logo
ಕನ್ನಡ ಸುದ್ದಿ  /  ಮನರಂಜನೆ  /  ಅಮ್ಮ ತಂಗಿ ಸಾವಿನ ಸುದ್ದಿ ಕೇಳಿ ಗೌತಮ್‌ ವಿಲವಿಲ, ಶಕುಂತಲಾ ಗ್ಯಾಂಗ್‌ ಆಟಕ್ಕಿಲ್ಲ ಕಡಿವಾಣ- ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆ

ಅಮ್ಮ ತಂಗಿ ಸಾವಿನ ಸುದ್ದಿ ಕೇಳಿ ಗೌತಮ್‌ ವಿಲವಿಲ, ಶಕುಂತಲಾ ಗ್ಯಾಂಗ್‌ ಆಟಕ್ಕಿಲ್ಲ ಕಡಿವಾಣ- ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆ

Praveen Chandra B HT Kannada

Dec 11, 2024 10:13 AM IST

google News

ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆ

    • ಅಮೃತಧಾರೆ ಧಾರಾವಾಹಿ ಡಿಸೆಂಬರ್‌ 11ರ ಸಂಚಿಕೆ: ತಾಯಿ ಮತ್ತು ತಂಗಿಯನ್ನು ಇನ್‌ಸ್ಪೆಕ್ಟರ್‌ ಕರೆದುಕೊಂಡು ಬರುತ್ತಾರೆ ಎಂದು ಭಾವಿಸಿದ್ದ ಗೌತಮ್‌ಗೆ ಅಮ್ಮ ಮತ್ತು ತಂಗಿಯ ಸಾವಿನ ಸುದ್ದಿ ದೊರಕಿದೆ. ಈ ಸುದ್ದಿ ಕೇಳಿ ಗೌತಮ್‌ ಕುಸಿದಿದ್ದಾರೆ. ಅಮೃತಧಾರೆಯಲ್ಲಿ ಇನ್‌ಸ್ಪೆಕ್ಟರ್‌ ಶಕುಂತಲಾದೇವಿ ಬಣ ಸೇರಿಕೊಂಡಿದ್ದಾರೆಯೇ?
ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆ
ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆ

ಅಮೃತಧಾರೆ ಧಾರಾವಾಹಿ ಡಿಸೆಂಬರ್‌ 11ರ ಸಂಚಿಕೆ: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ತನ್ನ ಅಮ್ಮ ಮತ್ತು ತಂಗಿಯ ಬರುವಿಕೆಗೆ ಕಾಯುತ್ತಿದ್ದರು. ಸಂಜೆಯ ವೇಳೆಗೆ ಇನ್‌ಸ್ಪೆಕ್ಟರ್‌ ಇವರ ಅಕ್ಕ ತಂಗಿಯನ್ನು ಕರೆದುಕೊಂಡು ಬರುತ್ತಾರೆ ಎಂದುಕೊಂಡಿದ್ದರು. ಆದರೆ, ಇನ್‌ಸ್ಪೆಕ್ಟರ್‌ ಒಬ್ಬರೇ ಬಂದಾಗ ಗೌತಮ್‌ಗೆ ಆತಂಕವಾಗಿದೆ. ಎಲ್ಲಿ ನನ್ನ ಅಮ್ಮ ಮತ್ತು ತಂಗಿ ಎಂದು ಕೇಳಿದಾಗ ಇನ್‌ಸ್ಪೆಕ್ಟರ್‌ ಕಹಿಸತ್ಯವನ್ನು ಹೇಳುತ್ತಾರೆ. ನಿಮ್ಮ ಅಮ್ಮ ಮತ್ತು ತಂಗಿ ಬದುಕಿಲ್ಲ. ಅವರು ಸತ್ತಿದ್ದಾರೆ ಎಂದು ಹೇಳಿದ್ದಾರೆ. ಹಾಗಾದರೆ, ಧನ್ಯ ಹೇಳಿದ್ದೇನು ಎಂದು ಗೌತಮ್‌ ಕೇಳಿದ್ದಾರೆ. ಆಕೆಗೆ ತಿಳಿದ ಮಾಹಿತಿ ಹಳೆಯದು, ತುಮಕೂರಿನದ್ದು ಆಗಿರಬಹುದು ಎಂದು ಪೊಲೀಸ್‌ ಹೇಳುತ್ತಾರೆ. "ಭಾಗ್ಯಮ್ಮ ಮತ್ತು ಸುಧಾಳ ಶವವನ್ನು ಹಲವು ದಿನಗಳ ಕಾಲ ಇಡಲಾಗಿತ್ತು. ಬಳಿಕ ಅನಾಥ ಶವವೆಂದು ಅಂತ್ಯಸಂಸ್ಕಾರ ಮಾಡಲಾಯಿತು" ಎಂದು ಇನ್‌ಸ್ಪೆಕ್ಟರ್‌ ಹೇಳುತ್ತಾರೆ. ಅಮ್ಮ ಮತ್ತು ತಂಗಿಗೆ ಕಾಯುತ್ತಿದ್ದ ಈ ಸುದ್ದಿ ಗೌತಮ್‌ಗೆ ಆಘಾತ ತಂದಿದೆ.

ಈ ಸುದ್ದಿ ಕೇಳಿ ಎಲ್ಲರೂ ಬೇಸರಗೊಂಡಿದ್ದಾರೆ. ಭೂಮಿಕಾ, ಪಾರ್ಥ, ಅಜ್ಜಮ್ಮ, ಎಲ್ಲರ ಮುಖದಲ್ಲಿಯೂ ನೋವು ಕಾಣಿಸಿಕೊಂಡಿದೆ. ಆದರೆ, ಈ ವಿಷಯ ಕೇಳಿ ಶಕುಂತಲಾದೇವಿ ಮತ್ತು ಜೈದೇವ್‌ಗೆ ಖುಷಿಯಾಗಿದೆ. ಗೌತಮ್‌ ಎದುರು ಮೊಸಳೆ ಕಣ್ಣೀರು ಸುರಿಸುತ್ತಾರೆ. ಈ ರೀತಿ ಇನ್‌ಸ್ಪೆಕ್ಟರ್‌ ಬಾಯಲ್ಲಿ ಮಾತು ಬರಲು ಜೈದೇವ್‌ ಕಾರಣವೇ ಎಂಬ ಸಂದೇಹವೂ ಪ್ರೇಕ್ಷಕರಲ್ಲಿ ಇದೆ. ಮಾಹಿತಿ ತಿಳಿಸಿ ಇನ್‌ಸ್ಪೆಕ್ಟರ್‌ ಹೊರಡುತ್ತಾರೆ. ಗೌತಮ್‌ ಕಣ್ಣೀರ ಕಡಲಾಗುತ್ತಾರೆ. ಅಮ್ಮನ ಕಾಯುತ್ತಿದ್ದ ಗೌತಮ್‌ಗೆ ದುಃಖ ತಡೆಯಲಾಗುತ್ತಿಲ್ಲ. ಅವರಿಗೆ ಯಾರೇ ಸಮಾಧಾನ ಹೇಳಿದರೂ ದುಃಖ ಕಡಿಮೆಯಾಗುತ್ತಿಲ್ಲ. ಭೂಮಿಕಾ, ಅಜ್ಜಮ್ಮ ಎಲ್ಲರೂ ಅಳುತ್ತಾರೆ. ಅಸಲಿಗೆ ಭಾಗ್ಯಮ್ಮ ಮತ್ತು ಸುಧಾ ಬದುಕಿರುವ ಸಂಗತಿ ಈಗ ಶಕುಂತಲಾ ಗ್ಯಾಂಗ್‌ಗೆ ಮಾತ್ರ ಗೊತ್ತಿರುವಂತಹ ವಿಚಾರವಾಗಿದೆ. ಪರ್ಮನೆಂಟ್‌ ಆಗಿ ಅವರನ್ನು ಸಾಯಿಸುವ ಪ್ಲ್ಯಾನ್‌ ಮಾಡಲು ಇವರು ಯೋಜಿಸಬಹುದು.

ದುಃಖದಲ್ಲಿ ಗೌತಮ್‌

ಶಕುಂತಲಾದೇವಿ ಮತ್ತು ಸಹೋದರ ಸುಮ್ಮನೆ ಕಣ್ಣೀರು ಹಾಕುತ್ತಾರೆ. ಅವರು ಒಬ್ಬರನ್ನೊಬ್ಬರನ್ನು ನೋಡುತ್ತಾ ನಗುತ್ತಾರೆ. ಇನ್‌ಸ್ಪೆಕ್ಟರ್‌ ನೀಡಿರುವ ಅಮ್ಮ ಮತ್ತು ತಂಗಿಯ ಬಟ್ಟೆಯನ್ನು ಹಿಡಿದುಕೊಂಡು ಗೌತಮ್‌ ಒಂಟಿಯಾಗಿ ಮನೆಯೊಳಗೆ ಕಣ್ಣೀರಾಗುತ್ತಾರೆ. ಮಲ್ಲಿ ಮತ್ತು ಜೈದೇವ್‌, ಪಾರ್ಥ ಮತ್ತು ಅಪೇಕ್ಷಾ ಕೂಡ ಇದೇ ವಿಷಯವನ್ನು ಮಾತನಾಡುತ್ತಾರೆ. ಭೂಮಿಕಾ ಅಂತೂ ಗೌತಮ್‌ನನ್ನು ತಬ್ಬಿ ಸಮಾಧಾನ ಮಾಡಲು ಯತ್ನಿಸುತ್ತಾರೆ. "ನಿಮಗಿನ್ನು ಯಾವ ಸಮಾಧಾನ ಹೇಳೋದಿಲ್ಲ. ನಿಮ್ಮ ಮನಸ್ಸಿನಲ್ಲಿರುವ ದುಃಖವನ್ನು ಅಳುತ್ತಾ ನೋವು ಕಡಿಮೆ ಮಾಡಿಕೊಳ್ಳಿ" ಎಂದು ಅಳುತ್ತಾ ಹೇಳುತ್ತಾರೆ.

ಇನ್ನೊಂದೆಡೆ ಇದ್ಯಾವುದರ ಪರಿವೆ ಇಲ್ಲದೆ ಆಸ್ಪತ್ರೆಯಲ್ಲಿ ಅಮ್ಮನ ಮುಂದೆ ಸುಧಾಳ ಸ್ವಗತ ಇರುತ್ತದೆ. "ನಾವು ಅನಾಥರಲ್ಲ. ನಮಗೆ ಸಂಬಂಧಿಕರು ಇದ್ದಾರ ಅನಿಸುತ್ತದೆ. ಯಾವ ಜನ್ಮದಲ್ಲಿ ಪುಣ್ಯ ಮಾಡಿದ್ದೇವೆ ಗೊತ್ತಿಲ್ಲ, ಅಣ್ಣ ಮತ್ತು ಅತ್ತಿಗೆ ನನಗೆ ಸಿಕ್ಕಿದ್ದಾರೆ" ಎಂದೆಲ್ಲ ಮಾತನಾಡುತ್ತಾಳೆ.

ಮತ್ತೊಂದೆಡೆ ಶಕುಂತಲಾ ಗ್ಯಾಂಗ್‌ ಖುಷಿಯಲ್ಲಿದೆ. "ನಿನ್ನೆ ಜೀವಂತವಾಗಿದ್ದರು. ಮೂರು ವರ್ಷದ ಹಿಂದೆ ಸಾಯಲು ಹೇಗೆ ಕಾರಣ" ಎಂದು ರಮಾಕಾಂತ್‌ ಕೇಳುತ್ತಾನೆ. ಅದನ್ನು ನಾನು ಹೇಳುತ್ತೇನೆ ಎಂದು ಜೈದೇವ್‌ ಹೇಳುತ್ತಾನೆ. ತಾನು ಈ ವಿಷಯದಲ್ಲಿ ಇನ್‌ಸ್ಪೆಕ್ಟರ್‌ ಜತೆ ಡೀಲ್‌ ಮಾಡಿರುವುದಾಗಿ ಹೇಳುತ್ತಾನೆ. ಈ ಮೂಲಕ ಪ್ರೇಕ್ಷಕರು ಅಂದುಕೊಂಡದ್ದೇ ನಿಜವಾಗಿದೆ. ಅಮೃತಧಾರೆಯಲ್ಲಿ ಸದ್ಯಕ್ಕೆ ಗೌತಮ್‌ಗೆ ಅಮ್ಮ ಮತ್ತು ತಂಗಿಯ ಭೇಟಿಯಾಗುವ ಸಾಧ್ಯತೆ ಕಾಣಿಸುತ್ತಿಲ್ಲ. ಸೀರಿಯಲ್‌ ಮುಂದುವರೆದಿದೆ.

ಧಾರಾವಾಹಿ ಹೆಸರು: ಅಮೃತಧಾರೆ.

ಎಪಿಸೋಡ್‌: ಡಿಸೆಂಬರ್‌ 11, 2024

ಯಾವ ಚಾನೆಲ್‌: ಜೀ ಕನ್ನಡ

ಪ್ರಸಾರ ಸಮಯ: ಪ್ರತಿದಿನ ರಾತ್ರಿ 7 ಗಂಟೆಗೆ

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ: ಛಾಯಾ ಸಿಂಗ್‌: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ), ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ), ರಾಣವ್‌: ಜೈದೇವ್‌, ಚಂದನ್‌: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ), ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ).

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ