logo
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಮದುವೆ ಮನೆಯಲ್ಲಿ ಪಾರುಗೆ ನರಕಯಾತನೆ, ಸಿದ್ದಾರ್ಥ್‌ ಹೆಸರು ಕೇಳಿ ಶಾಕ್ ಆಗಿ ನಿಂತ ಪಾರು ಅಣ್ಣ

Annayya Serial: ಮದುವೆ ಮನೆಯಲ್ಲಿ ಪಾರುಗೆ ನರಕಯಾತನೆ, ಸಿದ್ದಾರ್ಥ್‌ ಹೆಸರು ಕೇಳಿ ಶಾಕ್ ಆಗಿ ನಿಂತ ಪಾರು ಅಣ್ಣ

Suma Gaonkar HT Kannada

Oct 04, 2024 10:40 AM IST

google News

ಪಾರು ಆಡಿದ ಮಾತು ಅಣ್ಣನಿಗೆ ಕೇಳಿಸಿದೆ

    • ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರುಗೆ ಆಪತ್ತು ಕಾದಿದೆ. ಪಾರು ಹೆಸರು ಬದಲಾಯಿಸಿದ್ದಾರೆ. ಇಷ್ಟ ಇಲ್ಲದ ಮದುವೆಗೆ ಒಪ್ಪಿಕೊಂಡಂತಾಗಿದೆ. ಅಪ್ಪನ ಮಾತು ಕೇಳಿ ಕಣ್ಣೀರು ಹಾಕುತ್ತಾ ಇದ್ದಾಳೆ. ಈಗ ಅಣ್ಣನಿಗೂ ಸತ್ಯ ಗೊತ್ತಾಗಿದೆ.  
ಪಾರು ಆಡಿದ ಮಾತು ಅಣ್ಣನಿಗೆ ಕೇಳಿಸಿದೆ
ಪಾರು ಆಡಿದ ಮಾತು ಅಣ್ಣನಿಗೆ ಕೇಳಿಸಿದೆ (ಝೀ ಕನ್ನಡ)

ಪಾರುಗೆ ಮದುವೆ ಚೂರು ಇಷ್ಟ ಇಲ್ಲ ಆದರೂ ಒತ್ತಾಯ ಮಾಡಿ ಅವಳ ತಂದೆನೇ ಅವಳನ್ನು ನರಕಕ್ಕೆ ತಳ್ಳುತ್ತಿದ್ದಾರೆ. ಗಂಡನ ಮನೆಯಲ್ಲಿ ಪಾರುಗೆ ಎಷ್ಟು ಕಾಟ ಕೊಡಬಹುದು ಎಂಬ ಅಂದಾಜು ಇದ್ದರೂ ಅವಳನ್ನು ಈ ಸಂಕಷ್ಟದಿಂದ ಪಾರು ಮಾಡುತ್ತಾ ಇಲ್ಲ. ಅವಳನ್ನು ಬೇಕು ಎಂದೇ ಅವರ ಕೈಗಿಡುತ್ತಾ ಇದ್ದಾರೆ. ಇದು ಅಲ್ಲಿರುವ ಎಲ್ಲರಿಗೂ ಗೊತ್ತಿದೆ. ಗಂಡಿನ ಕಡೆಯವರ ವರ್ತನೆ ಸರಿ ಇಲ್ಲ. ಎಲ್ಲರೂ ದರ್ಪ ತೋರುತ್ತಾ ಇದ್ದಾರೆ. ಆದರೂ ಅವಳ ತಂದೆ ಏನೂ ಮಾಡುತ್ತಿಲ್ಲ. ಎಲ್ಲ ನೀವು ಹೇಳಿದಂತೆ ಎಂದು ಸುಮ್ಮನೆ ನಿಂತಿದ್ದಾರೆ.

ತಂದೆಗೆ ಇದು ವ್ಯವಹಾರ

ಅವಳ ತಂದೆ ಬೇಕು ಎಂದೇ ಈ ಮದುವೆ ಮಾಡಿಸುತ್ತಾ ಇದ್ದಾನೆ. ಗಂಡಿನ ಕಡೆಯವರು ಪಾರ್ವತಿಯ ಹೆಸರು ಬದಲಾಯಿಸಿದ್ದಾರೆ. ಪಾರು ಎಂಬ ಹೆಸರನ್ನು ತೆಗೆದು ಕೆಂಪಮ್ಮ ಎಂಬ ನಾಮಕರಣ ಮಾಡಿದ್ದಾರೆ. ಈ ಹೆಸರನ್ನು ನೋಡಿದ ತಕ್ಷಣ ಅವಳಿಗೆ ಶಾಕ್ ಆಗುತ್ತದೆ. ಇನ್ನು ಅವಳ ತಂದೆ ಅವಳ ಹತ್ತಿರ ಬಂದು “ನೀನು ಈ ಮದುವೆಯ ಬಗ್ಗೆ ಮಾತನಾಡುವ ಹಾಗಿಲ್ಲ. ಇದು ಮದುವೆ ಅಂತ ತಿಳ್ಕೊಂಡ್ರೆ ಅದು ನಿನ್ನ ತಪ್ಪು. ಇದು ನನಗೆ ವ್ಯವಹಾರ ಮಾತ್ರ. ಅದು ನಿನಗೆ ಗೊತ್ತಿರಲಿ” ಎಂದು ಹೇಳುತ್ತಾನೆ. ಅವಳಿಗೆ ಚುರುಕು ಮುಟ್ಟಿಸುತ್ತಾರೆ.

ಪಾರು ಮಾತಾಡಿದ್ದು ಅಣ್ಣನಿಗೆ ಗೊತ್ತಾಯ್ತು

ಇನ್ನು ಅದಾದ ನಂತರ ಪಾರು ತನ್ನ ಮಾವನ ಹತ್ತಿರ ಹೇಳಿಕೊಂಡು ಸಿದ್ಧಾರ್ಥ್‌ಗೆ ಫೋನ್ ಮಾಡಿಸಿಕೊಳ್ಳುತ್ತಾಳೆ. ಫೋನ್ ಮಾಡಿಸಿಕೊಂಡಾಗ “ಸಿದ್ದಾರ್ಥ್ ಬೇಗ ಬಾ ನನಗೆ ಇವರೆಲ್ಲ ಸೇರಿ ಮದುವೆ ಮಾಡೇ ಬಿಡ್ತಾರೆ. ನೀನು ಈ ರೀತಿ ಮಾಡಿದ್ರೆ ಆಗೋದಿಲ್ಲ. ನನಗಂತೂ ಇಲ್ಲಿ ಉಸಿರಾಡೋಕೂ ಆಗ್ತಾ ಇಲ್ಲ. ಇನ್ನು ಸ್ವಲ್ಪ ಹೊತ್ತಿಗೆ ನನಗೆ ಹುಚ್ಚೇ ಹಿಡಿಯುತ್ತೆ" ಎಂದು ಹೇಳುತ್ತಾಳೆ. ಆ ಕಡೆ ಕಾಲ್‌ನಲ್ಲಿ ಸಿದ್ದಾರ್ಥ್‌ ಕೂಡ ಇರ್ತಾನೆ.

ಇನ್ನು ಮುಂದೆ ಏನು ಮಾಡೋದು ಎಂಬ ಆತಂಕದಲ್ಲಿ ಅವಳು ದೊಡ್ಡದಾಗಿ ಮಾತಾಡ್ತಾ ಇರ್ತಾಳೆ. ಯಾರು ಏನ್ ಹೇಳ್ತಾರೆ ಅನ್ನೋದು ಅವಳಿಗೆ ಈಗ ಮುಖ್ಯ ಆಗಿರೋದಿಲ್ಲ. ಫೋನ್‌ ಸಿಕ್ಕಿದಾಗಲೇ ಎಲ್ಲ ವಿಷಯ ಹೇಳಿಕೊಳ್ಳಬೇಕು ಎಂಬುದು ಅವಳ ಆಲೋಚನೆ ಆಗಿರುತ್ತದೆ. ಅಷ್ಟರಲ್ಲಾಗಲೇ ಅವಳ ಅಣ್ಣ ಬಂದು ನಿಂತಿರುತ್ತಾನೆ. ಅವನಿಗೆ ಪಾರು ಮಾತನಾಡಿದ ಎಲ್ಲ ಸಂಗತಿ ಕೇಳಿಸಿ “ಪಾರು” ಎಂದು ಕೂಗುತ್ತಾನೆ.

ಝೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ