logo
ಕನ್ನಡ ಸುದ್ದಿ  /  ಮನರಂಜನೆ  /  ನಗು ಆರಂಭವಾದರೆ ನಿಲ್ಲಿಸಲಾಗದು, ಅನುಷ್ಕಾ ಶೆಟ್ಟಿಗೆ ಅಪರೂಪದ ಸ್ಯೂಡೋಬಲ್ಬಾರ್‌ ಕಾಯಿಲೆ; ಲಾಫಿಂಗ್‌ ಅಸ್ವಸ್ಥತೆ ಬಗ್ಗೆ ಇಲ್ಲಿದೆ ವಿವರ

ನಗು ಆರಂಭವಾದರೆ ನಿಲ್ಲಿಸಲಾಗದು, ಅನುಷ್ಕಾ ಶೆಟ್ಟಿಗೆ ಅಪರೂಪದ ಸ್ಯೂಡೋಬಲ್ಬಾರ್‌ ಕಾಯಿಲೆ; ಲಾಫಿಂಗ್‌ ಅಸ್ವಸ್ಥತೆ ಬಗ್ಗೆ ಇಲ್ಲಿದೆ ವಿವರ

Praveen Chandra B HT Kannada

Jun 25, 2024 05:58 PM IST

google News

ನಗು ಆರಂಭವಾದರೆ ನಿಲ್ಲಿಸಲಾಗದು, ಅನುಷ್ಕಾ ಶೆಟ್ಟಿಗೆ ಅಪರೂಪದ ಸ್ಯೂಡೋಬಲ್ಬಾರ್‌ ಕಾಯಿಲೆ

    • Pseudobulbar Affect: ನಟಿ ಅನುಷ್ಕಾ ಶೆಟ್ಟಿ ಅವರು ಅಪರೂಪದ ಸ್ಯೂಡೋಬಲ್ಬಾರ್‌ ಎಂಬ ನಗುವಿನ ಕಾಯಿಲೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಸ್ಯೂಡೋಬಲ್ಬಾರ್‌ ಎಂದರೇನು? ಈ ನಗುವಿನ ಕಾಯಿಲೆಯ ಲಕ್ಷಣಗಳೇನು? ಪರಿಣಾಮಗಳೇನು? ಇಲ್ಲಿದೆ ವಿವರ.
ನಗು ಆರಂಭವಾದರೆ ನಿಲ್ಲಿಸಲಾಗದು, ಅನುಷ್ಕಾ ಶೆಟ್ಟಿಗೆ ಅಪರೂಪದ ಸ್ಯೂಡೋಬಲ್ಬಾರ್‌ ಕಾಯಿಲೆ
ನಗು ಆರಂಭವಾದರೆ ನಿಲ್ಲಿಸಲಾಗದು, ಅನುಷ್ಕಾ ಶೆಟ್ಟಿಗೆ ಅಪರೂಪದ ಸ್ಯೂಡೋಬಲ್ಬಾರ್‌ ಕಾಯಿಲೆ

ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ನಗುವಿನ ಹಿಂದೆ ನೋವಿದೆ. ಕೆಲವೊಮ್ಮೆ ಅವರ ನಗು ಅವರಿಗೆ ನಿಯಂತ್ರಿಸಲಾಗದಷ್ಟು ಯಾತನೆ ನೀಡುತ್ತದೆ ಎನ್ನುವುದು ಸುಳ್ಳಲ್ಲ. ಅನುಷ್ಕಾ ಶೆಟ್ಟಿ ತುಂಬಾ ಹೊತ್ತು ನಗುತ್ತಿದ್ದಾರೆ ಎಂದರೆ ಅವರು ತೊಂದರೆಯಲ್ಲಿದ್ದಾರೆ ಎಂದೇ ಅರ್ಥ. ಈ ಕುರಿತು ಸ್ವತಃ ಅನುಷ್ಕಾ ಶೆಟ್ಟಿಯೇ ಮಾಹಿತಿ ನೀಡಿದ್ದಾರೆ. ಲಾಫಿಂಗ್‌ ಡಿಸಾರ್ಡರ್‌ ಅಥವಾ ಸ್ಯೂಡೋಬಲ್ಬಾರ್ ಎಂಬ ತೊಂದರೆ ಇದೆಯಂತೆ. ನಗು ಅಥವಾ ಅಳು ಆರಂಭವಾದರೆ ಹದಿನೈದು ಇಪ್ಪತ್ತು ನಿಮಿಷಗಳ ಕಾಲ ನಿಯಂತ್ರಿಸಲಾಗದೆ ಇರುವುದನ್ನು ಸ್ಯೂಡೋಬಲ್ಬಾರ್‌ (Pseudobulbar) ತೊಂದರೆ ಎನ್ನುತ್ತಾರೆ. ಈ ಕಾಯಿಲೆಯ ಕುರಿತು ಹೆಚ್ಚಿನ ಜನರಲ್ಲಿ ಜಾಗೃತಿಯಿಲ್ಲ. ಇದಕ್ಕೆ ಸರಿಯಾದ ಚಿಕಿತ್ಸೆಯೂ ಇಲ್ಲ.

ಅನುಷ್ಕಾ ಶೆಟ್ಟಿ ಈ ಹಿಂದೆಯೇ ಸಂದರ್ಶನವೊಂದರಲ್ಲಿ ತನ್ನ ಲಾಫಿಂಗ್‌ ಡಿಸಾರ್ಡರ್‌ ಕುರಿತು ಮಾಹಿತಿ ನೀಡಿದ್ದರು. "ನನಗೆ ನಗುವ ಕಾಯಿಲೆ ಇದೆ. ನಿಮಗೆ ಆಶ್ಚರ್ಯವಾಗಬಹುದು. ನಗು ಒಂದು ಕಾಯಿಲೆಯೇ? ಎಂದು ನೀವು ಕೇಳಬಹುದು. ಹೌದು, ನನಗೆ ನಗೆ ಸಮಸ್ಯೆ. ನಾನು ನಗು ಆರಂಭಿಸಿದರೆ 15ರಿಂದ 20 ನಿಮಿಷ ನಗು ನಿಯಂತ್ರಿಸಲು ಕಷ್ಟವಾಗುತ್ತದೆ. ಇದೇ ಕಾರಣಕ್ಕೆ ಕಾಮಿಡಿ ಸೀನ್‌ಗಳನ್ನು ನೋಡುವಾಗ ನನಗೆ ತಡೆಯಲಾಗದಷ್ಟು ನಗು ಬರುತ್ತದೆ. ನಾನು ನೆಲದಲ್ಲಿ ಬಿದ್ದು ಬಿದ್ದು ನಗುತ್ತೇನೆ. ಇದೇ ಕಾರಣಕ್ಕೆ ಹಲವು ಬಾರಿ ಶೂಟಿಂಗ್‌ ಕೆಲವು ಸಮಯದವರೆಗೆ ಸ್ಥಗಿತಗೊಂಡಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.

ಏನಿದು ಸ್ಯೂಡೋಬಲ್ಬಾರ್‌ ತೊಂದರೆ?

ಸ್ಯೂಡೋಬುಲ್ಬಾರ್ ಅಫೆಕ್ಟ್ ಒಂದು ನರವೈಜ್ಞಾನಿಕ ಸ್ಥಿತಿ. ಆ ವ್ಯಕ್ತಿಯ ಭಾವನಾತ್ಮಕ ಸ್ಥಿತಿಯನ್ನು ನಿಯಂತ್ರಿಸಲಾಗದಂತೆ ಮಾಡುತ್ತದೆ. ನಗು ಅಥವಾ ಅಳು ಬಂದರೆ ತುಂಬಾ ಹೊತ್ತು ನಿಲ್ಲಿಸಲಾಗದು. ಹಠಾತ್‌ ಆಗಿ ಈ ಸನ್ನಿವೇಶ ಎದುರಾಗಬಹುದು. ಹಾಗಂತ, ಇದು ಮಾನಸಿಕ ಅಸ್ವಸ್ಥತೆಯಲ್ಲ. ಸ್ಯೂಡೋಬಲ್ಬಾರ್‌ ಅನ್ನು ಖಿನ್ನತೆ ಅಥವಾ ಬೈಪೋಲಾರ್ ಡಿಸಾರ್ಡರ್‌ನಂತಹ ಮಾನಸಿಕ ಆರೋಗ್ಯ ಅಸ್ವಸ್ಥತೆಗಳಿಂದ ಪ್ರತ್ಯೇಕಿಸಲಾಗಿದೆ. ಆದರೆ, ಮಲ್ಟಿಪಲ್ ಸ್ಕ್ಲೆರೋಸಿಸ್ (MS), ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ (ALS), ಪಾರ್ಕಿನ್ಸನ್ ಕಾಯಿಲೆ, ಆಲ್ಝೈಮರ್ ಕಾಯಿಲೆ, ಆಘಾತಕಾರಿ ಮಿದುಳಿನ ಗಾಯ (TBI) ಅಥವಾ ಪಾರ್ಶ್ವವಾಯು ಇತ್ಯಾದಿ ತೊಂದರೆಗಳ ಜತೆ ಇದು ನಂಟು ಹೊಂದಿರಬಹುದು.

ಸ್ಯೂಡೋಬಲ್ಬಾರ್‌ ಎಫೆಕ್ಟ್‌ಗೆ ಕಾರಣವೇನು?

ಈ ತೊಂದರೆಗೆ ನಿಖರವಾದ ಕಾರಣಗಳನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಭಾವನಾತ್ಮಕ ಅಭಿವ್ಯಕ್ತಿಯನ್ನು ನಿಯಂತ್ರಿಸುವ ಮೆದುಳಿನ ಮಾರ್ಗಗಳಲ್ಲಿನ ಹಾನಿ ಅಥವಾ ಅಡ್ಡಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ವಿವಿಧ ನರವೈಜ್ಞಾನಿಕ ಪರಿಸ್ಥಿತಿಗಳು ಅಥವಾ ಗಾಯಗಳಿಂದಾಗಿ ಈ ಹಾನಿ ಸಂಭವಿಸಬಹುದು.

ಸ್ಯೂಡೋಬಲ್ಬಾರ್‌ ಲಕ್ಷಣಗಳು

ನಗುವುದು ಅಥವಾ ಅಳುವುದನ್ನು ನಿಯಂತ್ರಿಸಲಾಗದೆ ಇರುವುದು ಸ್ಯೂಡೋಬಲ್ಬಾರ್‌ನ ಪ್ರಮುಖ ಲಕ್ಷಣವಾಗಿದೆ. ಇದು ಕೆಲವು ಸೆಕೆಂಡ್‌ಗಳಿಂದ ಹಲವು ನಿಮಿಷಗಳವರೆಗೆ ಇರಬಹುದು. ದಿನದಲ್ಲಿ ಹಲವು ಬಾರಿ ಸಂಭವಿಸಬಹುದು. ಇದರೊಂದಿಗೆ ಮುಖದ ಸೆಳೆತ, ದೇಹದ ಸೆಳೆತ, ಎದೆಯಲ್ಲಿ ಬಿಗಿತದಂತಹ ದೈಹಿಕ ಲಕ್ಷಣಗಳನ್ನೂ ಇದು ಹೊಂದಿದೆ. ಇಂತಹ ತೊಂದರೆ ಇರುವವರು ಮುಜುಗರ, ಬೇಸರ ಅನುಭವಿಸುತ್ತಾರೆ. ಇಂತಹ ಘಟನೆ ಸಾರ್ವಜನಿಕವಾಗಿ ಆಗಬಾರದೆಂದು ಆದಷಟು ಸಾಮಾಜಿಕವಾಗಿ ಹಿಂದೆ ಸರಿಯಬಹುದು. ಕೆಲವರಿಗೆ ಈ ಕಾಯಿಲೆಯ ಸೌಮ್ಯ ಲಕ್ಷಣಗಳು ಇರಬಹುದು. ಇನ್ನು ಕೆಲವರಲ್ಲಿ ಇದು ತೀವ್ರವಾಗಿರಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ