logo
ಕನ್ನಡ ಸುದ್ದಿ  /  ಮನರಂಜನೆ  /  Nandamuri Tarakaratna: ನಂದಮೂರಿ ತಾರಕರತ್ನ ಮಹಾಕರ್ಮ ಕಾರ್ಯಕ್ರಮ... ಬಾಲಯ್ಯ, ಜ್ಯೂ. ಎನ್‌ಟಿಆರ್‌ ಭಾಗಿ

Nandamuri Tarakaratna: ನಂದಮೂರಿ ತಾರಕರತ್ನ ಮಹಾಕರ್ಮ ಕಾರ್ಯಕ್ರಮ... ಬಾಲಯ್ಯ, ಜ್ಯೂ. ಎನ್‌ಟಿಆರ್‌ ಭಾಗಿ

HT Kannada Desk HT Kannada

Mar 02, 2023 10:07 PM IST

google News

ತಾರಕರತ್ನ ಮಹಾಕರ್ಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಾಲಯ್ಯ, ಜ್ಯೂ.ಎನ್‌ಟಿಆರ್‌

    • ಮಧ್ಯಾಹ್ನ 12 ರಿಂದ ಹೈದರಾಬಾದ್‌ ಫಿಲ್ಮ್‌ ನಗರ ಸಾಂಸ್ಕತಿಕ ಕೇಂದ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಯ್ತು. ಕಾರ್ಯಕ್ರಮಕ್ಕೆ ಸಂಬಂಧಿಸಿದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.
ತಾರಕರತ್ನ ಮಹಾಕರ್ಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಾಲಯ್ಯ, ಜ್ಯೂ.ಎನ್‌ಟಿಆರ್‌
ತಾರಕರತ್ನ ಮಹಾಕರ್ಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಾಲಯ್ಯ, ಜ್ಯೂ.ಎನ್‌ಟಿಆರ್‌

ಫೆಬ್ರವರಿ 18 ರಂದು ನಿಧನರಾದ ನಂದಮೂರಿ ತಾರಕರತ್ನ ಅವರ ಮಹಾಕರ್ಮ ಕಾರ್ಯಕ್ರಮ ಇಂದು ಹೈದರಾಬಾದ್‌ನಲ್ಲಿ ಜರುಗಿದೆ. ಫೆ.23 ರಂದು ಒಂದು ಕಾರ್ಯಕ್ರಮ ಮಾಡಿದ್ದ ಕುಟುಂಬಸ್ಥರು ಇಂದು (ಮಾ.2) ಮಹಾ ಕರ್ಮ ಕಾರ್ಯ ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ನಂದಮೂರಿ ಬಾಲಕೃಷ್ಣ, ಜ್ಯೂನಿಯರ್‌ ಎನ್‌ಟಿಆರ್‌, ಕಲ್ಯಾಣ್‌ ರಾಮ್‌ ಹಾಗೂ ಇನ್ನಿತರರು ಭಾಗವಹಿಸಿದ್ದರು.

ನಂದಮೂರಿ ತಾರಕರತ್ನ ಮಹಾಕರ್ಮ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರೆಲ್ಲರೂ ಭಾಗವಹಿಸಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು. ತೆಲುಗು ದೇಶಂ ಪಕ್ಷದ ಮುಖ್ಯಸ್ಥ, ಮಾಜಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ರಾವುಳ ಚಂದ್ರಶೇಖರ ರೆಡ್ಡಿ, ಅಯ್ಯಣ್ಣ ಪತ್ರುಡು, ಮಾಗಂಟಿಬಾಬು ಹಾಗೂ ಇನ್ನಿತರರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೆ ತಾರಕರತ್ನ ಕುಟುಂಬದಿಂದ ನೆನಪಿನ ಕಾಣಿಕೆ ಕೂಡಾ ನೀಡಲಾಗಿದೆ. ಮಧ್ಯಾಹ್ನ 12 ರಿಂದ ಹೈದರಾಬಾದ್‌ ಫಿಲ್ಮ್‌ ನಗರ ಸಾಂಸ್ಕತಿಕ ಕೇಂದ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಯ್ತು. ಕಾರ್ಯಕ್ರಮಕ್ಕೆ ಸಂಬಂಧಿಸಿದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

ಪಾದಯಾತ್ರೆ ವೇಳೆ ಕುಸಿದು ಬಿದ್ದಿದ್ದ ನಂದಮೂರಿ ತಾರಕರತ್ನ

ಟಿಡಿಪಿ ರಾಷ್ಟ್ರೀಯ ವಕ್ತಾರ ನಾರಾ ಲೋಕೇಶ್ ಆಯೋಜಿಸಿದ್ದ ಯುವಗಲಂ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಪಾದಯಾತ್ರೆ ಆರಂಭವಾದ ದಿನ ಕುಪ್ಪಂ ಬಳಿ ಕಾರ್ಯಕರ್ತರೊಂದಿಗೆ ತೆರಳುತ್ತಿದ್ದಾಗ ತಾರಕರತ್ನ ಅವರಿಗೆ ತೀವ್ರ ಹೃದಯಾಘಾತವಾಗಿತ್ತು. ಪಾದಯಾತ್ರೆ ವೇಳೆ ಕುಸಿದು ಬಿದ್ದ ತಾರಕರತ್ನ ಅವರನ್ನು ಕುಪ್ಪಂನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಕುಪ್ಪಂನ ಪಿಇಎಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಯಿತು. ತಾರಕರತ್ನ ಸ್ಥಿತಿ ಗಂಭೀರವಾಗಿದ್ದರಿಂದ ನಂತರ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರಿಸಲಾಯ್ತು. ವಿದೇಶಿ ವೈದ್ಯರ ಮಾರ್ಗದರ್ಶನದಲ್ಲಿ ಅವರಿಗೆ ಅಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ ಸತತ 23 ದಿನಗಳ ಕಾಲ ಚಿಕಿತ್ಸೆ ನಡೆದರೂ, ಫಲಕಾರಿ ಆಗದೆ ಫೆಬ್ರವರಿ 18 ರಂದು ತಾರಕರತ್ನ ನಾರಾಯಣ ಹೃದಯಾಲಯದಲ್ಲಿ ಕೊನೆಯುಸಿರೆಳೆದರು. ಅಲ್ಲಿಂದ ತಾರಕರತ್ನ ಅವರ ಪಾರ್ಥಿವ ಶರೀರವನ್ನು ಹೈದರಾಬಾದ್‌ಗೆ ತಂದು ಫೆಬ್ರವರಿ 21 ರಂದು ಅಂತ್ಯಕ್ರಿಯೆ ಮಾಡಲಾಗಿತ್ತು.

ಟಾಲಿವುಡ್‌ನಲ್ಲಿ ದಾಖಲೆ ಬರೆದಿದ್ದ ತಾರಕರತ್ನ

ಸಹಜವಾಗಿ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡುವವರು ಒಂದು ಸಿನಿಮಾ ಅಥವಾ ಎರಡು ಸಿನಿಮಾಗಳ ಮೂಲಕ ಆಗಮಿಸುತ್ತಾರೆ. ಆದರೆ, ತಾರಕರತ್ನ ಬರೋಬ್ಬರಿ 9 ಸಿನಿಮಾಗಳ ಮೂಲಕ ತಮ್ಮ ಕೆರಿಯರ್‌ ಆರಂಭಿಸಿದ್ದರು. ಈ ಮೂಲಕ ಟಾಲಿವುಡ್‌ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಿ ಹೊಸ ದಾಖಲೆಗೆ ಮುನ್ನುಡಿ ಬರೆದಿದ್ದರು. 2002ರಲ್ಲಿ ಕೇವಲ 20 ವರ್ಷ ವಯಸ್ಸಿನಲ್ಲಿದ್ದಾಗ ತಾರಕರತ್ನ ಅವರ ಬರೋಬ್ಬರಿ 9 ಸಿನಿಮಾಗಳು ಒಂದೇ ದಿನ ಶುರುವಾದವು. ಈ ಹಿಂದೆ ಯಾರೂ ಮಾಡದ ದಾಖಲೆ ತಾರಕರತ್ನ ಪಾಲಾಯಿತು.

ಇನ್ನು 2 ದಿನಗಳಲ್ಲಿ ಯುಎಸ್‌ ತೆರಳಲಿರುವ ಜ್ಯೂನಿಯರ್‌ ಎನ್‌ಟಿಆರ್‌

ಜ್ಯೂನಿಯರ್‌ ಎನ್‌ಟಿಆರ್‌, ಆಸ್ಕರ್‌ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಲು ಅಮೆರಿಕಾಗೆ ತೆರಳಬೇಕಿತ್ತು. ಈಗಾಗಲೇ ಚಿತ್ರತಂಡ ಯುಎಸ್‌ ತೆರಳಿದೆ. ಜೊತೆಗೆ ಅವರ 30ನೇ ಸಿನಿಮಾ ಕೂಡಾ ಕಳೆದ ವಾರ ಸೆಟ್ಟೇರಬೇಕಿತ್ತು. ಆದರೆ ಸಹೋದರ ತಾರಕರತ್ನ ನಿಧನದಿಂದ ಎನ್‌ಟಿಆರ್ ಯುಎಸ್‌ ಟ್ರಿಪ್‌ ಹಾಗೂ ಸಿನಿಮಾ ಲಾಂಚ್‌ ಕಾರ್ಯಕ್ರಮವನ್ನು ಮುಂದೂಡಿದ್ದರು. ಇದೀಗ ಮಹಾಕರ್ಮ ಕಾರ್ಯಕ್ರಮ ಮುಗಿದಿದ್ದು ಇನ್ನು 2 ದಿನಗಳಲ್ಲಿ ಅವರು ಅಮೆರಿಕ ತೆರಳಲಿದ್ದಾರೆ. ಜೊತೆಗೆ ಅಲ್ಲಿಂದ ಬಂದ ನಂತರ 30ನೇ ಸಿನಿಮಾದಲ್ಲಿ ಭಾಗಿಯಾಗಲಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ