರನ್, ವಿಕೆಟ್, ವೇಗದ ಅರ್ಧಶತಕ ಸೇರಿ ಹಲವು ದಾಖಲೆಗಳನ್ನು ಮೆಲುಕು ಹಾಕೋಣ.
ಮಹಿಳಾ ಪ್ರೀಮಿಯರ್ ಲೀಗ್ ದಾಖಲೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ
ಮಹಿಳಾ ಪ್ರೀಮಿಯರ್ ಲೀಗ್ ದಾಖಲೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ

ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (Womens premier league) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಫೆಬ್ರವರಿ 23ರಿಂದ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಪ್ರಾರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರನ್ನರ್​ಅಪ್ ತಂಡಗಳು ಸೆಣಸಾಟ ನಡೆಸಲಿವೆ. ಹಾಗಾದರೆ 2023ರ ಡಬ್ಲ್ಯುಪಿಎಲ್​ನಲ್ಲಿ ಅತಿ ಹೆಚ್ಚು ರನ್, ವಿಕೆಟ್ ಪಡೆದವರು ಸೇರಿ ಹಲವು ದಾಖಲೆಗಳನ್ನು ಮೆಲುಕು ಹಾಕೋಣ.

2023ರ ಡಬ್ಲ್ಯುಪಿಎಲ್​ನಲ್ಲಿ ಹೆಚ್ಚು ರನ್ ಗಳಿಸಿದವರು (ಟಾಪ್​-5)

1. ಮೆಗ್​ ಲ್ಯಾನಿಂಗ್ (ಡೆಲ್ಲಿ ಕ್ಯಾಪಿಟಲ್ಸ್): 345 ರನ್

2. ನಟಾಲಿ ಸೀವರ್ (ಮುಂಬೈ ಇಂಡಿಯನ್ಸ್): 332 ರನ್

3. ತಹಿಲಾ ಮೆಗ್ರಾಥ್ (ಯುಪಿ ವಾರಿಯರ್ಸ್): 302 ರನ್

4. ಹರ್ಮನ್​ಪ್ರೀತ್​​ ಕೌರ್ (ಮುಂಬೈ ಇಂಡಿಯನ್ಸ್): 281 ರನ್

5. ಹೀಲಿ ಮ್ಯಾಥ್ಯೂಸ್ (ಮುಂಬೈ ಇಂಡಿಯನ್ಸ್): 271 ರನ್

ಅತಿ ಹೆಚ್ಚು ಬೌಂಡರಿ ಸಿಡಿಸಿದವರು (ಟಾಪ್-5)

1. ಮೆಗ್​ ಲ್ಯಾನಿಂಗ್ (ಡೆಲ್ಲಿ ಕ್ಯಾಪಿಟಲ್ಸ್): 50 ಫೋರ್​

2. ನಟಾಲಿ ಸೀವರ್ (ಮುಂಬೈ ಇಂಡಿಯನ್ಸ್): 47 ಫೋರ್

3. ತಹಿಲಾ ಮೆಗ್ರಾಥ್ (ಯುಪಿ ವಾರಿಯರ್ಸ್): 46 ಫೋರ್

4. ಹರ್ಮನ್​ಪ್ರೀತ್​​ ಕೌರ್ (ಮುಂಬೈ ಇಂಡಿಯನ್ಸ್): 44 ಫೋರ್

5. ಅಲಿಸಾ ಹೀಲಿ (ಯುಪಿ ವಾರಿಯರ್ಸ್): 41 ಫೋರ್​

ಇನ್ನಿಂಗ್ಸ್​​ವೊಂದರಲ್ಲಿ ಹೆಚ್ಚು ಫೋರ್ ಸಿಡಿಸಿದವರು (ಟಾಪ್-5)

1. ಅಲಿಸಾ ಹೀಲಿ (ಯುಪಿ ವಾರಿಯರ್ಸ್): 18 ಫೋರ್​

2. ಮೆಗ್​ ಲ್ಯಾನಿಂಗ್ (ಡೆಲ್ಲಿ ಕ್ಯಾಪಿಟಲ್ಸ್): 14 ಫೋರ್​

3. ಹರ್ಮನ್​ಪ್ರೀತ್​​ ಕೌರ್ (ಮುಂಬೈ ಇಂಡಿಯನ್ಸ್): 14 ಫೋರ್

4. ಹೀಲಿ ಮ್ಯಾಥ್ಯೂಸ್ (ಮುಂಬೈ ಇಂಡಿಯನ್ಸ್): 13 ಫೋರ್

5. ತಹಿಲಾ ಮೆಗ್ರಾಥ್ (ಯುಪಿ ವಾರಿಯರ್ಸ್): 11 ಫೋರ್

ಅತಿ ಹೆಚ್ಚು ಸಿಕ್ಸರ್​​ ಬಾರಿಸಿದವರು (ಟಾಪ್-5)

1. ಸೋಫಿ ಡಿವೈನ್ (ಆರ್​​ಸಿಬಿ) - 13 ಸಿಕ್ಸರ್​

2. ಶಫಾಲಿ ವರ್ಮಾ (ಡೆಲ್ಲಿ ಕ್ಯಾಪಿಟಲ್ಸ್) - 13 ಸಿಕ್ಸರ್

3. ಅಲೀಸ್ ಕ್ಯಾಪ್ಸಿ (ಡೆಲ್ಲಿ ಕ್ಯಾಪಿಟಲ್ಸ್) - 10 ಸಿಕ್ಸರ್​

4. ಹೀಲಿ ಮ್ಯಾಥ್ಯೂಸ್ (ಮುಂಬೈ ಇಂಡಿಯನ್ಸ್): 10 ಸಿಕ್ಸರ್

5. ಗ್ರೇಸ್ ಹ್ಯಾರಿಸ್ (ಯುಪಿ ವಾರಿಯರ್ಸ್) - 9 ಸಿಕ್ಸರ್​

ಅತಿ ಹೆಚ್ಚು ಅರ್ಧಶತಕ ಸಿಡಿಸಿದವರು (ಟಾಪ್-5)

ತಹಿಲಾ ಮೆಗ್ರಾಥ್ - 4

ಹರ್ಮನ್ ಪ್ರೀತ್ ಕೌರ್​ - 3

ನಟಾಲಿ ಸೀವರ್ - 3

ಲಾರಾ ವೊಲ್ವಾರ್ಡ್ಟ್ - 2 (ಗುಜರಾತ್ ಜೈಂಟ್ಸ್)

ಗ್ರೇಸ್ ಹ್ಯಾರಿಸ್ - 2

ವೇಗದ ಅರ್ಧಶತಕ ಬಾರಿಸಿದವರು (ಟಾಪ್-5)

ಸೋಫಿಯಾ ಡಂಕ್ಲಿ - 18 ಎಸೆತ (ಗುಜರಾತ್ ಜೈಂಟ್ಸ್)

ಶಫಾಲಿ ವರ್ಮಾ - 19 ಎಸೆತ

ಸೋಫಿ ಡಿವೈನ್ - 20 ಎಸೆತ

ಹರ್ಮನ್ ಪ್ರೀತ್ ಕೌರ್ - 22 ಎಸೆತ

ಗ್ರೇಸ್ ಹ್ಯಾರಿಸ್ - 25 ಎಸೆತ

ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಸ್ (ಟಾಪ್​-5)

ಹೀಲಿ ಮ್ಯಾಥ್ಯೂಸ್ - 16 ವಿಕೆಟ್ (ಮುಂಬೈ ಇಂಡಿಯನ್ಸ್)

ಸೋಫಿ ಎಕ್ಲೋಸ್ಟನ್ - 16 ವಿಕೆಟ್ (ಯುಪಿ ವಾರಿಯರ್ಸ್

ಅಮೆಲಿಯಾ ಕೇರ್ - 15 ವಿಕೆಟ್ (ಮುಂಬೈ ಇಂಡಿಯನ್ಸ್)

ಇಸ್ಸಿ ವಾಂಗ್ - 15 ವಿಕೆಟ್ (ಮುಂಬೈ ಇಂಡಿಯನ್ಸ್)

ಸೈಕಾ ಇಶಾ - 15 ವಿಕೆಟ್ (ಮುಂಬೈ ಇಂಡಿಯನ್ಸ್)

ಅತಿ ಹೆಚ್ಚು ಡಾಟ್​ ಬಾಲ್ ಎಸೆದವರು (ಟಾಪ್-5)

ಮರಿಜಾನ್ನೆ ಕಪ್ - 121 ಡಾಟ್​ಬಾಲ್ (ಡೆಲ್ಲಿ)

ಇಸ್ಸಿ ವಾಂಗ್ - 106 ಡಾಟ್​ಬಾಲ್ (ಮುಂಬೈ)

ಹೀಲಿ ಮ್ಯಾಥ್ಯೂಸ್ - 98 ಡಾಟ್​ಬಾಲ್ (ಮುಂಬೈ)

ಸೈಕಾ ಇಶಾ - 97 ಡಾಟ್​ಬಾಲ್ (ಮುಂಬೈ)

ಸೋಫಿ ಎಕ್ಲೋಸ್ಟನ್ - 97 ಡಾಟ್​ಬಾಲ್ (ಯುಪಿ ವಾರಿಯರ್ಸ್)

ಹ್ಯಾಟ್ರಿಕ್ ಪಡೆದ ಮೊದಲ ಆಟಗಾರ್ತಿ

ಮುಂಬೈ ಇಂಡಿಯನ್ಸ್ ತಂಡದ ಇಸ್ಸಿ ವಾಂಗ್​ ಡಬ್ಲ್ಯುಪಿಎಲ್​ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಬೌಲರ್​ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಆ ಓವರ್​ನಲ್ಲಿ ಒಟ್ಟು 4 ವಿಕೆಟ್ ಪಡೆದಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ