logo
ಕನ್ನಡ ಸುದ್ದಿ  /  ಮನರಂಜನೆ  /  ಅಮೃತಧಾರೆ: ದಿವಾನ್‌ ಕಂಪನಿಯಲ್ಲಿ ಸಿಎಫ್‌ಒ ಹುದ್ದೆಗೆ ನೇಮಕ; ಪಾರ್ಥನ ಭೂಮಿಕಾ, ಜೈನ ಶಕುಂತಲಾ ಶಿಫಾರಸು, ಡುಮ್ಮಸರ್‌ಗೆ ತುತ್ತಾಮುತ್ತಾ ಸಂಕಟ

ಅಮೃತಧಾರೆ: ದಿವಾನ್‌ ಕಂಪನಿಯಲ್ಲಿ ಸಿಎಫ್‌ಒ ಹುದ್ದೆಗೆ ನೇಮಕ; ಪಾರ್ಥನ ಭೂಮಿಕಾ, ಜೈನ ಶಕುಂತಲಾ ಶಿಫಾರಸು, ಡುಮ್ಮಸರ್‌ಗೆ ತುತ್ತಾಮುತ್ತಾ ಸಂಕಟ

Praveen Chandra B HT Kannada

Oct 15, 2024 09:37 AM IST

google News

ಅಮೃತಧಾರೆ ಸೀರಿಯಲ್‌ ಹೊಸ ಬೆಳವಣಿಗೆ

    • ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ತುತ್ತಾ.. ಮುತ್ತಾ.. ಇಕ್ಕಟ್ಟಿನಲ್ಲಿದ್ದಾರೆ ಗೌತಮ್‌. ದಿವಾನ್‌ ಕಂಪನಿಯ ಸಿಎಫ್‌ಒ ಹುದ್ದೆಗೆ ಪಾರ್ಥ ಮತ್ತು ಜೈದೇವ್‌ ನಡುವೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಸಂದಿಗ್ಧತೆ ಗೌತಮ್‌ಗೆ ಬಂದಿದೆ. ಪಾರ್ಥನನ್ನು ಭೂಮಿಕಾ, ಜೈದೇವ್‌ನನ್ನು ಶಕುಂತಲಾ ಶಿಫಾರಸು ಮಾಡಿದ್ದಾರೆ.
ಅಮೃತಧಾರೆ ಸೀರಿಯಲ್‌ ಹೊಸ ಬೆಳವಣಿಗೆ
ಅಮೃತಧಾರೆ ಸೀರಿಯಲ್‌ ಹೊಸ ಬೆಳವಣಿಗೆ

ಅಮೃತಧಾರೆ ಧಾರಾವಾಹಿಯ ಅಕ್ಟೋಬರ್‌ 15ರ ಸಂಚಿಕೆಯಲ್ಲಿ ಹೊಸ ಬೆಳವಣಿಗೆಯೊಂದು ನಡೆದಿದೆ. ಗೌತಮ್‌ ದಿವಾನ್ ಕಂಪನಿಯಲ್ಲಿ ಖಾಲಿ ಇರುವ ಸಿಎಫ್‌ಒ ಹುದ್ದೆಯನ್ನು ಭರ್ತಿ ಮಾಡುವ ಸವಾಲು ಡುಮ್ಮಸರ್‌ಗೆ ಎದುರಾಗಿದೆ. ಈ ಸಮಯದಲ್ಲಿ ಭೂಮಿಕಾ ಪಾರ್ಥನ ಶಿಫಾರಸು ಮಾಡಿದ್ದಾರೆ. ಶಕುಂತಲಾದೇವಿ ತನ್ನ ಪ್ರೀತಿಯ ಮಗ ಜೈದೇವ್‌ನ ಶಿಫಾರಸು ಮಾಡಿದ್ದಾರೆ. ಇವರಿಬ್ಬರಲ್ಲಿ ಯಾರನ್ನು ನೇಮಕ ಮಾಡೋದಪ್ಪ ಎಂದು ಡುಮ್ಮಸರ್‌ ತಲೆಕೆಡಿಸಿಕೊಳ್ಳುತ್ತಿದ್ದಾರೆ.

ಇದೆಲ್ಲ ಆರಂಭವಾದದ್ದು ಆನಂದ್‌ನಿಂದ. ಆಫೀಸ್‌ನಲ್ಲಿ ರಾಶಿಬಿದ್ದಿರುವ ಹೆವಿ ಕೆಲಸ ಆತನ ಕಂಗೆಡಿಸಿದೆ. "ಈ ಸಿಎಫ್‌ಒ ಹುದ್ದೆಯನ್ನು ಭರ್ತಿ ಮಾಡಪ್ಪ" ಎಂದು ಗೆಳೆಯ ಗೌತಮ್‌ಗೆ ಆನಂದ್‌ ಹೇಳುತ್ತಾನೆ. ತಕ್ಷಣ ತನ್ನ ತಮ್ಮಂದಿರಲ್ಲಿ ಯಾರನ್ನು ನೇಮಕ ಮಾಡೋದು ಎಂಬ ಗೊಂದಲ ಆರಂಭವಾಗಿದೆ. ಆಫೀಸ್‌ ಕೆಲಸದ ಕುರಿತು ತಲೆಕೆಡಿಸಿಕೊಳ್ಳದ ಭೂಮಿಕಾ ಮತ್ತು ಶಕುಂತಲಾದೇವಿ ಈ ವಿಚಾರದಲ್ಲಿ ಇನ್ವಾಲ್‌ ಆಗಿದ್ದಾರೆ. ಡುಮ್ಮಸರ್‌ಗೆ ತಾಯಿಯ ಮಾತು ಕೇಳೋದ, ಹೆಂಡತಿ ಮಾತು ಕೇಳೋದ ಎಂಬ ಇಕ್ಕಟ್ಟು ಶುರುವಾಗಿದೆ. ತುತ್ತಾ... ಮುತ್ತಾ... ಎಂದು ತಲೆಕೆಡಿಸಿಕೊಳ್ಳುತ್ತಿದ್ದಾರೆ.

ದಿವಾನ್‌ ಕಂಪನಿಗೆ ದೊಡ್ಡ ಟೆಂಡರ್‌ ದೊರಕುವಂತೆ ಆಗಲು ಭೂಮಿಕಾ ಕೈವಾಡ ಇದೆ. ಇದರಲ್ಲಿ ಪಾರ್ಥನ ಪಾತ್ರವೂ ಇದೆ. ಪಾರ್ಥನಿಗೆ ಈ ರೀತಿ ಎಲ್ಲಾ ಐಡಿಯಾ ಇದೆ ಎಂದು ಭೂಮಿಕಾ ತನ್ನ ಮೈದುನ ಪಾರ್ಥನ ಶಿಫಾರಸು ಮಾಡುತ್ತಾರೆ. ಅವರಿಗೆ ಮೊದಲಿನಿಂದಲೂ ಪಾರ್ಥನೆಂದರೆ ತುಸುಪ್ರೀತಿ ಜಾಸ್ತಿ. ಆದರೆ, ಅಪ್ಪಿಗೆ ಇದೆಲ್ಲ ಗೊತ್ತಿಲ್ಲ. ಈ ಸಾಧನೆ ಎಲ್ಲವೂ ಪಾರ್ಥನದ್ದೇ ಎಂದುಕೊಂಡಿದ್ದಾಳೆ. ಆದರೆ, ಅಕ್ಕ ಭೂಮಿಕಾಳ ಪವರ್‌ ಅವಳಿಗೆ ಇನ್ನೂ ಗೊತ್ತಿಲ್ಲ. ಇನ್ನೂ ಅತ್ತೆಯ ಪ್ರೀತಿಯ ಸೊಸೆಯಾಗಿದ್ದಾಳೆ. ಅತ್ತೆಯ ನಾಟಕ, ಕುತಂತ್ರ ಏನೂ ಗೊತ್ತಿಲ್ಲ. ಮೊದಲಿನ ಅಪ್ಪಿ ಕಾಣೆಯಾಗಿದ್ದಾಳೆ ಎಂದು ಪ್ರೇಕ್ಷಕರು ಬಯ್ಯಲು ಆರಂಭಿಸಿ ತುಂಬಾ ದಿನಗಳಾಗಿವೆ.

ಅಮೃತಧಾರೆ ಧಾರಾವಾಹಿ ಉಳಿದ ಧಾರಾವಾಹಿಯಂತೆ ಅಲ್ಲ. ತುಂಬಾ ಅದ್ಭುತವಾಗಿದೆ ಎನ್ನುವುದು ಪ್ರೇಕ್ಷಕರ ಅಭಿಪ್ರಾಯ. ಆದರೆ, ಕೆಲವೊಮ್ಮೆ ಈ ಧಾರಾವಾಹಿ ಎಲ್ಲಾ ಧಾರಾವಾಹಿಗಳಂತೆ ಆಗುತ್ತದೆ. ಇರುವ ಕೆಲವು ಪಾತ್ರಗಳಲ್ಲಿಯೇ ಪ್ರೇಕ್ಷಕರಿಗೆ ಮೃಷ್ಟಾನ್ನ ಬಡಿಸುವ ಅನಿವಾರ್ಯತೆ ಡೈರೆಕ್ಟರ್‌ಗಿದೆ. ಹೀಗಾಗಿ, ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಕೊಡುತ್ತ, ಕೊನೆಗೆ ಏನೂ ಆಗಿಲ್ಲ ಎಂಬಂತೆ ಮತ್ತೊಂದು ಮಜಲಿಗೆ ಕಥೆಯನ್ನು ಕೊಂಡೊಯ್ಯುತ್ತಾರೆ.

ಜೈದೇವ್‌ ಮಾಡಿದ ಪಾಪಗಳು ಒಂದೆರಡಲ್ಲ. ಮನೆಯವರನ್ನೇ ಕೊಲೆ ಮಾಡಲು ಯತ್ನಿಸಿದ್ದ ಈತನನ್ನು ಜೈಲಿಗೆ ಹಾಕೋದು ಸರಿಯಾದ ಕ್ರಮವಾಗಿತ್ತು. ಆದರೆ, ಆತನನ್ನು ಜೈಲಿಗೆ ಹಾಕಿದ್ರೆ ಸೀರಿಯಲ್‌ ವಿಲನ್‌ ಇಲ್ಲದ ಸಿನಿಮಾ ಆಗುತ್ತದೆ. ಟೀಮ್‌ನ ಒಬ್ಬ ಒಳ್ಳೆಯ ಕೆಲಸಗಾರನಿಗೆ ಹೆಚ್ಚುದಿನ ರಜೆ ಕೊಡಲು ಹೇಗೆ ಬಾಸ್‌ ಒಪ್ಪುವುದಿಲ್ಲವೋ, ಅದೇ ರೀತಿ ಅಮೃತಧಾರೆಯ ಜೈದೇವ್‌ ಎಂಬ ಪಾತ್ರವನ್ನು ಹೊರಗೆ ಕಳುಹಿಸಲು ಡೈರೆಕ್ಟರ್‌ಗೆ ಮನಸ್ಸಿಲ್ಲ. ಅದೆಷ್ಟು ಅಪರಾಧ ಮಾಡಿದ್ದರೂ ಏನೂ ನಡೆದಿಲ್ಲ ಎಂಬಂತೆ ಕಥೆಯೇ ಬದಲಾಗುತ್ತದೆ. ಎಲ್ಲರೂ ಒಂದೇ ಮನೆಯಲ್ಲಿದ್ದರೆ ಕೆಲಸ ಸಲೀಸು. ಇದೇ ಕಾರಣಕ್ಕೆ ಈಗ ಸದಾಶಿವನ ಮನೆಯ ಕಥೆಯೂ ಇಲ್ಲ.

ಅಮೃತಧಾರೆ ಧಾರಾವಾಹಿಯಲ್ಲಿ ಪ್ರೇಕ್ಷಕರು ಕಾಯುತ್ತಿರುವುದು ಗೌತಮ್‌ ದಿವಾನ್‌ನ ಅಮ್ಮ ಮತ್ತು ಸಹೋದರಿಯ ಪಾತ್ರದ ಆಗಮನಕ್ಕಾಗಿ. ನಿಜಕ್ಕೂ ಸಹೋದರಿ ಸತ್ತಿದ್ದಾಳ, ಮುಂದೊಂದು ದಿನ ಎಲ್ಲರ ಮುಂದೆ ಬಂದು ನಿಜ ಏನೆಂದು ಬಾಯ್ಬಿಡುತ್ತಾಳೋ ಕಾದು ನೋಡಬೇಕಿದೆ. ಆದರೆ, ಈ ಪಾತ್ರಗಳ ಕುರಿತು ಆಗಾಗ ಅಲರ್ಟ್‌ ನೀಡುವುದಷ್ಟೇ ಸದ್ಯ ಆಗುತ್ತಿರುವುದು. ಆ ಪಾತ್ರಗಳು ಎಂಟ್ರಿ ನೀಡಿದರೆ ಶಕುಂತಲಾದೇವಿ ಮತ್ತು ಮನೆಹಾಳ ಮಾವನ ಕಥೆ ಹೊರಗೆ ಬರುತ್ತದೆ. ಬಳಿಕ ಸೀರಿಯಲ್‌ನಲ್ಲಿ ಏನೂ ಇರುವುದಿಲ್ಲ. ಸೀರಿಯಲ್‌ ಮುಗಿಸಬೇಕಾಗುತ್ತದೆ (ನಿರ್ದೇಶಕರು ಮನಸ್ಸು ಮಾಡಿದರೆ ಮತ್ತೊಂದು ಮಗದೊಂದು ಟ್ವಿಸ್ಟ್‌ ಕೊಡಬಹುದು). ಇದು ಅಮೃತಧಾರೆ ಸೀರಿಯಲ್‌ನ ಇಂದಿನ ಸಂಚಿಕೆಯ ಮತ್ತು ಇತ್ತೀಚಿನ ಸಂಚಿಕೆಗಳ ಹೈಲೈಟ್‌.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ