logo
ಕನ್ನಡ ಸುದ್ದಿ  /  ಕ್ರಿಕೆಟ್  /  ಐದು ವಿಕೆಟ್ ಕಿತ್ತ ಯಶ್ ಠಾಕೂರ್​​; ಗುಜರಾತ್ ಟೈಟಾನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗೆಲುವು

ಐದು ವಿಕೆಟ್ ಕಿತ್ತ ಯಶ್ ಠಾಕೂರ್​​; ಗುಜರಾತ್ ಟೈಟಾನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗೆಲುವು

Prasanna Kumar P N HT Kannada

Apr 07, 2024 11:24 PM IST

google News

ಗುಜರಾತ್ ಟೈಟಾನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗೆಲುವು ತಂದುಕೊಟ್ಟ ಯಶ್ ಠಾಕೂರ್.

    • Lucknow Super Giants vs Gujarat Titans: ಐಪಿಎಲ್​ನ 21ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 33 ರನ್​​ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿತು.
ಗುಜರಾತ್ ಟೈಟಾನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗೆಲುವು ತಂದುಕೊಟ್ಟ ಯಶ್ ಠಾಕೂರ್.
ಗುಜರಾತ್ ಟೈಟಾನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗೆಲುವು ತಂದುಕೊಟ್ಟ ಯಶ್ ಠಾಕೂರ್. (PTI)

ಯಶ್ ಠಾಕೂರ್ (30/5) ಮತ್ತು ಕೃನಾಲ್ ಪಾಂಡ್ಯ (11/3) ಅವರ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಗುಜರಾತ್ ಟೈಟಾನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್​ ಅತ್ಯಮೋಘ ಗೆಲುವು ಸಾಧಿಸಿತು. ಜಿಟಿ ಬ್ಯಾಟರ್​​ಗಳ ವೈಫಲ್ಯದ ಪರಿಣಾಮ ಎದುರಾಳಿ ಕೆಎಲ್ ರಾಹುಲ್ ನೇತೃತ್ವದ ತಂಡವು 33 ರನ್​ಗಳಿಂದ ಜಯದ ನಗೆ ಬೀರಿದೆ. ಇದು ಎಲ್​ಎಸ್​ಜಿಗೆ ಹ್ಯಾಟ್ರಿಕ್​ ಗೆಲುವಾಗಿದ್ದು, ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಮತ್ತೊಂದೆಡೆ ಗುಜರಾತ್ 3 ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲೇ ಉಳಿದಿದೆ.

ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ ಸೂಪರ್ ಜೈಂಟ್ಸ್​ ತಂಡವು ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ಮಾರ್ಕಸ್ ಸ್ಟೋಯ್ನಿಸ್ ಅವರ ಅರ್ಧಶತಕದ ಸಹಾಯದಿಂದ ಎಲ್​ಎಸ್​ಜಿ 20 ಓವರ್​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಗುಜರಾತ್ ಬ್ಯಾಟರ್ಸ್ ಲಕ್ನೋ ಬೌಲರ್​​​ಗಳ ದಾಳಿಗೆ ತತ್ತರಿಸಿತು. ಕೇವಲ 130 ರನ್​​ಗಳಿಗೆ ಆಲೌಟ್​ ಆಯಿತು. ಉತ್ತಮ ಆರಂಭ ಹೊರತಾಗಿಯೂ ಜಿಟಿ ಆಟಗಾರರು ಪೆವಿಲಿಯನ್ ಪೆರೇಡ್ ನಡೆಸಿದರು. ಯಶ್ ಠಾಕೂರ್ 5 ವಿಕೆಟ್ ಮತ್ತು ಕೃನಾಲ್ 3 ವಿಕೆಟ್ ಪಡೆದು ಮಿಂಚಿದರು.

ಯಶ್ ಮತ್ತು ಕೃನಾಲ್ ಅಬ್ಬರ

ಕಾಂಪಿಟೇಟಿವ್ ಟಾರ್ಗೆಟ್ ಬೆನ್ನಟ್ಟಿದ ಗುಜರಾತ್ ಉತ್ತಮ ಆರಂಭ ಪಡೆಯಿತು. ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಜೋಡಿ ಮೊದಲ ವಿಕೆಟ್​ಗೆ 54 ರನ್ ಪೇರಿಸಿತು. ಆದರೆ ಆ ಬಳಿಕ ಬ್ಯಾಟರ್​ಗಳು ಪೆವಿಲಿಯನ್ ಪರೇಡ್ ನಡೆಸಿದರು. ಕೃನಾಲ್ ಪಾಂಡ್ಯ ಮತ್ತು ಯಶ್ ಠಾಕೂರ್ ಅವರ ಬೌಲಿಂಗ್ ದಾಳಿಗೆ ಜಿಟಿ ಬ್ಯಾಟರ್ಸ್ ತತ್ತರಿಸಿದರು. ಸಾಯಿ ಸುದರ್ಶನ್ (31), ಬಿಆರ್​ ಶರಥ್ (2) ಮತ್ತು ದರ್ಶನ್ ನಲ್ಕಂಡೆಗೆ (12) ಕೃನಾಲ್ ಗೇಟ್ ಪಾಸ್ ನೀಡಿದರು.

ಮತ್ತೊಂದೆಡೆ ಶುಭ್ಮನ್ ಗಿಲ್ (19), ವಿಜಯ್ ಶಂಕರ್​ (17), ರಾಹುಲ್ ತೆವಾಟಿಯಾ (30), ನೂರ್ ಅಹ್ಮದ್ (4) ಮತ್ತು ರಶೀದ್ ಖಾನ್​ ಅವರನ್ನು ಯಶ್ ಠಾಕೂರ್ ಔಟ್ ಮಾಡಿದರು. ಕೇನ್​ ವಿಲಿಯಮ್ಸನ್​ (1) ಮತ್ತು ಉಮೇಶ್ ಯಾದವ್​ಗೆ ಕ್ರಮವಾಗಿ ರವಿ ಬಿಷ್ಣೋಯ್ ಮತ್ತು ನವೀನ್ ಉಲ್ ಹಕ್ ಅವರನ್ನು ಔಟ್ ಮಾಡಿದರು. ಆದರೆ ಗುಜರಾತ್ ಪರ ಒಬ್ಬರೂ ಕ್ರೀಸ್ ಕಚ್ಚಿನ ನಿಲ್ಲುವ ಕೆಲಸಕ್ಕೆ ಕೈಹಾಕಲಿಲ್ಲ. ಅಂತಿಮವಾಗಿ ಜಿಟಿ 130 ರನ್​ಗಳಿಗೆ ಸರ್ಪಪತನ ಕಂಡಿತು. ಕೃನಾಲ್ 4 ಓವರ್​​ಗೆ 11 ರನ್ ನೀಡಿ 3 ವಿಕೆಟ್ ಪಡೆದರೆ, ಯಶ್ ಠಾಕೂರ್​ 3.5 ಓವರ್​​ಗಳಲ್ಲಿ 30 ರನ್ ಬಿಟ್ಟುಕೊಟ್ಟು 5 ವಿಕೆಟ್ ಪಡೆದು ಮಿಂಚಿದರು.

ಮಾರ್ಕಸ್ ಸ್ಟೋಯ್ನಿಸ್ ಅರ್ಧಶತಕದ ಬಲ

ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ನಡೆಸಿದ ಲಕ್ನೋ ಪರ ಕ್ವಿಂಟನ್ ಡಿ ಕಾಕ್ ಮೊದಲ ಓವರ್​​ನಲ್ಲೇ ಸಿಕ್ಸರ್​ ಸಿಡಿಸಿ ಔಟಾದರು. ನಂತರ ಕ್ರೀಸ್​ಗೆ ಬಂದ ದೇವದತ್ ಪಡಿಕ್ಕಲ್ (7) ಮತ್ತೆ ವಿಫಲರಾದರು. ಆರಂಭಿಕ ಡಬಲ್ ಆಘಾತದ ಬಳಿಕ ನಾಯಕ ಕೆಎಲ್ ರಾಹುಲ್ ಮತ್ತು ಮಾರ್ಕಸ್ ಸ್ಟೋಯ್ನಿಸ್ ಜವಾಬ್ದಾರಿಯುತ ಬ್ಯಾಟಿಂಗ್​​ಗೆ ಒತ್ತು ನೀಡಿದರು. ಈ ಹಂತದಲ್ಲಿ ಜಿಟಿ ಬೌಲರ್​ಗಳು ಸಹ ರನ್​ ವೇಗಕ್ಕೆ ಕಡಿವಾಣ ಹಾಕಿದರು.

3ನೇ ವಿಕೆಟ್​ಗೆ 73 ರನ್​ಗಳು ಹರಿದು ಬಂದವು. ಆದರೆ ಈ ವೇಳೆ ಕೆಎಲ್ ರಾಹುಲ್ 31 ಎಸೆತಗಳಲ್ಲಿ 33 ರನ್ ಗಳಿಸಿದರು. ಮತ್ತೊಂದೆಡೆ ಸ್ಟೋಯ್ನಿಸ್ 8ನೇ ಐಪಿಎಲ್ ಅರ್ಧಶತಕವನ್ನು ಪೂರೈಸಿದರು. 43 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್​ ಸಹಿತ 58 ರನ್ ಗಳಿಸಿ ಔಟಾದರು. ಆಯುಷ್ ಬದೋನಿ 20, ನಿಕೋಲಸ್ ಪೂರನ್ 32 ರನ್ ಸಿಡಿಸಿ ತಂಡದ ಮೊತ್ತವನ್ನು 165ಕ್ಕೆ ಕೊನೆಗೊಳಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ