logo
ಕನ್ನಡ ಸುದ್ದಿ  /  ಮನರಂಜನೆ  /  Amaran Ott: ಸರ್ಪ್ರೈಸ್‌ ನೀಡಿದ ಅಮರನ್; ಘೋಷಣೆ ದಿನಕ್ಕಿಂತ ಮೊದಲೇ ಈ ಒಟಿಟಿ ಅಂಗಳ ಪ್ರವೇಶಿಸಲಿದೆ ಬ್ಲಾಕ್‌ ಬಸ್ಟರ್‌ ಸಿನಿಮಾ

Amaran OTT: ಸರ್ಪ್ರೈಸ್‌ ನೀಡಿದ ಅಮರನ್; ಘೋಷಣೆ ದಿನಕ್ಕಿಂತ ಮೊದಲೇ ಈ ಒಟಿಟಿ ಅಂಗಳ ಪ್ರವೇಶಿಸಲಿದೆ ಬ್ಲಾಕ್‌ ಬಸ್ಟರ್‌ ಸಿನಿಮಾ

Nov 29, 2024 03:22 PM IST

google News

ಈ ಒಟಿಟಿ ಅಂಗಳ ಪ್ರವೇಶಿಸಲಿದೆ ಬ್ಲಾಕ್‌ ಬಸ್ಟರ್‌ ಅಮರನ್ ಸಿನಿಮಾ

  • Amaran OTT Release Date: ಅಮರನ್ ಸಿನಿಮಾ ಇನ್ನೇನು ಶೀಘ್ರದಲ್ಲಿ ಒಟಿಟಿಗೆ ಆಗಮಿಸಲಿದೆ. ವಿಶೇಷ ಏನೆಂದರೆ, ನಿಗದಿತ ದಿನಾಂಕದ ಒಂದು ವಾರ ಮೊದಲೇ ಅಮರನ್‌ ಸಿನಿಮಾವನ್ನು ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು.

ಈ ಒಟಿಟಿ ಅಂಗಳ ಪ್ರವೇಶಿಸಲಿದೆ ಬ್ಲಾಕ್‌ ಬಸ್ಟರ್‌ ಅಮರನ್ ಸಿನಿಮಾ
ಈ ಒಟಿಟಿ ಅಂಗಳ ಪ್ರವೇಶಿಸಲಿದೆ ಬ್ಲಾಕ್‌ ಬಸ್ಟರ್‌ ಅಮರನ್ ಸಿನಿಮಾ

Amaran OTT Release Date: ಸಾಯಿ ಪಲ್ಲವಿ ಮತ್ತು ಶಿವಕಾರ್ತಿಕೇಯನ್ ಅಭಿನಯದ ತಮಿಳಿನ ಬ್ಲಾಕ್ ಬಸ್ಟರ್ ಚಿತ್ರ ಅಮರನ್ ಒಟಿಟಿಗೆ ಬರಲು ಸಿದ್ಧವಾಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸೆನ್ಸೇಷನಲ್ ಹಿಟ್ ಆಗಿರುವ ಈ ಸಿನಿಮಾ, ಕಲೆಕ್ಷನ್‌ ವಿಚಾರದಲ್ಲಿಯೂ ಮುಂದಡಿ ಇರಿಸಿದೆ. ಹೀಗಿರುವಾಗಲೇ ಇತ್ತೀಚೆಗಷ್ಟೇ ಇದೇ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಅಧಿಕೃತಗೊಂಡಿತ್ತು. ಸ್ಟ್ರೀಮಿಂಗ್‌ ದಿನಾಂಕವನ್ನು ನೆಟ್‌ಫ್ಲಿಕ್ಸ್‌ ಘೋಷಣೆ ಮಾಡಿತ್ತು. ಆದರೆ, ಇದೀಗ ಅದಕ್ಕೂ ಮುನ್ನವೇ ಒಟಿಟಿಗೆ ಆಗಮಿಸಲಿದೆ ಎಂಬ ಸುದ್ದಿ ಬಂದಿದೆ.

ಅಮರನ್ ಒಟಿಟಿ ಬಿಡುಗಡೆ ದಿನಾಂಕ

ಅಮರನ್ ಸಿನಿಮಾ ದೀಪಾವಳಿ ಹಬ್ಬದ ಪ್ರಯುಕ್ತ ಅಕ್ಟೋಬರ್ 31 ರಂದು ಮೂಲ ತಮಿಳು ಸೇರಿ ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಯಿತು. ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್‌ ಮುಂದುವರಿಸುತ್ತಿದ್ದಂತೆ, ಒಟಿಟಿ ಬಿಡುಗಡೆ ವಿಳಂಬವಾಯ್ತು. ಅದರಂತೆ, ಸದ್ಯ 320 ಕೋಟಿ ಗಳಿಕೆ ಕಂಡಿದೆ ಈ ಸಿನಿಮಾ. ಇದೀಗ ಹಿಂದೂಸ್ಥಾನ್‌ ಟೈಮ್ಸ್‌ಗೆ ಸಿಕ್ಕ ಕೆಲ ಮೂಲಗಳ ಪ್ರಕಾರ, ಅಮರನ್‌ ಸಿನಿಮಾ, ಡಿಸೆಂಬರ್‌ 5ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ ಎನ್ನಲಾಗುತ್ತಿದೆ. ಇದಕ್ಕೂ ಮೊದಲು ಈ ಸಿನಿಮಾ ಡಿಸೆಂಬರ್‌ 11ರಂದು ಪ್ರಸಾರ ಆರಂಭಿಸಲಿದೆ ಎನ್ನಲಾಗಿತ್ತು.

“ಅಮರನ್ ಡಿಸೆಂಬರ್ 5 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ವಾಸ್ತವವಾಗಿ, ಈ ಸಿನಿಮಾ ಡಿಸೆಂಬರ್ 11ರಂದು ಬಿಡುಗಡೆಯಾಗಬೇಕಿತ್ತು. ಆದರೆ ಈಗ ಅದು ಒಂದು ವಾರ ಮುಂಚಿತವಾಗಿ ಬರಲಿದೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ಅಮರನ್ ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಸಾರವಾಗಲಿದೆ”

ದಾಖಲೆ ಬೆಲೆಗೆ ಒಟಿಟಿ ಹಕ್ಕುಗಳ ಮಾರಾಟ

ಅಮರನ್ ಸಿನಿಮಾ ಬ್ಲಾಕ್ ಬಸ್ಟರ್ ಪಟ್ಟಿಗೆ ಸೇರಿದೆ. ಇತ್ತ ಚಿತ್ರದ ಒಟಿಟಿ ಹಕ್ಕುಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಚಿತ್ರವನ್ನು ನೆಟ್‌ಫ್ಲಿಕ್ಸ್‌ 60 ಕೋಟಿ ರೂಪಾಯಿಗೆ ಖರೀದಿಸಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಐದು ವಾರಗಳ ಬಳಿಕ ಸಿನಿಮಾ ಡಿಜಿಟಲ್ ಪ್ರೀಮಿಯರ್ ಆಗಬೇಕು ಎಂಬ ಷರತ್ತಿನೊಂದಿಗೆ ಅಮರನ್‌ ಡಿಸೆಂಬರ್ 5 ರಂದು ಬಿಡುಗಡೆಯಾಗಲಿದೆ. ಅಂದರೆ ನಿಗದಿತ ದಿನಾಂಕಕ್ಕೂ ಒಂದು ವಾರ ಮುಂಚಿತವಾಗಿ ಚಿತ್ರವನ್ನು ಒಟಿಟಿಯಲ್ಲಿ ವೀಕ್ಷಿಸಬಹುದು.

ನೈಜ ಘಟನೆ ಆಧರಿತ ಅಮರನ್

ಸೇನಾ ಮೇಜರ್ ಮುಕುಂದ್ ವರದರಾಜನ್ ಅವರ ಜೀವನಾಧಾರಿತ ಚಿತ್ರ 'ಅಮರನ್'. ಮೇಜರ್ ಮುಕುಂದ್ ಪಾತ್ರದಲ್ಲಿ ಶಿವಕಾರ್ತಿಕೇಯನ್ ಮತ್ತು ಅವರ ಪತ್ನಿ ರೆಬೆಕಾ ವರ್ಗೀಸ್ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಕಮಲ್ ಹಾಸನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ರಾಜ್‌ಕುಮಾರ್‌ ಪೆರಿಯಸಾಮಿ ಈ ಸಿನಿಮಾ ನಿರ್ದೇಶಿಸಿದ್ದಾರೆ.

ಚಿತ್ರದ ಯಶಸ್ಸಿನ ನಂತರ, ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿ ಇತ್ತೀಚೆಗೆ ಶಿವಕಾರ್ತಿಕೇಯನ್ ಅವರನ್ನು ಸನ್ಮಾನಿಸಿತ್ತು. ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿ ಮೇಜರ್ ಮುಕುಂದ್ ವರದರಾಜನ್ ಅವರ ಪ್ರಯಾಣವು ಚೆನ್ನೈನ ಈ ಅಕಾಡೆಮಿಯಲ್ಲಿ ಪ್ರಾರಂಭವಾಯಿತು. ಅಕಾಡೆಮಿಯು ಈ ಚಿತ್ರದ ಯಶಸ್ಸನ್ನು ಆಚರಿಸಿತು. ಶಿವಕಾರ್ತಿಕೇಯನ್ ಅವರನ್ನೂ ಸನ್ಮಾನಿಸಿತು.

"ಮೇಜರ್ ಮುಕುಂದ್ ಪಾತ್ರವನ್ನು ನಿರ್ವಹಿಸುವುದು ಒಂದು ಗೌರವ. ನಾನು ಈ ಕಥೆಯೊಂದಿಗೆ ಸಂಪೂರ್ಣವಾಗಿ ಕನೆಕ್ಟ್‌ ಆಗಿದ್ದೇನೆ. ಈ ಮನ್ನಣೆ ನನಗೆ ಬಹಳ ಮುಖ್ಯ. ನಿಜ ಜೀವನದ ಹೀರೋಗಳ ಕಥೆಗಳನ್ನು ಹೇಳುವುದು ಎಷ್ಟು ಮುಖ್ಯ ಎಂಬುದನ್ನು ಇದು ಸಾಬೀತುಪಡಿಸುತ್ತದೆ" ಎಂದು ಸನ್ಮಾನ ಸ್ವೀಕರಿಸಿದ ಬಳಿಕ ಶಿವಕಾರ್ತಿಕೇಯನ್‌ ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ