logo
ಕನ್ನಡ ಸುದ್ದಿ  /  ಮನರಂಜನೆ  /  Amruthadhaare September 14th Episode: ದಿಯಾ-ಜೈದೇವ್‌ ಮೊಬೈಲ್‌ ಟ್ರ್ಯಾಕ್‌ ಮಾಡಿಸಿದ ಗೌತಮ್‌ ದಿವಾನ್‌, ಅಕ್ರಮ ಸಂಬಂಧಕ್ಕೆ ಫುಲ್‌ಬ್ರೇಕ್

Amruthadhaare September 14th Episode: ದಿಯಾ-ಜೈದೇವ್‌ ಮೊಬೈಲ್‌ ಟ್ರ್ಯಾಕ್‌ ಮಾಡಿಸಿದ ಗೌತಮ್‌ ದಿವಾನ್‌, ಅಕ್ರಮ ಸಂಬಂಧಕ್ಕೆ ಫುಲ್‌ಬ್ರೇಕ್

Praveen Chandra B HT Kannada

Sep 14, 2024 11:01 AM IST

google News

Amruthadhaare September 14th Episode: ಅಮೃತಧಾರೆಯ ಸೆಪ್ಟೆಂಬರ್‌ 14ರ ಸಂಚಿಕೆಯ ಕಥೆ ಇಲ್ಲಿದೆ

    • Amruthadhaare September 14th Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನಲ್ಲಿ ಜೈದೇವ್‌ ದಿಯಾರ ಅಕ್ರಮ ಸಂಬಂಧಕ್ಕೆ ಫುಲ್‌ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ಗೌತಮ್‌ ಕೆಲಸ ಮಾಡುತ್ತಿದ್ದಾರೆ. ಜೈದೇವ್‌ ಕುರಿತು ಏನೋ ಅನುಮಾನ ಬಂದು ದಿಯಾ-ಜೈ ಇಬ್ಬರ ಮೊಬೈಲ್‌ ಟ್ರ್ಯಾಕ್‌ ಮಾಡಿಸಿದ್ದಾರೆ ಡುಮ್ಮ ಸರ್‌.
Amruthadhaare September 14th Episode: ಅಮೃತಧಾರೆಯ ಸೆಪ್ಟೆಂಬರ್‌ 14ರ ಸಂಚಿಕೆಯ ಕಥೆ ಇಲ್ಲಿದೆ
Amruthadhaare September 14th Episode: ಅಮೃತಧಾರೆಯ ಸೆಪ್ಟೆಂಬರ್‌ 14ರ ಸಂಚಿಕೆಯ ಕಥೆ ಇಲ್ಲಿದೆ

Amruthadhaare September 14th Episode: ಅಪರ್ಣಾಳ ಮನವೋಲಿಸಿ ಹೇಗೋ ಆಫೀಸ್‌ಗೆ ಹೊರಡುತ್ತಾನೆ ಆನಂದ್.‌ "ಜೈದೇವ್‌ ಅಥವಾ ಬೇರೆ ಯಾರಾದರೂ ಏನಾದರೂ ಮಾಡಿದ್ರೆ ಅದನ್ನು ತಕ್ಷಣ ಗೌತಮ್‌ಗೆ ಹೇಳಬೇಕು" ಎಂದು ಅಪರ್ಣಾ ಪ್ರಾಮೀಸ್‌ ತೆಗೆದುಕೊಳ್ಳುತ್ತಾಳೆ. ಇನ್ನೊಂದೆಡೆ ಗೌತಮ್‌ ದಿವಾನ್‌ ಆಫೀಸ್‌ಗೆ ರೆಡಿಯಾಗುತ್ತಾರೆ. ಡುಮ್ಮ ಸರ್‌ ಶರ್ಟ್‌ನಲ್ಲಿ ಚೆನ್ನಾಗಿ ಕಾಣಿಸೋದಿಲ್ಲ ಎಂದು ಕೋಟ್‌ ಹಾಕಲು ಹೇಳುತ್ತಾರೆ. ಕೋಟ್‌ ಹಾಕುವ ನೆಪದಲ್ಲಿ ಹಗ್‌ ಇರುತ್ತದೆ. ಒಂದಿಷ್ಟು ಐ ಲವ್‌ ಯು ಮಾತುಗಳು ಇರುತ್ತವೆ. "ಒಲವ ಅಮೃತಧಾರೆ ನನ್ನೊಲವ ಅಮೃತಧಾರೆ" ಹಾಡು ಇರುತ್ತದೆ. ಇನ್ನೊಂದೆಡೆ ಗಿಫ್ಟ್‌ ತರುವ ನೆಪದಲ್ಲಿ ಜೈದೇವ್‌ ಹೊರಹೋಗುತ್ತಾನೆ. ದಿಯಾಳಿಗೆ ಕಾಲ್‌ ಮಾಡಿ ಭೇಟಿಯಾಗಲು ತಿಳಿಸುತ್ತಾನೆ. ನಾನು ಗಿಫ್ಟ್‌ ಕಲೆಕ್ಟ್‌ ಮಾಡಿಕೊಂಡು ಬರುವೆ ಎಂದು ಜೈದೇವ್‌ ಮಲ್ಲಿಗೆ ಹೇಳಿ ಹೊರಡುತ್ತಾನೆ.

ಪಾರ್ಥ ಮತ್ತು ಗೌತಮ್‌ ಆಫೀಸ್‌ನಲ್ಲಿ ಮಾತನಾಡುತ್ತಾರೆ. "ಹೊರಗಡೆ ಬಿಸ್ನೆಸ್‌ ಕಾಂಪಿಟೇಷನ್‌ ಹೆಚ್ಚಾಗಿದೆ. ಪ್ರತಿದಿನ ನಾವು ಹೋರಾಡ್ತಾ ಇರಬೇಕು" ಎಂದು ಗೌತಮ್‌ ದಿವಾನ್‌ ಹೇಳುತ್ತಾರೆ. ಕೆಲಸ ಕಳ್ಳತನ ಮಾಡಬಾರದೆಂದು ಪಾರ್ಥನಿಗೆ ಪನಿಷ್‌ಮೆಂಟ್‌ ಕೊಡುತ್ತಾರೆ. ಆ ಸಮಯದಲ್ಲಿ ಆನಂದ್‌ ಬರುತ್ತಾರೆ. ಆನಂದ್‌ ದೆಸೆಯಿಂದ ಗೌತಮ್‌ ಕೈಯಿಂದ ಪಾರಾಗುತ್ತಾನೆ ಪಾರ್ಥ. "ಗೌತಮ್‌ ಕೂಡ ಫ್ರೆಶರ್‌ ಆಗಿ ತಂದೆಯ ಕಂಪನಿಗೆ ಸೇರಿದ್ರು. ಈಗ ಕಂಪನಿಯನ್ನು ಹೇಗೆ ಬೆಳೆಸಿದ್ದಾರೆ ನೋಡು" ಎಂದು ಆನಂದ್‌ ಪಾರ್ಥನಿಗೆ ಸ್ಪೂರ್ತಿದಾಯಕ ಮಾತುಗಳನ್ನು ಹೇಳುತ್ತಾರೆ. "ನೀನು ಅಣ್ಣನ ಹೆಸರು ಉಳಿಸಬೇಕು" ಎಂದು ತನ್ನದೇ ಶೈಲಿಯಲ್ಲಿ ಆನಂದ್‌ ಬುದ್ದಿವಾದ ಹೇಳುತ್ತಾನೆ.

ಚಮಕ್‌ಚಲ್ಲೋ ಜತೆ ಜೈದೇವ್‌ ರೋಮಾನ್ಸ್‌

ಮಲ್ಲಿಯನ್ನು ಹುಡುಕುತ್ತಾ ಭೂಮಿಕಾ ಬರುತ್ತಾರೆ. "ಜೈದೇವ್‌ ಎಲ್ಲಿ ಹೋಗಿದ್ದಾರೆ?" ಎಂದು ಕೇಳುತ್ತಾಳೆ. "ನಿನ್ನೆ ಲಾಂಗ್‌ ಡ್ರೈವ್‌ ಹೋಗಿಲ್ಲ. ಗಿಫ್ಟ್‌ ತರಲು ಹೋಗಿದ್ವಿ. ಬಸುರಿ ಭಾಗ್ಯ ರೀತಿ. ಅದನ್ನು ಫ್ರೆಂಡ್‌ ಮನೆಯಲ್ಲಿ ಇಟ್ಟಿದ್ರು. ಆ ಫ್ರೆಂಡ್‌ ಮನೆಯಲ್ಲಿ ಇರಲಿಲ್ಲ. ಈಗ ಗಿಫ್ಟ್‌ ತರಲು ಹೋಗಿದ್ದಾರೆ" ಎಂದು ಮಲ್ಲಿ ಹೇಳುತ್ತಾಳೆ. ಇನ್ನೊಂದೆಡೆ ಜೈದೇವ್‌ ಮತ್ತು ದಿಯಾ ಕಾರಿನಲ್ಲಿ ಭೇಟಿಯಾಗಿದ್ದಾರೆ. "ಇಷ್ಟೆಲ್ಲ ಕಷ್ಟಪಡೋರು ಮಲ್ಲಿಯ ಹಿಂದೆ ಯಾಕೆ ಹೋದ್ರಿ" ಎಂದು ಕೇಳುತ್ತಾರೆ. "ಆಗ ವಯಸ್ಸು ಹಾಗೆ ಇತ್ತು. ಅಂತಸ್ತು, ಆಸ್ತಿ ನೋಡದೇ ಅವಳ ಹಿಂದೆ ಹೋದೆ" ಎಂದು ಹೇಳುತ್ತಾನೆ. ಇದೇ ಸಮಯದಲ್ಲಿ ಮಲ್ಲಿಗೆ ಡಿವೋರ್ಸ್‌ ಕೊಡುವ ವಿಚಾರದ ಬಗ್ಗೆಯೂ ಮಾತನಾಡುತ್ತಾರೆ. ಚಮಕ್‌ಚಲ್ಲೋ ಜತೆ ರೋಮಾನ್ಸ್‌ ಮುಂದುವರೆಯುತ್ತದೆ.

ಗೌತಮ್‌ಗೆ ಮೊಬೈಲ್‌ಗೆ ಮೆಸೆಜ್‌ ಬರುತ್ತದೆ. ಭೂಮಿಕಾ ಏನೋ ವಿಡಿಯೋ ಕಳುಹಿಸಿದ್ದಾಳೆ. ಅಪೇಕ್ಷಾ ಮತ್ತು ಪಾರ್ಥರ ವಿಡಿಯೋ ಕಳುಹಿಸಿದ್ದಾರೆ. ಎಲ್ಲವೂ ವರ್ಕ್‌ ಆಗ್ತಾ ಇದೆ ಎಂದು ಹೇಳುತ್ತಾನೆ. "ಪಾರ್ಥ ಮತ್ತು ಅಪೇಕ್ಷಾರ ನಡುವೆ ಸಣ್ಣ ಮಿಸ್‌ ಅಂಡರ್‌ಸ್ಟ್ಯಾಂಡಿಂಗ್‌ ಆಗಿತ್ತು. ಅದನ್ನು ಸರಿ ಮಾಡಲು ನಾವು ಏನೋ ಐಡಿಯಾ ಮಾಡಿದ್ವಿ. ಅದು ವರ್ಕ್‌ ಆಗ್ತಾ ಇದೆ" ಎಂದು ಗೌತಮ್‌ ಹೇಳುತ್ತಾರೆ. ಇದೇ ಸಮಯದಲ್ಲಿ ಭೂಮಿಕಾ ಕಾಲ್‌ ಮಾಡುತ್ತಾರೆ. ಅಪೇಕ್ಷಾ ಮಾಡಿದ ಅಡುಗೆಯನ್ನು ಇವತ್ತೂ ತಿನ್ನಬೇಕಾ ಎಂದು ಗೌತಮ್‌ ಹೇಳುತ್ತಾರೆ. ಇಲ್ಲ ಅಪೇಕ್ಷಾ ಕ್ಯಾರಿಯರ್‌ ಬದಲಿಸಿದ್ದೇನೆ ಎಂದು ಹೇಳುತ್ತಾಳೆ. ಇದೇ ಸಮಯದಲ್ಲಿ ಜೈದೇವ್‌ ಕುರಿತು ಮಾತನಾಡುತ್ತಾರೆ. ಜೈದೇವ್‌ ಗಿಫ್ಟ್‌ ತರಲು ಹೊರಕ್ಕೆ ಹೋಗಿದ್ದಾರೆ ಎಂದು ಹೇಳುತ್ತಾಳೆ ಭೂಮಿಕಾ. "ಏನೋ ಮಿಸ್‌ ಹೊಡೀತಾ ಇದೆ. ದಿಯಾ ಮತ್ತು ಜೈದೇವ್‌ ಲೊಕೆಷನ್‌ ಟ್ರ್ಯಾಕ್‌ ಮಾಡು" ಎಂದು ಆನಂದ್‌ಗೆ ಹೇಳುತ್ತಾರೆ ಗೌತಮ್‌. ಸೀರಿಯಲ್‌ ಮುಂದುವರೆಯುತ್ತದೆ.

ಇದೇ ಸಮಯದಲ್ಲಿ ಝೀ ಕನ್ನಡ ವಾಹಿನಿಯು ಪ್ರಮೋವೊಂದನ್ನು ಬಿಡುಗಡೆ ಮಾಡಿದೆ. ಅಮೃತಧಾರೆ ಪ್ರಮೋದಲ್ಲಿ ದಿಯಾಳ ತಂದೆಗೆ ಬೇರೆ ಪ್ರಾಜೆಕ್ಟ್‌ ನೀಡಿ ಬೇರೆ ಊರಿಗೆ ಕಳುಹಿಸುತ್ತಾರೆ ಗೌತಮ್‌. ಈ ಮೂಲಕ ದಿಯಾಳನ್ನು ಬೇರೆ ಊರಿಗೆ ಹೋಗುವಂತೆ ಮಾಡುತ್ತಾರೆ ಗೌತಮ್‌. ಇದನ್ನು ಕೇಳಿ ದಿಯಾ ಮತ್ತು ಜೈದೇವ್‌ ಟೆನ್ಷನ್‌ ಆಗುತ್ತಾರೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ