logo
ಕನ್ನಡ ಸುದ್ದಿ  /  ಕ್ರಿಕೆಟ್  /  6ನೇ ಟೆಸ್ಟ್ ಪಂದ್ಯದಲ್ಲಿ 2ನೇ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್; ಇಂಗ್ಲೆಂಡ್ ವಿರುದ್ಧ ಸ್ಫೋಟಕ ಬ್ಯಾಟಿಂಗ್

6ನೇ ಟೆಸ್ಟ್ ಪಂದ್ಯದಲ್ಲಿ 2ನೇ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್; ಇಂಗ್ಲೆಂಡ್ ವಿರುದ್ಧ ಸ್ಫೋಟಕ ಬ್ಯಾಟಿಂಗ್

Jayaraj HT Kannada

Feb 02, 2024 02:25 PM IST

google News

2ನೇ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್

    • Yashasvi Jaiswal Century: ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಜೈಸ್ವಾಲ್‌, ಚೊಚ್ಚಲ ಟೆಸ್ಟ್‌ನಲ್ಲಿಯೇ ಶತಕ ಸಿಡಿಸಿದ್ದರು. ಇದೀಗ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಎರಡನೇ ಶತಕ ಬಾರಿಸಿದ್ದಾರೆ.
2ನೇ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್
2ನೇ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್ (REUTERS)

ಇಂಗ್ಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ (India vs England 2nd Test) ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ (Yashasvi Jaiswal) ಆಕರ್ಷಕ ಶತಕ ಸಿಡಿಸಿದ್ದಾರೆ. ಸರಣಿಯ ಮೊದಲ ಟೆಸ್ಟ್‌ ಪಂದ್ಯದಲ್ಲಿ 80 ರನ್‌ ಗಡಿ ದಾಟುವಷ್ಟರಲ್ಲಿ ವಿಕೆಟ್‌ ಒಪ್ಪಿಸಿದ್ದ ಯುವ ಆಟಗಾರ, ಈ ಬಾರಿ ದಿಟ್ಟ ಹೋರಾಟ ನಡೆಸಿದರು. ಇಂಗ್ಲಿಷ್ ಸ್ಪಿನ್ನರ್‌ಗಳನ್ನು ಧೈರ್ಯದಿಂದ ಎದುರಿಸಿ, ಟೆಸ್ಟ್ ವೃತ್ತಿಜೀವನದ ಎರಡನೇ ಸೆಂಚುರಿ ಸಾಧನೆ ಮಾಡಿದರು.

ಕಳೆದ ವರ್ಷದ ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಜೈಸ್ವಾಲ್‌, 171 ರನ್ ಗಳಿಸುವ ಮೂಲಕ ಚೊಚ್ಚಲ ಟೆಸ್ಟ್‌ನಲ್ಲಿಯೇ ಶತಕ ಸಾಧನೆ ಮಾಡಿದ್ದರು. ಇದೀಗ ತಮ್ಮ ಆರನೇ ಟೆಸ್ಟ್‌ ಪಂದ್ಯದಲ್ಲಿ ಎರಡನೇ ಶತಕ ಸಿಡಿಸಿದ್ದಾರೆ.

ಇದನ್ನೂ ಓದಿ | IND vs ENG 2nd Test: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ; ರಜತ್ ಪಾಟೀದಾರ್ ಪದಾರ್ಪಣೆ ಸೇರಿ ಮೂರು ಬದಲಾವಣೆ

ಜೈಸ್ವಾಲ್ ಕೇವಲ 151 ಎಸೆತಗಳಲ್ಲಿ ತಮ್ಮ ಎರಡನೇ ಟೆಸ್ಟ್ ಶತಕ ಗಳಿಸಿದರು. ತಾಳ್ಮೆಯಿಂದ ಆಡಿದ‌ ಆರಂಭಿಕ ಆಟಗಾರ, ಅನಗತ್ಯ ತಪ್ಪುಗಳಿಗೆ ಬ್ಯಾಟಿಂಗ್‌ನಲ್ಲಿ ಅವಕಾಶ ಕೊಡಲಿಲ್ಲ. ಶ್ರೇಯಸ್ ಅಯ್ಯರ್ ಅವರೊಂದಿಗೆ ಉತ್ತಮ ಜೊತೆಯಾಟವಾಡಿದರು. ಅಂತಿಮವಾಗಿ 94 ರನ್‌ ಗಳಿಸಿದ್ದಾಗ ಚೆಂಡನ್ನು ನೇರವಾಗಿ ಸಿಕ್ಸರ್‌ಗಟ್ಟಿ ಮೂರಂಕಿ ತಲುಪಿದರು. ಯುವ ಬ್ಯಾಟರ್‌ನ ದಿಟ್ಟ ಹೊಡೆತಗಳು, ಎದುರಾಳಿಗಳ ವಿರುದ್ಧ ಪ್ರಾಬಲ್ಯ ಸಾಧಿಸುವ ಸಂಕಲ್ಪವನ್ನು ಎತ್ತಿ ತೋರಿಸಿತು.

ಟಾಸ್‌ ಗೆದ್ದ ಭಾರತವು ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಎಚ್ಚರಿಕೆಯ ಆರಂಭ ಕೊಟ್ಟ ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಜೈಸ್ವಾಲ್, ಮೊದಲ 16 ಓವರ್‌ಗಳಲ್ಲಿ ಕೇವಲ 40 ರನ್‌ಗಳನ್ನು ಕಲೆ ಹಾಕಿದರು. ಚೊಚ್ಚಲ ಪಂದ್ಯವಾಡಿದ ಸ್ಪಿನ್ನರ್ ಶೋಯೆಬ್ ಬಶೀರ್, 14 ರನ್ ಗಳಿಸಿದ್ದ ನಾಯಕ ರೋಹಿತ್ ಶರ್ಮಾ ವಿಕೆಟ್‌ ಪಡೆದರು. ಈ ವೇಳೆ ಜೈಸ್ವಾಲ್‌ ಕ್ರೀಸ್‌ಕಚ್ಚಿ ಆಡಿದರು.

ಇದನನ್ನೂ ಓದಿ | ವಿರಾಟ್ ನನ್ನ ಮಗನಿದ್ದಂತೆ, ನಾನೇಕೆ ಕೆಟ್ಟದ್ದು ಬಯಸಲಿ; ಕೊಹ್ಲಿ vs ಗಂಗೂಲಿ ವಿವಾದ ಬಗ್ಗೆ ಮಾಜಿ ಸೆಲೆಕ್ಟರ್ ಯೂ ಟರ್ನ್

ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಕೇವಲ 14 ರನ್‌ ಗಳಿಸಿ ಔಟಾದರೆ, ಶುಭ್ಮನ್‌ ಗಿಲ್‌ 34 ರನ್‌ ಗಳಿಸಿದ್ದಾಗ ಜೇಮ್ಸ್‌ ಆಂಡರ್ಸನ್‌ ಎಸೆತದಲ್ಲಿ ಕ್ಯಾಚ್‌ ನೀಡಿ ನಿರ್ಗಮಿಸಿದರು. ಚಹಾ ಚಿರತಾಮದ ಅವಧಿಗೆ ಭಾರತವು 63 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 225 ರನ ಗಳಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ