logo
ಕನ್ನಡ ಸುದ್ದಿ  /  ಮನರಂಜನೆ  /  ಫೋರ್ಬ್ಸ್‌ 30 ಲಿಸ್ಟ್‌ಗೆ ಸೇರಿದ ರಶ್ಮಿಕಾ ಮಂದಣ್ಣ; ಯಶ್‌, ಸಮಂತಾ, ವಿಜಯ್‌ ದೇವರಕೊಂಡರನ್ನು ಹಿಂದಿಕ್ಕಿದ ಕಿರಿಕ್‌ ಪಾರ್ಟಿ ಚೆಲುವೆ

ಫೋರ್ಬ್ಸ್‌ 30 ಲಿಸ್ಟ್‌ಗೆ ಸೇರಿದ ರಶ್ಮಿಕಾ ಮಂದಣ್ಣ; ಯಶ್‌, ಸಮಂತಾ, ವಿಜಯ್‌ ದೇವರಕೊಂಡರನ್ನು ಹಿಂದಿಕ್ಕಿದ ಕಿರಿಕ್‌ ಪಾರ್ಟಿ ಚೆಲುವೆ

Praveen Chandra B HT Kannada

Feb 15, 2024 04:44 PM IST

google News

ಫೋರ್ಬ್ಸ್‌ 30 ಲಿಸ್ಟ್‌ಗೆ ಸೇರಿದ ರಶ್ಮಿಕಾ ಮಂದಣ್ಣ; ಯಶ್‌, ಸಮಂತಾ, ವಿಜಯ್‌ ದೇವರಕೊಂಡರನ್ನು ಹಿಂದಿಕ್ಕಿದ ಕಿರಿಕ್‌ ಪಾರ್ಟಿ ಚೆಲುವೆ

    • Forbes 30 under 30 list: 30 ವರ್ಷದೊಳಗಿನವರ ಟಾಪ್‌ 30 ಫೋರ್ಬ್ಸ್‌ ಪಟ್ಟಿ ಬಿಡುಗಡೆಯಾಗಿದೆ. ಸಿನಿಮಾ ರಂಗದ ಅಗ್ರ ಪ್ರಭಾವಿಗಳ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಸ್ಥಾನ ಪಡೆದಿದ್ದಾರೆ. ಸಮಂತಾ, ವಿಜಯ್‌ ದೇವರಕೊಂಡ, ಯಶ್‌ರನ್ನು ಹಿಂದಿಕ್ಕಿ ರಶ್ಮಿಕಾ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಫೋರ್ಬ್ಸ್‌ 30 ಲಿಸ್ಟ್‌ಗೆ ಸೇರಿದ ರಶ್ಮಿಕಾ ಮಂದಣ್ಣ; ಯಶ್‌, ಸಮಂತಾ, ವಿಜಯ್‌ ದೇವರಕೊಂಡರನ್ನು ಹಿಂದಿಕ್ಕಿದ ಕಿರಿಕ್‌ ಪಾರ್ಟಿ ಚೆಲುವೆ
ಫೋರ್ಬ್ಸ್‌ 30 ಲಿಸ್ಟ್‌ಗೆ ಸೇರಿದ ರಶ್ಮಿಕಾ ಮಂದಣ್ಣ; ಯಶ್‌, ಸಮಂತಾ, ವಿಜಯ್‌ ದೇವರಕೊಂಡರನ್ನು ಹಿಂದಿಕ್ಕಿದ ಕಿರಿಕ್‌ ಪಾರ್ಟಿ ಚೆಲುವೆ

ಬೆಂಗಳೂರು: 2024ರ ಫೋರ್ಬ್ಸ್‌ 30 ಅಂಡರ್‌ 30 ಪಟ್ಟಿಯಲ್ಲಿ ಓಲಾದ ಭವಿಷ್‌ ಅಗರ್‌ವಾಲ್‌, ನಟ ರಾಜ್‌ಕುಮಾರ್‌ ರಾವ್‌, ಲಿ15ನ ಪೂಜಾ ಧಿಂಗ್ರಾ, ಶಿವನ್ ಭಾಟಿಯಾ ಮತ್ತು ನರೇಶ್ ಕುಕ್ರೇಜಾ, ಶಿವನ್ ಮತ್ತು ನರೇಶ್, ಕ್ರಿಕೆಟಿಗ ಚೇತೇಶ್ವರ ಪೂಜಾರ ಸೇರಿದಂತೆ ಹಲವು ಜನರು ಸ್ಥಾನ ಪಡೆದಿದ್ದಾರೆ. ವಿಶೇಷವೆಂದರೆ ಈ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಸ್ಥಾನ ಪಡೆದಿದ್ದಾರೆ. ಈ ಹಿಂದೆ 14 ವಿಭಾಗಗಳಿಂದ ಸಾಧಕರನ್ನು ಆಯ್ಕೆ ಮಾಡಲಾಗುತ್ತಿತ್ತು. ಈ ಬಾರಿ 19 ವಿಭಾಗದಿಂದ ಆಯ್ಕೆ ಮಾಡಲಾಗಿದೆ.

ರಶ್ಮಿಕಾ ಮಂದಣ್ಣ ಆಯ್ಕೆ

ಕರ್ನಾಟಕ ಮೂಲದ ರಶ್ಮಿಕಾ ಮಂದಣ್ಣ ಅವರು ಬಹುಭಾಷಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ. ಫೋರ್ಬ್ಸ್‌ ಇಂಡಿಯಾದ ಪ್ರಭಾವಿ ತಾರೆಯರ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಅಗ್ರ ಸ್ಥಾನ ಪಡೆದಿದ್ದಾರೆ. ಸಮಂತಾ, ವಿಜಯ್‌ ದೇವರಕೊಂಡ, ಯಶ್‌ರನ್ನು ಹಿಂದಿಕ್ಕಿ ಫೋರ್ಬ್ಸ್‌ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಸ್ಥಾನ ಪಡೆದಿದ್ದಾರೆ.

 

ಸಿನಿಮಾರಂಗದ ಸದಸ್ಯರು

ಫೋರ್ಬ್ಸ್ ಇಂಡಿಯಾ 30 ಅಂಡರ್ 30 ಕ್ಲಬ್‌ನಲ್ಲಿ 300 ಸದಸ್ಯರಿದ್ದಾರೆ. ಇದರಲ್ಲಿ ಝೆರೊದಾದ ನಿಖಿಲ್ ಕಾಮತ್ ಮತ್ತು ಪೋಸ್ಟ್‌ಮ್ಯಾನ್ ಸಹ-ಸಂಸ್ಥಾಪಕ ಅಭಿನವ್ ಅಸ್ಥಾನ, ಅಭಿಜಿತ್ ಕೇನ್ ಮತ್ತು ಅಂಕಿತ್ ಸೋಬ್ತಿ ಸೇರಿದಂತೆ ಹಲವು ಜನರು ಇದ್ದಾರೆ. ಮನರಂಜನಾ ವಿಭಾಗದಲ್ಲಿ ತಾಹಿರ್ ರಾಜ್ ಭಾಸಿನ್, ತಾಪ್ಸೀ ಪನ್ನು, ಭೂಮಿ ಪೆಡ್ನೇಕರ್, ವಿಕ್ಕಿ ಕೌಶಲ್, ಮಿಥಿಲಾ ಪಾಲ್ಕರ್, ವಿಜಯ್ ದೇವರಕೊಂಡ, ಮತ್ತು ಸಾಯಿ ಪಲ್ಲವಿ, ಯಶ್‌ ಮುಂತಾದವರು ಇದ್ದಾರೆ. ಇವರಲ್ಲಿ ಈ ಬಾರಿ ಟಾಪ್‌ ಇನ್‌ಫ್ಲೂಯೆನ್ಸಲ್‌ ಆಕ್ಟರ್ಸ್‌ ವಿಭಾಗದಲ್ಲಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದಾರೆ.

ರಶ್ಮಿಕಾ ಮಂದಣ್ಣ ಪರಿಚಯ

ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಭಾರತದ ಜನಪ್ರಿಯ ನಟಿ. ಇವರು ನಾಲ್ಕು ಸೈಮಾ ಪ್ರಶಸ್ತಿ ಮತ್ತು ಒಂದು ಫಿಲ್ಮ್‌ಫೇರ್‌ ಸೌತ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2016ರಲ್ಲಿ ಕನ್ನಡದ ಕಿರಿಕ್‌ ಪಾರ್ಟಿ ಸಿನಿಮಾದ ಮೂಲಕ ಇವರು ಸಿನಿರಂಗಕ್ಕೆ ಪ್ರವೇಶ ಪಡೆದರು. ತೆಲುಗಿನಲ್ಲಿ ಚಲೋ ಸಿನಿಮಾದಲ್ಲಿ ನಟಿಸಿದರು. ಇದಾದ ಬಳಿಕ ಇವರಿಗೆ ಹಲವು ಅವಕಾಶಗಳು ದೊರಕಿದವು. ಗೀತಾ ಗೋವಿದಂ ಚಿತ್ರದ ನಟನೆಗಾಗಿ ಫಿಲ್ಮ್‌ ಫೇರ್‌ ಕ್ರಿಟಿಕ್ಸ್‌ ಅವಾರ್ಡ್‌ ದೊರಕಿತು. ದೇವದಾಸ್‌, ಸರಿಲೇರು ನೀಕೆವರು, ರೋಮಾನ್ಸ್‌ ಭೀಷ್ಮಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿ ಮೊದಲ ಬಾರಿಗೆ ಸುಲ್ತಾನ್‌ ಚಿತ್ರದಲ್ಲಿ ನಟಿಸಿದರು. ಪುಷ್ಪಾ: ದಿ ರೈಸ್‌ನಲ್ಲಿ ನಟಿಸಿದ ಬಳಿಕ ಇವರ ಖ್ಯಾತಿ ಹೆಚ್ಚಾಯಿತು. 2022ರಲ್ಲಿ ಸೀತಾ ರಾಮನ್‌ನಲ್ಲಿ ನಟಿಸಿದರು. ಅನಿಮಲ್‌ ಸಿನಿಮಾದ ಮೂಲಕ ಬಾಲಿವುಡ್‌ನಲ್ಲೂ ಮಿಂಚಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ