logo
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತದಲ್ಲಿ ರೈಲು, ಆಟೋ ಹಿಡಿಯಲು ಕೂಡಾ ಚಿಕ್ಕ ವಯಸ್ಸಿನಲ್ಲೇ ಕಷ್ಟಪಡಬೇಕು; ಯಶಸ್ವಿ ಜೈಸ್ವಾಲ್ ಪ್ರಬುದ್ಧ ಮಾತು

ಭಾರತದಲ್ಲಿ ರೈಲು, ಆಟೋ ಹಿಡಿಯಲು ಕೂಡಾ ಚಿಕ್ಕ ವಯಸ್ಸಿನಲ್ಲೇ ಕಷ್ಟಪಡಬೇಕು; ಯಶಸ್ವಿ ಜೈಸ್ವಾಲ್ ಪ್ರಬುದ್ಧ ಮಾತು

Jayaraj HT Kannada

Feb 20, 2024 02:22 PM IST

google News

ಭಾರತದಲ್ಲಿ ರೈಲು, ಆಟೋ ಹಿಡಿಯಲು ಕೂಡಾ ಚಿಕ್ಕ ವಯಸ್ಸಿನಲ್ಲೇ ಕಷ್ಟಪಡಬೇಕು

    • Yashasvi Jaiswal: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಸತತ ಎರಡನೇ ಬಾರಿಗೆ ಯಶಸ್ವಿ ಜೈಸ್ವಾಲ್ ದ್ವಿಶತಕ ಸಿಡಿಸಿದರು. ದಾಖಲೆಯ ಇನ್ನಿಂಗ್ಸ್‌ ಬಳಿಕ ಆರಂಭಿಕ ಆಟಗಾರ ಪ್ರಬುದ್ಧ ಮಾತುಗಳನ್ನಾಡಿದ್ದಾರೆ. ಭಾರತದಲ್ಲಿ ಬೆಳೆಯುತ್ತಲೇ ಎಲ್ಲರೂ ಕಷ್ಟ ನೋಡಿರುತ್ತಾರೆ ಎಂದು ಹೇಳಿದ್ದಾರೆ.
ಭಾರತದಲ್ಲಿ ರೈಲು, ಆಟೋ ಹಿಡಿಯಲು ಕೂಡಾ ಚಿಕ್ಕ ವಯಸ್ಸಿನಲ್ಲೇ ಕಷ್ಟಪಡಬೇಕು
ಭಾರತದಲ್ಲಿ ರೈಲು, ಆಟೋ ಹಿಡಿಯಲು ಕೂಡಾ ಚಿಕ್ಕ ವಯಸ್ಸಿನಲ್ಲೇ ಕಷ್ಟಪಡಬೇಕು (ANI)

ಭಾರತ ಕ್ರಿಕೆಟ್‌ನಲ್ಲಿ ಯಶಸ್ವಿ ಜೈಸ್ವಾಲ್‌ (Yashasvi Jaiswal) ಉದಯೋನ್ಮುಖ ಆಟಗಾರನಾಗಿ ಅಬ್ಬರಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಂದಿನಿಂದಲೂ ಸ್ಥಿರ ಪ್ರದರ್ಶನ ನೀಡುತ್ತಿರುವ ಯುವ ಆಟಗಾರ, ಈಗ ಟೆಸ್ಟ್‌ ಕ್ರಿಕೆಟ್‌ನಲ್ಲಿಯೂ ಪ್ರಬುದ್ಧ ಆಟವಾಡುತ್ತಿದ್ದಾರೆ. 22 ವರ್ಷದ ಆರಂಭಿಕ ಆಟಗಾರ ಕೆಂಪು ಮತ್ತು ಬಿಳಿ ಚೆಂಡಿನ ಕ್ರಿಕೆಟ್ ಎರಡರಲ್ಲೂ ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಜೈಸ್ವಾಲ್‌ ಸ್ಫೋಟಕ ಆಟವಾಡುತ್ತಿದ್ದಾರೆ.

ಮುಂಬೈ ಪರ ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ಅವರು, ಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರು. ಕಳೆದ ವರ್ಷ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪನೇ ಮಾಡಿದ ಜೈಸ್ವಾಲ್, ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿದರು. ಇದೀಗ ಇಂಗ್ಲೆಂಡ್ ವಿರುದ್ಧವೂ ಸಿಡಿದು ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈವರೆಗೆ ಕೇವಲ ಏಳು ಟೆಸ್ಟ್ ಪಂದ್ಯಗಳನ್ನು ಆಡಿರುವ ಜೈಸ್ವಾಲ್, ಈಗಾಗಲೇ ಎರಡು ದ್ವಿಶತಕ ಸಿಡಿಸಿದ್ದಾರೆ.

ಇದನ್ನೂ ಓದಿ | ಡಬ್ಲ್ಯುಪಿಎಲ್ 2ನೇ ಆವೃತ್ತಿಗೆ ದಿನಗಣನೆ; ಪಂದ್ಯ ನಡೆಯುವ ಸ್ಥಳ, ಯಾವಾಗ, ವೇಳಾಪಟ್ಟಿ ಬಗ್ಗೆ ಸಂಪೂರ್ಣ ವಿವರ ಹೀಗಿದೆ

147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತನ್ನ ಮೊದಲ ಮೂರು ಟೆಸ್ಟ್ ಶತಕಗಳಲ್ಲಿ 150ಕ್ಕೂ ಅಧಿಕ ರನ್‌ ಗಳಿಸಿದ ಭಾರತದ ಮೊದಲ ಆಟಗಾರ ಜೈಸ್ವಾಲ್. ವಿಶ್ವದ ಏಳನೇ ಆಟಗಾರ.

ಇಂಗ್ಲೆಂಡ್‌ನ ಮಾಜಿ ಆಟಗಾರ ಮತ್ತು ವೀಕ್ಷಕ ವಿವರಣೆಕಾರ ನಿಕ್ ನೈಟ್, ಜೈಸ್ವಾಲ್ ಬಳಿ ತಮ್ಮ ಆಟದ ಹಸಿವಿನ ಕುರಿತು ಕೇಳಿದರು. ಇದಕ್ಕೆ ಜೈಸ್ವಾಲ್‌ ಪ್ರಬುದ್ಧ ಉತ್ತರ ನೀಡಿದ್ದಾರೆ. ಸಿಕ್ಕ ಪ್ರತಿ ಅವಕಾಶದ ಮೌಲ್ಯವನ್ನು ಅರಿತುಕೊಂಡು, ಅದನ್ನು ಸದ್ಬಳಕೆ ಮಾಡುವ ಅನಿವಾರ್ಯತೆಯ ಕುರಿತು ಅವರು ಮಾತನಾಡಿದರು.

ಭಾರತದಲ್ಲಿ ಹಂತ ಹಂತಕ್ಕೂ ಕಠಿಣ ಶ್ರಮ ಹಾಕುತ್ತೇವೆ

“ಭಾರತದಲ್ಲಿ ನಾವು ಬೆಳೆಯುತ್ತಿದ್ದಂತೆಯೇ ಪ್ರತಿಯೊಂದು ವಿಚಾರದಲ್ಲೂ ನಿಜಕ್ಕೂ ಕಷ್ಟಪಡಬೇಕು. ಬಸ್ ಹಿಡಿಯುವುದರಿಂದ ಹಿಡಿದು ರೈಲು ಮತ್ತು ಆಟೋ ರಿಕ್ಷಾ ಹಿಡಿಯಲು ಕೂಡಾ ಕಠಿಣ ಕೆಲಸ ಮಾಡಬೇಕಾಗುತ್ತದೆ. ನನ್ನ ಬಾಲ್ಯದಿಂದಲೂ ನಾನು ಅದನ್ನು ಮಾಡುತ್ತಾ ಬಂದಿದ್ದೇನೆ. ಹೀಗಾಗಿ ಆಡುವ ಪ್ರತಿ ಇನ್ನಿಂಗ್ಸ್ ಎಷ್ಟು ಮುಖ್ಯ ಎಂಬುದು ನನಗೆ ತಿಳಿದಿದೆ. ಅದಕ್ಕಾಗಿಯೇ ನನ್ನ ಅಭ್ಯಾಸದ ಅವಧಿಗಳಲ್ಲಿ ನಾನು ನಿಜಕ್ಕೂ ಶ್ರಮಿಸುತ್ತೇನೆ. ಪ್ರತಿಯೊಂದು ಇನ್ನಿಂಗ್ಸ್ ಕೂಡಾ ನನಗೆ ಮತ್ತು ನನ್ನ ತಂಡಕ್ಕೆ ಮುಖ್ಯ. ಅದು ನನ್ನ ದೇಶಕ್ಕಾಗಿ ಆಡಲು ನನಗೆ ದೊಡ್ಡ ಪ್ರೇರಣೆಯಾಗಿದೆ. ನಾನು ಮೈದಾನದಲ್ಲಿ ಇರುವಾಗಲೆಲ್ಲಾ ನನ್ನ 100 ಪ್ರತಿಶತ ಪ್ರಯತ್ನ ಹಾಕಿ ಆನಂದಿಸುತ್ತೇನೆ,” ಎಂದು ಜೈಸ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ | ದ್ವಿಶತಕದ ಜೊತೆಗೆ ಸಿಕ್ಸರ್​​ನಲ್ಲೂ ಜೈಸ್ವಾಲ್ ವಿಶ್ವದಾಖಲೆ; ರೋಹಿತ್ ಹಿಂದಿಕ್ಕಿ ಕೊಹ್ಲಿ, ಅಕ್ರಂ ಸಾಲಿಗೆ ಸೇರಿ ಹಲವು ದಾಖಲೆ ಬರೆದ ಯಶಸ್ವಿ

ರಾಜ್​ಕೋಟ್​ನ ನಿರಂಜನ್ ಶಾ ಮೈದಾನದಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದಲ್ಲಿ ಜೈಸ್ವಾಲ್‌ ದ್ವಿಶತಕ ಸಿಡಿಸಿದರು. 231 ಎಸೆತಗಳಲ್ಲಿ 200ರ ಗಡಿ ದಾಟಿದರು. ಅವರ ಖಾತೆಗೆ ಸೇರಿದ 2 ದ್ವಿಶತಕಗಳು ಇದೇ ಸರಣಿಯಲ್ಲಿ ಬಂದ್ದದ್ದು ವಿಶೇಷ. 22 ವರ್ಷ ವಯಸ್ಸಿನ ಜೈಸ್ವಾಲ್ 231 ಎಸೆತಗಳಲ್ಲಿ 14 ಬೌಂಡರಿ ಮತ್ತು 10 ಸಿಕ್ಸರ್‌ಗಳ ಸಹಾಯದಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ 214 ರನ್ ಗಳಿಸಿದರು.

3ನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್​ನಲ್ಲಿ ಜೈಸ್ವಾಲ್ 12 ಸಿಕ್ಸರ್‌ಗಳನ್ನು ಬಾರಿಸಿದರು. ಇದರೊಂದಿಗೆ ಅವರು ಈ ಸರಣಿಯಲ್ಲಿ 20 ಸಿಕ್ಸರ್‌ಗಳನ್ನು ಸಿಡಿಸಿ ದಾಖಲೆ ಬರೆದಿದ್ದಾರೆ. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಟೆಸ್ಟ್ ಸರಣಿಯಲ್ಲಿ 20 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ