logo
ಕನ್ನಡ ಸುದ್ದಿ  /  ಮನರಂಜನೆ  /  Pramod Shetty: ಮದುಮಗನ ಅವತಾರದಲ್ಲಿ 'ಕಾಶೀಯಾತ್ರೆ'ಗೆ ಹೊರಟ ನಟ ಪ್ರಮೋದ್ ಶೆಟ್ಟಿ

Pramod Shetty: ಮದುಮಗನ ಅವತಾರದಲ್ಲಿ 'ಕಾಶೀಯಾತ್ರೆ'ಗೆ ಹೊರಟ ನಟ ಪ್ರಮೋದ್ ಶೆಟ್ಟಿ

HT Kannada Desk HT Kannada

Sep 02, 2022 07:33 AM IST

google News

ಮದುಮಗನ ಅವತಾರದಲ್ಲಿ ಕಾಶೀಯಾತ್ರೆಗೆ ಹೊರಟ ನಟ ಪ್ರಮೋದ್ ಶೆಟ್ಟಿ

    • 'ಕಾಶೀಯಾತ್ರೆ' ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆಯಾಗಿದ್ದು, ಪ್ರಮೋದ್‌ ಶೆಟ್ಟಿ ಈ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ.
ಮದುಮಗನ ಅವತಾರದಲ್ಲಿ ಕಾಶೀಯಾತ್ರೆಗೆ ಹೊರಟ ನಟ ಪ್ರಮೋದ್ ಶೆಟ್ಟಿ
ಮದುಮಗನ ಅವತಾರದಲ್ಲಿ ಕಾಶೀಯಾತ್ರೆಗೆ ಹೊರಟ ನಟ ಪ್ರಮೋದ್ ಶೆಟ್ಟಿ

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಪ್ರಮೋದ್‌ ಶೆಟ್ಟಿ ಒಂದಷ್ಟು ಹೊಸ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನಿಮಾದಿಂದ ಸಿನಿಮಾಕ್ಕೆ ವಿಭಿನ್ನತೆಯನ್ನು ಪ್ರದರ್ಶಿಸುತ್ತಿದ್ದಾರೆ. ಈಗಾಗಲೇ ಅಂಥ ಕೆಲವು ಪ್ರಯೋಗಗಳನ್ನೂ ಅವರು ಮಾಡಿದ್ದಾರೆ. ಪೋಷಕ ಪಾತ್ರಗಳಲ್ಲಿ ಗುರುತಿಸಿಕೊಂಡಿರುವ ಈ ನಟನೀಗ 'ಕಾಶೀಯಾತ್ರೆ'ಗೆ ಹೊರಟು ನಿಂತಿದ್ದಾರೆ!

ಹಾಗೆಂದ ಮಾತ್ರಕ್ಕೆ ಅವರೇನು ಎಲ್ಲವನ್ನು ಬಿಟ್ಟು ಕಾಶಿ ವಿಶ್ವನಾಥನ ದರ್ಶನಕ್ಕೆ ಹೊರಟಿಲ್ಲ. ಬದಲಿಗೆ ಸಿನಿಮಾದಲ್ಲಿ 'ಕಾಶೀಯಾತ್ರೆ'ಗೆ ಹೊರಡಲು ಸಿದ್ಧರಾಗಿದ್ದಾರೆ. ಗುರುವಾರ 'ಕಾಶೀಯಾತ್ರೆ' ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆಯಾಗಿದ್ದು, ಪ್ರಮೋದ್‌ ಶೆಟ್ಟಿ ಈ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ.

ಪ್ರಮೋದ್ ಶೆಟ್ಟಿ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಬರ್ತ್‌ಡೇ ಶುಭಾಶಯ ತಿಳಿಸಿದೆ. 'ಕಾಶೀಯಾತ್ರೆ'ಗೆ ಹೊರಟಿರುವ ಮಧುಮಗನ ವೇಷದಲ್ಲಿ ಕಾಣಿಸಿಕೊಂಡಿರುವ ಪ್ರಮೋದ್, ಅವರ ವಿಭಿನ್ನ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ.

ಕಾಮಿಡಿ ಶೈಲಿಯ ಸಿನಿಮಾ..

ಪೋಸ್ಟರ್‌ ನೋಡುತ್ತಿದ್ದಂತೆ ಇದೊಂದು ಪಕ್ಕಾ ಕಾಮಿಡಿ ಶೈಲಿಯ ಚಿತ್ರವೆಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ನೋಡುಗರನ್ನು ನಗೆಗಡಲಿನಲ್ಲಿ ತೇಲಿಸುವ ಕಥಾಹಂದರ ಹೊಂದಿರುವ ಈ ಚಿತ್ರವನ್ನು ವಿನಯ್ ಶಾಸ್ತ್ರಿ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಕಿರುಚಿತ್ರ ನಿರ್ದೇಶಿಸಿರುವ ವಿನಯ್ ಶಾಸ್ತ್ರಿ ಅವರಿಗೆ ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. gunnybag studios ಬ್ಯಾನರ್‌ನಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ವಿಶ್ವಿ ಸಂಗೀತ ನಿರ್ದೇಶನ ಹಾಗೂ ಸುನೀತ್ ಹಲಗೇರಿ ಅವರ ಛಾಯಾಗ್ರಹಣವಿದೆ‌.

ಸೆಪ್ಟೆಂಬರ್ 12ರಿಂದ ಬೆಂಗಳೂರು ಹಾಗೂ ಮೈಸೂರಿನಲ್ಲಿ "ಕಾಶೀಯಾತ್ರೆ" ಚಿತ್ರದ ಚಿತ್ರೀಕರಣ ನಡೆಯಲಿದೆ. ಪ್ರಮೋದ್ ಶೆಟ್ಟಿ, ಟಿ.ಎಸ್.ನಾಗಾಭರಣ, ಚಿತ್ತರಂಜನ್ ಕಶ್ಯಪ್, ಸ್ವರ ಶೆಟ್ಟಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಬಿಜಿ

2014ರಲ್ಲಿ ಉಳಿದವರು ಕಂಡಂತೆ ಸಿನಿಮಾ ಮೂಲಕ ಗುರುತಿಸಿಕೊಂಡ ಪ್ರಮೋದ್‌ ಶೆಟ್ಟಿ, ಅದಾದ ಮೇಲೆ ಕಿರಿಕ್‌ ಪಾರ್ಟಿ ಚಿತ್ರದಲ್ಲಿಯೂ ನಟಿಸಿ ಖ್ಯಾತಿ ಪಡೆದರು. ಅದಾದ ಮೇಲೆ ಪೋಸಕ ನಟನಾಗಿಯೇ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಯೂಟರ್ನ್‌, ರಿಕ್ಕಿ, ಬೆಲ್‌ಬಾಟಂ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹೀಗೆ ಹತ್ತಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರಮೋದ್‌ ನಟನೆಯ ದೃಶ್ಯ2, ತೂತು ಮಡಿಕೆ ಸಿನಿಮಾಗಳು ಬಿಡುಗಡೆ ಆಗಿದ್ದವು. ಉಪೇಂದ್ರ ಜತೆ ಕಬ್ಜ ಚಿತ್ರದಲ್ಲಿಯೂ ನಟಿಸಿದ್ದು, ಇನ್ನೇನು ಆ ಸಿನಿಮಾ ರಿಲೀಸ್‌ ಆಗಬೇಕಿದೆ. ಇದನ್ನು ಹೊರತುಪಡಿಸಿದರೆ, ಇನ್ನೂ ಹಲವು ಪ್ರಾಜೆಕ್ಟ್‌ಗಳಲ್ಲಿ ಬಿಜಿಯಾಗಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ